For Quick Alerts
ALLOW NOTIFICATIONS  
For Daily Alerts

ಸಾದಾ ನೀರಿಗಿಂತ 'ಹಣ್ಣು ನೆನೆಸಿದ' ನೀರೇ ಆರೋಗ್ಯಕಾರಿ

By Arshad
|

ನಮ್ಮ ದೇಶದ ಎಪ್ಪತ್ತು ಪ್ರತಿಶತ ನೀರಿನಿಂದ ಕೂಡಿದೆ. ಅಂತೆಯೇ ನಮಗೆ ನಿತ್ಯವೂ ಸುಮಾರು ಎಂಟು ಲೋಟಗಳಷ್ಟು ನೀರಿನ ಅಗತ್ಯವಿದೆ. ಬರೆಯ ನೀರನ್ನು ಕುಡಿಯುವ ಮೂಲಕ ಈ ಅಗತ್ಯವನ್ನು ಪೂರೈಸಿಕೊಳ್ಳುವುದು ಮಾತ್ರವಲ್ಲದೇ ದೇಹದ ಇತರ ಹಲವಾರು ಕಾರ್ಯಗಳು ಸರಾಗವಾಗಿ ಜರುಗುತ್ತವೆ. ಆದರೆ ಒಂದು ವೇಳೆ ಈ ನೀರಿನಲ್ಲಿ ಕೆಲವು ಹಣ್ಣುಗಳನ್ನು ನೆನೆಸಿಟ್ಟರೆ ನೀರಿನ ಪ್ರಯೋಜನಗಳು ದುಪ್ಪಟ್ಟು, ಮೂರು ಪಟ್ಟು ಹೆಚ್ಚುತ್ತವೆ. ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೀರು ಅತ್ಯಗತ್ಯ. ಹಣ್ಣು ನೆನೆಸಿದ ನೀರನ್ನು (fruit infused water) ಸೇವಿಸಿದರೆ ಇದರಿಂದ ಬರೆಯ ನೀರಿನಿಂದ ಸುಲಭವಾಗಿ ಹೋಗದ ವಿಷಕಾರಿ ವಸ್ತುಗಳೂ ನಿವಾರಣೆಯಾಗಿ ಆರೋಗ್ಯ ಇನ್ನಷ್ಟು ಉತ್ತಮಗೊಳ್ಳುತ್ತದೆ. ಅಪ್ಪಟ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ, ಆರೋಗ್ಯದ ಕೀಲಿಕೈ

ಹಣ್ಣುಗಳನ್ನು ನೆನೆಸಿದ ನೀರು ಹೆಚ್ಚು ರುಚಿಕರ ಹಾಗೂ ನೀರಿನಂತೆ ಅತಿ ಕಡಿಮೆ ಕ್ಯಾಲೋರಿಗಳುಳ್ಳದ್ದಾಗಿರುತ್ತದೆ. ವಾಸ್ತವವಾಗಿ ನೀರಿನ ಬದಲು ಹಣ್ಣು ಅಥವಾ ಹಣ್ಣಿನ ರಸ ಸೇವಿಸುವ ಪ್ರಯೋಜನಗಳು ಇವೆಯಾದರೂ ಇದರ ಆಘಾದ ಪ್ರಮಾಣದ ಕ್ಯಾಲೋರಿಗಳು ತೂಕವನ್ನು ಹೆಚ್ಚಿಸಲು ಕಾರಣವಾಗುತ್ತವೆ. ಆದರೆ ಹಣ್ಣು ನೆನೆಸಿದ ನೀರಿನಲ್ಲಿ ಹಣ್ಣಿನಲ್ಲಿರುವ ಎಲ್ಲಾ ವಿಟಮಿನ್‌ಗಳು, ಖನಿಜಗಳು, ಆಂಟಿ ಆಕ್ಸಿಡೆಂಟುಗಳು ಲಭ್ಯವಿದ್ದು ಹಣ್ಣಿನ ಎಲ್ಲಾ ಪ್ರಯೋಜನಗಳನ್ನೂ ಒಳಗೊಂಡಿದ್ದರೂ ಪೋಷಕಾಂಶಗಳ ಪ್ರಯೋಜನ ಹಣ್ಣಿನ ರಸ ಸೇವಿಸಿದಾಗ ಸಿಗಬಹುದಾದಕ್ಕೂ ಸುಮಾರು ಇಪ್ಪತ್ತರಿಂದ ಮೂವತ್ತು ಶೇಖಡಾವಷ್ಟೇ ಇರುತ್ತದೆ. ಪಾನೀಯದಲ್ಲಿ ನೈಸರ್ಗಿಕ ಸತ್ವ ಸೇರಿಸಿ, ಆರೋಗ್ಯಕ್ಕೆ ಹಿತಕರ

ಈ ನೀರು ತೂಕ ಕಳೆದುಕೊಳ್ಳಲಿಚ್ಛಿಸುವವರಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ವಿಷಕಾರಿ ವಸ್ತುಗಳನ್ನು ಹೊರಹಾಕುವ ಜೊತೆಗೇ ಹೆಚ್ಚಿನ ಕ್ಯಾಲೋರಿಗಳನ್ನೂ ನೀಡದೇ ನೀರಿನ ಅಗತ್ಯವನ್ನೂ ಪೂರೈಸುವ ಮತ್ತು ಹಸಿವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯವನ್ನು ಏರುಪೇರು ಮಾಡದೇ ತೂಕ ಇಳಿಸಲು ನೆರವಾಗುತ್ತದೆ. ಅಷ್ಟಕ್ಕೂ ಹಣ್ಣು ನೆನೆಸಿದ ನೀರು ಎಂದರೆ ಬರೆಯ ಹಣ್ಣೇ ಆಗಬೇಕಿಲ್ಲ, ವಿವಿಧ ಸೊಪ್ಪು ಮತ್ತು ತರಕಾರಿಗಳನ್ನೂ ಬಳಸಬಹುದು. ಪ್ರತಿ ಹಣ್ಣು, ಸೊಪ್ಪು, ತರಕಾರಿಗಳಿಂದಲೂ ಪ್ರತ್ಯೇಕವಾದ ಲಾಭಗಳಿವೆ.

ಈ ನೀರನ್ನು ತಯಾರಿಸಲು ನಿಮ್ಮ ಆಯ್ಕೆಯ ಯಾವುದೇ ಸೊಪ್ಪು, ತರಕಾರಿ ಅಥವಾ ಹಣ್ಣಿನ ತಿರುಳನ್ನು, ಎಲೆಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ನಿವಾರಿಸಿ ನಯವಾಗಿ ಜಜ್ಜಿ ನೀರಿನಲ್ಲಿ ಮಿಶ್ರಣ ಮಾಡಬೇಕು. ಬಳಿಕ ಈ ನೀರನ್ನು ಅಲ್ಲಾಡದಂತೆ ದೊಡ್ಡ ಬಾಟಲಿ ಅಥವಾ ಜಾಡಿಯಲಿಟ್ಟು ಪ್ರಿಜ್ಜಿನಲ್ಲಿ ಶೇಖರಿಸಬೇಕು. ಒಂದು ರಾತ್ರಿ ಕಳೆದ ಬಳಿಕ ಈ ನೀರನ್ನು ಎರಡು ದಿನಗಳ ಒಳಗೇ ಖಾಲಿ ಮಾಡಬೇಕು. ಆದರೆ ತಳಭಾಗದಲ್ಲಿರುವ ಹಣ್ಣಿನ ತಿರುಳು ಮಾತ್ರ ಮೇಲೆ ಬರದಂತೆ ಅಥವಾ ಕುಡಿಯಲು ಸಿಗದಂತೆ ನೋಡಿಕೊಳ್ಳಬೇಕು. ಇನ್ನೂ ಉತ್ತಮ ಎಂದರೆ ಟೀ ಸೋಸುವ ಜರಡಿಯಲ್ಲಿ ಸೋಸಿ ಕುಡಿಯುವುದು. ಬನ್ನಿ, ಈ ನೀರಿನ ಮಹತ್ವ ಮತ್ತು ಪ್ರಯೋಜನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ:

ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ಕೆಲವು ವಿಷಕಾರಿ ವಸ್ತುಗಳು ಕೊಂಚ ಹಠಮಾರಿಯಾಗಿದ್ದು ಕರುಳು ಮೊದಲಾದ ಅಂಗಗಳ ಒಳಭಾಗದಲ್ಲಿ ತಿರುವಿರುವ ಮೂಲೆಗಳಲ್ಲಿ ಅಂಟಿ ಕುಳಿತುಬಿಡುತ್ತದೆ. ಬರೆಯ ನೀರು ಇದನ್ನು ನಿವಾರಿಸಲು ಅಸಮರ್ಥವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ಆದರೆ ಹಣ್ಣು ನೆನೆಸಿದ ನೀರಿನಲ್ಲಿರುವ ಪೋಷಕಾಂಶಗಳು, ಮತ್ತು ವಿಶೇಷವಾಗಿ ಆಮ್ಲಗಳು ಈ ವಿಷಕಾರಿ ವಸ್ತುಗಳನ್ನು ಕರಗಿಸಿ ಅಥವಾ ಸಡಿಲಿಸಿ ಹೊರಹಾಕಲು ನೆರವಾಗುತ್ತವೆ. ಇದಕ್ಕೆ ಮೂಸಂಬಿ, ಲಿಂಬೆಜಾತಿಯ ಹಣ್ಣುಗಳು, ಪಪ್ಪಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪಿನ ನೀರು ಉತ್ತಮವಾಗಿದೆ. ಇದು ಹಣ್ಣು ನೆನೆಸಿದ ನೀರಿನ ಅತ್ಯುತ್ತಮ ಪ್ರಯೋಜನವಾಗಿದೆ.

ಹೆಚ್ಚು ತಿನ್ನದಿರಲು ಸಹಕರಿಸುತ್ತದೆ

ಹೆಚ್ಚು ತಿನ್ನದಿರಲು ಸಹಕರಿಸುತ್ತದೆ

ಸ್ಥೂಲಕಾಯಕ್ಕೆ ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ಪ್ರಮುಖ ಕಾರಣ. ಹೊಟ್ಟೆ ಖಾಲಿಯಾಗುತ್ತಿದ್ದಂತೆಯೇ ಮೆದುಳಿಗೆ ರವಾನೆಯಾಗುವ ಸಂದೇಶ ಏನಾದರೊಂದನ್ನು ತಿನ್ನಲು ಪ್ರಚೋದಿಸುತ್ತದೆ. ಆದರೆ ಈ ನೀರನ್ನು ಕುಡಿದ ಬಳಿಕ ಅಗತ್ಯವಿಲ್ಲದೇ ತಿನ್ನಲು ಹಸಿವಿನ ಸಂದೇಶ ಹೋಗದ ಕಾರಣ ಅನಗತ್ಯ ಆಹಾರ ಸೇವನೆ ತಪ್ಪುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೆಚ್ಚು ತಿನ್ನದಿರಲು ಸಹಕರಿಸುತ್ತದೆ

ಹೆಚ್ಚು ತಿನ್ನದಿರಲು ಸಹಕರಿಸುತ್ತದೆ

ಉತ್ತಮ ಪರಿಣಾಮಕ್ಕಾಗಿ ಊಟಕ್ಕೂ ಸುಮಾರು ಮೂವತ್ತೈದು ನಿಮಿಷ ಮೊದಲು ಒಂದು ದೊಡ್ಡ ಲೋಟ ಹಣ್ಣು ನೆನೆಸಿದ ನಿರನ್ನು ಕುಡಿದರೆ ಸೂಕ್ತ ಮತ್ತು ಮಿತಪ್ರಮಾಣದಲ್ಲಿ ಮಾತ್ರ ಆಹಾರ ಸೇವಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಅನಾರೋಗ್ಯಕರ ಸಿದ್ಧ ಆಹಾರಗಳನ್ನು ತಿನ್ನದೇ ಆರೋಗ್ಯ ವೃದ್ಧಿ ಮತ್ತು ತೂಕದಲ್ಲಿ ಇಳಿಕೆಗೂ ನೆರವಾಗುತ್ತದೆ.

ಮನೋಭಾವವನ್ನು ಹಿತಗೊಳಿಸುತ್ತದೆ

ಮನೋಭಾವವನ್ನು ಹಿತಗೊಳಿಸುತ್ತದೆ

ನಿತ್ಯದ ಯಾವುದೇ ಕೆಲಸವಾಗಬೇಕಾದರೆ ಕಾಲಕಾಲಕ್ಕೆ ಹೊಟ್ಟೆಗೆ ಸಿಗುತ್ತಿರಬೇಕು. ಒಂದು ಹೊತ್ತು ಸಿಗದೇ ಇದ್ದರೂ ಹೊಟ್ಟೆಯಿಂದ ಮೆದುಳಿಗೆ 'ಬೇಕೇ ಬೇಕು, ಊಟ ಬೇಕು" ಎಂಬ ಡಂಗುರ ನಿತ್ಯದ ಕೆಲಸಗಳಿಗೆ ಅಡ್ಡಿಯಾಗಿಸುತ್ತದೆ. ಇದರ ಕಿರಿಕಿರಿಯಿಂದ ಮನಸ್ಸು ವ್ಯಗ್ರಗೊಳ್ಳುತ್ತದೆ. ಇದರ ಪರಿಣಾಮಗಳು ವಿವಿಧ ರೀತಿಯಲ್ಲಾಗಬಹುದು. ಆದರೆ ಹಣ್ಣು ನೆನೆಸಿದ ನೀರನ್ನು ಆಗಾಗ ಕುಡಿಯುತ್ತಾ ಇರುವ ಮೂಲಕ ಹೊಟ್ಟೆಯ ಈ ಬೇಡಿಕೆಯನ್ನು ಈಡೇರಿಸಿದಂತಾಗಿ ಮನೋಭಾವ ಸಂತೋಷದಲ್ಲಿರುತ್ತದೆ.

ಸುಸ್ತು ಕಡಿಮೆಗೊಳಿಸುತ್ತದೆ

ಸುಸ್ತು ಕಡಿಮೆಗೊಳಿಸುತ್ತದೆ

ಸಾಮಾನ್ಯವಾಗಿ ವ್ಯಾಯಾಮ ಮಾಡುವವರು ಮತ್ತು ಹೆಚ್ಚಿನ ದೈಹಿಕ ಶ್ರಮದ ಅಗತ್ಯವುಳ್ಳ ವ್ಯಕ್ತಿಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿದೆ. ಕೆಲಸದ ವೇಳೆ ಶ್ರಮವಾಗುವ ಮೂಲಕ ದೇಹ ಸೋಲುತ್ತದೆ. ಆಗ ಕೊಂಚ ಹೊತ್ತು ಕುಳಿತು ಸುಧಾರಿಸಬೇಕಾಗುತ್ತದೆ. ಬಹಳ ದೂರದಿಂದ ನಡೆದು ಬಂದವರು ಕುಳಿತು ಸುಧಾರಿಸಲೆಂದೇ ಹಿಂದಿನ ದಿನಗಳಲ್ಲಿ ದಾರಿಯ ಇಕ್ಕೆಲಗಳಲ್ಲಿ ಮರಗಳನ್ನು ನೆಡುತ್ತಿದ್ದರು.

ಸುಸ್ತು ಕಡಿಮೆಗೊಳಿಸುತ್ತದೆ

ಸುಸ್ತು ಕಡಿಮೆಗೊಳಿಸುತ್ತದೆ

ಆದರೆ ಹಣ್ಣು ನೆನೆಸಿದ ನೀರನ್ನು ಇಡಿಯ ದಿನ ಕುಡಿಯುತ್ತಾ ಇರುವ ಮೂಲಕ ದಿನದ ಶ್ರಮಕ್ಕೆ ತಕ್ಕನಾದ ಪೋಷಕಾಂಶಗಳು ನಿಧಾನವಾಗಿ ದೊರೆತು ಹೆಚ್ಚು ಸುಸ್ತಾಗುವುದಿಲ್ಲ. ಇದಕ್ಕೆ ಹಣ್ಣಿಗಿಂತಲೂ ತರಕಾರಿಗಳು ಉತ್ತಮ.

ನಿದ್ದೆ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ನಿದ್ದೆ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಸಾಮಾನ್ಯವಾಗಿ ಮಧ್ಯಾಹ್ನದ ಊಟದ ಬಳಿಕ ಹೆಚ್ಚಿನವರಿಗೆ ನಿದ್ದೆಯ ಜೊಂಪು ಹತ್ತುತ್ತದೆ. ಆಹಾರ ಹೊಟ್ಟೆಸೇರಿದ ಕೂಡಲೇ ಹೆಚ್ಚಿನ ರಕ್ತ ಹೊಟ್ಟೆಯತ್ತ ಸಾಗಿ ಮೆದುಳಿಗೆ ಕಡಿಮೆಯಾಗುವುದೇ ಇದಕ್ಕೆ ಕಾರಣ. ಬದಲಿಗೆ ಮಿತಾಹಾರದ ಮಧ್ಯಾಹ್ನದ ಊಟ ಮತ್ತು ದಿನವಿಡೀ ಸತತವಾಗಿ ಹಣ್ಣು ನೆನೆಸಿದ ನೀರನ್ನು ಕುಡಿಯುತ್ತಿದ್ದರೆ ಹೊಟ್ಟೆಗೆ ಮೆದುಳಿನ ಪಾಲಿನ ರಕ್ತ ಸರಬರಾಜು ಆಗುವುದು ತಪ್ಪಿ ಜೊಂಪು ಇಲ್ಲವಾಗುತ್ತದೆ.

ಶಾರೀರಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ

ಶಾರೀರಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ

ಈ ನೀರಿನಲ್ಲಿರುವ ವಿಟಮಿನ್ನುಗಳು, ಖನಿಜಗಳು, ಆಂಟಿ ಆಕ್ಸಿಡೆಂಟುಗಳು ದೇಹದ ವಿವಿಧ ಅಂಗಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುವ ಮೂಲಕ ಒಟ್ಟಾರೆ ಆರೋಗ್ಯವನ್ನು ವೃದ್ದಿಸುತ್ತವೆ.

ವೃದ್ಧಾಪ್ಯವನ್ನು ದೂರಾಗಿಸುತ್ತವೆ

ವೃದ್ಧಾಪ್ಯವನ್ನು ದೂರಾಗಿಸುತ್ತವೆ

ಹಣ್ಣು ನೆನೆಸಿದ ನೀರನ್ನು ಕುಡಿಯುವ ಮೂಲಕ ಚರ್ಮಕ್ಕೂ ಉತ್ತಮ ಪ್ರಮಾಣದ ಆರ್ದ್ರತೆ ದೊರಕುತ್ತದೆ. ಜೊತೆಗೇ ಚರ್ಮಕ್ಕೆ ಹಾನಿ ಎಸಗುವ ಕಣಗಳಾದ ಫ್ರೀ ರ್‍ಯಾಡಿಕಲ್ ಗಳ ವಿರುದ್ಧ ಹೋರಾಡಿ ನೆರಿಗೆಗಳಾಗದಂತೆ ತಡೆಯುತ್ತದೆ. ಪರಿಣಾಮವಾಗಿ ವೃದ್ಧಾಪ್ಯದ ಚಿಹ್ನೆಗಳು ಬಹಳ ವರ್ಷಗಳವರೆಗೆ ಕಾಡಲು ಸಾಧ್ಯವಿಲ್ಲ.

ದೇಹದ ನೀರಿನ ಅಗತ್ಯವನ್ನು ಪೂರೈಸುತ್ತವೆ

ದೇಹದ ನೀರಿನ ಅಗತ್ಯವನ್ನು ಪೂರೈಸುತ್ತವೆ

ಇಡಿಯ ದಿನ ನಿಯಮಿತ ಮಧ್ಯಂತರಗಳಲ್ಲಿ ಒಂದೊಂದು ಲೋಟ ಹಣ್ಣು ನೆನೆಸಿದ ನೀರನ್ನು ಕುಡಿಯುವ ಮೂಲಕ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಜೊತೆಗೇ ನೀರಿನ ಅಗತ್ಯವನ್ನೂ ಪೂರೈಸಿದಂತಾಗುತ್ತದೆ.

English summary

Benefits Of Fruit Infused Water

Drinking plain water itself offers so many benefits. And when you drink fruit infused water, the benefits just multiply. Water helps flush out all the toxins that are accumulated in your body. And when you add fruits to the water, you are adding lots of nutrients that just benefit your system more.
X
Desktop Bottom Promotion