ಆಲೂಗಡ್ಡೆಯ ಸಿಪ್ಪೆಯ ಪವರ್‍‌ಗೆ ಶಭಾಷ್ ಎನ್ನಲೇಬೇಕು!

By Manu
Subscribe to Boldsky

ನಮ್ಮ ಅಡುಗೆಗಳಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ತರಕಾರಿಗಳು ಎಂದರೆ ಈರುಳ್ಳಿ ಮತ್ತು ಆಲೂಗಡ್ಡೆ. ಆಲೂಗಡ್ಡೆಯನ್ನು ನಾವು ಹೆಚ್ಚಾಗಿ ಸಿಪ್ಪಿ ಸುಲಿದೇ ಬಳಸುತ್ತೇವೆ. ಆದರೆ ಈ ಸಿಪ್ಪೆಗಳನ್ನು ಎಸೆಯುವುದರಿಂದ ನಾವೇನು ಕಳೆದುಕೊಳ್ಳುತ್ತಿದ್ದೇವೆ ಗೊತ್ತೇ?  ಆಲೂಗಡ್ಡೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!

ಈ ಬಗ್ಗೆ ನಡೆಸಿದ ಕೆಲವು ಸಂಶೋಧನೆಗಳ ಪ್ರಕಾರ ಆಲೂಗಡ್ಡೆಯ ಸಿಪ್ಪೆಯಲ್ಲಿಯೂ ಕೆಲವು ಪೋಷಕಾಂಶಗಳಿದ್ದು ಇವುಗಳನ್ನು ಸೇವಿಸುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ..

ಪ್ರಯೋಜನ #1

ಪ್ರಯೋಜನ #1

ನಮ್ಮ ದೇಹಕ್ಕೆ ಅಗತ್ಯವಾದ ಪೊಟ್ಯಾಶಿಯಂ ಅನ್ನು ಆಲೂಗಡ್ಡೆಯ ಸಿಪ್ಪೆ ಒದಗಿಸುತ್ತದೆ. ಉತ್ತಮ ಪ್ರಮಾಣದ ಪೊಟ್ಯಾಶಿಯಂ ನಮ್ಮ ನರವ್ಯವಸ್ಥೆಗೆ ಅಗತ್ಯವಾಗಿದೆ. ಒಂದು ಹೊತ್ತಿನ ಊಟದಲ್ಲಿ ಸೇವಿಸುವ ಆಲೂಗಡ್ಡೆಯ ಸಿಪ್ಪೆಯ ಮೂಲಕ ಸುಮಾರು ಆರುನೂರು ಮಿಗ್ರಾಂ ಪೊಟ್ಯಾಶಿಯಂ ಲಭ್ಯವಾಗುತ್ತದೆ. ಎಲೆಮರೆಕಾಯಿ ಆಲೂಗಡ್ಡೆಯ ಜಾದೂಗೆ ಬೆರಗಾಗಲೇಬೇಕು!

ಪ್ರಯೋಜನ #2

ಪ್ರಯೋಜನ #2

ಆಲೂಗಡ್ಡೆಯ ಸಿಪ್ಪೆಯಲ್ಲಿ ನಿಯಾಸಿಸ್ ಎಂಬ ಪೋಷಕಾಂಶವಿದೆ. ನಮ್ಮ ಆರೋಗ್ಯಕ್ಕೆ ಪ್ರತಿದಿನ ಹದಿನಾರು ಮಿಲಿಗ್ರಾಂ ನಿಯಾಸಿಸ್ ಬೇಕು. ಈ ಪ್ರಮಾಣವನ್ನು ಒಂದು ದೊಡ್ಡ ಆಲೂಗಡ್ಡೆಯ ಸಿಪ್ಪೆಯನ್ನು ಸೇವಿಸುವ ಮೂಲಕ ಪಡೆಯಬಹುದು.

ಪ್ರಯೋಜನ #3

ಪ್ರಯೋಜನ #3

ಆಲೂಗಡ್ಡೆಯಲ್ಲಿರುವ ಪ್ರೋಟೀನುಗಳು, ಖನಿಜಗಳು, ವಿಟಮಿನ್ನುಗಳು ಮತ್ತು ಕಾರ್ಬೋಹೈಡ್ರೇಟುಗಳು ಸಿಪ್ಪೆಯಲ್ಲಿಯೂ ಇದ್ದು ಇವುಗಳನ್ನು ತಿನ್ನುವ ಮೂಲಕ ಎಲ್ಲವನ್ನೂ ಕೊಂಚ ಹೆಚ್ಚಾಗಿಯೇ ಪಡೆಯಬಹುದು.

ಪ್ರಯೋಜನ #4

ಪ್ರಯೋಜನ #4

ನಮ್ಮ ರಕ್ತಕ್ಕೆ ಕಬ್ಬಿಣದ ಅಂಶ ಅಗತ್ಯವಾಗಿ ಬೇಕು. ಆಲೂಗಡ್ಡೆಯಲ್ಲಿ ಕಡಿಮೆ ಇರುವ ಕಬ್ಬಿಣ ಸಿಪ್ಪೆಯಲ್ಲಿ ಹೆಚ್ಚಾಗಿದ್ದು ಸುಮಾರು ಅರ್ಧ ಆಲೂಗಡ್ಡೆಯ ಸಿಪ್ಪೆಯ ಸೇವನೆಯ ಮೂಲಕ ನಾಲ್ಕು ಮಿಲಿಗ್ರಾಂ ಕಬ್ಬಿಣ ದೊರಕುತ್ತದೆ.

ಪ್ರಯೋಜನ #5

ಪ್ರಯೋಜನ #5

ಆಲೂಗಡ್ಡೆಯ ಸಿಪ್ಪೆಯಲ್ಲಿರುವ ಕರಗದ ನಾರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಮಲಬದ್ಧತೆಯಿಂದ ರಕ್ಷಿಸುತ್ತದೆ.

ಪ್ರಯೋಜನ #6

ಪ್ರಯೋಜನ #6

ಆಲೂಗಡ್ಡೆಯ ಸಿಪ್ಪೆಯನ್ನು ನಮ್ಮ ಆಹಾರದಲ್ಲಿ ಸೇವಿಸುವ ಮೂಲಕ ಆಹಾರದಲ್ಲಿರುವ ಗ್ಲುಕೋಸ್ ಹೀರಿಕೊಳ್ಳುವ ಪ್ರಮಾಣ ಕೊಂಚ ನಿಧಾನವಾಗುತ್ತದೆ. ಅಂದರೆ ಸಿಪ್ಪೆಯಿಲ್ಲದೇ ತಿನ್ನುವ ಆಲೂಗಡ್ಡೆಯ ಮೂಲಕ ರಕ್ತದಲ್ಲಿ ಏಕಾಏಕಿ ಏರುವ ಸಕ್ಕರೆ ಸಿಪ್ಪೆ ಸಹಿತವಾಗಿ ತಿನ್ನುವ ಮೂಲಕ ಇಲ್ಲವಾಗುತ್ತದೆ.

ಪ್ರಯೋಜನ #7

ಪ್ರಯೋಜನ #7

ಒಂದು ವೇಳೆ ಆಲೂಗಡ್ಡೆಯ ರಸವನ್ನು ಸಂಗ್ರಹಿಸುವಾಗಲೂ ಸಿಪ್ಪೆಯನ್ನು ಹಾಗೇ ಬಿಟ್ಟರೆ ಸಿಪ್ಪೆಯಲ್ಲಿರುವ ಪೋಷಕಾಂಶಗಳೂ ಸೇರಿ ಈ ರಸವನ್ನು ಇನ್ನಷ್ಟು ಪ್ರಬಲವಾಗಿಸುತ್ತದೆ. ಇದು ಆರೋಗ್ಯವನ್ನು ಇನ್ನಷ್ಟು ವೃದ್ಧಿಸುತ್ತದೆ. ಆಲೂಗಡ್ಡೆಯ ಸಿಪ್ಪೆಯನ್ನು ಸೇರಿಸಿದ ಖಾದ್ಯಗಳು ಇನ್ನಷ್ಟು ರುಚಿಕರವಾಗಿರುವನ್ನೂ ಕಂಡುಕೊಳ್ಳಲಾಗಿದೆ.

 
For Quick Alerts
ALLOW NOTIFICATIONS
For Daily Alerts

    English summary

    Benefits Of Eating Potato Peels

    Most of us need to eat more of vegetables on a daily basis. And when it comes to potatoes, most of us use them in various dishes but we remove the peels and throw them away. Are we missing anything? So, instead of removing and throwing those skins, try to include them in your diet in some or the other way. If you are wondering about the health benefits of eating potatoes peels, take a look.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more