Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಆಲೂಗಡ್ಡೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!
ಆರೋಗ್ಯದ ವಿಷಯದಲ್ಲಿ ತರಕಾರಿಗಳ ಪಾತ್ರ ಹೆಚ್ಚು ಮಹತ್ವದ್ದಾಗಿದೆ. ನಿಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಮೂಲ ಇಂಧನ ಎಂದೇ ಪರಿಗಣಿತವಾಗಿರುವ ಹಣ್ಣು ಮತ್ತು ತರಕಾರಿಗಳು ನಮ್ಮ ದೇಹದಲ್ಲಿ ಕಮಾಲಿನ ಕಾರ್ಯಗಳನ್ನು ನಿರ್ವಹಿಸುತ್ತದೆ. ವೈದ್ಯರು ಕೂಡ ನಿಮ್ಮ ಆರೋಗ್ಯಕ್ಕಾಗಿ ಹಣ್ಣು ಹಂಪಲುಗಳನ್ನೇ ಪ್ರಧಾನವಾಗಿ ಶಿಫಾರಸು ಮಾಡುತ್ತಾರೆ.
ಇನ್ನು ನಿಮ್ಮ ತ್ವಚೆಯ ಸೌಂದರ್ಯದ ವಿಷಯದಲ್ಲೂ ಬಹುಮುಖ್ಯ ಪಾತ್ರವಹಿಸುವ ಹಣ್ಣು ತರಕಾರಿಗಳನ್ನು ದಿನನಿತ್ಯದ ಜೀವನದಲ್ಲಿ ಬಳಸಿದಷ್ಟೂ ಅತ್ಯುತ್ತಮ. ಇನ್ನು ನೀವು ನಿರ್ದಿಷ್ಟ ತರಕಾರಿಗಳನ್ನು ಕೈಗೆತ್ತಿಕೊಳ್ಳುವಾಗಲೂ ಕೂಡ ಇವುಗಳ ಅಸಾಮಾನ್ಯವಾದ ಕೆಲಸಗಳ ಜಾದೂಗೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಅಂತಹುದೇ ವಿಶಿಷ್ಟ ತರಕಾರಿಯಾದ ಆಲೂಗಡ್ಡೆಯ ವಿಶೇಷತೆಯನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವೆವು. ಆಲೂಗಡ್ಡೆಯ ಕರಾಮತ್ತಿನಲ್ಲಿದೆ ಕೇಶ ಸಮಸ್ಯೆಗೆ ಪರಿಹಾರ

ಸುಕ್ಕುಗಟ್ಟುವಿಕೆ ನಿವಾರಣೆ
ನಿಮ್ಮ ಮುಖದ ಮೇಲೆ ದಿನಾಲೂ ಬಟಾಟೆ ಜ್ಯೂಸ್‌ನ್ನು ಹಚ್ಚಿಕೊಂಡರೆ ನಿಮ್ಮ ಮುಖ ಸುಕ್ಕುಗಟ್ಟುವುದು ತಡೆಯಬಹುದು ಮತ್ತು ಪ್ರಸಕ್ತ ಇರುವ ಸುಕ್ಕನ್ನು ಕಡಿಮೆ ಮಾಡಿಕೊಳ್ಳಬಹುದು.
ಕಪ್ಪು ಕಲೆಗಳಿಂದ ಮುಕ್ತಿ
ನಿಮ್ಮ ಕಣ್ಣಿನ ಕೆಳಗಡೆ ಇರುವಂತಹ ಕಪ್ಪು ಕಲೆಗಳನ್ನು ತೆಗೆದುಹಾಕಲು ಆಲೂಗಡ್ಡೆಯನ್ನು ಬಳಸಬಹುದು. ಹೌದು ಆಲೂಗಡ್ಡೆ ಜ್ಯೂಸ್‌ನ ಕೆಲವು ಹನಿಗಳನ್ನು ಕಲೆ ಇರುವಂತಹ ಜಾಗಕ್ಕೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ
ಊದಿದ ಕಣ್ಣುಗಳ ಚಿಕಿತ್ಸೆಗೆ
ಊದಿದ ಕಣ್ಣುಗಳಿಗೆ ನೀವು ಚಿಕಿತ್ಸೆ ನೀಡಬೇಕೆಂದು ಬಯಸಿದರೆ ಆಗ ನೀವು ಆಲೂಗಡ್ಡೆ ಮತ್ತು ಸೌತೆಕಾಯಿಯ ಮಿಶ್ರಣವನ್ನು ಊದಿದ ಜಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು.
ಗಾಢ ಕಲೆಗಳು
ಆಲೂಗಡ್ಡೆ ಜ್ಯೂಸ್ ಅನ್ನು ನೀವು ನಿಯಮಿತವಾಗಿ ಗಾಢ ಕಲೆಗಳು ಇರುವ ಜಾಗಕ್ಕೆ ಹಚ್ಚಿದರೆ ಅದರಿಂದ ಮುಕ್ತಿ ಪಡೆಯಬಹುದು.
ಆರೋಗ್ಯಕರ ಕೂದಲನ್ನು ಆನಂದಿಸಿ
ಆಲೂಗಡ್ಡೆಯನ್ನು ನೀವು ದಿನನಿತ್ಯ ನಿಮ್ಮ ಕೂದಲಿನ ಆರೈಕೆಯಲ್ಲಿ ಬಳಸಿಕೊಂಡರೆ ಕೂದಲು ಕಂದು ಬಣ್ಣಕ್ಕೆ ತಿರುಗುವುದು ತಪ್ಪುತ್ತದೆ. ಇದರಿಂದ ನಿಮ್ಮ ಕೂದಲು ಆರೋಗ್ಯವಾಗಿರುತ್ತದೆ.



Click it and Unblock the Notifications

