For Quick Alerts
ALLOW NOTIFICATIONS  
For Daily Alerts

ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ-ಹಲ್ಲುಜ್ಜುವ ಪೇಸ್ಟ್!

By manu
|

ಎಂಭತ್ತರ ದಶಕದಲ್ಲಿ ಕೋಲ್ಗೇಟ್ ಟೂಥ್ ಪೇಸ್ಟ್ ನ ಜಾಹೀರಾತೊಂದರಲ್ಲಿ ಅಂದಿನ ಬಾಲನಟಿ ಬೇಬಿ ಗುಡ್ಡು ಟೂಥ್ ಪೇಸ್ಟ್ ಅನ್ನು ನಾಲಿಗೆಗೆ ಉದ್ದಕ್ಕೆ ಸವರಿ ಚಪ್ಪರಿಸುವ ದೃಶ್ಯವಿತ್ತು. ಆದರೆ ಈ ಬಗ್ಗೆ ಎಚ್ಚರಿಕೆ ವಹಿಸಿದ ಭಾರತೀಯ ವೈದ್ಯಕೀಯ ಮಂಡಲಿ ನ್ಯಾಯಾಲಯದಲ್ಲಿ ಟೂಥ್ ಪೇಸ್ಟನ್ನು ಹೀಗೆ ನಾಲಿಗೆಗೆ ನೆಕ್ಕುವುದರಿಂದ ಹೊಟ್ಟೆಗೆ ಹೋಗುವ ಸಾಧ್ಯತೆ ಇದ್ದು ಇದು ಅಪಾಯಕಾರಿಯಾಗಿದೆ ಎಂದು ಕೋಲ್ಗೇಟ್

ಪಾಮೋಲಿವ್ ಕಂಪನಿ ವಿರುದ್ಧ ಸಮರ ಸಾರಿತು. ತಪ್ಪು ಅರಿತ ಸಂಸ್ಥೆ ಇದೇ ಜಾಹೀರಾತನ್ನು ಮತ್ತೊಮ್ಮೆ ಪುನಃ ಚಿತ್ರೀಕರಿಸಿ ಬೇಬಿ ಗುಡ್ಡು ಕೇವಲ ಮುಗುಳ್ನಗುವಂತೆ ಮಾರ್ಪಾಡಿಸಿ ದೂರದರ್ಶನದಲ್ಲಿ ಪ್ರಸಾರ ಮಾಡಿತು. ಇಷ್ಟೆಲ್ಲಾ ಸರ್ಕಸ್ಸು ಏಕೆ ಮಾಡಬೇಕಾಯಿತು ಎಂದರೆ ಟೂಥ್ ಪೇಸ್ಟ್ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮಾತ್ರ ಯೋಗ್ಯವೇ ಹೊರತು ಸರ್ವಥಾ ಹೊಟ್ಟೆಗೆ ಹೋಗಕೂಡದು. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯ? ನಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಹಲ್ಲುಜ್ಜುವ ಪೇಸ್ಟ್!

ಟೂಥ್ ಪೇಸ್ಟ್ ನಲ್ಲಿ ಹಲ್ಲು ಸ್ವಚ್ಛಗೊಳಿಸಲು ಇರುವ ರಾಸಾಯನಿಕಗಳು ಪ್ರಬಲ ಹಾಗೂ ಹಾನಿಕರವೂ ಆಗಿವೆ. ವಿಶೇಷವಾಗಿ ಇದರಲ್ಲಿರುವ ಫ್ಲೋರೈಡ್ ಹೊಟ್ಟೆಗೆ ಹೋದರೆ ವಿಷಕ್ಕೆ ಸಮಾನ! ಹೆಚ್ಚಿನವರು ತಾವು ಹಲ್ಲುಜ್ಜಿದ ಬಳಿಕ ಮುಕ್ಕಳಿಸಿ ಉಗಿದು ಬಿಡುವ ಕಾರಣ ಅಪಾಯವಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ವಾಸ್ತವವಾಗಿ ಟೂಥ್ ಪೇಸ್ಟ್ ಜೊಲ್ಲಿನೊಡನೆ ನೊರೆಯರೂಪ ತಾಳಿದ ಬಳಿಕ ಬಾಯಿಯಲ್ಲಿ ಕೊಂಚವಾದರೂ ಉಳಿದೇ ಉಳಿಯುತ್ತದೆ. ದಂತವೈದ್ಯರ ಪ್ರಕಾರ ಇದು ಪೂರ್ಣವಾಗಿ ಹೋಗಬೇಕೆಂದರೆ ಕನಿಷ್ಠ ಐದು ಬಾರಿ ಮುಕ್ಕಳಿಸಬೇಕು. ಸಮಯವೇ ಇಲ್ಲವೆಂದಾದರೆ ಮೂರು ಬಾರಿಯಾದರೂ ಚೆನ್ನಾಗಿ ಮುಕ್ಕಳಿಸಬೇಕು. ನಮ್ಮಲ್ಲಿ ಎಷ್ಟು ಜನರು ಇದನ್ನು ಪಾಲಿಸುತ್ತಿದ್ದಾರೆ? ಆರೋಗ್ಯಕರ ಒಸಡುಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಟೂಥ್ ಪೌಡರ್!

ಒಂದು ಅಥವಾ ಎರಡು ಬಾರಿ ಸ್ವಲ್ಪವೇ ಮುಕ್ಕಳಿಸಿ ಹೊರಹಾಕುವುದು ನಮ್ಮೆಲ್ಲರ ಅಭ್ಯಾಸ. ಇದರಿಂದ ಅಲ್ಪಪ್ರಮಾಣದಲ್ಲಿಯೇ ಸರಿ, ಕೊಂಚ ನೊರೆ ಹೊಟ್ಟೆ ಸೇರುತ್ತದೆ. ಬಳಿಕ ನೇರವಾಗಿ ರಕ್ತಕ್ಕೆ! ರಕ್ತದಿಂದ ಅಂಗಾಂಶಗಳಿಗೆ ತಲುಪಿ ಕೆಲವು ಅಂಗಗಳ ಕ್ಷಮತೆಯನ್ನು ಕುಂದಿಸಬಹುದು. ಇತ್ತೀಚಿನ ಕೆಲವು ಟೂಥ್ ಪೇಸ್ಟ್‌ಗಳಲ್ಲಿರುವ ರಾಸಾಯನಿಕಗಳು ಎಷ್ಟು ಪ್ರಬಲವೆಂದರೆ ಇದು ಬಾಯಿಯ ಒಳಭಾಗದ ಚರ್ಮದ (ಒಸಡು ಅಥವಾ ಕೆನ್ನೆಯ ಒಳಭಾಗ) ಮೂಲಕ ನೇರವಾಗಿ ರಕ್ತ ಸೇರುವ ಕ್ಷಮತೆ ಹೊಂದಿವೆ. ರಕ್ತದಲ್ಲಿಯೇ ಸಂಚರಿಸುತ್ತಾ ಒಂದು ಕಡೆ ಕೇಂದ್ರೀಕೃತಗೊಳ್ಳುವ ಮೂಲಕ ನಂತರ ಯಾವಾಗಲಾದರೊಮ್ಮೆ ಕಾಯಿಲೆಯ ರೂಪದಲ್ಲಿ ಪ್ರಕಟಗೊಳ್ಳುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಥೈರಾಯ್ಡ್ ತೊಂದರೆ

ಥೈರಾಯ್ಡ್ ತೊಂದರೆ

ಕೆಲವು ಟೂಥ್ ಪೇಸ್ಟ್ ಗಳಲ್ಲಿ Triclosan ಎಂಬ ರಾಸಾಯನಿಕಗಳಿರುತ್ತವೆ. ಬುರುಗು ನೀಡಲು ಬಳಸಲಾಗುವ ಈ ರಾಸಾಯನಿಕ ಮೊದಲು ಕೀಟನಾಶಕವಾಗಿ ಬಳಸಲ್ಪಡುತ್ತಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಥೈರಾಯ್ಡ್ ತೊಂದರೆ

ಥೈರಾಯ್ಡ್ ತೊಂದರೆ

ಒಂದು ಸಂಶೋಧನೆಯ ಮೂಲಕ ಈ ರಾಸಾಯನಿಕ ಥೈರಾಯ್ಡ್ ಗ್ರಂಥಿಯ ಮೇಲೆ ನೇರ ಪ್ರಭಾವ ಬೀರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಜೊತೆಗೇ ಹೃದಯ ತೊಂದರೆ ಮತ್ತು ಕ್ಯಾನ್ಸರ್ (ಥೈರಾಯ್ಡ್ ಗ್ರಂಥಿಯ ಕ್ಯಾನ್ಸರ್) ಬರುವ ಸಾಧ್ಯತೆಯೂ ಹೆಚ್ಚು. ಆದ್ದರಿಂದ ಈ ರಾಸಾಯನಿಕವಿರುವ ಟೂಥ್ ಪೇಸ್ಟ್ ತಂಟೆಗೆ ಹೋಗದಿರುವುದೇ ವಾಸಿ.

ಮೆದುಳು, ಮೂತ್ರಪಿಂಡ ಮತ್ತು ಹೃದಯ ತೊಂದರೆಗಳು

ಮೆದುಳು, ಮೂತ್ರಪಿಂಡ ಮತ್ತು ಹೃದಯ ತೊಂದರೆಗಳು

ಸಾಮಾನ್ಯವಾಗಿ ಅಸಾಂಪ್ರಾದಾಯಿಕ (ಅಂದರೆ ಮಾರುಕಟ್ಟೆಯಲ್ಲಿ ಹಣ ಕೊಟ್ಟು ಕೊಳ್ಳುವ ನೂತನ) ಟೂಥ್ ಪೇಸ್ಟ್ ಗಳಲ್ಲಿ polyethylene glycols ಎಂಬ ರಾಸಾಯನಿಕವಿದೆ. ವಾಸ್ತವವಾಗಿ ಇದೊಂದು ಅಪ್ಪಟ ಪ್ಲಾಸ್ಟಿಕ್ (ಪಾಲಿಥಿಲೀನ್), ಅಂದರೆ ಅಂಗಡಿಯಲ್ಲಿ ವಸ್ತುಗಳನ್ನು ಪ್ಯಾಕ್ ಮಾಡಲು ಉಪಯೋಗಿಸುವ ಪ್ಲಾಸ್ಟಿಕ್. ಇದು ವಿಷಕಾರಿಯಾಗಿದ್ದು ಇದರ ಸೇವನೆಯಿಂದ ಮೆದುಳು, ಮೂತ್ರಪಿಂಡ ಮತ್ತು ಹೃದಯಕ್ಕೆ ತೊಂದರೆಯುಂಟಾಗಬಹುದು.

ಬುದ್ಧಿಮತ್ತೆ ಕ್ಷೀಣವಾಗುವುದು ಮತ್ತು ಮೆದುಳಿಗೆ ಘಾಸಿಯಾಗುವುದು

ಬುದ್ಧಿಮತ್ತೆ ಕ್ಷೀಣವಾಗುವುದು ಮತ್ತು ಮೆದುಳಿಗೆ ಘಾಸಿಯಾಗುವುದು

ಟೂಥ್ ಪೇಸ್ಟ್ ನಲ್ಲಿರುವ ಇನ್ನೊಂದು ಅಂಶವೆಂದರೆ ಫೋರೈಡ್. ಕ್ಲೋರೀನ್ ನಂತೆಯೇ ಫ್ಲೋರೀನ್ ಸಹಾ ಒಂದು ಹ್ಯಾಲೋಜೆನ್ ಆಗಿದೆ. ಇದರ ಸಂತುಲಿತ ರೂಪವೇ ಫ್ಲೂರೈಡ್. ಆದರೆ ಈ ರಾಸಾಯನಿಕ ಒಸಡುಗಳಿಗೆ ಹಾನಿ ಮಾಡುವ ಕ್ಷಮತೆ ಹೊಂದಿದೆ. ಇದು ಹೊಟ್ಟೆಗೆ ಹೋದರೆ ಮಕ್ಕಳಲ್ಲಿ ಬುದ್ಧಿಮತ್ತೆ ಕಡಿಮೆಯಾಗುವುದು ಖಚಿತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬುದ್ಧಿಮತ್ತೆ ಕ್ಷೀಣವಾಗುವುದು ಮತ್ತು ಮೆದುಳಿಗೆ ಘಾಸಿಯಾಗುವುದು

ಬುದ್ಧಿಮತ್ತೆ ಕ್ಷೀಣವಾಗುವುದು ಮತ್ತು ಮೆದುಳಿಗೆ ಘಾಸಿಯಾಗುವುದು

ಇದೇ ಕಾರಣಕ್ಕೆ ಬೇಬಿ ಗುಡ್ಡು ಜಾಹೀರಾತನ್ನು ಬದಲಿಸಬೇಕಾಯ್ತು. ಗರ್ಭಿಣಿಯರ ಹೊಟ್ಟೆಗೆ ಹೋದರೆ ಇದು ಥೈರಾಯ್ಡ್ ತೊಂದರೆ, ಮೂಳೆಗಳನ್ನು ಶಿಥಿಲವಾಗಿಸುವುದು, ಹೊಟ್ಟೆಯ ತೊಂದರೆ ಮತ್ತು ಕ್ಯಾನ್ಸರ್ ನಂತಹ ಅಪಾಯವನ್ನೂ ಒಡ್ಡಬಲ್ಲುದು.

ಬಾಯಿಯಲ್ಲಿ ಹುಣ್ಣು ಮತ್ತು ಹಾರ್ಮೋನುಗಳಲ್ಲಿ ಏರುಪೇರು

ಬಾಯಿಯಲ್ಲಿ ಹುಣ್ಣು ಮತ್ತು ಹಾರ್ಮೋನುಗಳಲ್ಲಿ ಏರುಪೇರು

ಟೂಥ್ ಪೇಸ್ಟ್ ಬಾಯಿಯಲ್ಲಿ ನೊರೆಬರುವ ಜೊತೆಗೇ ಸುಲಭವಾಗಿ ಜಾರುವಂತಾಗಲು sodium lauryl sulphate ಎಂಬ ರಾಸಾಯನಿಕವನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕ ಬಾಯಿಯಲ್ಲು ಹುಣ್ಣು, ಚರ್ಮದಲ್ಲಿ ತುರಿಕೆ ಉಂಟುಮಾಡುವ ಜೊತೆಗೇ ಹೊಟ್ಟೆ ಸೇರಿದರೆ ಹಾರ್ಮೋನುಗಳನ್ನೇ ಏರುಪೇರು ಮಾಡುವ ಅಪಾಯವಿದೆ.

ಹೊಟ್ಟೆ ಉಬ್ಬರಿಕೆ ಮತ್ತು ವಾಯುಪ್ರಕೋಪದ ತೊಂದರೆ

ಹೊಟ್ಟೆ ಉಬ್ಬರಿಕೆ ಮತ್ತು ವಾಯುಪ್ರಕೋಪದ ತೊಂದರೆ

ಟೂಥ್ ಪೇಸ್ಟ್ ನ ರುಚಿ ಸಾಮಾನ್ಯವಾಗಿ ಕಹಿಯಾಗಿರುತ್ತದೆ. ಇದನ್ನು ಕಡಿಮೆ ಮಾಡಲು sorbitol ಎಂಬ ಸಿಹಿವಸ್ತುವನ್ನು ಸೇರಿಸಲಾಗುತ್ತದೆ. ವಾಸ್ತವವಾಗಿ ಇದೊಂದು ಸಕ್ಕರೆ ಮದ್ಯ (sugar alcohol) ಸಕ್ಕರೆಯಂತೆ ಸಿಹಿಯಾಗಿದ್ದರೂ ನಿಧಾನವಾಗಿ ಕರಗುವ ಮೂಲಕ ಸಕ್ಕರೆಯ ಬದಲಿಗೆ ಶುಗರ್ ಫ್ರೀ ಎಂದು ಬರೆದಿರುವ ಚ್ಯೂಯಿಂಗ್ ಗಮ್ ಮೊದಲಾದ ವಸ್ತುಗಳಲ್ಲಿ ಸೇರಿಸಲ್ಪಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆ ಉಬ್ಬರಿಕೆ ಮತ್ತು ವಾಯುಪ್ರಕೋಪದ ತೊಂದರೆ

ಹೊಟ್ಟೆ ಉಬ್ಬರಿಕೆ ಮತ್ತು ವಾಯುಪ್ರಕೋಪದ ತೊಂದರೆ

ಆದರೆ ಇದು ಹೊಟ್ಟೆಗೆ ಹೋದರೆ (ಗರಿಷ್ಟ ಪ್ರಮಾಣ ದಿನಕ್ಕೆ ಇಪ್ಪತ್ತು ಗ್ರಾಂ, ಇದಕ್ಕೂ ಹೆಚ್ಚಾದರೆ ಪ್ರಾಣಕ್ಕೆ ಅಪಾಯ) ಅತಿಸಾರ, ಅಜೀರ್ಣ, ವಾಯುಪ್ರಕೋಪ, ಹೊಟ್ಟೆ ಉಬ್ಬರಿಕೆ ಮೊದಲಾದ ತೊಂದರೆಗಳನ್ನು ಉಂಟುಮಾಡುತ್ತದೆ. ಅಲ್ಲದೇ ಹೊಟ್ಟೆಯ ಕೊಬ್ಬನ್ನು ಕರಗಿಸುವ ಕ್ರಿಯೆಗೆ ತಡೆಯೊಡ್ಡುವ ಮೂಲಕ ಬೊಜ್ಜು ಕರಗಲು ಸಾಧ್ಯವಾಗುವುದಿಲ್ಲ.

ಮಧುಮೇಹ ಮತ್ತು ತೂಕದಲ್ಲಿ ಹೆಚ್ಚಳ

ಮಧುಮೇಹ ಮತ್ತು ತೂಕದಲ್ಲಿ ಹೆಚ್ಚಳ

ಸಿಹಿಯನ್ನು ಹೆಚ್ಚಿಸಲು aspartame ಎಂಬ ಕೃತಕ ಸಕ್ಕರೆಯನ್ನು ಸೇರಿಸಲಾಗುತ್ತದೆ. ಇದು ಕ್ಯಾಲೋರಿಗಳನ್ನು ನೀಡುವುದಿಲ್ಲವಾದರೂ ಇದರಿಂದ ಮಧುಮೇಹದ ಸಾಧ್ಯತೆ ಹೆಚ್ಚುತ್ತದೆ. ಅಂದರೆ ಮುಂದೆಂದೋ ಬರಬಹುದಾಗಿದ್ದ ಮಧುಮೇಹ ಚಿಕ್ಕ ವಯಸ್ಸಿಗೇ ಬಂದುಬಿಡುತ್ತದೆ. ಜೊತೆಗೇ ತೂಕ ಹೆಚ್ಚುವ ಸಂಭವವೂ ಹೆಚ್ಚುತ್ತದೆ. ಅಲ್ಲದೇ ಮೆದುಳಿನ ಗಡ್ಡೆ ಸಹಿತ ಹಲವು ಕಾಯಿಲೆಗಳಿಗೆ ಈ ರಾಸಾಯನಿಕ ಕಾರಣವಾಗಿರುವ ಪ್ರಕರಣಗಳು ಕಂಡುಬಂದಿವೆ.

ಯಕೃತ್ ಮತ್ತು ಮೂತ್ರಪಿಂಡದ ಕ್ಯಾನ್ಸರ್

ಯಕೃತ್ ಮತ್ತು ಮೂತ್ರಪಿಂಡದ ಕ್ಯಾನ್ಸರ್

ಕೆಲವು ಟೂಥ್ ಪೇಸ್ಟ್ ಗಳಲ್ಲಿ Diethanolamine ಎಂಬ ರಾಸಾಯನಿಕವಿದೆ. ಇದು ಬುರುಗು ಹೆಚ್ಚಿಸಲು ನೆರವಗುತ್ತದೆ. ಬುರುಗಿನ ಜೊತೆಗೇ ಇದು ಯಕೃತ್, ಮೂತ್ರಪಿಂಡಗಳ ಕ್ಯಾನ್ಸರ್ ಮತ್ತು ಹಾರ್ಮೋನುಗಳಲ್ಲಿ ಏರುಪೇರಿಗೂ ಕಾರಣವಾಗುತ್ತದೆ.

ಕೆಲವೊಂದು ಜಾಗರೂಕತೆಯ ಸಲಹೆ

ಕೆಲವೊಂದು ಜಾಗರೂಕತೆಯ ಸಲಹೆ

* ಪ್ರತಿ ಬಾರಿ ಹಲ್ಲುಜ್ಜಿಕೊಂಡ ಬಳಿಕ ಕನಿಷ್ಠ ಐದು ಬಾರಿಯಾದರೂ ಚೆನ್ನಾಗಿ ಮುಕ್ಕಳಿಸಿಕೊಳ್ಳಿ.

* ಬಾಯಿ ಮುಕ್ಕಳಿಸಲು ಮಾರುಕಟ್ಟೆಯಲ್ಲಿ ದೊರಕುವ ದ್ರವ ಸಹಾ ನಿತ್ಯ ಬಳಕೆಗೆ ಸಲ್ಲದು. ಸಮಾರಂಭದ ಮೊದಲು ಬಾಯಿವಾಸನೆ ಬರದೇ ಇರುವ ಸಂದರ್ಭದಲ್ಲಿ ಮಾತ್ರ ಕೊಂಚವೇ ಬಳಸಿದರೆ ಸಾಕು. ಏಕೆಂದರೆ ಇದರ ಸತತ ಬಳಕೆಯೂ ಅಪಾಯಕಾರಿ

* ಹಲ್ಲುಗಳನ್ನು ಅಡ್ಡಲಾಗಿ ಕಡಿಮೆ ಮತ್ತು ಮೇಲಿನಿಂದ ಕೆಳಗೆ ಹೆಚ್ಚಿನ ಒತ್ತಡವಿಲ್ಲದೇ ಉಜ್ಜುವುದು ಹೆಚ್ಚು ಪರಿಣಾಮಕಾರಿ

ಕೆಲವೊಂದು ಜಾಗರೂಕತೆಯ ಸಲಹೆ

ಕೆಲವೊಂದು ಜಾಗರೂಕತೆಯ ಸಲಹೆ

* ಸವೆದುಹೋದ ಒಸಡು ಮತ್ತೆ ಬೆಳೆಯದು. ಹಾಗಾಗಿ ಒಸಡುಗಳ ಮೇಲೆ ಒತ್ತಡ ಹೇರಬೇಡಿ

* ಪ್ರತಿ ಬಾರಿ ಊಟ ಅಥವಾ ಆಹಾರ ಸೇವಿಸಿದ ಬಳಿಕ ಬ್ರಶ್ ಇಲ್ಲದಿದ್ದರೂ ಬರೆಯ ನೀರಿನಿಂದಲಾದರೂ ಮೂರರಿಂದ ಐದು ಬಾರಿ ಮುಕ್ಕಳಿಸಿ.

* ಮುಕ್ಕಳಿಸಲು ಬಿಸಿನೀರು ಸರ್ವಥಾ ಉಪಯೋಗಿಸಬೇಡಿ. ತಣ್ಣೀರೇ ಅತ್ಯುತ್ತಮ.

* ಸಿಹಿ ತಿಂದ ಬಳಿಕ ಕಡ್ಡಾಯವಾಗಿ ಮುಕ್ಕಳಿಸಲು ಮರೆಯದಿರಿ

ಕೆಲವೊಂದು ಜಾಗರೂಕತೆಯ ಸಲಹೆ

ಕೆಲವೊಂದು ಜಾಗರೂಕತೆಯ ಸಲಹೆ

* ರಾಸಾಯನಿಕ ಆಧಾರಿತ ಟೂಥ್ ಪೇಸ್ಟ್ ಬದಲು ನೈಸರ್ಗಿಕ ವಸ್ತುಗಳನ್ನು ಆಧರಿಸಿದ ಪೇಸ್ಟ್ ಬಳಸಿ

* ಆಗಾಗ ಉಪ್ಪುನೀರಿನಿಂದ ಗಳಗಳ ಮಾಡುತ್ತಿರಿ. ಇದರಿಂದ ಗಂಟಲ ಮೇಲ್ಭಾಗ, ದವಡೆಯ ಹಿಂಭಾಗ ಸಹಾ ಸ್ವಚ್ಛಗೊಳ್ಳುತ್ತವೆ.

* ಹಲ್ಲು ಬಿಳುಪಾಗುವ ಜಾಹೀರಾತುಗಳಿಗೆ ಮರುಳಾಗಬೇಡಿ. ಹಲ್ಲು ಹಳದಿಯಾಗಿದ್ದರೆ ಇದು ನಮ್ಮ ಚರ್ಮದ ಬಣ್ಣದಂತೆಯೇ ಸ್ವಾಭಾವಿಕವೇ ಹೊರತು ಇದನ್ನು ಬಿಳಿಯದಾಗಿಸಲು ಸಾಧ್ಯವಿಲ್ಲ.

English summary

Be Aware: Your Toothpaste Can Make You Sick

Do you that the toothpaste that we get from the market can cause many diseases? It will be shocking for you to know that the conventional toothpastes contain many harmful chemicals added in their manufacturing process to make the product more presentable and suitable for use. These chemicals from the toothpaste start to get accumulated in the body in a certain period of time and can show their harmful effects later on. Have a look at the diseases that can be caused by the use of toothpastes.
X
Desktop Bottom Promotion