For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ನೀವೇ ರೋಲ್ ಮಾಡೆಲ್‌ಗಳಾಗಿರಿ

By Super
|

ಮಕ್ಕಳ ಮನಸ್ಸು ಖಾಲಿ ಕಾಗದವಿದ್ದ ಹಾಗೆ. ಹಿರಿಯರು ಏನನ್ನು ಹೇಳಿಕೊಡುತ್ತಾರೋ ಅದನ್ನೇ ತಕ್ಷಣ ಕಲಿತುಕೊಂಡು ಬಿಡುತ್ತಾರೆ. ಒಳ್ಳೆಯದೇ ಇರಲಿ, ಕೆಟ್ಟದ್ದೇ ಇರಲಿ ಹಿರಿಯರ ಚಾಳಿಗಳು ಮಕ್ಕಳಿಗೆ ಬರುವುದು ತುಂಬಾ ಬೇಗ. ಅಂತೆಯೇ ಮಾತುಗಳು ಸಹಾ. ಹಿರಿಯರು ಕಲಿಸಿಕೊಟ್ಟ ಮಾತುಗಳು ಜೀವನಪರ್ಯಂತ ಅಭ್ಯಾಸವಾಗಿ ಉಳಿಯುತ್ತವೆ. ಆದ್ದರಿಂದ ಮಕ್ಕಳೆದುರು ಯಾವುದೇ ಮಾತನಾಡಬೇಕಾದರೂ ಅಥವಾ ಯಾವುದೇ ಚಟುವಟಿಕೆಯನ್ನು ನಡೆಸಬೇಕಾದರೂ ಹಿರಿಯರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸವಾಗಿರುವ ಮಕ್ಕಳಿಗೆ ಅವರ ಹಿರಿಯರು ಮಾಡುವ ಜಗಳದ ಪದಗಳು ಸ್ಪಷ್ಟವಾಗಿ ಕೇಳಿಸಿ ಅದನ್ನೇ ಬಳಿಕ ಅವರು ಶಾಲೆಯಲ್ಲಿ ತಮ್ಮ ಸಹಪಾಠಿಗಳ ವಿರುದ್ಧ ಉಪಯೋಗಿಸುತ್ತಾರೆ. ಮಕ್ಕಳ ಮನಸ್ಸು ವಿಷಯವನ್ನು ಗ್ರಹಿಸುವುದರಲ್ಲಿ ಅತ್ಯಂತ ಸಮರ್ಥವೇ ಹೊರತು ಆ ವಿಷಯದ ಸತ್ಯಾಸತ್ಯತೆಯನ್ನು (ಅಂದರೆ ಈ ವಿಷಯ ಒಳ್ಳೆಯದೋ ಕೆಟ್ಟದ್ದೋ ಎಂದು ಪರಿಗಣಿಸುವ) ಅರಿಯುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ.

ಆದ್ದರಿಂದ ಅವರಿಗೆ ಏನನ್ನು ಹಿರಿಯರು ಕಲಿಸಿಕೊಡುತ್ತಾರೋ ಅದನ್ನೇ ಕಲಿತು ಬಿಡುತ್ತಾರೆ. ದೇವರ ನಾಮ ಕಲಿಸಿದರೆ ದೇವರ ನಾಮವನ್ನೂ ಬೈಗುಳಗಳನ್ನು ಕಲಿಸಿದರೆ ಬೈಗುಳಗಳನ್ನೂ ಕಲಿಯುತ್ತಾರೆ. ಅದರಲ್ಲೂ ಹಿರಿಯರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಲು ಉಪಯೋಗಿಸುವ ಪದಗಳನ್ನು ಮಕ್ಕಳು ಬೇಗನೇ ಕಲಿತುಬಿಡುತ್ತಾರೆ. ಏಕೆಂದರೆ ಈ ಪದಗಳನ್ನು ಅರಿಯದ ಇತರರಿಗೆ ಬಳಸಿದಾಗ ತಾನು ಇತರಿಗಿಂತ ಮೇಲು ಎಂಬ ಭಾವನೆ ಬಲವಾಗುತ್ತಾ ಹೋಗುತ್ತದೆ. ಇದು ಇನ್ನಷ್ಟು ಹೊಸದಾದ ಕೆಟ್ಟಪದಗಳನ್ನು ಕಲಿಯಲು ಪ್ರೇರಣೆ ನೀಡುತ್ತದೆ. ಮಕ್ಕಳಿಗೆ ಆಟ-ಪಾಠದ ಜೊತೆಗೆ ತಾಳ್ಮೆ ಕೂಡ ಅತ್ಯಗತ್ಯ

What You Shouldn't Discuss With Kids

ಈತನಿಂದ ಕಲಿತ ಕೆಟ್ಟ ಪದಗಳನ್ನು ಇತರ ಮಕ್ಕಳೂ ಕಲಿತುಕೊಳ್ಳುತ್ತಾ ಹೋಗುತ್ತಾರೆ. ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲಾ ಕೆಡಿಸುತ್ತಾ ಹೋಗುತ್ತದೆ. ಆದ್ದರಿಂದ ಬೈಗುಳದ ಸಹಿತ ಮಕ್ಕಳ ಎದುರಿಗೆ ಪ್ರಸ್ತಾಪಿಸಲೇಬಾರದ ಹಲವು ಸಂಗತಿಗಳಿವೆ. ಕೆಲವು ಸನ್ನಿವೇಶ ಮತ್ತು ಮಾಹಿತಿಗಳು ಮಕ್ಕಳ ಎಳೆಯ ಮಸಸ್ಸಿಗೆ ಬಹಳಷ್ಟು ಘಾಸಿ ಮಾಡುತ್ತವೆ. ಇದು ಅವರ ಯೋಚನಾಲಹರಿಯನ್ನೇ ಬದಲಿಸಿ ಮುಂದೆ ಆತನ ವ್ಯಕ್ತಿತ್ವವನ್ನೇ ಬದಲಿಸಬಹುದು.

ತನ್ನ ತಾಯಿಗೆ ಜ್ಯೂಗಳು ಕೊಟ್ಟ ಕಾಟವನ್ನು ಬಹಳವಾಗಿ ಹಚ್ಚಿಕೊಂಡ ಹಿಟ್ಲರ್ ದೊಡ್ಡವನಾದ ಮೇಲೆ ಏನಾದ ಎಂದು ನಿಮಗೆ ಗೊತ್ತೇ ಇದೆ. ಉದಾಹರಣೆಗೆ ಮಗುವಿಗೆ ತುಂಬಾ ಇಷ್ಟವಾದ ಸಾಕುಪ್ರಾಣಿ ತೀರಿಕೊಂಡರೆ ಅದನ್ನು ಹೇಗೆ ತಿಳಿಸುವುದು? ಅದರಲ್ಲೂ ಆತನ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಾದರೆ? ಈಗ ಹಿರಿಯರು ಕೊಂಚ ತಾಳ್ಮೆ ವಹಿಸಿ ಸರಿಯಾದ ಸಂದರ್ಭ ನೋಡಿ ಸೂಕ್ಷ್ಮವಾಗಿ ತಿಳಿಸುವುದು ಜಾಣತನದ ಕ್ರಮವಾಗಿದೆ.

ಪರೀಕ್ಷೆ ಮುಗಿದ ಬಳಿಕ ನಿಧಾನವಾಗಿ ಎಲ್ಲಾ ಜೀವಿಗಳು ದೇವರ ಸೃಷ್ಟಿಯಾಗಿದ್ದು ಆಯಸ್ಸು ತೀರಿದ ಬಳಿಕ ದೇವರು ಸಾವಿನ ಮೂಲಕ ಅವರನ್ನೆಲ್ಲಾ ತನ್ನ ಬಳಿ ಕರೆಸಿಕೊಳ್ಳುತ್ತಾನೆ, ಇದರ ಬದಲಿಗೆ ನಿನಗೆ ಹೊಸ ಸ್ನೇಹಿತರು ಸಿಗುತ್ತಾರೆ ಎಂದು ಸಾವಧಾನದಿಂದ ಹೇಳಬೇಕು. ಹಿರಿಯರಿಗೆ ಅನುಕೂಲವಾಗಬಲ್ಲ ಇಂತಹ ಕೆಲವು ಸಂದರ್ಭಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ ಮುಂದೆ ಓದಿ... ಪ್ರೀತಿ ಮಾತಿನಿಂದ ಮಗುವಿನ ಮನಸ್ಸು ಗೆಲ್ಲಲು ಪ್ರಯತ್ನಿಸಿ

ಕೆಟ್ಟ ಸುದ್ದಿಯನ್ನು ತಿಳಿಸಬೇಕಾದ ಸಂದರ್ಭ ಬಂದರೆ
ಕೆಲವೊಂದು ಸಂದರ್ಭದಲ್ಲಿ ಮಕ್ಕಳು ಪರೀಕ್ಷೆಗೆ ತಯಾರಾಗುತ್ತಿರುವಾಗ ಕುಟುಂಬದಲ್ಲಿ ಅಥವಾ ಆಪ್ತರ ಪೈಕಿ ಯಾರಾದರೂ ದೈವಾಧೀನರಾದ ಸುದ್ದಿ ಬಂದರೆ ಆ ಸಂದರ್ಭದಲ್ಲಿ ಧೃತಿಗೆಡದೇ ಸಾವಧಾನ ವಹಿಸಿ. ಮಕ್ಕಳಿಗೆ ಈ ವಿಷಯ ಹೇಳದಿರುವುದೇ ಉತ್ತಮ. ಅಂತಿಮ ಸಂಸ್ಕಾರದಲ್ಲಿ ಮಕ್ಕಳನ್ನು ಕೊಂಡೊಯ್ಯದಿರುವುದೂ ಉತ್ತಮ ಕ್ರಮ. ಪರೀಕ್ಷೆ ಮುಗಿದ ಬಳಿಕ ನಿಧಾನವಾಗಿ ಹೀಗಾಯಿತು ಎಂದು ವಿಷಯವನ್ನು ಬಿಡಿಸಿ ಹೇಳಿದರೆ ಸರಿ. ಆದರೆ ಇಂದು ಮಕ್ಕಳ ಕೈಯಲ್ಲಿರುವ ಮೊಬೈಲ್ ಮೊದಲಾದ ಸಾರ್ವಜನಿಕ ಸಂಪರ್ಕ ವಿಧಾನಗಳಿಂದ ನಿಮಗಿಂತಲೂ ಮುನ್ನವೇ ನಿಮ್ಮ ಮಕ್ಕಳಿಗೆ ಈ ವಿಷಯ ತಿಳಿದಿರಲೂ ಸಾಕು. ಆದ್ದರಿಂದ ಹದಿಹರೆಯಕ್ಕೂ ಮೊದಲು ಈ ಸಾಧನಗಳು ನಿಮ್ಮ ಮಕ್ಕಳ ಕೈಗೆ ಬರದಂತೆ ಎಚ್ಚರವಹಿಸಿ. ಹದಿಹರೆಯ ದಾಟಿದ ಮಕ್ಕಳು ಈ ಸಂದರ್ಭವನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವುದರಿಂದ ಅವರಿಗೆ ವಿಷಯ ಕ್ಲುಪ್ತವಾಗಿ ತಿಳಿಸುವುದು ಉತ್ತಮ.

ಮನೆಯ ಹತ್ತಿರದಲ್ಲಿ ಯಾವುದಾದರೂ ಅಪರಾಧವಾದುದು ಕಂಡುಬಂದರೆ
ನಮ್ಮ ಜನರಲ್ಲೊಂದು ಅತಿ ಕೆಟ್ಟ ಅಭ್ಯಾಸವಿದೆ. ಏನೆಂದರೆ ಏನಾದರೂ ಸಂಭವಿಸಿದರೆ ಉಸಿರು ತೆಗೆದುಕೊಳ್ಳಲೂ ಜಾಗಕೊಡದೇ ಗುಂಪುಗೂಡುವುದು. ಇದು ಇತರರಿಗೂ ಗುಂಪುಗೂಡುವುದು. ಇತರರಂತೆ ಮಕ್ಕಳಿಗೂ ಈ ಬಗ್ಗೆ ಕುತೂಹಲ ಮೂಡುತ್ತದೆ. ಏನು ಎತ್ತ ಎಂದೆಲ್ಲಾ ಕೇಳಿದರೆ ಈ ವಿಷಯವನ್ನು ಮಕ್ಕಳಿಗೆ ಹೆಚ್ಚಾಗಿ ತಿಳಿಸದೇ ಏನೋ ತೊಂದರೆಯಾಗಿದೆ, ನೀವು ಮನೆಗೆ ಹೋಗಿ ಎಂದು ಅವರನ್ನು ಅಲ್ಲಿಂದ ದೂರ ಕಳಿಸಿದಷ್ಟೂ ಉತ್ತಮ. ಅದರಲ್ಲೂ ನಿಮ್ಮ ಮನೆಯ ಅಕ್ಕಪಕ್ಕದಲ್ಲಿಯೇ ಏನಾದರೂ ಸಂಭವಿಸಿದರೆ ಈ ಬಗ್ಗೆ ಮಕ್ಕಳಲ್ಲಿ ಯಾವುದೇ ಚರ್ಚೆ ನಡೆಸದಿರುವುದು ಅಗತ್ಯ. ಏಕೆಂದರೆ ಇದರಿಂದ ಅವರು ಹೆದರಿಕೊಳ್ಳಬಹುದು ಅಥವಾ ಮಾನಸಿಕವಾಗಿ ಗೊಂದಲಕ್ಕೊಳಗಾಗಬಹುದು.

ಸಾಲದ ವಿಷಯ ಬಂದರೆ
ಎಂದಿಗೂ ಮಕ್ಕಳ ಎದುರು ಸಾಲದ ವಿಷಯ ಕೆದಕಬಾರದು. ಮಕ್ಕಳು ನೋಡಿದ್ದನ್ನೆಲ್ಲಾ ತಮಗೆ ಬೇಕೆಂದು ಪಾಲಕರ ಬಳಿ ಹಠ ಹಿಡಿಯುತ್ತಾರೆ. ಆದರೆ ಇದನ್ನು ಕೊಡಿಸದೇ ಇರಲು ನಿಮಗೆ ಸಾಲವಿದೆ ಎಂದು ಎಂದಿಗೂ, ಅಪ್ಪಿ ತಪ್ಪಿಯೂ ಹೇಳಬಾರದು. ಒಂದು ವೇಳೆ ಹೇಳಿದರೆ ಇದು ಮಗುವಿನ ಸೂಕ್ಷ್ಮ ಮನಸ್ಸಿನ ಮೇಲೆ ಬಲವಾದ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ಮಕ್ಕಳು ದೊಡ್ಡವರಾದ ಬಳಿಕವೂ ಜೀವನದ ಯಾವುದೇ ಸವಾಲನ್ನು ಎದುರಿಸಲು ಹಿಂದೇಟು ಹಾಕುತ್ತಾರೆ. ಕಾಲ ಬದಲಾಗಿದೆ ನೋಡಿ, ಮಕ್ಕಳಿಗೂ ಚಿಂತೆ ತಪ್ಪಿದ್ದಲ್ಲ!

ಇದಕ್ಕೆ ಪ್ರಮುಖವಾಗಿ 'ಹಣವಿಲ್ಲ' ಎಂಬ ಕಾರಣವನ್ನೇ ಅವರು ನೀಡುತ್ತಾರೆ. ಜೀವನದಲ್ಲಿ ಸೋಲುಂಡವರ ಬಾಲ್ಯದ ದಿನಗಳನ್ನು ಕೊಂಚ ಕೆದಕಿದರೆ ಈ ಮಾತು ವೇದ್ಯವಾಗುತ್ತದೆ. ಇದರ ಬದಲಿಗೆ ನಿಮ್ಮ ಆರ್ಥಿಕ ಸಾಮರ್ಥ್ಯವೆಷ್ಟು, ನಿಮ್ಮ ಮಕ್ಕಳಿಗೆ ಯಾವ ರೀತಿಯ ಖರ್ಚುಗಳು ಬರುತ್ತಿವೆ, ಇದನ್ನು ಸರಿದೂಗಿಸಲು ನೀವು ಯಾವ ಯಾವ ಆಸೆಗಳನ್ನು ತ್ಯಾಗ ಮಾಡಿದ್ದೀರಿ, ಮುಂದಿನ ದಿನಗಳಲ್ಲಿ ನಮಗೆ ಒಟ್ಟ ಲಭ್ಯವಿರುವ ಖರ್ಚನ್ನು ಹೇಗೆ ಸರಿದೂಗಿಸಿಕೊಳ್ಳಬಹುದು ಎಂಬ ಒಂದು ಸ್ಥೂಲ ಲೆಕ್ಕಾಚಾರದಲ್ಲಿ ಮಕ್ಕಳು ಕೊಂಚ ದೊಡ್ಡವರಾಗುತ್ತಿದ್ದಂತೆಯೇ (ಸುಮಾರು ಹತ್ತು ವರ್ಷಗಳಾದ ಬಳಿಕ) ಅವರನ್ನೂ ಸೇರಿಸಿಕೊಳ್ಳುವುದು ಉತ್ತಮ. ಇದರಿಂದ ಮಕ್ಕಳಿಗೂ ಹಣದ ಬಗ್ಗೆ ಜಾಗೃತಿ ಮತ್ತು ತಮ್ಮ ವಸ್ತುಗಳ ಬಗ್ಗೆ ಕಾಳಜಿ ಮೂಡುತ್ತದೆ.

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುವ ಪ್ರವೃತ್ತಿ ಇರುವ ಮಕ್ಕಳು ತಮ್ಮ ವಸ್ತುಗಳ ಜೊತೆ ಆಟವಾಡುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಹಾಳು ಮಾಡುವತ್ತ ಹೆಚ್ಚು ಗಮನ ನೀಡುತ್ತಾರೆ. (ಬೇಗ ಹಾಳಾದರೆ ಬೇಗನೇ ಇನ್ನೊಂದು ಹೊಸತು ಸಿಗುತ್ತದೆ ಎಂಬುದು ಅವರ ಲೆಕ್ಕಾಚಾರ). ಆದ್ದರಿಂದ ಯಾವುದೇ ವಸ್ತು ಮಕ್ಕಳಿಗೆ ಕೊಡಿಸಿದರೂ ಅದು ಹಾಳಾದರೆ ಬೇರೆ ಸಿಗದು, ಆದ್ದರಿಂದ ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿ. ಜೀವನದಲ್ಲಿ ಯಶಸ್ವಿಯಾದ ವ್ಯಕ್ತಿಗಳು ತಮ್ಮ ಚಿಕ್ಕಂದಿನ ಆಟಿಕೆಗಳನ್ನು ಹಿರಿಯರಾದ ಬಳಿಕವೂ ಜೋಪಾನವಾಗಿಟ್ಟುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

English summary

What You Shouldn't Discuss With Kids

It isn't a wise idea to tell your kids everything for some obvious reasons. Are you wondering why? Well, it isn't a healthy thing to do as there could be certain consequences later on. Also, at a tender age, certain things may show negative impact on the minds of kids. This is why parents should be more mindful when they share certain things with children. Coping with the loss of a pet can be traumatic even to adults. What about kids? 
Story first published: Monday, October 19, 2015, 12:39 [IST]
X
Desktop Bottom Promotion