For Quick Alerts
ALLOW NOTIFICATIONS  
For Daily Alerts

ನಾಲ್ಕೇ ದಿನದಲ್ಲಿ ಕೊಬ್ಬು ಕರಗಿಸುವ ಪವರ್ ಈ ಜ್ಯೂಸ್‌ನಲ್ಲಿದೆ!

By manu
|

ಸ್ಥೂಲಕಾಯ ಆವರಿಸಿದ ಹೆಚ್ಚಿನವರ ಚಿಂತೆಯ ವಿಷಯವೆಂದರೆ ಅವರ ಉಡುಪುಗಳು ಬಿಗಿಯಾಗುತ್ತಾ ಹೋಗುವುದು. ಅದರಲ್ಲೂ ವಿಶೇಷವಾಗಿ ಸೊಂಟದ ಸುತ್ತಳತೆ ವಿಸ್ತಾರವಾಗುತ್ತಾ ಹೋಗುವ ಮೂಲಕ ಕೆಲವರಿಗೆ ತಮ್ಮ ನೆಚ್ಚಿನ ಮಧ್ಯಪಾನಗಳಿಗೆ ವಿದಾಯ ಹೇಳಬೇಕಾದ ಬೇಸರ...! ಸಾಮಾನ್ಯವಾಗಿ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳುವುದು ಎಲ್ಲರ ಕನಸು, ಆದರೆ ಇದು ಸುಲಭದ ಕೆಲಸವಲ್ಲ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಆರೋಗ್ಯಕ್ಕೆ ಮಾರಕವಾದ ಸೊಂಟದ ಕೊಬ್ಬನ್ನು ಕರಗಿಸಿ ಎಂದು ವೈದ್ಯರ ಸಹಿತ ಎಲ್ಲರೂ ಸಲಹೆ ನೀಡುವವರೇ. ಆದರೆ ಇದಕ್ಕೆ ಅನುಸರಿಸುವ ಮಾರ್ಗ ಯಾವುದು? ಬಹುತೇಕ ಸೋಮಾರಿಗಳಾಗಿರುವ ನಮಗೆ ವೈದ್ಯರು ತಿಳಿಸುವ ವ್ಯಾಯಮ, ಸರಿಯಾದ ನಿದ್ದೆ, ಆಹಾರ ಮೊದಲಾದವುಗಳು ಸಾಧಿಸಲು ಸಾಧ್ಯವೆಂದು ಅನ್ನಿಸುವುದೇ ಇಲ್ಲ. ಸಂಶಯವೇ ಬೇಡ, ಕೊಬ್ಬು ಕರಗಿಸುವಲ್ಲಿ ಇವು ಎತ್ತಿದ ಕೈ!

ಇದೇ ಚಿಂತೆಯಲ್ಲಿ ದಿನ ಮುಂದೂಡುವ ನಮಗೆ ಹೊಟ್ಟೆ ಎಷ್ಟೋ ಮುಂದೆ ಬಂದಿರುವುದು ಗೊತ್ತೇ ಆಗಿರುವುದಿಲ್ಲ. ಆದರೆ ಇದಕ್ಕೊಂದು ಪರ್ಯಾಯ ವಿಧಾನವಿದೆ, ಅದೇ ನೈಸರ್ಗಿಕವಾದ ಜ್ಯೂಸ್. ಇಂತಹ ವಿಶೇಷವಾದ ಪೇಯವನ್ನು ಸತತವಾಗಿ ನಾಲ್ಕು ದಿನಗಳ ಕಾಲ ಕುಡಿಯುವ ಮೂಲಕ ಸೊಂಟದ ಸುತ್ತಳತೆಯಲ್ಲಿ ಕೊಂಚ ಕಡಿಮೆಯಾಗುವುದನ್ನು ಗಮನಿಸಬಹುದು.

ಹೊಟ್ಟೆಯ ಕೊಬ್ಬು ಕರಗಿಸುವ ಜ್ಯೂಸ್

ಹೊಟ್ಟೆಯ ಕೊಬ್ಬು ಕರಗಿಸುವ ಜ್ಯೂಸ್

*ಅಗತ್ಯವಿರುವ ಸಾಮಾಗ್ರಿಗಳು:

*ಫಿಲ್ಟರ್ ಮೂಲಕ ಸ್ವಚ್ಛಗೊಳಿಸಿದ ಕುಡಿಯುವ ನೀರು -8 ½ ಕಪ್

*ಚಿಕ್ಕದಾಗಿ ಹೆಚ್ಚಿದ ಹಸಿಶುಂಠಿ - ಒಂದು ಚಿಕ್ಕ ಚಮಚ (ಅಥವಾ ಒಂದು ದೊಡ್ಡ ಚಮಚ ಸಾವಯವ ವಿಧಾನದಲ್ಲಿ ಬೆಳೆಸಿದ ಶುಂಠಿಯ ಪುಡಿ)

*ಮಧ್ಯಮ ಗಾತ್ರದ ಸೌತೆಕಾಯಿ - ಒಂದು - ತೆಳುವಾದ ಬಿಲ್ಲೆಗಳಂತೆ ಅಡ್ಡಲಾಗಿ ಕತ್ತರಿಸಿದ್ದು

*ಮಧ್ಯಮ ಗಾತ್ರದ ಲಿಂಬೆ - ಒಂದು (ಚಿಕ್ಕದಾಗಿ ಹೋಳು ಮಾಡಿದ್ದು)

*ಪುದಿನಾ ಎಲೆಗಳು - ಹನ್ನೆರಡು (ಅಂಗೈಯಲ್ಲಿ ಹಿಚುಕಿದ್ದು)

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ದೊಡ್ಡ ಜಗ್ ಅಥವ ಪಾತ್ರೆಯಲ್ಲಿ ಮೇಲಿನ ಎಲ್ಲಾ ಪರಿಕರಗಳನ್ನು ಸೇರಿಸಿ ಚಮಚದಿಂದ ಕಲಕಿ ಇಡಿಯ ರಾತ್ರಿ ಮುಚ್ಚಿಡಿ. ಮರುದಿನ ಬೆಳಿಗೆ ಲಿಂಬೆಯ ಹೋಳುಗಳು, ಶುಂಠಿ ಮತ್ತು ಪುದಿನಾ ಎಲೆಗಳನ್ನು ನಿವಾರಿಸಿ ಉಳಿದ ಎಲ್ಲಾ ದ್ರವವನ್ನು ಒಂದು ಲೋಟದಲ್ಲಿ ಸುರುವಿಕೊಂಡು ಬೆಳಗಿನ ಪ್ರಥಮ ಪೇಯವಾಗಿ ಕುಡಿಯಿರಿ. ಸೌತೆತುಂಡುಗಳನ್ನು ಸಹಾ ಸೇವಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಈ ಇಡಿಯ ಜಗ್ ನೀರನ್ನು ಬೆಳಗ್ಗಿನಿಂದ ಸಂಜೆಯವರೆಗೆ ಕೊಂಚ ಕೊಂಚವಾಗಿ ಕುಡಿದು ಖಾಲಿ ಮಾಡಬೇಕು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ವೇಳೆ ಪೂರ್ತಿಯಾಗಿ ಖಾಲಿ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಫ್ರಿಜ್ ನಲ್ಲಿಟ್ಟು ಎರಡು ದಿನಗಳವರೆಗೆ ಕುಡಿಯಬಹುದು. ಈ ಅವಧಿಯಲ್ಲಿ ಬೇರೆ ಪೇಯಗಳನ್ನು ಅನಿವಾರ್ಯವಲ್ಲದೇ ಕುಡಿಯಲು ಹೋಗಬೇಡಿ. ನಿತ್ಯದ ಆಹಾರವನ್ನೂ ಸಾಮಾನ್ಯ ಪ್ರಮಾಣಕ್ಕೆ ಮತ್ತು ನಿಗದಿತ ಸಮಯಕ್ಕೆ ಮಾತ್ರ ಸೇವಿಸಿ. ನಡುವೆ ಬೇರೆ ಯಾವುದೇ ಆಹಾರವನ್ನು ಸೇವಿಸದಿರಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಇದರ ಪರಿಣಾಮ ನಾಲ್ಕೇ ದಿನದಲ್ಲಿ ಕಂಡುಬರುತ್ತದೆ. ಆದರೆ ಪೂರ್ಣ ಪರಿಣಾಮ ಪಡೆಯಲು ಸತತವಾಗಿ ನಾಲ್ಕು ವಾರಗಳ ಕಾಲ ಈ ಪಥ್ಯವನ್ನು ಅನುಸರಿಸಬೇಕು. ಇದು ಸುರಕ್ಷಿತವೂ, ದೇಹಕ್ಕೆ ಹೆಚ್ಚಿನ ಪ್ರಮಾಣದ ದ್ರವವನ್ನು ನೀಡುವ ಉತ್ತಮ ಪೇಯವೂ ಹೌದು. ಇದರೊಂದಿಗೆ ಸಾಕಷ್ಟು ವ್ಯಾಯಾಮವನ್ನೂ ಮಾಡುವುದು ಅವಶ್ಯಕ.

ಕೊಬ್ಬು ಕರಗಿಸುವಲ್ಲಿ ಈ ಪೇಯದ ರಹಸ್ಯವೇನು?

ಕೊಬ್ಬು ಕರಗಿಸುವಲ್ಲಿ ಈ ಪೇಯದ ರಹಸ್ಯವೇನು?

ಈ ಪೇಯದಲ್ಲಿ ಬಳಸಲಾಗಿರುವ ಪ್ರತಿಯೊಂದೂ ಸಾಮಾಗ್ರಿಯಲ್ಲಿ ವಿಶಿಷ್ಟವಾದ ಗುಣಗಳಿವೆ. ಇವು ದೇಹಕ್ಕೆ ಪೋಷಕಾಂಶಗಳನ್ನು ನೀಡುವ ಜೊತೆಗೇ ಹೊಟ್ಟೆಯಿಂದ ಮಲಿನ ಪದಾರ್ಥಗಳನ್ನು ಹೊರಹಾಕಲೂ ನೆರವಾಗುತ್ತವೆ. ಈ ಎಲ್ಲಾ ಸಾಮಗ್ರಿಗಳು ಒಂದುಗೂಡಿದ ಬಳಿಕ ಉಂಟಾಗುವ ವಿಶಿಷ್ಟ ಸಂಯೋಜನೆ ಕೊಬ್ಬನ್ನು ಕರಗಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ.

ಕೊಬ್ಬು ಕರಗಿಸುವಲ್ಲಿ ಈ ಪೇಯದ ರಹಸ್ಯವೇನು?

ಕೊಬ್ಬು ಕರಗಿಸುವಲ್ಲಿ ಈ ಪೇಯದ ರಹಸ್ಯವೇನು?

ಅಂದರೆ ಈ ಸಂಯೋಜನೆಯನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಬೇಕಾಗುತ್ತದೆ. ಸತತವಾಗಿ ಈ ನೀರನ್ನು ಕುಡಿಯುತ್ತಲೇ ಇರುವ ಮೂಲಕ ಕರಗಿದ ಕೊಬ್ಬು ಮತ್ತೆ ಸಂಗ್ರಹಗೊಳ್ಳಲು ಅವಕಾಶ ನೀಡದೇ ಇರುವುದೇ ಇದರ ಗುಟ್ಟು.

ಕೊಬ್ಬು ಕರಗಿಸುವಲ್ಲಿ ಈ ಪೇಯದ ರಹಸ್ಯವೇನು?

ಕೊಬ್ಬು ಕರಗಿಸುವಲ್ಲಿ ಈ ಪೇಯದ ರಹಸ್ಯವೇನು?

ಒಂದು ವೇಳೆ ಮಧ್ಯೆ ಒಂದು ದಿನವೂ ತಪ್ಪಿಸಿದರೆ ಹಿಂದಿನ ದಿನಗಳಲ್ಲಿ ಮಾಡಿದ್ದ ಅಷ್ಟೂ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಮುಂದಿನ ದಿನದ ಪ್ರಯತ್ನ ಪುನಃ ಮೊದಲನೆಯ ದಿನದಂತೆ ಪ್ರಾರಂಭಿಸಬೇಕಾಗುತ್ತದೆ! ಇದರ ಪ್ರತಿ ಘಟಕದ ಪ್ರಯೋಜನಗಳನ್ನು ಈಗ ನೋಡೋಣ: ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೌತೆಕಾಯಿ

ಸೌತೆಕಾಯಿ

ಸೌತೆಯಲ್ಲಿ ನೀರು ಹೆಚ್ಚು ಇರುವುದರಿಂದ ದೇಹಕ್ಕೆ ಲಭಿಸುವ ಕ್ಯಾಲೋರಿಗಳೂ ಕಡಿಮೆಯಾಗಿವೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗುವ ನಾರು ಮತ್ತು ಮೂತ್ರವರ್ಧಕ ಪೋಷಕಾಂಶಗಳು ದೇಹದಿಂದ ವಿಷಕಾರಿ ಮತ್ತು ಲವಣ ವಸ್ತುಗಳನ್ನು ಮೂತ್ರರೂಪದಲ್ಲಿ ಹೊರಹಾಕಲು ನೆರವಾಗುತ್ತದೆ.

ಸೌತೆಕಾಯಿ

ಸೌತೆಕಾಯಿ

ಅಲ್ಲದೇ ಜೀರ್ಣಗೊಂಡ ಬಳಿಕ ಜಠರದಲ್ಲಿ ಕ್ಷಾರೀಯತೆಯನ್ನು ಹೆಚ್ಚಿಸುವುದರಿಂದ ಆಮ್ಲೀಯತೆಯ ಪ್ರಖರತೆ ಕಡಿಮೆಯಾಗುತ್ತದೆ. ತನ್ಮೂಲಕ ಹೆಚ್ಚಿನ ಕೊಬ್ಬು ಕರಗಲು ಸಾಧ್ಯವಾಗುತ್ತದೆ.

ಶುಂಠಿ

ಶುಂಠಿ

'Institute for Human Nutrition at Columbia University' ವಿಶ್ವವಿದ್ಯಾಲಯದಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಒಂದು ಗುಂಪಿನ ಜನರಿಗೆ ನಿಯಮಿತವಾಗಿ ಶುಂಠಿಯ ಪೇಯವನ್ನು ಕುಡಿಯಲು ನೀಡಿದ ಪರಿಣಾಮವಾಗಿ ಎಲ್ಲರಿಗೂ ಹೊಟ್ಟೆ ತುಂಬಿದ್ದ ಅನುಭವವಾಗಿ ನಡುವೆ ಬೇರೆಯ ಸಿದ್ಧ ಆಹಾರಗಳನ್ನು ತಿನ್ನುವ ಬಯಕೆ ಬಾರದೇ ಹೋಗಿರುವ ಕಾರಣ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಪ್ರಮೇಯವೇ ಬರಲಿಲ್ಲ. ಇದು ಪರೋಕ್ಷವಾಗಿ ತೂಕ ಇಳಿಸಲು ನೆರವಾಗುತ್ತದೆ.

ಪುದಿನಾ ಎಲೆಗಳು

ಪುದಿನಾ ಎಲೆಗಳು

ಪುದಿನಾ ಎಲೆಗಳು ಹಸಿವನ್ನು ಕಡಿಮೆ ಮಾಡುವುದಿಲ್ಲವಾದರೂ ಹಸಿವನ್ನು ನಿಯಂತ್ರಿಸಬಲ್ಲವು. ಇದು ನೀರಿಗೆ ನವಿರಾದ ಸುವಾಸನೆ ಮತ್ತು ರುಚಿಯನ್ನು ನೀಡುವ ಮೂಲಕ ಈ ಪೇಯವನ್ನು ಕುಡಿಯಲು ಪ್ರೇರೇಪಿಸುತ್ತದೆ ಹಾಗೂ ಹಸಿವಾಗದಂತೆ ನಿಯಂತ್ರಿಸುವ ಮೂಲಕ ಅನಗತ್ಯ ಆಹಾರ ಸೇವಿಸುವುದನ್ನೂ ತಪ್ಪಿಸುತ್ತದೆ.

ನೀರು

ನೀರು

ನಿತ್ಯ ನೀರು ಕುಡಿಯುವುದರ ಮಹತ್ವದ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಮ್ಮ ದೇಹಕ್ಕೆ ಕನಿಷ್ಟ ಎಂಟು ಲೋಟಗಳ ನೀರು ಅಗತ್ಯವಿದ್ದು ಈ ಪೇಯದಲ್ಲಿ ಎಂಟೂವರೆ ಲೋಟ ನೀರನ್ನು ಬಳಸಿರುವ ಕಾರಣ ಇಡಿಯ ದಿನದ ಅಗತ್ಯವನ್ನು ಬೇರೆ ಪೇಯಗಳನ್ನು ಕುಡಿಯುವ ಅಗತ್ಯವಿಲ್ಲದೇ ಪೂರೈಸಿದಂತಾಗುತ್ತದೆ.

ನೀರು

ನೀರು

ನೀರು ದೇಹದ ಎಲ್ಲಾ ಚಟುವಟಿಕೆಗಳಿಗೆ ಅಗತ್ಯವಾಗಿದೆ. ರಕ್ತ ಸಂಚಾರ, ಮೂಳೆಗಳ ಕೀಲುಗಳ ಚಲನೆಗೆ, ಸ್ನಾಯುಗಳ ಕಾರ್ಯವಿಧಾನ, ಹೀಗೆ ಪ್ರತಿಯೊಂದಕ್ಕೂ ನೀರಿನ ಅಗತ್ಯವಿದೆ. ನಿಯಮಿತವಾಗಿ ಈ ಅದ್ಭುತ ಪೇಯವನ್ನು ಕುಡಿಯುವ ಮೂಲಕ ಬೇರೆ ಪೇಯಗಳನ್ನು ಕುಡಿಯುವ ಅಗತ್ಯವೇ ಬೀಳದ ಕಾರಣ ಆ ಪೇಯಗಳ ಅಥವಾ ಆಹಾರಗಳ ಮೂಲಕ ದೇಹಕ್ಕೆ ಬರಬಹುದಾಗಿದ್ದ ಹೆಚ್ಚುವರಿ ಪೋಷಕಾಂಶ ಮತ್ತು ಕೊಬ್ಬು ಹೆಚ್ಚುವ ಸಾಧ್ಯತೆ ಕಡಿಮೆಯಾದಂತಾಗುತ್ತದೆ.

ಲಿಂಬೆ

ಲಿಂಬೆ

ಲಿಂಬೆಯ ರಸದಲ್ಲಿ ಸಿಟ್ರಿಕ್ ಆಮ್ಲದ ಜೊತೆಗೇ ಪೆಕ್ಟಿನ್ ಎಂಬ ನಾರು ಸಹಾ ಇದೆ. ಈ ನಾರು ಹಸಿವನ್ನು ನಿಯಂತ್ರಿಸುವಲ್ಲಿ ಅಧ್ಬುತ ಪಾತ್ರ ವಹಿಸುತ್ತದೆ. ಏಕೆಂದರೆ ಸುಲಭವಾಗಿ ಜೀರ್ಣವಾಗದ ಈ ನಾರನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳು ಶ್ರಮಿಸುವ ಭರದಲ್ಲಿ ಮೆದುಳಿಗೆ ಹೆಚ್ಚುವರಿ ಆಹಾರ ಬೇಕೆಂದು ನೀಡುವ ಸೂಚನೆಯನ್ನು ತಡವಾಗಿಸುತ್ತವೆ.

ಲಿಂಬೆ

ಲಿಂಬೆ

ಅಲ್ಲದೇ ಸಿಟ್ರಿಕ್ ಆಮ್ಲ ಜೀರ್ಣವ್ಯವಸ್ಥೆಯಲ್ಲಿ ಸಹಕರಿಸುವ ಜೊತೆಗೇ ಮಲಿನ ಪದಾರ್ಥಗಳನ್ನು ದೇಹದಿಂದ ಹೊರಹಾಕಲೂ ನೆರವಾಗುತ್ತದೆ.

English summary

This Amazing Drink Melts Fat In Only 4 Days

For everyone who thought it would be impossible to replace loose dresses and shirts with a swimsuit, WE offer you a miraculous drink which takes only minutes to make. The magic about this drink is that it is exceptionally effective in melting excessive belly fat.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more