For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಮಹಾಮಾರಿ ಡೆಂಗ್ಯೂ ಜ್ವರ: ಇರಲಿ ಕಟ್ಟೆಚ್ಚರ!

By Arshad
|

ಕರ್ನಾಟಕದಲ್ಲಿಯೂ ವ್ಯಾಪಕವಾಗಿರುವ ಡೆಂಗ್ಯೂ ಜ್ವರ ಯಾರನ್ನೂ ಬಾಧಿಸಬಹುದಾದರೂ ಮಕ್ಕಳನ್ನು ಮತ್ತು ವೃದ್ಧರನ್ನು ಹೆಚ್ಚು ಹೈರಾಣಾಗಿಸುತ್ತದೆ. ಏಕೆಂದರೆ ಮಕ್ಕಳಲ್ಲಿ ಇನ್ನೂ ಪಕ್ವವಾಗಿರದ ರೋಗ ನಿರೋಧಕ ವ್ಯವಸ್ಥೆ ಮತ್ತು ಹಿರಿಯರಲ್ಲಿ ಕುಂಠಿತವಾಗಿರುವ ರೋಗ ನಿರೋಧಕ ಶಕ್ತಿ ಇದಕ್ಕೆ ಕಾರಣವಾಗಿದೆ.

ಇದಕ್ಕೂ ಮುಖ್ಯವಾಗಿ ರೋಗಕ್ಕೆ ನಾಲ್ಕು ಬಗೆಯ ವೈರಸ್ಸುಗಳು ನೇರವಾಗಿ ಕಾರಣವಾದರೂ ಇದನ್ನು ಹರಡಲು ಮಾತ್ರ ಪಟ್ಟೆಪಟ್ಟೆಯ ಈಡಿಸ್ ಈಜಿಪ್ತಿ (Aedes aegypti) ಎಂಬ ಹೆಸರಿನ ಭಯಾನಕ ಸೊಳ್ಳೆಯೇ ಕಾರಣ. ಯಾವಾಗ ಡೆಂಗ್ಯೂ ಜ್ವರ ಪ್ರಾಣಕ್ಕೆ ಅಪಾಯಕಾರಿ?

ಆದ್ದರಿಂದ ನಿಮ್ಮ ಸುತ್ತಮುತ್ತ ಎಲ್ಲಾದರೂ ಡೆಂಗ್ಯೂ ಜ್ವರದ ಸುದ್ದಿ ಸಿಕ್ಕ ಕೂಡಲೇ ಜನರು ಮಾಡಬೇಕಾದ ಒಂದು ಸಾಮೂಹಿಕ ಕಾರ್ಯವೆಂದರೆ ಸೊಳ್ಳೆಗಳಿಗೆ ಸೂಕ್ತವಾದ ತಾಣಗಳನ್ನು ನಾಶಪಡಿಸುವುದು. ಇದೇನೂ ದೊಡ್ಡ ಕೆಲಸವಲ್ಲ, ಮನೆಯ ಸುತ್ತಮುತ್ತ ಎಲ್ಲೆಲ್ಲಿ ನೀರು ನಿಂತಿದೆಯೋ, ನೀರು ನಿಲ್ಲುವ ಸ್ಥಳಗಳಿವೆಯೋ ಅದನ್ನೆಲ್ಲಾ ನೆಲಸಮ ಅಥವಾ ಉಲ್ಟಾ ಮಾಡುವುದು.

ಉದಾಹರಣೆಗೆ ಬೋಗುಣಿಯಂತೆ (ತಳ ಆಳವಿರುವ ಪಾತ್ರೆ) ನೆಲದಲ್ಲಿ ಬಿದ್ದಿರುವ ಗೆರಟೆಚಿಪ್ಪು, ಇದನ್ನು ಉಲ್ಟಾ ಮಾಡಿದರೆ ಅದರಲ್ಲಿ ನೀರು ನಿಲ್ಲುವ ಸಂಭವ ಕಡಿಮೆ. ಡೆಂಗ್ಯೂ ಜ್ವರವನ್ನು ಹತೋಟಿಯಲ್ಲಿಡುವ ಟಾಪ್ ಫುಡ್

ಅಂತೆಯೇ ಎಸೆದ ಟೈರುಗಳು, ಚಿಕ್ಕ ಚಿಕ್ಕ ಗುಂಡಿಗಳು ಮೊದಲಾದವು ಈ ತ್ಯಾಜ್ಯಗಳನ್ನೆಲ್ಲಾ ಒಟ್ಟುಗೂಡಿಸಿ ಊರಿನಿಂದ ಹೊರಹಾಕಿ, ಚಿಕ್ಕ ಚಿಕ್ಕ ಗುಂಡಿಗಳನ್ನು ಮುಚ್ಚಿ ನೀರು ನಿಂತಿರುವ ಕಡೆ ಸೂಕ್ತ ಕೀಟನಾಶಕ ಅಥವಾ ಹೊಗೆ ಸಿಂಪಡಿಸಿ ಸೊಳ್ಳೆಗಳ ಸಂತಾನವನ್ನೇ ನಿಗ್ರಹಿಸುವುದು ಉತ್ತಮ ವಿಧಾನವಾಗಿದೆ. ಬನ್ನಿ ಡೆಂಗ್ಯೂ ಜ್ವರದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪಡೆದು ನಿಮ್ಮ ಪರಿಸರದಲ್ಲಿಯೂ ಡೆಂಗ್ಯೂ ಜ್ವರ ಬರದಂತೆ ನೋಡಿಕೊಳ್ಳಿ...

ಡೆಂಗ್ಯೂ ಜ್ವರಕ್ಕೆ ಕಾರಣವಾದ ಕೀಟ ಯಾವುದು?

ಡೆಂಗ್ಯೂ ಜ್ವರಕ್ಕೆ ಕಾರಣವಾದ ಕೀಟ ಯಾವುದು?

ಈಡಿಸ್ ಈಜಿಪ್ತಿ (Aedes aegypti) ಎಂಬ ಹೆಸರಿನ ಈ ಸೊಳ್ಳೆ ಸರಿಸುಮಾರು ಯಾವುದೇ ಹವಾಗುಣದಲ್ಲಿ ಬದುಕಬಲ್ಲ ಕೀಟವಾಗಿದ್ದು ಪಟ್ಟೆಪಟ್ಟೆಯಿಂದ ಭಯಾನಕ ರೂಪ ಹೊಂದಿದೆ. ವಿಚಿತ್ರವೆಂದರೆ ಇವು ಜೀವಮಾನವಿಡೀ (ಕೇವಲ ಮೂರು ವಾರ) ಸಸ್ಯಗಳ ರಸ, ಪರಾಗ ಕುಡಿದು ಬದುಕಿದರೂ ಮೊಟ್ಟೆಯಿಡುವ ಸಮಯದಲ್ಲಿ ಹೆಣ್ಣು ಸೊಳ್ಳೆಗೆ ರಕ್ತ ಬೇಕಾದುದರಿಂದ ಮನುಷ್ಯರನ್ನು ಹುಡುಕಿಕೊಂಡು ಬರುತ್ತದೆ. ಆದ್ದರಿಂದ ಹೆಣ್ಣು ಸೊಳ್ಳೆ ಮಾತ್ರ ಕಡಿಯುತ್ತದೆ.

ಈ ಸೊಳ್ಳೆಗಳು ಹೆಚ್ಚಾಗಿ ಕಚ್ಚುವುದೆಲ್ಲಿ?

ಈ ಸೊಳ್ಳೆಗಳು ಹೆಚ್ಚಾಗಿ ಕಚ್ಚುವುದೆಲ್ಲಿ?

ಈ ಸೊಳ್ಳೆಗಳು ಹೆಚ್ಚಾಗಿ ಮೊಣಕೈ ಮತ್ತು ಮೊಣಕಾಲಿನ ಕೆಳಗಿನ ಭಾಗವನ್ನೇ ಹೆಚ್ಚಾಗಿ ಕಚ್ಚುತ್ತವೆ. ಏಕೆಂದರೆ ಈ ಸ್ಥಳಗಳಿಗೆ ಹೊಡೆಯುವ ಕೈ ಬರುವಷ್ಟರಲ್ಲಿ ಇದು ರಕ್ತ ಕುಡಿದು ಓಡಿಬಿಡಬಹುದು. ಬೇರೆಡೆ ಆದರೆ ಹಸ್ತ ಅಪ್ಪಳಿಸಿ ಅಪ್ಪಚ್ಚಿಯಾಗುವ ಸಂಭವವಿದೆ.

ಡೆಂಗ್ಯೂಜ್ವರದ ಲಕ್ಷಣಗಳೇನು?

ಡೆಂಗ್ಯೂಜ್ವರದ ಲಕ್ಷಣಗಳೇನು?

ಡೆಂಗ್ಯೂಜ್ವರದ ವೈರಸ್ಸುಗಳು ಧಾಳಿ ಮಾಡಿದ ಅನತಿಕಾಲದಲ್ಲಿಯೇ ತೀವ್ರವಾದ ಮೂಳೆಸಂದುಗಳಲ್ಲಿ ಮತ್ತು ಸ್ನಾಯುಗಳಲ್ಲಿ ನೋವು, ಊದಿಕೊಂಡಿರುವ ದುಗ್ಧರಸಗ್ರಂಥಿಗಳು, ಅತೀವ ತಲೆನೋವು, ಅತಿ ಬಿಸಿಯಾದ ಶರೀರ, ಸುಸ್ತು ಮತ್ತು ಚರ್ಮದಲ್ಲಿ ಕೆಂಪಗಾಗಿ ಉರಿಯಾಗುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ.

ಈ ಜ್ವರ ಎಷ್ಟು ಹೊತ್ತಿನವರೆಗೆ ಬಾಧಿಸುತ್ತದೆ?

ಈ ಜ್ವರ ಎಷ್ಟು ಹೊತ್ತಿನವರೆಗೆ ಬಾಧಿಸುತ್ತದೆ?

ಸೊಳ್ಳೆ ಕಡಿದ ಬಳಿಕ ಚಿಕ್ಕದಾಗಿ ಜ್ವರ ಕಾಣಿಸಿಕೊಂಡಂದಿನಿಂದ ಸುಮಾರು ಹತ್ತರಿಂದ ಹದಿನಾಲ್ಕು ದಿನ ತೀವ್ರ ಜ್ವರ ಬಾಧಿಸಬಹುದು. ಆ ಬಳಿಕ ಸುಮಾರು ಒಂದು ವಾರದ ಕಾಲ ಡೆಂಗಿಯ ಇತರ ಲಕ್ಷಣಗಳು ಮುಂದುವರೆಯಬಹುದು.

ಡೆಂಗ್ಯೂ ಜ್ವರ ಯಾರಿಗೆ ಬರಬಹುದು?

ಡೆಂಗ್ಯೂ ಜ್ವರ ಯಾರಿಗೆ ಬರಬಹುದು?

ಮಕ್ಕಳಿಂದ ಹಿರಿಯರವರೆಗೆ ಯಾರಿಗೂ ಈ ಜ್ವರ ಬರಬಹುದು. ಆದರೆ ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಬೇಗನೇ ತೀವ್ರಸ್ವರೂಪ ಪಡೆದುಕೊಳ್ಳುತ್ತದೆ. ಇದನ್ನು ತಡೆಯಲು ನಿಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ಸೂಕ್ತ ಕ್ರಮವಾಗಿದೆ.

ಜ್ವರವಿದ್ದಾಗ ಯಾವ ಭಾಗ ಅತಿಹೆಚ್ಚಾಗಿ ಬಾಧೆಗೊಳಗಾಗುತ್ತದೆ?

ಜ್ವರವಿದ್ದಾಗ ಯಾವ ಭಾಗ ಅತಿಹೆಚ್ಚಾಗಿ ಬಾಧೆಗೊಳಗಾಗುತ್ತದೆ?

ಸಾಮಾನ್ಯವಾಗಿ ಇಡಿಯ ಶರೀರವೇ ಬಿಸಿಯಾಗಿದ್ದರೂ ನಮ್ಮ ಮೆದುಳಿನ ನರವ್ಯವಸ್ಥೆ ಹೆಚ್ಚು ಬಾಧೆಗೊಳಗಾಗುತ್ತದೆ. ಮೆದುಳಿನ encephalitis ಎಂಬ ಭಾಗ ಹೆಚ್ಚು ಪ್ರಭಾವಕ್ಕೊಳಗಾಗಿ ಇದು ನಿಯಂತ್ರಿಸುವ ನರವ್ಯವಸ್ಥೆಯಿಂದ ಶರೀರದ ಎಲ್ಲಾ ಕ್ರಿಯೆಗಳು ಏರುಪೇರಾಗಿ ನಿತ್ಯದ ಚಟುವಟಿಕೆಗಳಲ್ಲಿ ಬಾಧೆಯುಂಟಾಗಬಹುದು. ಆದ್ದರಿಂದ ಜ್ವರ ಬಂದ ಬಳಿಕ ಸಂಪೂರ್ಣವಾದ ವಿಶ್ರಾಂತಿಯ ಅಗತ್ಯವಿದೆ.

ಜ್ವರಪೀಡಿತರಿಗೆ ವೈದ್ಯರು ಯಾವ ಸಲಹೆ ನೀಡುತ್ತಾರೆ?

ಜ್ವರಪೀಡಿತರಿಗೆ ವೈದ್ಯರು ಯಾವ ಸಲಹೆ ನೀಡುತ್ತಾರೆ?

ಡೆಂಗ್ಯೂಜ್ವರಕ್ಕೆ ಇದುವರೆಗೆ ಯಾವುದೇ ಸಿದ್ದೌಷಧವಿಲ್ಲ. ದೇಹದ ರೋಗ ನಿರೋಧಕ ಶಕ್ತಿಯೇ ಈ ವೈರಸ್ಸುಗಳನ್ನು ಹೊಡೆದೋಡಿಸಲು ಸಕ್ಷಮವಾಗುವವರೆಗೆ ಕಾಯುವ ಹೊರತು ಬೇರೆ ಮಾರ್ಗವಿಲ್ಲ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಔಷಧಿಗಳನ್ನೂ ದಿನವಿಡೀ ಸಾಕಷ್ಟು ವಿಶ್ರಾಂತಿ, ಮತ್ತು ಸಾಕಷ್ಟು ನೀರು ಮತ್ತು ದ್ರವಾಹಾರಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ಜ್ವರ ಬಂದ ಬಳಿಕ ಅಧಿಕ ಕಾಲದವರೆಗೆ ಕಾಡುವ ಪರಿಣಾಮ ಯಾವುದು?

ಜ್ವರ ಬಂದ ಬಳಿಕ ಅಧಿಕ ಕಾಲದವರೆಗೆ ಕಾಡುವ ಪರಿಣಾಮ ಯಾವುದು?

ಜ್ವರ ಬಿಟ್ಟ ಬಳಿಕವೂ ಸ್ನಾಯುಗಳಲ್ಲಿ ನೋವು, ಮೂಳೆಸಂಧುಗಳಲ್ಲಿ ನೋವು, ಸುಸ್ತು ಕೆಲಕಾಲದವರೆಗೆ ಮುಂದುವರೆಯುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿಯೂ ಕ್ಷೀಣವಾಗಿರುವುದರಿಂದ ಬೇರೆ ತೊಂದರೆಗಳಿಗೂ ಸುಲಭವಾಗಿ ತುತ್ತಾಗಬಹುದು.

ಡೆಂಗ್ಯೂ ಜ್ವರ ಸಾಂಕ್ರಾಮಿಕವೇ?

ಡೆಂಗ್ಯೂ ಜ್ವರ ಸಾಂಕ್ರಾಮಿಕವೇ?

ಇಲ್ಲ, ಜ್ವರ ಪೀಡಿತರಿಂದ ಇನ್ನೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಜ್ವರಪೀಡಿತರನ್ನು ಕಚ್ಚಿದ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗ ಮಾತ್ರ ಹರಡಲು ಸಾಧ್ಯ.

ಜ್ವರವಿದ್ದಾಗ ಯಾವ ಆಹಾರಗಳನ್ನು ತ್ಯಜಿಸುವುದು ಅಗತ್ಯ?

ಜ್ವರವಿದ್ದಾಗ ಯಾವ ಆಹಾರಗಳನ್ನು ತ್ಯಜಿಸುವುದು ಅಗತ್ಯ?

ಜ್ವರವಿದ್ದಾಗ ಸಿದ್ಧ ಆಹಾರಗಳು, ಕರಿದ ತಿಂಡಿಗಳು, ಹುರಿದ ಆಹಾರಗಳು, ರಸ್ತೆಬದಿಯ ಯಾವುದೇ ಆಹಾರಗಳು ಅಷ್ಟೇ ಏಕೆ ಹೋಟೆಲಿನ ಆಹಾರವನ್ನೂ ಸೇವಿಸುವುದು ಹಿತವಲ್ಲ.

ಹಾಗಾದರೆ ಯಾವ ಆಹಾರಗಳನ್ನು ಸೇವಿಸಬೇಕು?

ಹಾಗಾದರೆ ಯಾವ ಆಹಾರಗಳನ್ನು ಸೇವಿಸಬೇಕು?

ಈ ಜ್ವರಕ್ಕೆ ಅಕ್ಕಿಯ ಗಂಜಿ ಉತ್ತಮ ಆಹಾರವಾಗಿದೆ. ಇನ್ನುಳಿದಂತೆ ಕಿತ್ತಳೆ, ಮೂಸಂಬಿ, ಪಪ್ಪಾಯಿ ಹಣ್ಣು, ವಿವಿಧ ಗಿಡಮೂಲಿಕೆಗಳನ್ನು ಹಾಕಿ ಕುದಿಸಿದ ಟೀ, ವಿವಿಧ ಹಣ್ಣುಗಳ ರಸ ಮತ್ತು ಪ್ರೋಟೀನ್ ಹೆಚ್ಚಿರುವ ಆಹಾರಗಳು ಉತ್ತಮವಾಗಿವೆ. ಮೊಳಕೆ ಬರಿಸಿದ ಹೆಸರು ಮೊದಲಾದ ಕಾಳುಗಳು ಮತ್ತು ಅವುಗಳ ಖಾದ್ಯಗಳು ಸಹಾ ಉತ್ತಮ ಆಹಾರವಾಗಿವೆ.

ಡೆಂಗ್ಯೂ ಜ್ವರವಿದ್ದಾಗ ಯಾವ ಔಷಧಿಗಳನ್ನು ಸೇವಿಸಬಾರದು?

ಡೆಂಗ್ಯೂ ಜ್ವರವಿದ್ದಾಗ ಯಾವ ಔಷಧಿಗಳನ್ನು ಸೇವಿಸಬಾರದು?

ಜ್ವರವಿದ್ದಾಗ ಸಾಮಾನ್ಯವಾಗಿ ನೀಡಲಾಗುವ ನೋವುನಿವಾರಕಗಳಾದ ಆಸ್ಪಿರಿನ್, ಇಬುಪ್ರೋಫೆನ್ ಮೊದಲಾದವುಗಳನ್ನು ಸರ್ವಥಾ ಸೇವಿಸಕೂಡದು.

ಜ್ವರ ಇಳಿದ ಬಳಿಕ ಯಾವ ರೀತಿಯ ಕಾಳಜಿಯನ್ನು ತೆಗೆದುಕೊಳ್ಳಬೇಕು?

ಜ್ವರ ಇಳಿದ ಬಳಿಕ ಯಾವ ರೀತಿಯ ಕಾಳಜಿಯನ್ನು ತೆಗೆದುಕೊಳ್ಳಬೇಕು?

ಜ್ವರ ಇಳಿದ ಬಳಿಕ ದೇಹ ಬಹಳಷ್ಟು ತ್ರಾಣವನ್ನು ಕಳೆದುಕೊಂಡಿರುವುದರಿಂದ ನಿಯಮಿತವಾದ ವ್ಯಾಯಾಮ, ಯೋಗಾಭ್ಯಾಸ ಮತ್ತು ಉತ್ತಮ ಆಹಾರವನ್ನು ಸೇವಿಸಬೇಕು. ಪೋಟೀನ್, ವಿಟಮಿನ್ ಗಳು ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಮುಖ್ಯವಾಗಿ ಮಾನಸಿಕ ಸ್ಥೈರ್ಯವನ್ನು ಎಂದಿಗೂ ಕಳೆದುಕೊಳ್ಳಬಾರದು, ಸದಾ ಧನಾತ್ಮಕ ಚಿಂತನೆಗಳಲ್ಲಿ ಮುಳುಗಬೇಕು.

ಡೆಂಗ್ಯೂ ಜ್ವರದಿಂದ ಸಾವು ಸಂಭವಿಸಬಹುದೇ?

ಡೆಂಗ್ಯೂ ಜ್ವರದಿಂದ ಸಾವು ಸಂಭವಿಸಬಹುದೇ?

ಹೌದು, ಒಂದು ವೇಳೆ ಜ್ವರ ಬಂದ ಬಳಿಕ ಸೂಕ್ತ ಆರೈಕೆ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ, ಉತ್ತಮ ಆಹಾರ, ವಿಶ್ರಾಂತಿಗಳಿಲ್ಲದಿದ್ದರೆ ಜ್ವರ ವಿಷಮಗೊಂಡು ಸಾವಿಗೂ ಕಾರಣವಾಗಬಹುದು.

English summary

Things You Need To Know About Dengue

Dengue fever is raging in Karnataka and in most parts of India too. Dengue fever affects those who have low immunity especially the elderly and the young. To prevent dengue, you first need to look after your environment by making sure there is no breeding ground for mosquitoes. Here are a few more details you need to know about Dengue, take a look at how this little insect can effect you for life.
X
Desktop Bottom Promotion