For Quick Alerts
ALLOW NOTIFICATIONS  
For Daily Alerts

ಜೀವಹಿಂಡುವ ಉರಿಮೂತ್ರದ ಸಮಸ್ಯೆಗೆ ಅಂತ್ಯಹಾಡುವ ಮದ್ದುಗಳು

By manu
|

ಸಾಮಾನ್ಯವಾಗಿ ನಡುವಯಸ್ಸು ದಾಟುತ್ತಿದ್ದಂತೆ ಉರಿಮೂತ್ರದ ಸಮಸ್ಯೆ ಆವರಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ಮೂತ್ರನಾಳದಲ್ಲಿ ಸೋಂಕು (urinary tract infection). ಮೂತ್ರ ಹೊರಹರಿಯುತ್ತಿರುವಾಗ ಒಳಗಿನಿಂದ ಉರಿ, ಪದೇ ಪದೇ ಕಡಿಮೆ ಪ್ರಮಾಣದಲ್ಲಿ ಮೂತ್ರವಾಗುತ್ತಿರುವುದು, ಅನೈಚ್ಛಿಕವಾಗಿ ಮೂತ್ರ ಹೊರಹೋಗುವುದು, ಮೂತ್ರಹೊರಹರಿಸಲು ಹೆಚ್ಚಿನ ಒತ್ತಡ ಬೇಕಾಗುವುದು ಮತ್ತು ನೋವು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳು.

ಈ ಸೋಂಕು ಉಂಟಾಗಲು ವಿವಿಧ ಕಾರಣಗಳಿವೆ. ಪ್ರಮುಖವಾಗಿ ರೋಗನಿರೋಧಕ ವ್ಯವಸ್ಥೆಯ ಮೂಲಕ ಮೂತ್ರದ ಮೂಲಕ ಹೊರದಬ್ಬಲ್ಪಟ್ಟ ಬ್ಯಾಕ್ಟೀರಿಯಾಗಳು ಮೂತ್ರದ ಕ್ಷಾರದಲ್ಲಿಯೂ ಸಾಯದೇ ಮೂತ್ರನಾಳದ ಒಳಭಾಗವನ್ನು ಅಂಟಿಕೊಂಡು ಸೋಂಕು ಉಂಟುಮಾಡುತ್ತವೆ.

ಕೆಲವೊಮ್ಮೆ ಹಾರ್ಮೋನುಗಳ ಏರುಪೇರಿನ ವೈಪರೀತ್ಯದ ಕಾರಣದಿಂದಲೂ ಸೋಂಕು ಉಂಟಾಗಬಹುದು. ಇನ್ನುಳಿದಂತೆ ವಯೋಸಹಜವಾದ ಕ್ರಿಯೆಯಿಂದ ದೇಹ ಕೊಂಚ ದುರ್ಬಲವಾಗುವುದು ಸಹಾ ಕಾರಣವಾಗಬಹುದು. ಇನ್ನೊಂದು ಪ್ರಮುಖ ಕಾರಣವೆಂದರೆ ಸಂಕೋಚದ ಕಾರಣ ಬಹುಕಾಲ ಮೂತ್ರ ವಿಸರ್ಜನೆ ಮಾಡದೇ ಇರುವುದು. ವಿಶೇಷವಾಗಿ ಮಹಿಳೆಯರು ಮನೆಯಿಂದ ಹೊರಗಿದ್ದಾಗ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದರೆ ಸಕಾಲದಲ್ಲಿ ನಿಸರ್ಗದ ಕರೆಗೆ ಓಗೊಡದೇ ಸೂಕ್ತ ಅವಕಾಶ ಬರುವವರೆಗೆ ಕಾಯುತ್ತಾರೆ. ಪರಿಣಾಮವಾಗಿ ಮೂತ್ರಾಶಯದಲ್ಲಿ ಶೇಖರವಾದ ದ್ರವ ಹೆಚ್ಚು ಹೆಚ್ಚು ಕ್ಷಾರೀಯವಾಗಿ ಸೋಂಕು ತಗಲಲು ಪರೋಕ್ಷ ಕಾರಣವಾಗುತ್ತದೆ. ಹೆಚ್ಚು ನೀರು ಕುಡಿದರೆ ಬೇಗನೇ ಅವಸರವಾಗುವುದೆಂದು ನೀರನ್ನೂ ಕುಡಿಯದೇ ಇರುವುದೂ ಇನ್ನೊಂದು ಕಾರಣವಾಗಿದೆ. ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಈ ತೊಂದರೆಯನ್ನು ಅಲಕ್ಷಿಸಿದರೆ ನಿಧಾನವಾಗಿ ದೇಹ ಹೆಚ್ಚಿನ ತೊಂದರೆಗೆ ಒಳಗಾಗಬಹುದು. ಈ ತೊಂದರೆಗೆ ವೈದ್ಯಕೀಯ ಚಿಕಿತ್ಸೆ ಲಭ್ಯವಿದ್ದರೂ ಕೆಲವು ಅನಿವಾರ್ಯವಾದ ಪರೋಕ್ಷ ಪರಿಣಾಮಗಳಾದ ದುಗುಡ, ತಲ್ಲಣ, ತಳಮಳ ಮೊದಲಾದವೂ ಪ್ರಾರಂಭವಾಗುತ್ತವೆ. ಒಂದು ವೇಳೆ ಮೂತ್ರನಾಳದ ಸೋಂಕು ಹೆಚ್ಚುತ್ತಾ ಹೋದರೆ ಬ್ಯಾಕ್ಟೀರಿಯಾಗಳು ಪ್ರಾಬಲ್ಯ ಮೆರೆದು ಮೂತ್ರಪಿಂಡಗಳನ್ನೂ ವ್ಯಾಪಿಸಿಬಿಡಬಹುದು. ಇದು ಅತ್ಯಂತ ಅಪಾಯಕರ ಸ್ಥಿತಿಯಾಗಿದೆ. ಇದನ್ನು ತಡೆಯಲು ವೈದ್ಯರು ಸೂಕ್ತ ಪ್ರತಿಜೀವಕ (antibiotic)ಗಳನ್ನು ನೀಡಿ ಬ್ಯಾಕ್ಟೀರಿಯಾಗಳನ್ನು ನಿಗ್ರಹಿಸಿ ಸೋಂಕನ್ನು ತಡೆಗಟ್ಟುತ್ತಾರೆ. ಈ ಸ್ಥಿತಿ ಬರುವ ಮುನ್ನವೇ ಮನೆಯಲ್ಲಿಯೇ ಲಭ್ಯವಿರುವ ಸುಲಭ ಸಾಮಾಗ್ರಿಗಳಿಂದ ಮದ್ದು ತಯಾರಿಸಿ ಸೋಂಕು ಉಂಟಾಗದಂತೆ ತಡೆಯಬಹುದು. ಇಂತಹ ಸುಲಭ, ಆದರೆ ಫಲಪ್ರದವಾದ ಮದ್ದುಗಳನ್ನು ಇಲ್ಲಿ ನೀಡಲಾಗಿದೆ. ಉರಿ ಹೆಚ್ಚಿದ್ದರೆ ಮತ್ತು ಒಂದೆರಡು ದಿನಗಳಲ್ಲಿಯೇ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಪಡೆಯುವುದು ಅತಿ ಅಗತ್ಯವಾಗಿದೆ.

ಸೊಗಡೆ ಬಳ್ಳಿ ಅಥವಾ ಅನಂತಮೂಲ (Sarsasparilla)

ಸೊಗಡೆ ಬಳ್ಳಿ ಅಥವಾ ಅನಂತಮೂಲ (Sarsasparilla)

ಉರಿಮೂತ್ರಕ್ಕೆ ಆಯುರ್ವೇದ ಶಿಫಾರಸ್ಸು ಮಾಡುವ ಅತ್ಯಂತ ಪರಿಣಾಮಕಾರಿ ಮೂಲಿಕೆಯೆಂದರೆ ಸೊಗಡೆ ಬಳ್ಳಿ. ಈ ಬಳ್ಳಿಯ ಎಲೆಗಳನ್ನು ಮತ್ತು ಮೊಗ್ಗುಗಳನ್ನು ಅರೆದು ಸೇವಿಸುವ ಮೂಲಕ ಮೂತ್ರನಾಳದಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಉರಿಮೂತ್ರ ನಿವಾರಣೆಯಾಗುತ್ತದೆ. ಅಲ್ಲದೇ ಮೂತ್ರದ ಹೊರಹರಿವು ಸರಾಗವಾಗಲು ಮತ್ತು ಕಡಿಮೆ ಒತ್ತಡದಲ್ಲಿ ಹರಿಯಲು ನೆರವಾಗುತ್ತದೆ. ಈ ಮೂಲಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಈ ಮದ್ದನ್ನು ದಿನಕ್ಕೆರಡು ಬಾರಿ ಹಾಲಿನಲ್ಲಿ ಅಥವಾ ನೀರಿನಲ್ಲಿ ಬೆರೆಸಿ ಸೇವಿಸಬೇಕು. (ಒಂದು ಲೋಟಕ್ಕೆ ಸುಮಾರು ಒಂದು ಚಮಚದ ಪ್ರಮಾಣ)

ವತ್ಸನಾಭಿ (Aconite)

ವತ್ಸನಾಭಿ (Aconite)

ಉರಿಮೂತ್ರಕ್ಕೆ ವತ್ಸನಾಭಿ ಅಥವಾ ನಾಭಿಸಸ್ಯ ಎಂದು ಕರೆಯಲಾಗುವ ಗಿಡದಿಂದ ಉತ್ತಮ ಪರಿಹಾರ ನೀಡುತ್ತದೆ. ಸೋಂಕು ಕೊಂಚ ಉಲ್ಬಣಗೊಂಡಿದ್ದು ಉರಿ ಹೆಚ್ಚಿದ್ದಾಗ ಈ ಚಿಕಿತ್ಸೆ ಸೂಕ್ತವಾಗಿದೆ. ಗಾಢ ನೇರಳೆ ಬಣ್ಣದ ಹೂಗಳಿರುವ ಈ ಗಿಡ ಸರ್ವೇಸಾಮಾನ್ಯವಾಗಿ ಎಲ್ಲೆಡೆ ಬೆಳೆಯುತ್ತದೆ. ಇದರ ಬಲಿತ ಎಲೆಗಳನ್ನು ಜಜ್ಜಿ ನೀರಿನಲ್ಲಿ ಕುದಿಸಿ (ಒಂದು ಲೋಟಕ್ಕೆ ಸುಮಾರು ಎಂಟರಿಂದ ಹತ್ತು ಎಲೆಗಳ ಪ್ರಮಾಣದಲ್ಲಿ) ಸೋಸಿ ದಿನಕ್ಕೆರಡು ಬಾರಿ ಕುಡಿಯಿರಿ.

ಪಾರ್ಸ್ಲೆ ಎಲೆಗಳ ರಸ (Parsley Juice)

ಪಾರ್ಸ್ಲೆ ಎಲೆಗಳ ರಸ (Parsley Juice)

ನೋಡಲು ಕೊತ್ತಂಬರಿ ಎಲೆಗಳಂತೆಯೇ ತೋರುವ ಪಾರ್ಸ್ಲೆ ಎಲೆಗಳು ಉರಿಮೂತ್ರಕ್ಕೆ ಉತ್ತಮವಾಗಿದೆ. ಚಿಕ್ಕ ಪ್ರಮಾಣದಿಂದ ಮಧ್ಯಮ ಪ್ರಮಾಣದ ಉರಿಮೂತ್ರಕ್ಕೆ ಈ ಎಲೆಗಳು ಸೂಕ್ತವಾಗಿವೆ. ತೀವ್ರತರದ ಸೋಂಕು ಉಂಟಾಗಿದ್ದರೆ ಇದು ತರವಲ್ಲ. ಮೂತ್ರನಾಳ, ಮೂತ್ರಕೋಶದಲ್ಲಿ ಸೋಂಕುಂಟಾಗಲು ಕಾರಣವಾಗಿದ್ದ ಬ್ಯಾಕ್ಟೀರಿಯಾಗಳನ್ನು ಹದ್ದುಬಸ್ತಿಗೆ ತರಲು ಈ ಸೊಪ್ಪಿನಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ.ಇದಕ್ಕಾಗಿ ಪಾರ್ಸ್ಲೆ ಎಲೆಗಳನ್ನು ಕೊಂಚ ಹಾಲು, ನೀರು ಮತ್ತು ಕಲ್ಲುಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ (ನಾಲ್ಕು ಲೋಟ ನೀರಿಗೆ ಒಂದು ಕಟ್ಟು ಪ್ರಮಾಣದಲ್ಲಿ) ದಿನಕ್ಕೆರಡು ಬಾರಿ ಕುಡಿಯಿರಿ.

ಕಾರೇಕಾಯಿ ರಸ (Cranberry Juice)

ಕಾರೇಕಾಯಿ ರಸ (Cranberry Juice)

ಗಾಢ ಕಂದು ಬಣ್ಣವಿರುವ ಕಾರೇಕಾಯಿಗಳು ಸಹಾ ಉರಿಮೂತ್ರ ನಿವಾರಣೆಗೆ ಅತ್ಯುತ್ತಮವಾಗಿದೆ. ಇದು ಮೂತ್ರವನ್ನು ಹೆಚ್ಚಿಸುವ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವನ್ನು ಹೊಂದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ಹೊರಹೋಗುತ್ತದೆ. ಇದರೊಂದಿಗೇ ಬ್ಯಾಕ್ಟೀರಿಯಾಗಳೂ ವಿಸರ್ಜನೆಗೊಂಡು ದೇಹದ ರೋಗರಕ್ಷಣಾ ವ್ಯವಸ್ಥೆ ಹಾನಿಯನ್ನು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ. ಇದಕ್ಕಾಗಿ ಕಾರೆಕಾಯಿಗಳನ್ನು ಬೀಜರಹಿತವಾಗಿಸಿ ಹಾಲು, ನೀರು, ಸಕ್ಕರೆಯೊಂದಿಗೆ ಮಿಕ್ಸಿಯಲ್ಲಿ ಗೊಟಾಯಿಸಿ ದಿನಕ್ಕೆರಡು ಬಾರಿ ಕುಡಿಯಿರಿ. (ಒಂದು ಲೋಟಕ್ಕೆ ಸುಮಾರು ಹತ್ತರಿಂದ ಹದಿನೈದು ಹಣ್ಣುಗಳ ಪ್ರಮಾಣ)

ವಿಟಮಿನ್ ಸಿ

ವಿಟಮಿನ್ ಸಿ

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನೈಸರ್ಗಿಕವಾಗಿ ದೇಹ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಲು ವಿಟಮಿನ್ ಸಿ ನೆರವಾಗುತ್ತದೆ. ವಿಟಮಿನ್ ಸಿ ಸೇವನೆಯಿಂದ ಮೂತ್ರ ಇನ್ನಷ್ಟು

ಆಮ್ಲೀಯವಾಗುವುದರಿಂದ ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಹಾಗೂ ತನ್ಮೂಲಕ ಉರಿಮೂತ್ರ ನಿವಾರಣೆಯಾಗುತ್ತದೆ. ಇದಕ್ಕಾಗಿ ವಿಟಮಿನ್ ಸಿ ಹೆಚ್ಚಿರುವ ಚೀಪುವ ಚಾಕಲೇಟುಗಳನ್ನು ಸೇವಿಸಬಹುದು. ಇಲ್ಲದಿದ್ದರೆ ವಿಟಮಿನ್ ಸಿ ಹೆಚ್ಚಿರುವ (ಕಿತ್ತಳೆ, ಮೂಸಂಬಿ, ಲಿಂಬೆ, ಅನಾನಾಸು, ಸ್ಟ್ರಾಬೆರಿ, ಟೊಮಾಟೋ ಮೊದಲಾದ ಹಣ್ಣುಗಳು) ಆಹಾರಗಳನ್ನು ಸೇವಿಸಿ.

ಗುಡ್ಡದ ಸೊಪ್ಪಿನ ಬೀಜಗಳು (Celery Seeds)

ಗುಡ್ಡದ ಸೊಪ್ಪಿನ ಬೀಜಗಳು (Celery Seeds)

ಆಯುರ್ವೇದ ಅಂಗಡಿಯಲ್ಲಿ ದೊರಕುವ ಈ ಬೀಜಗಳು ನೈಸರ್ಗಿಕ ಮೂತ್ರವರ್ಧಕವಾಗಿದ್ದು (diuretic) ಉರಿಮೂತ್ರಕ್ಕೆ ಉತ್ತಮ ಪರಿಹಾರ ನೀಡುತ್ತದೆ. ಈ ಬೀಜಗಳನ್ನು ಜಗಿದು ನುಂಗುವುದು ಅತಿ ಉತ್ತಮ ಪರಿಹಾರವಾಗಿದೆ. ಇದು ಆಹಾರದಲ್ಲಿ ಜೀರ್ಣವಾದ ಬಳಿಕ ಮೂತ್ರಕೋಶದಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣ ಹೊಂದಿದೆ. ಪ್ರತಿದಿನ ಎರಡು ಬಾರಿ ಆಹಾರ ಸೇವನೆಯ ಬಳಿಕ ಸುಮಾರು ಒಂದು ಚಿಕ್ಕ ಚಮಚದಷ್ಟು ಬೀಜಗಳನ್ನು ಜಗಿದು ನುಂಗಿ. ಆದರೆ ಗರ್ಭಿಣಿಯರಿಗೆ ಈ ಬೀಜಗಳು ತಕ್ಕುದಲ್ಲವಾದ್ದರಿಂದ ಈ ಚಿಕಿತ್ಸೆ ಸರ್ವಥಾ ಸಲ್ಲದು.

ಎಳನೀರು

ಎಳನೀರು

ಉರಿಮೂತ್ರಕ್ಕೆ ಎಳನೀರು ಅತ್ಯುತ್ತಮವಾಗಿದೆ. ಅದರಲ್ಲೂ ಕೇಸರಿಬಣ್ಣದ ಎಳನೀರು ಉರಿಮೂತ್ರಕ್ಕೆ ಹೇಳಿ ಮಾಡಿಸಿದ ಔಷಧಿಯಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ದೊಡ್ಡ ಎಳನೀರನ್ನು(ಚಿಕ್ಕದಾದರೆ ಎರಡು) ಕುಡಿಯಿರಿ, ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬೇಡಿ. ಸುಮಾರು ಒಂದು ಘಂಟೆಯ ಬಳಿಕ ಹಲವು ಬಾರಿ ಮೂತ್ರವಿಸರ್ಜನೆಯಾಗುತ್ತದೆ. ಪ್ರತಿ ವಿಸರ್ಜನೆಯೂ ಹಿಂದಿನದಕ್ಕಿಂತ ಕಡಿಮೆ ಉರಿ ನೀಡುತ್ತಾ, ಕ್ರಮೇಣ ಮಾಯವಾಗುತ್ತದೆ. ಒಂದು ವೇಳೆ ಹಸಿರು ಎಳನೀರು ಸೇವಿಸುವುದಾದಲ್ಲಿ ಈ ನೀರಿಗೆ ಒಂದು ಚಿಕ್ಕ ತುಂಡು ಕಲ್ಲುಸಕ್ಕರೆ ಸೇರಿಸಿ ಅದು ಕರಗುವವರೆಗೆ ಕಲಕಿ ಬಳಿಕ ಕುಡಿಯಿರಿ. ರಾತ್ರಿ ಮಲಗುವ ಮುನ್ನ ಇನ್ನೊಂದು ಎಳನೀರು ಕುಡಿಯಿರಿ (ಚಿಕ್ಕದಾದರೆ ಎರಡು). ರಾತ್ರಿ ಕೆಲವು ಬಾರಿ ಮೂತ್ರಕ್ಕೆ ಅವಸರವಾದಷ್ಟೂ ಒಳ್ಳೆಯದು. ಎಳನೀರು ಉಲ್ಬಣಗೊಂಡ ಉರಿಮೂತ್ರಕ್ಕೂ ಉತ್ತಮ ಔಷಧಿಯಾಗಿದೆ.ಒಂದೆರಡು ದಿನಗಳಲ್ಲಿಯೇ ಉರಿಮೂತ್ರ ಕಡಿಮೆಯಾಗುತ್ತದೆ. ಆದರೆ ಇಲ್ಲಿಗೇ ನಿಲ್ಲಿಸಬೇಡಿ, ಕನಿಷ್ಟ ಒಂದು ವಾರವಾದರೂ ನಿರಂತರವಾಗಿ ದಿನಕ್ಕೊಂದಾದರೂ ಎಳನೀರು ಕುಡಿಯಿರಿ.

English summary

Herbal Remedies For Urinary Problems

Urinary problems can be of many types such as urinary tract infection, urinary incontinence (passing urine without intention, involuntary), frequent urination and pain and discomfort while urinating. The reasons are many some are bacterial infections, some may be hormonal and others are age related.
X
Desktop Bottom Promotion