ಇವು ಸಾಮಾನ್ಯ ಪಾನೀಯಗಳಲ್ಲ, ತೂಕ ಇಳಿಸುವಲ್ಲಿ ಎತ್ತಿದ ಕೈ..

By Super

ಒಂದು ಕಾಲದಲ್ಲಿ ಆರೋಗ್ಯಕರ ಎಂದು ಭಾವಿಸಲಾಗುತ್ತಿದ್ದ ಸ್ಥೂಲಕಾಯ ಇಂದು ಅನಾರೋಗ್ಯಕರ ಎಂಬುದು ಸಾಬೀತಾಗಿದೆ. ಆದರೆ ಒಮ್ಮೆ ಆವರಿಸಿದ ಸ್ಥೂಲಕಾಯದ ಕರಾಳಹಸ್ತದಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಂತೆಯೇ ಅತಿ ಕಷ್ಟವೂ ಅಲ್ಲ. ಇದಕ್ಕೆ ಬೇಕಾಗಿರುವುದು ತೂಕ ಕಳೆದುಕೊಳ್ಳಲು ಸೂಕ್ತವಾದ ವ್ಯಾಯಮಗಳು, ಆಹಾರಗಳು ಮತ್ತು ಇನ್ನೂ ಸುಲಭವಾಗಿ ಬೆಳಿಗ್ಗೆದ್ದು ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವುದು. ಹೌದು, ತೂಕ ಕಳೆದುಕೊಳ್ಳುವಿಕೆಯಲ್ಲಿ ಅತಿ ಸುಲಭವಾದ ಈ ಮಾರ್ಗಕ್ಕೆ ವೈಜ್ಞಾನಿಕವಾದ ಕಾರಣವಿದೆ. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ರಾತ್ರಿ ಮಲಗಿದ ಬಳಿಕ ದೇಹದಲ್ಲಿ ಜರುಗುವ ಹತ್ತು ಹಲವು ಅನೈಚ್ಛಿಕ ಕಾರ್ಯಗಳಿಗೆ ದೇಹ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಅಂತೆಯೇ ಬೆಳಿಗ್ಗೆದ್ದ ಬಳಿಕ ಹೊಟ್ಟೆ ಖಾಲಿಯಾಗಿದ್ದು ಆಹಾರವನ್ನು ಸ್ವೀಕರಿಸಲು ಕಾಯುತ್ತಿರುತ್ತದೆ. ಈ ಹೊತ್ತಿನಲ್ಲಿ ಸೇವಿಸುವ ಯಾವುದೇ ಆಹಾರವನ್ನು ಜಠರ ಶೀಘ್ರವಾಗಿ ಪಚನಗೊಳಿಸಿ ರಕ್ತಕ್ಕೆ ಕಳುಹಿಸುತ್ತದೆ. ಮೆದುಳಿಗೆ ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವಿರುವುದರಿಂದ ಇದು ಅಗತ್ಯ ಕೂಡಾ. ಇಲ್ಲೇ ಇರುವುದು ಜಾಣತನ! ಈಗ ಆಹಾರದ ಬದಲಿಗೆ ಕೇವಲ ನೀರನ್ನು ನೀಡುವ ಮೂಲಕ ಜಠರ ನೀರನ್ನು ಹೀರಿಕೊಳ್ಳಲು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಬಳಸಿಕೊಳ್ಳುತ್ತದೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಈ ವಿಧಾನ ಎಷ್ಟು ಪರಿಣಾಮಕಾರಿ ಎಂದರೆ ಒಂದೇ ತಿಂಗಳಲ್ಲಿ ಗಮನಾರ್ಹ ಪ್ರಮಾಣದ ಕೊಬ್ಬನ್ನು ಕಳೆದುಕೊಂಡಿರುವುದನ್ನು ಗಮನಿಸಬಹುದು. ಆದರೆ ಬರೆಯ ನೀರನ್ನು ಕುಡಿದು ಉಪವಾಸವಿರುವುದೂ ಅಪಾಯಕರ! ಕೊಂಚ ಹೊತ್ತಿನ, ಅಂದರೆ ಸುಮಾರು ಮುಕ್ಕಾಲು ಗಂಟೆಯ ಬಳಿಕ ಅಲ್ಪ ಉಪಾಹಾರವನ್ನು ಸೇವಿಸಲೇಬೇಕು. ಇಲ್ಲದಿದ್ದರೆ ಮೆದುಳಿಗೆ ಪೋಷಕಾಂಶಗಳು ದೊರಕದೇ ಇತರ ತೊಂದರೆಗಳು ಎದುರಾಗಬಹುದು. ತೂಕ ಕಳೆದುಕೊಳ್ಳಲು ತಾಳ್ಮೆಯೆಂಬ ಮಂತ್ರ

ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸವನ್ನು ಆಯುರ್ವೇದವೂ ಅನುಮೋದಿಸಿದ್ದು ಇದರಲ್ಲಿ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಇದರಿಂದ ತೂಕ ಕಳೆದುಕೊಳ್ಳುವ ಹೊರತಾಗಿ ಇನ್ನೂ ಹಲವಾರು ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು, ಅಧಿಕ ರಕ್ತದೊತ್ತಡವನ್ನು ತಡೆಯುವುದು, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸೂಕ್ತವಾಗಿರಿಸುವಲ್ಲಿ ನೆರವಾಗುವುದು ಮೊದಲಾದ ಆರೋಗ್ಯಕರ ಪ್ರಯೋಜನಗಳಿವೆ. ಬೆಳಿಗ್ಗೆದ್ದು ಖಾಲಿಹೊಟ್ಟೆಯಲ್ಲಿ ನೀರಿನ ಜೊತೆಗೆ ಸೇವಿಸಬಹುದಾದ ಕೆಲವು ಆಹಾರಗಳನ್ನು ಸೂಚಿಸಲಾಗಿದ್ದು ತೂಕ ಕಳೆದುಕೊಳ್ಳಲು ನೆರವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಗಿಡ್ಡಮೆಣಸಿನ ಪುಡಿ ಸೇರಿಸಿದ ನೀರು (Cayenne Pepper Water)

ಗಿಡ್ಡಮೆಣಸಿನ ಪುಡಿ ಸೇರಿಸಿದ ನೀರು (Cayenne Pepper Water)

ಗಿಡ್ಡಮೆಣಸಿನ ಪುಡಿ ಹೆಚ್ಚು ಖಾರವಾಗಿರುತ್ತದೆ. ಈ ಮೆಣಸು ನುಣುಪಾಗಿದ್ದು ಅತಿ ಉದ್ದವೂ ಅಲ್ಲ, ಅತಿ ಗಿಡ್ಡವೂ ಅಲ್ಲ ಎಂಬ ಗಾತ್ರದಲ್ಲಿದೆ. ಒಂದು ಚಿಕ್ಕ ಚಮಚದಷ್ಟು ಈ ಮೆಣಸಿನ ಪುಡಿಯನ್ನು ಪ್ರತಿದಿನ ಬೆಳಿಗ್ಗೆದ್ದ ಬಳಿಕ ಒಂದು ಲೋಟ ಲಿಂಬೆರಸ ಸೇರಿಸಿದ ನೀರಿನಲ್ಲಿ ಬೆರೆಸಿ ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಕೊಬ್ಬಿನ ಕರಗಿಸುವಿಕೆಯನ್ನು ಗರಿಷ್ಟ ಪ್ರಮಾಣಕ್ಕೆ ಏರಿಸಬಹುದು. ಇದರಲ್ಲಿರುವ capsaicin ಎಂಬ ಖಾರದ ಪೋಷಕಾಂಶ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಅಲ್ಲದೇ ಶ್ವಾಸಕೋಶದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನೂ ನಿವಾರಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗಿಡ್ಡಮೆಣಸಿನ ಪುಡಿ ಸೇರಿಸಿದ ನೀರು (Cayenne Pepper Water)

ಗಿಡ್ಡಮೆಣಸಿನ ಪುಡಿ ಸೇರಿಸಿದ ನೀರು (Cayenne Pepper Water)

ಇದು ಕರುಳುಗಳಲ್ಲಿ ಕೊಂಚ ಉರಿಯುಂಟುಮಾಡುವ ಕಾರಣ ದಿನದ ಇತರ ಹೊತ್ತಿನ ಊಟದ ಬಳಿಕ (ಮದ್ಯಾಹ್ನ ಮತ್ತು ರಾತ್ರಿ) ಕೊಂಚ ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸುವುದು ಉತ್ತಮ. ಇಲ್ಲದಿದ್ದರೆ ಮರುದಿನದ ಬಹಿರ್ದೆಶೆಯಲ್ಲಿ ಕೊಂಚ ಉರಿ ಕಾಣಿಸಿಕೊಳ್ಳಬಹುದು.

ಶುಂಠಿ ಸೇರಿಸಿದ ನೀರು

ಶುಂಠಿ ಸೇರಿಸಿದ ನೀರು

ಬೆಳಿಗ್ಗೆದ್ದು ಉಗುರುಬೆಚ್ಚನೆಯ ನೀರಿಗೆ ಕೊಂಚ ಹಸಿಶುಂಠಿಯನ್ನು ಬೆರೆಸಿ ಕುಡಿಯುವ ಮೂಲಕವೂ ತೂಕ ಕಳೆದುಕೊಳ್ಳಲು ಸಾಧ್ಯ. ಇವು ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಿ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶುಂಠಿ ಸೇರಿಸಿದ ನೀರು

ಶುಂಠಿ ಸೇರಿಸಿದ ನೀರು

ಉತ್ತಮ ಪರಿಣಾಮಕ್ಕಾಗಿ ರಾತ್ರಿ ಬಿಸಿನೀರಿನಲ್ಲಿ ಒಂದು ಚಿಕ್ಕ ತುಂಡು ಶುಂಠಿಯನ್ನು ತುರಿದು ಸೇರಿಸಿ ಇಡಿರಾತ್ರಿ ನೆನೆಸಿಡಿ. ಬೆಳಿಗ್ಗೆದ್ದ ಬಳಿಕ ಕೊಂಚವೇ ಬಿಸಿ ಮಾಡಿ ಕುಡಿಯುವುದು ಅತ್ಯುತ್ತಮ ಪರಿಣಾಮ ನೀಡುತ್ತದೆ.

ಅರಿಶಿನ ಸೇರಿಸಿದ ನೀರು

ಅರಿಶಿನ ಸೇರಿಸಿದ ನೀರು

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕಚಮಚ ಅರಿಶಿನ ಸೇರಿಸಿ ಖಾಲಿಹೊಟ್ಟೆಯಲ್ಲಿ ಕುಡಿಯುವುದು ಸಹಾ ತೂಕ ಕಳೆದುಕೊಳ್ಳಲು ಉತ್ತಮ ವಿಧಾನವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಈ ವಿಧಾನ ಸೂಕ್ತವಾಗಿದೆ.

ಅರಿಶಿನ ಸೇರಿಸಿದ ನೀರು

ಅರಿಶಿನ ಸೇರಿಸಿದ ನೀರು

ಇದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ನಿವಾರಣೆಗೊಂಡು ಉರಿಯೂತವಾಗುವುದರಿಂದ ತಡೆಯುತ್ತದೆ. ಅಲ್ಲದೇ ದೇಹದೊಳಗೆ ಈಗಾಗಲೇ ನಿಧಾನವಾಗಿ ಪ್ರಾರಂಭವಾಗಿದ್ದ ಸೋಂಕುಗಳನ್ನು ನಿವಾರಿಸುತ್ತದೆ. ಸತತವಾಗಿ ಕುಡಿದರೆ ಒಂದೇ ತಿಂಗಳ ಒಳಗಾಗಿ ಉತ್ತಮ ಪರಿಣಾಮ ಕಂಡುಬರುತ್ತದೆ.

ಲಿಂಬೆ ಮತ್ತು ಜೇನು ಸೇರಿಸಿದ ನೀರು

ಲಿಂಬೆ ಮತ್ತು ಜೇನು ಸೇರಿಸಿದ ನೀರು

ಬೆಳಿಗ್ಗೆದ್ದು ಲಿಂಬೆರಸ ಸೇರಿಸಿದ ನೀರನ್ನು ಕುಡಿಯುವುದು ಸಹಾ ಒಂದು ಅತ್ಯುತ್ತಮ ವಿಧಾನವಾಗಿದೆ. ಇದಕ್ಕೆ ಕೊಂಚ ಜೇನನ್ನು ಸೇರಿಸಿದರೆ ಈ ಶಕ್ತಿ ಅಪರಿಮಿತವಾಗಿ ಹೆಚ್ಚುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆ ಮತ್ತು ಜೇನು ಸೇರಿಸಿದ ನೀರು

ಲಿಂಬೆ ಮತ್ತು ಜೇನು ಸೇರಿಸಿದ ನೀರು

ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ವಿಧಾನ ಅತ್ಯುತ್ತಮವಾಗಿದ್ದು ಮಧುಮೇಹಿಗಳ ಹೊರತಾಗಿ ಇತರ ಎಲ್ಲರಿಗೂ ಸೂಕ್ತವಾಗಿದೆ. (ಮಧುಮೇಹಿಗಳು ಜೇನು ಸೇರಿಸದ ಲಿಂಬೆ ರಸವನ್ನು ಮಾತ್ರ ಸೇವಿಸಬಹುದು). ಇದರ ಸೇವನೆಯ ಒಂದು ಘಂಟೆಯ ಬಳಿಕ ಉಪಾಹಾರ ಸೇವಿಸಬೇಕು.

ಸೇಬಿನ ಶಿರ್ಕಾ ಸೇರಿಸಿದ ನೀರು

ಸೇಬಿನ ಶಿರ್ಕಾ ಸೇರಿಸಿದ ನೀರು

ಸೇಬಿನ ಶಿರ್ಕಾ ಅಥವಾ Apple Cider Vinegar ಸೇರಿಸಿದ ನೀರು ಸಹಾ ಉತ್ತಮ ಪರಿಣಾಮ ನೀಡುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುವುದರ ಜೊತೆಗೇ ದಿನವಿಡೀ ಚೈತನ್ಯದಿಂದಿರಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೇಬಿನ ಶಿರ್ಕಾ ಸೇರಿಸಿದ ನೀರು

ಸೇಬಿನ ಶಿರ್ಕಾ ಸೇರಿಸಿದ ನೀರು

ಜೀರ್ಣಶಕ್ತಿ ಉತ್ತಮಗೊಳ್ಳುವ ಕಾರಣ ಹೊಟ್ಟೆಯುಬ್ಬರ, ಅಪಾನವಾಯು ಮೊದಲಾದ ಯಾವುದೇ ತೊಂದರೆಗಳು ಎದುರಾಗದೇ ಹಿಂದಿನ ದಿನಗಳಲ್ಲಿ ಈ ಕಾರಣದಿಂದ ಒಳಗಾಗಿದ್ದ ಮುಜುಗರದಿಂದ ಹೊರಬರಬಹುದು. ಇದು ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ.

ಕ್ಲಾರೆಲ್ಲಾ ನೀರು

ಕ್ಲಾರೆಲ್ಲಾ ನೀರು

ಹಸಿರು ಪಾಚಿಯನ್ನು ಸಂಸ್ಕರಿಸಿ ತಯಾರಿಸಿದ ಕ್ಲಾರೆಲ್ಲಾ (chlorella) ಒಂದು ಪರಿಣಾಮಕಾರಿ ದ್ರವವಾಗಿದ್ದು ವಿಶೇಷವಾಗಿ ದೇಹದಲ್ಲಿ ಸಂಗ್ರಹವಾಗಿದ್ದ ಪಾದರಸ ಮತ್ತಿತರ ವಿಷಕಾರಿ ವಸ್ತುಗಳನ್ನು ನಿವಾರಿಸುತ್ತದೆ. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕ ಚಮಚ ಕ್ಲಾರೆಲ್ಲಾ ನೀರನ್ನು ಸೇರಿಸಿ ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ಉತ್ತಮ ಪರಿಣಾಮಗಳನ್ನು ಪಡೆಯಬಹುದು.

ಕ್ಲಾರೆಲ್ಲಾ ನೀರು

ಕ್ಲಾರೆಲ್ಲಾ ನೀರು

ಆದರೆ ಇದು ಅತಿ ಹೆಚ್ಚು ಪ್ರಬಲವಾದ ದ್ರವವಾದುದರಿಂದ ಕೆಲವು ಅಡ್ಡಪರಿಣಾಮಗಳನ್ನೂ ಎದುರಿಸಬೇಕಾಗಬಹುದು. ಆದ್ದರಿಂದ ಇದರ ಸೇವನೆಗೆ ಮುನ್ನ ವೈದ್ಯರ ಅಥವಾ ತಜ್ಞರ ಸಲಹೆ ಪಡೆದು ಮುಂದುವರೆಯುವುದು ಸೂಕ್ತ.

ಅಲ್ಯೂಮಿನಿಯಂ ಜೇಡಿ ಬೆರೆಸಿದ ನೀರು (Bentonite Clay Water)

ಅಲ್ಯೂಮಿನಿಯಂ ಜೇಡಿ ಬೆರೆಸಿದ ನೀರು (Bentonite Clay Water)

ಪೊಟ್ಯಾಶಿಯಂ, ಕ್ಯಾಲ್ಸಿಯಂ, ಅಲ್ಯೂಮಿನಿಯಂ ಮತ್ತು ಸೋಡಿಯಂ ಲವಣಗಳಿರುವ ಈ ಜೇಡಿ ಸಹಾ ದೇಹದ ಕೊಬ್ಬನ್ನು ಕರಗಿಸಲು ಹೆಚ್ಚು ಸಮರ್ಥವಾಗಿವೆ. ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಜೇಡಿಯನ್ನು ರಾತ್ರಿ ಬೆರೆಸಿ ಕಲಕಿ. ಬೆಳಿಗ್ಗೆದ್ದ ಬಳಿಕ ಜೇಡಿಯ ಕಣಗಳು ಲೋಟದ ತಳದಲ್ಲಿದ್ದು ಮೇಲಿನ ತಿಳಿನೀರನ್ನು ಮಾತ್ರ ಬಗ್ಗಿಸಿಕೊಂಡು ಖಾಲಿಹೊಟ್ಟೆಯಲ್ಲಿ ಕುಡಿಯಬೇಕು.

ಅಲ್ಯೂಮಿನಿಯಂ ಜೇಡಿ ಬೆರೆಸಿದ ನೀರು (Bentonite Clay Water)

ಅಲ್ಯೂಮಿನಿಯಂ ಜೇಡಿ ಬೆರೆಸಿದ ನೀರು (Bentonite Clay Water)

ಇದು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೀರಿಕೊಂಡು ನಿವಾರಿಸುವ ಗುಣಹೊಂದಿದ್ದು ಬಳಿಕ ತ್ಯಾಜ್ಯದ ಮೂಲಕ ಹೊರಹಾಕುತ್ತದೆ. ಇದಕ್ಕಾಗಿ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವ ಕಾರಣ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಇದು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ ಹಾಗೂ ಹೊಟ್ಟೆಯಲ್ಲಿ ಉರಿ, ಉರಿಯೂತ, ಆಮ್ಲೀಯತೆ ಮೊದಲಾದ ತೊಂದರೆಗಳಾಗದಂತೆಯೂ ತಡೆಯುತ್ತದೆ.

X
Desktop Bottom Promotion