For Quick Alerts
ALLOW NOTIFICATIONS  
For Daily Alerts

ಗರ್ಭನಿರೋಧಕ ಮಾತ್ರೆ-ಅಪಾಯ ಕಟ್ಟಿಟ್ಟ ಬುತ್ತಿ..!

By Super
|

ಅನಗತ್ಯ ಗರ್ಭವನ್ನು ತಡೆಯಲು ಇಂದು ಹಲವು ವಿಧಾನಗಳು ಲಭ್ಯವಿದ್ದರೂ ಪತಿಯರು ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವ ಕ್ರಮವನ್ನು ಆಚರಿಸಲು ಒತ್ತಡ ಹೇರುತ್ತಾರೆ. ಆದರೆ ಗರ್ಭ ನಿರೋಧಕ ಗುಳಿಗೆಗಳ ಹೆಚ್ಚಿನ ಸೇವನೆ ಮಹಿಳೆಯ ಆರೋಗ್ಯವನ್ನು ಬಹುವಾಗಿ ಕೆಡಿಸಬಹುದು. ಅಲ್ಲದೇ ಇದೊಂದು ವ್ಯಸನವಾಗಿಯೂ ಪರಿಣಮಿಸಬಹುದು.

ಹೆಚ್ಚಿನ ಗುಳಿಗೆಗಳ ಸೇವನೆಯಿಂದ ಮಹಿಳೆಯರಲ್ಲಿ ಹೃದಯ ಸ್ತಂಭನದ ಸಂಭವನೂ ಹೆಚ್ಚುತ್ತದೆ ಎಂದು ಹೃದಯತಜ್ಞರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಈ ಗುಳಿಗೆಗಳು ನೇರವಾಗಿ ಮಹಿಳೆಯರ ಹಾರ್ಮೋನುಗಳ ಪ್ರಚೋದನಾ ವ್ಯವಸ್ಥೆಯನ್ನೇ ಏರುಪೇರು ಮಾಡುತ್ತವೆ. ವಾಸ್ತವವಾಗಿ ಗರ್ಭ ತಡೆಯುವ ಕ್ರಮವೂ ಇದೇ ಆಗಿದ್ದು ಅನಾರೋಗ್ಯಕರವಾಗಿದೆ. ಇದು ಕೋಮಾಸ್ಥಿತಿಗೂ ಕೊಂಡೊಯ್ಯಬಹುದು ಮತ್ತು ಸಾವು ಸಹಾ ಸಂಭವಿಸಬಹುದು. ಔಷಧಿಗಳ ವಿಚಾರದಲ್ಲಿ ಸ್ವಯಂ ವೈದ್ಯರಾಗಲು ಹೋಗಬೇಡಿ

ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಬೇರೆ ದೈಹಿಕ ತೊಂದರೆಗಳಿಗೆ ಸೇವಿಸುವ ಗುಳಿಗೆಗಳ ಪರಿಣಾಮಗಳು ಈ ಮಾತ್ರೆಯ ಪರಿಣಾಮಕ್ಕೆ ವ್ಯತಿರಿಕ್ತವಾಗಿ ವರ್ತಿಸಿ ಅನಾಹುತ ಸಂಭವಿಸಬಹುದು. ವೈದ್ಯವಿಜ್ಞಾನಕ್ಕೂ ಸವಾಲಾಗಿರುವ ಈ ತೊಂದರೆಗಳು ಪುಟ್ಟ ಗರ್ಭನಿರೋಧಕ ಮಾತ್ರೆಯ ಮೂಲಕ ಬಂದಿದ್ದು ಇದರ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹಲವು ಮಹತ್ವದ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಜನನ ನಿಯಂತ್ರಣ ಮಾತ್ರೆಗಳ ಕುರಿತಾದ 5 ತಪ್ಪು ಕಲ್ಪನೆಗಳು!

ಪಾರ್ಶ್ವವಾಯುವಿನ ಸಾಧ್ಯತೆ

ಪಾರ್ಶ್ವವಾಯುವಿನ ಸಾಧ್ಯತೆ

ಅತಿ ಹೆಚ್ಚು ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸಿದ ಮಹಿಳೆಯರಲ್ಲಿ ಈ ಗುಳಿಗೆಗಳು ಹಾರ್ಮೋನುಗಳ ಸ್ರವಿಕೆಯ ಪ್ರಮಾಣವನ್ನು ವಿಪರೀತವಾಗಿ ಏರುಪೇರು ಮಾಡುವುದರಿಂದ ಇದರ ಪರಿಣಾಮವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚುತ್ತದೆ. ಇದು ಪ್ರತ್ಯಕ್ಷವಾಗಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಅದರಲ್ಲೂ ಕುಟುಂಬದಲ್ಲಿ ರಕ್ತಪರಿಚಲನೆಯ ತೊಂದರೆಯ ಆನುವಂಶೀಯ ಕಾರಣ ಇರುವ ಮಹಿಳೆಯರಲ್ಲಿ ಸಂಭವಿಸುವ ಸಾಧ್ಯತೆ ಅತಿ ಹೆಚ್ಚು.

ಹೃದಯ ಸ್ತಂಭನದ ಸಾಧ್ಯತೆ

ಹೃದಯ ಸ್ತಂಭನದ ಸಾಧ್ಯತೆ

ಒಂದು ಸಮೀಕ್ಷೆಯ ಪ್ರಕಾರ ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುವ ಮಹಿಳೆಯರು ಇತರರಿಗಿಂತ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೊಂದಿರುತ್ತಾರೆ. ಆದ್ದರಿಂದ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಾ ಬಂದಿರುವ ಮಹಿಳೆಯರಿಗೆ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯಸ್ತಂಭನದ ಸಾಧ್ಯತೆ ಹೆಚ್ಚು.

ಬಿಳಿಸೆರಗು

ಬಿಳಿಸೆರಗು

ಸಾಮಾನ್ಯವಾಗಿ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಾ ಬಂದಿರುವ ಮಹಿಳೆಯರಲ್ಲಿ ಇದು ಸಾಮಾನ್ಯವಾದ ತೊಂದರೆಯಾದರೂ ಅತಿಹೆಚ್ಚು ಬಳಸುವವರಲ್ಲಿ ರಕ್ತಸ್ರಾವವೂ ಕಂಡುಬರುತ್ತದೆ. ಏಕೆಂದರೆ ಇದು ಸೂಕ್ಷ್ಮಾಂಗಗಳ ರಕ್ತನಾಳಗಳನ್ನು ಇನ್ನಷ್ಟು ಶಿಥಿಲಗೊಳಿಸಿ ಘಾಸಿಗೊಳಿಸಲು ಸಾಧ್ಯವಾಗುತ್ತದೆ. ಅದರಲ್ಲೂ ರಕ್ತದ ಗಾಢತೆಯನ್ನು ಕಡಿಮೆಗೊಳಿಸಲು ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಿಗೆ ಇದು ಮಾರಕವಾಗಿದೆ.

ಚರ್ಮದ ಅಲರ್ಜಿ

ಚರ್ಮದ ಅಲರ್ಜಿ

ಗರ್ಭನಿರೋಧಕ ಗುಳಿಗೆಗಳ ಒಂದು ಅಡ್ಡಪರಿಣಾಮವೆಂದರೆ ಚರ್ಮದಲ್ಲಿ ಅಲರ್ಜಿಯುಂಟಾಗುವುದು. ಆದರೆ ವಿಪರೀತವಾದ ಸೇವನೆಯಿಂದ ಚರ್ಮ ಊದಿಕೊಳ್ಳುವುದು, ಕೆಂಪಗಾಗುವುದು, ಉರಿ, ಸತತ ತುರಿಕೆ ಮೊದಲಾದ ತೊಂದರೆಗಳನ್ನು ತಂದೊಡ್ಡುತ್ತದೆ.

DVT ಅಥವಾ ರಕ್ತನಾಳಗಳೊಳಗೆ ರಕ್ತ ಹೆಪ್ಪುಗಟ್ಟುವುದು

DVT ಅಥವಾ ರಕ್ತನಾಳಗಳೊಳಗೆ ರಕ್ತ ಹೆಪ್ಪುಗಟ್ಟುವುದು

ನಮ್ಮ ರಕ್ತದ ರಚನೆ ಹೇಗಿರುತ್ತದೆ ಎಂದರೆ ಗಾಳಿಗೆ ಒಡ್ಡಿದೊಡನೆ ಗಟ್ಟಿಯಾಗತೊಡಗುತ್ತಾ ಹೆಚ್ಚಿನ ರಕ್ತಸ್ರಾವವಾಗದಂತೆ ತಡೆಯುತ್ತದೆ. ಇದನ್ನೇ ಹೆಪ್ಪುಗಟ್ಟುವುದು (clotting) ಎಂದು ಕರೆಯುತ್ತಾರೆ. ಆದರೆ ರಕ್ತವೆಂದು ರಕ್ತನಾಳಗಳಲ್ಲಿದ್ದಾಗ ಹೆಪ್ಪುಗಟ್ಟಬಾರದು. ಆದರೆ ಕೆಲವು ಮಹಿಳೆಯರಲ್ಲಿ ಆನುವಂಶೀಯ ಕಾರಣಗಳಿಂದಾಗಿ ನಾಳಗಳೊಳಗೇ ರಕ್ತ ಹೆಪ್ಪುಗಟ್ಟುವ ತೊಂದರೆ ಇರುತ್ತದೆ. ಗರ್ಭನಿರೋಧಕ ಗುಳಿಗೆಗಳು ಈ ತೊಂದರೆಯನ್ನು ಸಾವಿರಾರು ಪಟ್ಟು ಹೆಚ್ಚಿಸುತ್ತವೆ. ಪರಿಣಾಮವಾಗಿ ಹೃದಯ ಸ್ತಂಭನ ಅಥವಾ ಪಾರ್ಶ್ವವಾಯು ಎದುರಾಗುವ ಸಂಭವ ಹೆಚ್ಚುತ್ತದೆ.

ಮೂತ್ರಪಿಂಡಗಳಲ್ಲಿ ಕಲ್ಲು

ಮೂತ್ರಪಿಂಡಗಳಲ್ಲಿ ಕಲ್ಲು

ಗರ್ಭನಿರೋಧಕಗಳ ಸೇವನೆಯಿಂದ ಮೂತ್ರಪಿಂಡಗಳಲ್ಲಿ ಕಲ್ಲುಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಗರ್ಭ ನಿರೋಧಕ ಗುಳಿಗೆಗಳ ಸೇವನೆಯ ಬಳಿಕ ಸಾಕಷ್ಟು ನೀರು ಕುಡಿಯುವ ಮೂಲಕ ಈ ತೊಂದರೆಯ ಸಂಭವವನ್ನು ಸಾಕಷ್ಟು ಕಡಿಮೆಗೊಳಿಸಬಹುದು.

ಖಿನ್ನತೆಯುಂಟು ಮಾಡುತ್ತದೆ

ಖಿನ್ನತೆಯುಂಟು ಮಾಡುತ್ತದೆ

ಕೆಲವು ಸಂದರ್ಭಗಳಲ್ಲಿ ಗರ್ಭನಿರೋಧಕದ ಸೇವನೆ ಖಿನ್ನತೆಯನ್ನು ಹೆಚ್ಚಿಸುತ್ತದೆ. ಇದು ಮಾನಸಿಕವಾದ ತೊಂದರೆಯಾಗಿದ್ದು ಬಲವಂತವಾಗಿ ಗರ್ಭನಿರೋಧಕ ಗುಳಿಗೆಗಳನ್ನು ತಿನ್ನಿಸಿದ ಪರಿಣಾಮವಾಗಿ ಖಿನ್ನತೆ ಎದುರಾಗುತ್ತದೆ. ಇದು ಮನೋಭಾವವನ್ನು ಕುಗ್ಗಿಸುತ್ತದೆ ಹಾಗೂ ನರವ್ಯವಸ್ಥೆಯನ್ನೇ ಅಲ್ಲಾಡಿಸುತ್ತದೆ. ಆದ್ದರಿಂದ ಬಲವಂತವಾಗಿ ಗುಳಿಗೆಗಳನ್ನು ತಿನ್ನಿಸುವುದು ಸರ್ವಥಾ ಸಲ್ಲದು.

ಸ್ತನ ಕ್ಯಾನ್ಸರ್ ಎದುರಾಗಬಹುದು

ಸ್ತನ ಕ್ಯಾನ್ಸರ್ ಎದುರಾಗಬಹುದು

ನಿಯಮಿತವಾಗಿ ಗರ್ಭನಿರೋಧಕಗಳನ್ನು ಬಳಸುತ್ತಾ ಬಂದಿರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ 70ಶೇಖಡಾ ಹೆಚ್ಚುತ್ತದೆ. ಏಕೆಂದರೆ ಈ ಮಾತ್ರೆಗಳಲ್ಲಿ ದೇಹದ ಹಾರ್ಮೋನುಗಳನ್ನು ಏರುಪೇರು ಮಾಡುವ ಕ್ಷಮತೆಯಿದ್ದು ಈ ಏರುಪೇರು ಸ್ತನದ ಅಂಗಾಂಶವನ್ನು ಪ್ರಭಾವಗೊಳಿಸಿ ಕ್ಯಾನ್ಸರಿಗೆ ನೇರವಾಗಿ ಕಾರಣವಾಗುತ್ತದೆ.

English summary

Do You Know What Happens When You Pop In Pills?

Do you think an overdose of pills can kill you? Well ladies, if you have been consuming a lot of birth control pills lately, it is time to withdraw from the habit, as an overdose can affect your health in the worst way. Experts state that an overdose of birth control pills can bring upon a stroke in women. 
Story first published: Sunday, October 25, 2015, 11:16 [IST]
X
Desktop Bottom Promotion