For Quick Alerts
ALLOW NOTIFICATIONS  
For Daily Alerts

ನಿದ್ರೆ ಕೊಂಚ ಏರುಪೇರಾದರೂ ಅಪಾಯ ಕಟ್ಟಿಟ್ಟ ಬುತ್ತಿ

|

ಸೃಷ್ಟಿಯಲ್ಲೆಲ್ಲಾ ಮಾನವನ ಶರೀರದಷ್ಟು ಸ೦ಕೀರ್ಣವಾದ, ಕ್ಲಿಷ್ಟಕರವಾದ ಸ೦ರಚನೆಯು ಮತ್ತೊ೦ದಿಲ್ಲ. ಮಾನವ ಜೀವನದ ಭಾಗವಾಗಿರುವ ಮನಸ್ಸೇ ಒ೦ದು ಅತ್ಯ೦ತ ಸ೦ಕೀರ್ಣ ಸ್ವರೂಪದ್ದಾಗಿದ್ದು, ಮನಸ್ಸನ್ನು ನಿರ್ಬ೦ಧಿಸುವ ಯಾವುದೇ ಪ೦ಜರಗಳಿಲ್ಲ. ವಿದ್ಯುತ್ಕೋಶ ಅಥವಾ ಬ್ಯಾಟರಿಯನ್ನು ನಾವು ಮರುಪೂರಣಗೊಳಿಸುವ೦ತೆಯೇ ಅಥವಾ ಚಾರ್ಚ್ ಮಾಡುವ೦ತೆಯೇ, ಮಾನವ ಶರೀರವನ್ನೂ ಕೂಡಾ ನಿದ್ರೆಯ ನೆರವಿನಿ೦ದ ಮರುಪೂರಣಗೊಳಿಸಿಕೊಳ್ಳಬೇಕಾದುದು ಅತ್ಯಗತ್ಯವಾಗಿರುತ್ತದೆ. ನಮ್ಮ ಜೀವನದ ಉಳಿವಿಗಾಗಿ, ಆಹಾರ ಹಾಗೂ ನೀರಿನ ನ೦ತರದ ಪ್ರಧಾನ ಸ್ಥಾನವು ನಿದ್ರೆಯದ್ದಾಗಿರುತ್ತದೆ.

ಹೌದು, ದೇವರು ಮತ್ತು ಪ್ರಕೃತಿ ಎರಡೂ ನಮಗೆ ನೀಡಿರುವ ಅದ್ಭುತ ವರ ಎಂದರೆ ಅದು ನಿದ್ದೆ. ನಾವು ಆರೋಗ್ಯಕರವಾಗಿ, ದೀರ್ಘಕಾಲ ಚೆನ್ನಾಗಿ ಬಾಳಲು ನಿದ್ದೆ ನಮಗೆ ತೀರಾ ಅತ್ಯಾವಶ್ಯಕ. ನಿದ್ದೆ ಯಾರು ಚೆನ್ನಾಗಿ ಮಾಡುವುದಿಲ್ಲವೋ ಅಥವಾ ನಿದ್ದೆ ಮಾಡಲು ಕಷ್ಟ ಪಡುತ್ತಾರೋ, ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಸಿಹಿ ಕನಸುಗಳ ಸವಿ ನಿದ್ದೆಗೆ ಕೆಲ ಸೂತ್ರಗಳು

ನಿದ್ದೆ ಎಂದರೆ ಕೇವಲ ವಿಶ್ರಾಂತಿ ಎಂಬ ಭಾವ ಹಲವರಲ್ಲಿ ಇದೆ. ಆದರೆ ನೆನಪಿಡಿ, ನಿದ್ದೆಯು ಕೇವಲ ವಿಶ್ರಾಂತಿಯನ್ನು ಪಡೆಯಲು ಮಾತ್ರ ಸಹಕರಿಸುವುದಿಲ್ಲ. ಬದಲಿಗೆ ನಮ್ಮ ಮೆದುಳಿನ ಕಾರ್ಯವೈಖರಿಯನ್ನು ಸುಧಾರಿಸುವುದರ ಜೊತೆಗೆ ದೇಹದ ಅಂಗಾಂಗಗಳ ಕಾರ್ಯ ವೈಖರಿಯನ್ನು ಸರಿಪಡಿಸುತ್ತದೆ. ಹೀಗೆ ನಿದ್ದೆಯು ನಮ್ಮ ದೇಹ ಸುಗಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ತ್ವಚೆಯು ರಾತ್ರೋರಾತ್ರಿ ಪುನಃಶ್ಚೇತನ ಪಡೆಯಲು ನಿದ್ದೆಯೇ ಕಾರಣ ಎಂದು ಈಗಾಗಲೇ ಸೌಂದರ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ಉತ್ತಮ ನಿದ್ದೆಯು ನಿಮ್ಮ ಆರೋಗ್ಯವನ್ನು ಸರಿಯಾಗಿ ಇರಿಸುವುದರ ಜೊತೆಗೆ ನಿಮ್ಮ ಯೋಗ ಕ್ಷೇಮವು ಸಹ ಸುಧಾರಿಸುತ್ತದೆ. ಹಾಗಾಗಿ ಸರಿಯಾಗಿ ನಿದ್ದೆ ಮಾಡಲಿಲ್ಲವಾದಲ್ಲಿ, ಅದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬನ್ನಿ ಸರಿಯಾದ ನಿದ್ದೆಯಿಲ್ಲದಿದ್ದರೆ ಎದುರಿಸ ಬೇಕಾಗುವ ಸಮಸ್ಯೆಗಳೇನು ಎಂಬುದನ್ನು ನೋಡೋಣ..

ಮಧುಮೇಹ

ಮಧುಮೇಹ

ಸರಿಯಾಗಿ ನಿದ್ದೆ ಮಾಡದೆ ಇದ್ದಲ್ಲಿ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ದಿನದ ಸಮಯದಲ್ಲಿ ಸಕ್ಕರೆ ಅಂಶವಿರುವ ಮತ್ತು ಜಂಕ್ ಫುಡ್‌ಗಳನ್ನು ಸೇವಿಸಲು ಹೋಗಬೇಡಿ. ಸುಸ್ತು ಮತ್ತು ತಲೆತಿರುಗುವಿಕೆಗೆ ನಿದ್ರಾಹೀನತೆಯೇ ಕಾರಣ. ಅಧಿಕ ಕಾರ್ಬೋಹೈಡ್ರೇಟ್ ಮತ್ತು ಜಂಕ್ ಫುಡ್ ಸೇವಿಸುವವರಿಗೆ ರಕ್ತದಲ್ಲಿ ಅಧಿಕ ಸಕ್ಕರೆ ಅಥವಾ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಇದರಿಂದ ನಿದ್ರಾಹೀನತೆ ಸಹ ಬಂದು, ಆರೋಗ್ಯದ ಮೇಲೆ ಪರಿಣಾಮವುಂಟಾಗುತ್ತದೆ.

ಹೃದಯಾಘಾತ ಮತ್ತು ಪಾರ್ಶ್ವವಾಯು

ಹೃದಯಾಘಾತ ಮತ್ತು ಪಾರ್ಶ್ವವಾಯು

ನಿದ್ದೆ ಮಾಡುವಾಗ ನಿಮ್ಮ ದೇಹದಲ್ಲಿನ ಅಂಗಗಳ ಲೋಪದೋಷಗಳು ರಿಪೇರಿಯಾಗುತ್ತವೆ ಮತ್ತು ದೇಹದಲ್ಲಿರುವ ಟಾಕ್ಸಿನ್‌ಗಳು ಹೊರಹಾಕಲ್ಪಡುತ್ತವೆ. ಇದಕ್ಕಾಗಿ ನಾವು ದಿನದ ಸಮಯದಲ್ಲಿ ಅಧಿಕ ನೀರನ್ನು ಸೇವಿಸಬೇಕಾಗುತ್ತದೆ. ಈ ನೀರು ನಿಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರ ಹಾಕಲು ಸಹಕರಿಸುತ್ತದೆ. ನಿದ್ದೆ ಸರಿಯಾಗಿ ಮಾಡದೆ ಇರುವವರಲ್ಲಿ ಈ ಕಶ್ಮಲಗಳು ಹೊರ ಹೋಗುವುದಿಲ್ಲ. ಜೊತೆಗೆ ಇದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹಾಗು ಪಾರ್ಶ್ವವಾಯು ಕಾಣಿಸಿಕೊಳ್ಳುತ್ತದೆ.

ನೆನಪಿನ ಶಕ್ತಿಯ ಕೊರತೆ

ನೆನಪಿನ ಶಕ್ತಿಯ ಕೊರತೆ

ನಿದ್ರಾಹೀನತೆಯ ಮೊದಲ ಪರಿಣಾಮವುಂಟಾಗುವುದು ಮೆದುಳಿನ ಮೇಲೆ, ಮೆದುಳಿನ ಕೋಶಗಳು, ನಿದ್ದೆ ಮಾಡುವಾಗ ಪುನಃಶ್ಚೇತನ ಪಡೆಯುತ್ತವೆ. ಆದರು ನೀವು ನಿದ್ದೆ ಮಾಡದೆ ಇದ್ದ ಪಕ್ಷದಲ್ಲಿ, ನಿಮ್ಮ ಮೆದುಳು ಸಹ ಆಯಾಸಗೊಳ್ಳುತ್ತದೆ. ಇದರಿಂದಾಗಿ ನಿಮಗೆ ನೆನಪಿನ ಶಕ್ತಿ ಕೊರತೆ ಕಾಡುವುದಲ್ಲದೆ, ನಿಮ್ಮ ಸಂಪೂರ್ಣ ನೆನಪೇ ಇಲ್ಲದೆ ಹೋಗಬಹುದು.

ಮೂತ್ರ ಮಾಡುವಿಕೆಯಲ್ಲಿ ಅಸ್ಥಿರತೆ

ಮೂತ್ರ ಮಾಡುವಿಕೆಯಲ್ಲಿ ಅಸ್ಥಿರತೆ

ಈ ರೋಗ ಬಂದಲ್ಲಿ, ನಿಮಗೆ ಮೂತ್ರ ಮಾಡಬೇಕು ಎನಿಸಿದರು, ಅದನ್ನು ವಿಸರ್ಜನೆ ಮಾಡಲು ಸಾಧ್ಯವಾಗದೆ ಹೋಗುತ್ತದೆ. ಇದು ಸಹ ನಿದ್ರಾಹೀನತೆಯಿಂದ ಕಂಡು ಬರುವ ಒಂದು ಸಮಸ್ಯೆಯಾಗಿರುತ್ತದೆ. ಈ ಸಮಸ್ಯೆ ಬರದಂತೆ ತಡೆಯಲು ಚೆನ್ನಾಗಿ ನಿದ್ದೆ ಮಾಡಿ.

ಆತಂಕ ಮತ್ತು ಖಿನ್ನತೆ

ಆತಂಕ ಮತ್ತು ಖಿನ್ನತೆ

ನಿದ್ರಾಹೀನತೆಯಿಂದ ಒತ್ತಡ ಮತ್ತು ಖಿನ್ನತೆ ಮೊದಲು ಬರುತ್ತದೆ. ನಿದ್ದೆ ಕಡಿಮೆಯಾದಲ್ಲಿ ದೇಹದಲ್ಲಿ ಕಾರ್ಟಿಸೊಲ್ ಹಾರ್ಮೋನ್ ಸ್ರವಿಸಲು ಆರಂಭವಾಗುತ್ತದೆ. ಈ ಹಾರ್ಮೋನ್ ನಿಮ್ಮನ್ನು ಒತ್ತಡಕ್ಕೆ ದೂಡುತ್ತದೆ. ಇದು ನಿಮ್ಮನ್ನು ಖಿನ್ನನಾಗಿ ಮಾಡುತ್ತದೆ.ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಚೆನ್ನಾಗಿ ನಿದ್ದೆ ಮಾಡಿ.

ತ್ವಚೆಯ ಮೇಲೆ ಪರಿಣಾಮ

ತ್ವಚೆಯ ಮೇಲೆ ಪರಿಣಾಮ

ನಿದ್ದೆ ಸರಿಯಾಗಿ ಮಾಡದೆ ಇದ್ದಲ್ಲಿ, ಅದರ ಪರಿಣಾಮವು ಮೊದಲು ತ್ವಚೆಯ ಮೇಲೆ ಕಂಡು ಬರುತ್ತದೆ. ನಿದ್ದೆ ಮಾಡದೆ ಇರುವವರ ತ್ವಚೆಯು ನಿರ್ಜೀವವಾಗಿ ಕಾಣಲು ಆರಂಭಿಸುತ್ತದೆ, ತ್ವಚೆ ಕಪ್ಪಾಗುವುದು, ಕಣ್ಣಿನ ಸುತ್ತ ಕಪ್ಪು ಕಲೆಗಳು ಗೋಚರಿಸಲು ಆರಂಭಿಸುತ್ತದೆ. ಮಾನಸಿಕ ಸಾಮರ್ಥ್ಯ ಸಹ ಇದರಿಂದ ಕುಗ್ಗುತ್ತದೆ. ಜೊತೆಗೆ ದೈಹಿಕ ಆಯಾಸ ಮತ್ತು ದೈಹಿಕ ಚಟುವಟಿಕೆಗಳನ್ನು ಮಾಡುವಾಗ ನೋವು, ಸುಸ್ತು, ಅಧಿಕ ತೂಕ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಡಿಮೆ ನಿದ್ದೆಯಿಂದ ಮಾನಸಿಕ ಮತ್ತು ದೈಹಿಕ ಒತ್ತಡ ಕಾಣಿಸಿಕೊಳ್ಳುತ್ತದೆ. ಇದು ಮುಂದೆ ಕಾರ್ಟಿಸೊಲ್ ಎಂಬ ಒತ್ತಡಕಾರಿ ಹಾರ್ಮೊನ್ ಸ್ರವಿಸುವಿಕೆಗೆ ಕಾರಣವಾಗುತ್ತದೆ.

English summary

Diseases Caused By Incomplete Sleep

is the greatest blessing for us, which regenerates our brain and repairs the body. During sleep, all our body organs are cleansed from the toxins, so that during the day they can work properly. Our skin also gets repaired overnight, so find out the diseases that are caused by incomplete sleep.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more