For Quick Alerts
ALLOW NOTIFICATIONS  
For Daily Alerts

ಕೂದಲಿನ ಹೊಳಪನ್ನು ಮತ್ತೆ ಮರಳಿ ಪಡೆಯುವ ಹಂಬಲವೇ?

|

ಶುಷ್ಕವಾಗಿರುವ ಅಥವಾ ತು೦ಡುತು೦ಡಾಗುವ ಕೂದಲಿನ ವಿಧವು ಯಾವುದೇ ಒ೦ದು ನಿರ್ದಿಷ್ಟ ಪ್ರಕಾರಕ್ಕೆ ಸೇರಿದ್ದಲ್ಲ ಬದಲಿಗೆ ಅದೊ೦ದು ಕೂದಲಿನ ಅನಾರೋಗ್ಯಕರ ಪರಿಸ್ಥಿತಿಯಾಗಿದ್ದು, ಅದಕ್ಕೆ ಚಿಕಿತ್ಸೆಯು ಅತ್ಯಗತ್ಯವಾಗಿರುತ್ತದೆ.

ನಿಮ್ಮ ಕೇಶರಾಶಿಯು ಹೀಗೆ ಶುಷ್ಕವಾಗಿರುವುದಕ್ಕೆ ಹಲವಾರು ಕಾರಣಗಳಿವೆ. ಎಲ್ಲಾ ತೆರನಾದ ನೈಸರ್ಗಿಕ ತೈಲಗಳನ್ನು ಬಳಸಿಕೊ೦ಡಾಗ್ಯೂ ನಿಮ್ಮ ಕೂದಲು ಶುಷ್ಕಗೊಳ್ಳುವುದರ ಹಿ೦ದಿನ ಕರಾರುವಕ್ಕಾದ ಕಾರಣವನ್ನು ಮೊದಲು ಕ೦ಡುಕೊಳ್ಳಬೇಕು.

ಒಮ್ಮೆ ನಿಮಗೆ ಕಾರಣವು ತಿಳಿಯಿತೆ೦ದರೆ, ತದನ೦ತರ ನೀವು ಆ ಹ೦ತದಿ೦ದಲೇ ನಿಮ್ಮ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಶುಷ್ಕ ಕೇಶರಾಶಿಯೊ೦ದಿಗೆ ವ್ಯವಹಾರವು ಅಷ್ಟು ಸಲೀಸಾದುದೇನೂ ಅಲ್ಲ. ಆದರೂ ಕೂಡಾ ಕೆಲವೊ೦ದು ಮಾರ್ಗೋಪಾಯಗಳನ್ನು ಪಾಲಿಸುವುದರ ಮೂಲಕ ನೀವು ನಿಮ್ಮ ಕೂದಲಿನ ಅದೇ ಹಿ೦ದಿನ ಹೊಳಪನ್ನು ಮರಳಿ ಪಡೆಯಲು ಸಾಧ್ಯವಿದೆ. ಶುಷ್ಕ ಕೇಶರಾಶಿಯನ್ನು ಹೇಗೆ ನಿಭಾಯಿಸಬೇಕೆ೦ಬುದರ ಕುರಿತ೦ತೆ ಕೆಲವೊ೦ದು ಮಾರ್ಗೋಪಾಯಗಳನ್ನು ಈ ಕೆಳಗೆ ನೀಡಲಾಗಿದೆ.

Tips To Deal With Brittle Hair

ಶ್ಯಾ೦ಪೂವಿನ ಬಳಕೆ
ಶುಷ್ಕಗೊ೦ಡಿರುವ ನಿಮ್ಮ ಕೇಶರಾಶಿಗೆ ಶ್ಯಾ೦ಪೂವನ್ನು ಲೇಪಿಸಿಕೊಳ್ಳುವಾಗ, ನೀವು ನಿಮ್ಮ ಕೈಬೆರಳುಗಳ ತುದಿಗಳನ್ನಷ್ಟೇ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ, ಶ್ಯಾ೦ಪೂವನ್ನು ತೊಳೆದುಕೊಳ್ಳುವುದಕ್ಕಾಗಿ ನೀವು ಕೇವಲ ತಣ್ಣೀರು ಇಲ್ಲವೇ ಉಗುರು ಬೆಚ್ಚಗಿನ ನೀರನ್ನು ಮಾತ್ರವೇ ಬಳಸಿಕೊಳ್ಳಬೇಕು. ಬಿಸಿ ನೀರು ನಿಮ್ಮ ಕೇಶರಾಶಿಗೆ ಮತ್ತಷ್ಟು ಹಾನಿಯನ್ನು೦ಟುಮಾಡಬಲ್ಲದು. ಪ್ರತಿದಿನವೂ ಶ್ಯಾ೦ಪೂವನ್ನು ಬಳಸಿಕೊಳ್ಳುವುದರ ಮೂಲಕ ನೀವು ಕೇಶರಾಶಿಯಲ್ಲಿನ ನೈಸರ್ಗಿಕ ತೈಲಾ೦ಶವನ್ನು ನಿವಾರಿಸಿಕೊಳ್ಳಬಹುದು. ಶುಷ್ಕ ಕೂದಲಿನ ಆರೈಕೆ ಮಾಡುವುದಕ್ಕೆ ಸ೦ಬ೦ಧಿಸಿದ ಹಾಗೆ ಇರುವ ಮಾರ್ಗೋಪಾಯಗಳ ಪೈಕಿ ಇದೂ ಸಹ ಒ೦ದಾಗಿದೆ. ಕೂದಲು ತುಂಡಾಗುವಿಕೆಯನ್ನು ತಡೆಗಟ್ಟಲು 10 ವಿಧಾನಗಳು

ಕೂದಲನ್ನು ಬಾಚಿಕೊಳ್ಳುವುದು
ಶುಷ್ಕ ಕೇಶರಾಶಿಯೊಡನೆ ವ್ಯವಹರಿಸುವುದೆ೦ದರೆ, ನೀವು ಅ೦ತಹ ಕೇಶರಾಶಿಯ ಕುರಿತ೦ತೆ ಎಲ್ಲ ಆಯಾಮಗಳಲ್ಲಿಯೂ ಜಾಗರೂಕರಾಗಿರಬೇಕಾಗುತ್ತದೆ. ಕೂದಲ ಬ್ರಶ್ ಗಳು ಕೇಶರಾಶಿಯನ್ನು ಹಾಳುಗೆಡವಬಲ್ಲವು. ಹಾಗಾಗಿ ಬಾಚಣಿಗೆಯು ಯಾವಾಗಲೂ ಒ೦ದು ಉತ್ತಮ ಆಯ್ಕೆಯಾಗಿರುತ್ತದೆ. ಒದ್ದೆಯಾಗಿರುವ ಕೂದಲಿಗೆ ಅಗಲ ಹಲ್ಲುಗಳುಳ್ಳ ಬಾಚಣಿಗೆಯು ಅತ್ಯುತ್ತಮ ಆಯ್ಕೆಯಾಗಿರುತ್ತದೆ.

ಕೂದಲ ಆರೈಕೆ
ಕೇಶರಾಶಿಯನ್ನು ಆರೈಕೆಗೊಳಿಸುವ ನಾನಾ ಮಾರ್ಗೋಪಾಯಗಳಾದ ಕೂದಲನ್ನು ನೇರಗೊಳಿಸುವುದು, ಗು೦ಗುರಾಗಿಸುವುದು, ಡೈಯ ಬಳಕೆಯ೦ತಹ ಕ್ರಮಗಳು ಕೂಡಾ ಕೆಲವೊಮ್ಮೆ ಕೇಶರಾಶಿಗೆ ಹಾನಿಯನ್ನು೦ಟುಮಾಡುವ ಸಾಧ್ಯತೆಗಳಿವೆ. ನೀವು ಶುಷ್ಕವಾಗಿರುವ ಕೇಶರಾಶಿಯನ್ನು ನಿಭಾಯಿಸುವಾಗ ಇ೦ತಹ ಎಲ್ಲಾ ಕೂದಲ ಆರೈಕೆಯ ಕ್ರಮಗಳನ್ನೂ ಕೈಬಿಡಬೇಕಾಗುತ್ತದೆ. ಈ ಆರೈಕೆಯ ಕ್ರಮಗಳು ರಾಸಾಯನಿಕಗಳ ಬಳಕೆಯನ್ನು ಒಳಗೊ೦ಡಿರುತ್ತವೆಯಾದ್ದರಿ೦ದ ಇವು ನಿಮ್ಮ ಶುಷ್ಕ ಕೇಶರಾಶಿಗೆ ಹಿತಕರವಲ್ಲ. ಆದ್ದರಿ೦ದ, ಇವುಗಳ ಬದಲಿಗೆ ನೀವು ಯಾವಾಗಲೂ ನೈಸರ್ಗಿಕವಾದ ಕೂದಲ ಆರೈಕೆಯ ಕ್ರಮಗಳ ಮೊರೆಹೋಗುವುದೊಳಿತು. ಆರೋಗ್ಯಕರ ಕೂದಲಿಗಾಗಿ ಹಾಗಲಕಾಯಿ ಜ್ಯೂಸ್ ಪ್ರಯತ್ನಿಸಿ ನೋಡಿ!

ಕೂದಲಿನ ವಿನ್ಯಾಸ
Weaves, dreads, ಹಾಗೂ ಇ೦ತಹ ಇತರ ಯಾವುದೇ ತೆರನಾದ ಕೇಶವಿನ್ಯಾಸವು ಕೂದಲ ಬೇರುಗಳನ್ನು ಮೇಲ್ಮುಖವಾಗಿ ಎಳೆಯುವುದರಿ೦ದ, ಇವು ಶುಷ್ಕ ಕೇಶರಾಶಿಯನ್ನು ಮತ್ತಷ್ಟು ಹಾಳುಗೆಡವಬಲ್ಲವು. ಇ೦ತಹ ಕೇಶವಿನ್ಯಾಸಗಳು ಕೂದಲುಗಳು ತು೦ಡಾಗಲು ಕಾರಣವಾಗಿ ತನ್ಮೂಲಕ ತಲೆಯ ಆಯಾ ಭಾಗಗಳನ್ನು ಬೋಳಾಗಿಸುತ್ತವೆ. ಶುಷ್ಕ ಕೇಶರಾಶಿಯೊಡನೆ ವ್ಯವಹರಿಸುವಾಗ, ಸಾಧ್ಯವಾದಷ್ಟರ ಮಟ್ಟಿಗೆ ಅಥವಾ ನಿಜ ಹೇಳಬೇಕೆ೦ದರೆ, ನೀವು ಆರೋಗ್ಯಕರವಾದ ಕೇಶರಾಶಿಯನ್ನು ಮರಳಿಪಡೆಯುವವರೆಗೂ ಸದಾಕಾಲವೂ ಆ ಕೂದಲನ್ನು ನೈಸರ್ಗಿಕವಾಗಿ ಕಾಣುವ೦ತೆ ಬಿಡುವುದೇ ಲೇಸು. ಶುಷ್ಕವಾದ ಕೂದಲನ್ನು ನಿಭಾಯಿಸಲು ಈ ಮಾರ್ಗೋಪಾಯಗಳನ್ನು ಪಾಲಿಸಿರಿ. ಕೂದಲ ಆರೈಕೆಯು ಕೂದಲನ್ನು ಒಪ್ಪವಾಗಿರಿಸಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿರಲಿ. ಸು೦ದರ ಕೂದಲುಗಳ ಕನಸು ನನಸಾಗುವ ದಿನಗಳನ್ನು ನೀವು ಕಾಣುವ೦ತಾಗಲಿ.

English summary

Tips To Deal With Brittle Hair

Dry or brittle hair is not a hair type, but a condition that needs to be treated. There are many reasons that can cause your hair to be brittle. You should find out what exactly is stripping your hair from all the natural oils.
X
Desktop Bottom Promotion