For Quick Alerts
ALLOW NOTIFICATIONS  
For Daily Alerts

ಅಯ್ಯೋ ನಿದ್ದೆ ಮಾತ್ರೆಯ ಸಹವಾಸ ಬೇಡಪ್ಪಾ ಬೇಡ!

By Super
|

ಜಾಗತಿಕ ಮಾರುಕಟ್ಟೆಗೆ ಭಾರತ ತೆರೆದುಕೊಂಡಿದ್ದೇ ತಡ, ದಿನದ ಇಪ್ಪತ್ತನಾಲ್ಕೂ ಗಂಟೆಗಳು ಚಟುವಟಿಕೆಯಿಂದ ಕೂಡಿರುತ್ತವೆ. ಪರಿಣಾಮವಾಗಿ ಹಲವರ ನಿದ್ದೆ ವ್ಯತ್ಯಯಗೊಳ್ಳುತ್ತಿದೆ. ಈ ವ್ಯತ್ಯಯವನ್ನು ಸರಿಪಡಿಸಲು ಹಲವರು ನಿದ್ದೆಗುಳಿಗೆಗಳ ಮೊರೆ ಹೋಗುತ್ತಿದ್ದಾರೆ. ಕದಡಿದ ನೆಮ್ಮದಿ, ಕೌಟುಂಬಿಕ ಕಲಹ, ನಿತ್ಯದ ಜಂಜಡಗಳಿಂದ ನಿದ್ದೆಯ ತೊಂದರೆಯಾಗಿದ್ದರೆ ವೈದ್ಯರೂ ನಿದ್ದೆಗುಳಿಗೆಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.

ಆದರೆ ಕೇವಲ ತಾತ್ಕಾಲಿಕ ಅವಧಿಗೆ ಮಾತ್ರ. ಆದರೆ ಹಲವರು ಈ ನಿದ್ದೆಯನ್ನು ಕಳೆದುಕೊಳ್ಳಲಿಚ್ಛಿಸದೇ ವೈದ್ಯರ ಸಲಹೆಯನ್ನು ಮೀರಿ ಹೆಚ್ಚಿನ ಅವಧಿಗೆ ಸೇವಿಸುತ್ತಾರೆ. ಹೀಗೆ ಪ್ರತಿಬಾರಿಯ ಸೇವನೆಯಿಂದ ದೇಹ ಹಲವು ತೊಂದರೆಗಳನ್ನು ಎದುರುಹಾಕಿಕೊಳ್ಳುತ್ತದೆ. ಹೆಚ್ಚಿನವರು ಈ ತೊಂದರೆಗಳ ಬಗ್ಗೆ ಅಜ್ಞರಾಗಿರುತ್ತಾರೆ. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

ವಾಸ್ತವವಾಗಿ ಈ ನಿದ್ದೆಗುಳಿಗೆಗಳನ್ನು ಸೇವಿಸಲು ಸಲಹೆ ನೀಡಿದ ವೈದ್ಯರು ಕೆಲವು ಮಾತ್ರೆಗಳನ್ನು ಮಾತ್ರವೇ ಸೇವಿಸಲು ಹೇಳಿರುತ್ತಾರೆ. ಔಷಧಿ ಅಂಗಡಿಯವರೂ ಅಷ್ಟೇ ಗುಳಿಗೆಗಳನ್ನು ನೀಡುತ್ತಾರೆ. ಆದರೆ ಇದೇ ಚೀಟಿಯನ್ನು ಇನ್ನೊಂದು ಔಷಧಿ ಅಂಗಡಿಗೆ ನೀಡಿದರೆ ಅಲ್ಲಿಂದಲೂ ಅಷ್ಟೇ ಗುಳಿಗೆಗಳು ಸುಲಭವಾಗಿ ದೊರಕುವುದರಿಂದ ಈ ಮಾತ್ರೆಗಳ ತಪ್ಪು ಉಪಯೋಗವೂ ಸಾಧ್ಯವಿದೆ. ಈ ಮಾತ್ರೆಗಳು ತಾತ್ಕಾಲಿಕವಾಗಿ ನಿದ್ದೆಯನ್ನು ಒದಗಿಸಿದರೂ ಇವುಗಳ ಅಡ್ಡಪರಿಣಾಮಗಳು ಈಗಾಗಲೇ ಇರುವ ಕಾಯಿಲೆಗಳನ್ನು ಉಲ್ಬಣಿಸುವ ಸಾಧ್ಯತೆ ಇದೆ! ಆರೋಗ್ಯಕ್ಕೆ ಮಾರಕವಾಗಬಲ್ಲ ಈ ಅಡ್ಡಪರಿಣಾಮಗಳ ಬಗ್ಗೆ ಇಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ನೀಡಲಾಗಿದೆ. ನಿದ್ದೆ ಮಾತ್ರೆ ನಿರಂತರ ನುಂಗಿದರೆ ಏನಾಗುತ್ತೆ?

ನಿದ್ದೆಯ ಅಸಹಿಷ್ಣುತೆ ಹೆಚ್ಚುತ್ತದೆ

ನಿದ್ದೆಯ ಅಸಹಿಷ್ಣುತೆ ಹೆಚ್ಚುತ್ತದೆ

ನಮ್ಮ ದೇಹದ ಒಂದು ಅತ್ಯುತ್ತಮ ಸೋಜಿಗವೆಂದರೆ ಒಗ್ಗಿಕೊಳ್ಳುವ ಗುಣ. ಉದಾಹರಣೆಗೆ ಕೆಲವು ಆಹಾರಗಳು, ಔಷಧಿಗಳನ್ನು ನಿಯಮಿತವಾಗಿ ಸೇವಿಸಿದಾಗ ಅವುಗಳ ಪೋಷಕಾಂಶಗಳಿಗೆ ಒಗ್ಗಿಬಿಡುತ್ತದೆ. ದುರಾದೃಷ್ಟವೆಂದರೆ ಈ ಗುಣವೇ ವ್ಯಸನಿಗಳನ್ನೂ ಹುಟ್ಟುಹಾಕುತ್ತದೆ. ನಿದ್ದೆಗುಳಿಗೆಗಳ ಸತತ ಸೇವನೆಗೂ ದೇಹ ಕೆಲವೇ ದಿನಗಳಲ್ಲಿ ಒಗ್ಗಿ ಬಿಡುತ್ತದೆ. ಅಂದರೆ ಮೊದಮೊದಲು ಒಂದೇ ಗುಳಿಗೆಗೆ ಬರುತ್ತಿದ್ದ ನಿದ್ದೆ ದಿನಗಳೆದಂತೆ ಒಂದು ಗುಳಿಗೆಗೆ ಒಗ್ಗಿ ನಿದ್ದೆ ಇಲ್ಲವಾಗುತ್ತದೆ. ಆಗ ಮಾತ್ರೆಗಳ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ. ತಜ್ಞರ ಪ್ರಕಾರ ಒಂದೇ ಗುಳಿಗೆಯನ್ನು ಒಂದು ವಾರಕ್ಕಿಂತ ಹೆಚ್ಚು ಕಾಲ ಸತತವಾಗಿ ಸೇವಿಸಿದರೆ ದೇಹ ಒಗ್ಗುವ ಸಾಧ್ಯತೆ ಹೆಚ್ಚುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ ನಿದ್ದೆಗಾಗಿ ಗುಳಿಗೆಯನ್ನು ನೆಚ್ಚಿಕೊಳ್ಳದೇ ಇತರ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು.

ಮರುದಿನವೂ ಮುಂದುವರೆಯುವ ಜೊಂಪು

ಮರುದಿನವೂ ಮುಂದುವರೆಯುವ ಜೊಂಪು

ನಿದ್ದೆಗುಳಿಗೆಯ ಮೂಲಕ ಈ ರಾತ್ರಿ ನಿದ್ದೆ ಬಂದಿದ್ದರೂ ಜೊಂಪು ಮುಂದಿನ ಒಂದು ಇಡಿಯ ದಿನ ಇರುತ್ತದೆ. ಈ ಜೊಂಪಿನಲ್ಲಿ ವಾಹನ ಚಲಾಯಿಸುವುದು ಮೊದಲಾದ ಲಕ್ಷ್ಯ ನೀಡಬೇಕಾದ ಕೆಲಸಗಳನ್ನು ನಿರ್ವಹಿಸುವುದು ಅಪಾಯಕಾರಿಯಾಗಿದೆ. ಈ ಜೊಂಪಿನಲ್ಲಿ ಕೈಗೊಂಡ ನಿರ್ಣಯಗಳು, ಮಾಡಿದ ಕೆಲಸ ಎಲ್ಲವೂ ಅಧ್ವಾನವಾಗುವ ಸಂಭವವಿದೆ.

ನಿಮ್ಮ ನಡವಳಿಕೆಯಲ್ಲಿ ಬದಲಾವಣೆಯುಂಟಾಗುತ್ತದೆ

ನಿಮ್ಮ ನಡವಳಿಕೆಯಲ್ಲಿ ಬದಲಾವಣೆಯುಂಟಾಗುತ್ತದೆ

ನಿದ್ದೆಗುಳಿಗೆಗಳ ಅತ್ಯಂತ ಕೆಟ್ಟ ಪರಿಣಾಮವೆಂದರೆ ಸ್ಮೃತಿಭ್ರಂಶ ಅಥವಾ amnesia. ಬಲವಂತದ ನಿದ್ದೆಗಾಗಿ ನಮ್ಮ ಮೆದುಳಿನ ಹಲವು ಜೀವಕೋಶಗಳು ಶಾಶ್ವತವಾಗಿ ಘಾಸಿಗೊಳ್ಳುವುದರಿಂದ ಮರೆವನ್ನೂ ಹೆಚ್ಚಿಸುತ್ತದೆ. ಈ ಮರೆವು ನಿಮ್ಮ ಔದ್ಯೋಗಿಕ ಮತ್ತು ನಿತ್ಯದ ಚಟುವಟಿಕೆಗಳ ಮೇಲೆ ಪ್ರಭಾವ ಬೀರಬಹುದು. ಈ ಸ್ಥಿತಿಗೆ ಒಳಗಾಗುವ ಮುನ್ನ ವೈದ್ಯರು ಬೇರೆ ಔಷಧಿಗಳನ್ನು ಸಲಹೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೇ ನಿದ್ದೆಗುಳಿಗೆಗಳನ್ನು ಸೇವಿಸದೇ ಇರುವುದು ಮತ್ತು ಅವರು ಸೂಚಿಸಿದ ಅವಧಿಗೆ ಮಾತ್ರ ಸೇವಿಸುವುದು ಅಗತ್ಯವಾಗಿದೆ.

ಕುಸಿದುಬೀಳುವ ಸಂಭವ

ಕುಸಿದುಬೀಳುವ ಸಂಭವ

ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ನಿದ್ದೆಗುಳಿಗೆಗಳನ್ನು ನೀಡಿದ ಬಳಿಕ ಕಂಡುಬಂದಂತೆ ಹಲವು ರೋಗಿಗಳು ಎಚ್ಚರಾದ ಬಳಿಕವೂ ತಮ್ಮ ಸ್ಥಿಮಿತವನ್ನು ಪಡೆಯಲಾಗದೇ ಕುಸಿದು ಬೀಳುತ್ತಾರೆ. ಅದರಲ್ಲೂ ವೃದ್ದರಲ್ಲಿ ಈ ಪ್ರಮಾಣ ಹೆಚ್ಚು. ಒಂದು ವೇಳೆ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಅಥವಾ ಮೇಲಂತಸ್ತಿನಲ್ಲಿದ್ದು ನಿದ್ದೆಯ ಬಳಿಕ ಎಚ್ಚರಾಗಿ ಮೆಟ್ಟಲಿಳಿಯುವಾಗ ಕುಸಿದರೆ ಅನಾಹುತವಾಗಬಹುದು!

ಕೋಮಾಸ್ಥಿತಿಗೆ ತಲುಪುವುದು ಅಥವಾ ಸಾವು ಸಂಭವಿಸಬಹುದು

ಕೋಮಾಸ್ಥಿತಿಗೆ ತಲುಪುವುದು ಅಥವಾ ಸಾವು ಸಂಭವಿಸಬಹುದು

ಯಾವುದೇ ಔಷಧಿಗೂ ವೈದ್ಯರು ನೀಡುವ ಪ್ರಮಾಣದಲ್ಲಿ ಒಂದು ಮಿತಿ ಇದೆ. legal dosage ಎಂದು ಇದನ್ನು ಕರೆಯುತ್ತಾರೆ. ಯಾವುದೇ ಔಷಧಿ ಈ ಮಿತಿಯನ್ನು ಮೀರದಿರುವಂತೆ ವೈದ್ಯರು ಮತ್ತು ಔಷಧಿಗಳ ವ್ಯಾಪಾರಿಗಳು ಎಚ್ಚರ ವಹಿಸುತ್ತಾರೆ. ಒಂದು ವೇಳೆ ರೋಗಿ ತನ್ನದೇ ಆಯ್ಕೆಯಿಂದ (ಅಥವಾ ಕೊಲೆ ಮಾಡುವ ಇರಾದೆಯಿಂದ ರೋಗಿಯ ಮನೆಯವರು ಬಲವಂತವಾಗಿ) ಈ ಪ್ರಮಾಣಕ್ಕೂ ಮೀರಿ ಔಷಧಿಯನ್ನು ಸೇವಿಸಿದರೆ ದೇಹ ಹಲವು ತೊಂದರೆಗಳನ್ನು ಎದುರಿಸುತ್ತದೆ. ಕುಸಿತಗೊಂಡ ಉಸಿರಾಟ ಮೆದುಳಿಗೆ ರಕ್ತಪ್ರಮಾಣವನ್ನು ತಗ್ಗಿಸಿ ಕೋಮಾ ಸ್ಥಿತಿಗೆ ಕೊಂಡೊಯ್ಯಬಹುದು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಾವು ಸಹಾ ಸಂಭವಿಸಬಹುದು. ಅದರಲ್ಲೂ ಅಸ್ತಮಾ ರೋಗಿಗಳು ನಿದ್ದೆಮಾತ್ರೆಯಿಂದ ದೂರವಿರುವುದೇ ಲೇಸು.

ಕ್ಯಾನ್ಸರ್ ಎದುರಾಗಬಹುದು

ಕ್ಯಾನ್ಸರ್ ಎದುರಾಗಬಹುದು

ಕ್ಯಾನ್ಸರ್ ರೋಗಿಗಳನ್ನು ತಪಾಸಿಸಿದ ತಜ್ಞರಿಗೆ ಇದಕ್ಕೆ ಕಾರಣ ಅವರು ಹಿಂದೆಂದೋ ಸೇವಿಸಿದ್ದ ನಿದ್ದೆಗುಳಿಗೆಗಳು ಎಂಬ ಮಾಹಿತಿ ಲಭ್ಯವಾಗಿದೆ. ನಿದ್ದೆಗುಳಿಗೆಗಳನ್ನು ವೈದ್ಯರು ಶಿಫಾರಸ್ಸು ಮಾಡಿದ ಅವಧಿಗಿಂತಲೂ ಹೆಚ್ಚು ಕಾಲ ಸೇವಿಸಿದವರಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಅತಿ ಹೆಚ್ಚು.

ಸಲಹೆ

ಸಲಹೆ

ಎಂದಿಗೂ ನಿಮ್ಮ ವೈದ್ಯರು ಸೂಚಿಸಿದ ಗುಳಿಗೆಗಳನ್ನು ಅವರು ಸಲಹೆ ನೀಡಿದ ಅವಧಿಗೆ ಮಾತ್ರವೇ ಸೇವಿಸಿ. ಯಾವತ್ತಿಗೂ ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧಿಯನ್ನು ಸೇವಿಸಬೇಡಿ. ಅದರಲ್ಲೂ ನಿದ್ದೆ ಗುಳಿಗೆಗಳಂತೂ ಬೇಡವೇ ಬೇಡ. ನಿಮ್ಮ ಮನೆಯಲ್ಲಿರುವ ನಿದ್ದೆ ಗುಳಿಗೆಗಳನ್ನು ಮಕ್ಕಳ ಕೈಗೆ ಸಿಗದಂತೆ ಜಾಗ್ರತೆ ವಹಿಸಿ. ಈ ಗುಳಿಗೆಗಳ ಮೇಲೆ ನಿದ್ದೆಗುಳಿಗೆ, ಅಪಾಯ ಎಂದು ಸ್ಪಷ್ಟವಾಗಿ ಬರೆದಿಡಿ. ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿದ್ದ ಗುಳಿಗೆಗಳನ್ನು ನಾಶಗೊಳಿಸಿ. ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ನಿದ್ದೆಯ ತೊಂದರೆಯನ್ನು ನೈಸರ್ಗಿಕ ವಿಧಾನಗಳ ಮೂಲಕವೇ ಪರಿಹರಿಸಲು ಪ್ರಯತ್ನಿಸಿ. ಸ್ಥಳದ ಬದಲಾವಣೆ, ಸಂಗೀತ, ಆಹಾರ ಬದಲಾವಣೆ, ಪ್ರಾಣಾಯಾಮ, ತಣ್ಣೀರ ಸ್ನಾನ ಮೊದಲಾದ ವಿಧಾನಗಳನ್ನು ಪ್ರಯತ್ನಿಸಿ.

English summary

Worst Side Effects Of Sleeping Pills

Sleep problems are very common nowadays where the world is busy 24 hours a day. When you do not get the required amount of rest, your body will experience a lot of stress. Many people consider a common solution to this problem which is turning to sleeping pills! Unfortunately, most of the times, you do not realise the side effects of sleeping pills.
X
Desktop Bottom Promotion