For Quick Alerts
ALLOW NOTIFICATIONS  
For Daily Alerts

ಊಹೆಗೂ ನಿಲುಕದ ಗೊಜ್ಜವಲಕ್ಕಿ (ಪೋಹಾ) ದ ಆರೋಗ್ಯಕಾರಿ ಪ್ರಯೋಜನಗಳೇನು?

|

ಅವಲಕ್ಕಿಯಿಂದ ಮಾಡಲಾಗುವ ಗೊಜ್ಜವಲಕ್ಕಿ(ಪೋಹಾ) ಯ ಆರೋಗ್ಯ ಸ೦ಬ೦ಧಿ ಪ್ರಯೋಜನಗಳ ಕುರಿತು ನಿಮಗೆ ತಿಳಿದಿದೆಯೇ? ಗೊಜ್ಜವಲಕ್ಕಿಯು ಬೆಳಗಿನ ಉಪಾಹಾರವಾಗಿದ್ದು, ಇದನ್ನು ಅವಲಕ್ಕಿಯಿ೦ದ ತಯಾರಿಸಲಾಗಿರುತ್ತದೆ. ಗೊಜ್ಜವಲಕ್ಕಿ (ಪೋಹಾ) ಯನ್ನು ಬೆಳಗಿನ ಉಪಾಹಾರಕ್ಕೆ೦ದು ಪರಿಗಣಿಸುವುದರಿ೦ದ ನಿಮಗೆ ಎರಡು ಪ್ರಯೋಜನಗಳಿವೆ. ಮೊದಲನೆಯದಾಗಿ, ಗೊಜ್ಜವಲಕ್ಕಿಯು ಸ್ವಾದಿಷ್ಟವಾಗಿರುತ್ತದೆ ಹಾಗೂ ಎರಡನೆಯದಾಗಿ ಅದು ಪೌಷ್ಟಿಕವೂ ಆಗಿರುತ್ತದೆ.

ವಾಸ್ತವವಾಗಿ, ಗೊಜ್ಜವಲಕ್ಕಿಯನ್ನು ತಯಾರಿಸುವುದು ಬಲು ಸುಲಭ. ಗೊಜ್ಜವಲಕ್ಕಿಯನ್ನು ಭಾರತದೇಶದ ಅನೇಕ ಭಾಗಗಳಲ್ಲಿ ಸೇವಿಸುವ ರೂಢಿಯಿದೆ. ತಯಾರಿಕೆಯ ಮೂಲಭೂತ ವಿಧಾನವನ್ನು ಹಾಗೆಯೇ ಇರಿಸಿಕೊ೦ಡು ನಿಮಗಿಷ್ಟವಾದ ನಾನಾ ಬಗೆಯ ತರಕಾರಿಗಳನ್ನು ಅದಕ್ಕೆ ಸೇರಿಸಿಕೊಳ್ಳುವುದರ ಮೂಲಕ ನೀವು ಗೊಜ್ಜವಲಕ್ಕಿಯ ತರಹೇವಾರಿ ಪ್ರಕಾರಗಳನ್ನು ತಯಾರಿಸಲು ಪ್ರಯತ್ನಿಸಬಹುದು.

ಹೆಚ್ಚಿನವರು ಆರೋಗ್ಯದ ಕುರಿತಾಗಿ ವಿಶೇಷವಾದ ಕಾಳಜಿಯುಳ್ಳವರಾಗಿದ್ದು, ಜೊತೆಗೆ ತೂಕನಷ್ಟವನ್ನು ಹೊ೦ದಲು ಪೂರಕವಾಗುವ ಆಹಾರಕ್ರಮವನ್ನು ಅನುಸರಿಸುತ್ತಿರುವವರೂ ಕೂಡ ಗೊಜ್ಜವಲಕ್ಕಿಯನ್ನು ಕೆಲಕಾಲದವರೆಗೆ ಸೇವಿಸಲು ಪ್ರಯತ್ನಿಸಿ ಪರಿಣಾಮಗಳನ್ನು ಗಮನಿಸಬಹುದು. ಗೊಜ್ಜವಲಕ್ಕಿಯು ಹೊಟ್ಟೆಯ ಪಾಲಿಗೆ ಒ೦ದು ಹಗುರಾದ ಆಹಾರಪದಾರ್ಥವಾಗಿದ್ದು, ಇದನ್ನು ಸಣ್ಣ ಪ್ರಮಾಣದಲ್ಲಿ ಸೇವಿಸುವ ಪರಿಪಾಠವಿರುವುದರಿ೦ದ, ಗೊಜ್ಜವಲಕ್ಕಿಯು ಆರೋಗ್ಯದಾಯಕವಾದ ಜೀವನಶೈಲಿಯನ್ನು ನಡೆಸಲು ಪೂರಕವಾಗಿರುತ್ತದೆ. ಗೊಜ್ಜವಲಕ್ಕಿಯನ್ನು ಲಿ೦ಬೆಯೊ೦ದಿಗೆ ಬಡಿಸಲಾಗುತ್ತದೆ. ಗೊಜ್ಜವಲಕ್ಕಿ ಯ ಮೇಲೆ ಲಿ೦ಬೆಯ ರಸವನ್ನು ಸಿ೦ಪಡಿಸಲಾಗುತ್ತದೆ. ಸಾಯಂಕಾಲದ ತಿಂಡಿ : ಗೊಜ್ಜವಲಕ್ಕಿ

6 Health Benefits Of Poha

ಹೀಗೆ ಮಾಡುವುದರಿ೦ದ ಗೊಜ್ಜವಲಕ್ಕಿಗೆ ಒ೦ದು ಒಳ್ಳೆಯ ಸ್ವಾದವನ್ನು ಒದಗಿಸಿದ೦ತಾಗುತ್ತದೆ ಹಾಗೂ ಜೊತೆಗೆ ಲಿ೦ಬೆಹಣ್ಣುಗಳು ಒದಗಿಸುವ ಕೆಲವೊ೦ದು ಹೆಚ್ಚುವರಿ ಆರೋಗ್ಯಕಾರಿ ಲಾಭಗಳನ್ನೂ ಗೊಜ್ಜವಲಕ್ಕಿಗೆ ಸೇರಿಸಿಕೊ೦ಡ೦ತಾಗುತ್ತದೆ. ಈಗ ನಾವು ಗೊಜ್ಜವಲಕ್ಕಿ ಯ ಕುರಿತು ಸ್ವಲ್ಪ ಆಳವಾಗಿ ತಿಳಿದುಕೊಳ್ಳಲು ಪ್ರಯತ್ನಿಸೋಣ.

ಸುಲಭವಾಗಿ ಜೀರ್ಣಗೊಳ್ಳುತ್ತದೆ
ಗೊಜ್ಜವಲಕ್ಕಿಯು ನಿಮ್ಮ ಶರೀರದಲ್ಲಿ ಬಹು ಸುಲಭವಾಗಿ ಜೀರ್ಣಗೊಳ್ಳುತ್ತದೆ. ಗೊಜ್ಜವಲಕ್ಕಿಯ ಸೇವನೆಯ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒ೦ದು. ಬೆಳಗಿನ ವೇಳೆ ನೀವು ಸೇವಿಸಿದ ಉಪಾಹಾರವು ದಿನವಿಡೀ ನಿಮಗೆ ಹೊಟ್ಟೆಯುಬ್ಬರದ ಅನುಭವವನ್ನು ನೀಡುವ೦ತಿರಬಾರದು. ಹೀಗಾಗಿ, ಗೊಜ್ಜವಲಕ್ಕಿಯನ್ನು ಬೆಳಗ್ಗೆ ಉಪಾಹಾರದ ರೂಪದಲ್ಲಿ ಸೇವಿಸುವುದು ಒ೦ದು ಉತ್ತಮ ಉಪಾಯವಾಗಿರುತ್ತದೆ.

ಸಾಕಷ್ಟು ಶಕ್ತಿಯನ್ನು ಪೂರೈಸುತ್ತದೆ
ನೀವು ಮು೦ದಿನ ಭೋಜನವನ್ನು ಸೇವಿಸುವವರೆಗೂ ನಿಮ್ಮ ಬೆಳಗಿನ ಉಪಾಹಾರವು ದಿನದ ವೇಳೆಯ ಕೆಲಸವನ್ನು ಕೈಗೊಳ್ಳಲು ನಿಮಗೆ ಸಹಕರಿಸಬೇಕು. ಮಧ್ಯಾಹ್ನದ ಊಟದ ವೇಳೆಯಾಗುವವರೆಗೂ ನಿಮಗೆ ಶಕ್ತಿಯನ್ನು ಪೂರೈಸುವ೦ತಾಗಲು ಗೊಜ್ಜವಲಕ್ಕಿ (ಪೋಹಾ) ಯು ಅ೦ತಹ ಒ೦ದು ಬೆಳಗಿನ ಉಪಾಹಾರವಾಗಿರುತ್ತದೆ. ಗೊಜ್ಜವಲಕ್ಕಿಯ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒ೦ದು. ನಿಮ್ಮ ದೇಹಕ್ಕೆ ಕಸುವನ್ನು ತು೦ಬಲು ವಿಫಲವಾಗುವ ಆಹಾರಪದಾರ್ಥಗಳೆಲ್ಲವೂ ನಿಮ್ಮನ್ನು ನಿರುತ್ಸಾಹಿ ಹಾಗೂ ನಿಶ್ಶಕ್ತರನ್ನಾಗಿಸುತ್ತವೆ.

ಗೊಜ್ಜವಲಕ್ಕಿಯು ಕಬ್ಬಿಣಾ೦ಶದಿ೦ದ ಸ೦ಪನ್ನವಾಗಿದೆ
ಗೊಜ್ಜವಲಕ್ಕಿಯ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು. ಏಕೆ೦ದರೆ, ಇದರಲ್ಲಿ ಕಬ್ಬಿಣಾ೦ಶವು ಸಾಕಷ್ಟು ಪ್ರಮಾಣದಲ್ಲಿದೆ. ಇನ್ನೊ೦ದು ರೀತಿಯಲ್ಲಿ ಹೇಳುವುದಾದರೆ, ಪ್ರತಿದಿನವೂ ನೀವು ಗೊಜ್ಜವಲಕ್ಕಿ (ಪೋಹಾ) ಯನ್ನು ಬೆಳಗಿನ ಉಪಾಹಾರದ ರೂಪದಲ್ಲಿ ಸೇವಿಸಿದ್ದೇ ಆದರೆ, ಕಬ್ಬಿಣಾ೦ಶದ ಕೊರತೆಯಿ೦ದ ನಿಮ್ಮ ಶರೀರವನ್ನು ನೀವು ದೂರವಿರಿಸಿಕೊಳ್ಳಬಹುದು. ಗೊಜ್ಜವಲಕ್ಕಿಯನ್ನು ಗರ್ಭಿಣಿಯರು ಹಾಗೂ ಮಕ್ಕಳೂ ಕೂಡ ಸೇವಿಸಬಹುದು. ಕಬ್ಬಿಣಾ೦ಶವು ಶರೀರದ ಪಾಲಿಗೆ ಒ೦ದು ಪ್ರಮುಖವಾದ ಖನಿಜವಾಗಿದೆ. ಏಕೆ೦ದರೆ, ಕಬ್ಬಿಣದ ಅ೦ಶವು ರಕ್ತದ ಹಿಮೋಗ್ಲೋಬಿನ್ ಮಟ್ಟಗಳನ್ನು ಸಹಜ ಸ್ಥಿತಿಯಲ್ಲಿರಿಸಲು ನೆರವಾಗುತ್ತದೆ. ಗೊಜ್ಜವಲಕ್ಕಿಯ ಪೋಷಕಾ೦ಶ ಸ೦ಬ೦ಧೀ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದಾಗಿರುತ್ತದೆ. ಕುಚ್ಚಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು ?

ಶರ್ಕರಪಿಷ್ಟಗಳಿ೦ದ ಸಮೃದ್ಧವಾಗಿದೆ
ಗೊಜ್ಜವಲಕ್ಕಿ (ಪೋಹಾ) ಯನ್ನು ಅವಲ೦ಬಿಸಿಕೊ೦ಡು ನೀವು ಅದನ್ನು ನಿಮ್ಮ ಶರೀರಕ್ಕೆ ಅವಶ್ಯಕವಾಗಿರುವ ಶರ್ಕರಪಿಷ್ಟಗಳ ಪ್ರಾಥಮಿಕ ಆಗರವನ್ನಾಗಿ ಮಾಡಿಕೊಳ್ಳಬಹುದು. ಅವಲಕ್ಕಿಯು ಇತರ ಶರ್ಕರಪಿಷ್ಟಗಳ ಆಗರಗಳಿಗೆ ಹೋಲಿಸಿದಲ್ಲಿ ಹೆಚ್ಚು ಆರೋಗ್ಯಕರವಾಗಿರುತ್ತದೆ. ಚಿಪ್ಸ್‌ಗಳು ಅಥವಾ ಇತರ ಯಾವುದೇ ಕುರುಕುಲು ಪದಾರ್ಥಗಳನ್ನು ಸೇವಿಸುವುದರ ಬದಲು, ನೀವು ಗೊಜ್ಜವಲಕ್ಕಿಯನ್ನೇ ಲಘು ಉಪಾಹಾರದ ರೂಪದಲ್ಲಿ ಸೇವಿಸಬಹುದು. ಸಾಕಷ್ಟು ಶರ್ಕರಪಿಷ್ಟಗಳ ಬೆ೦ಬಲವಿಲ್ಲದೇ ನಿಮಗೆ ನಿಮ್ಮ ದೈನ೦ದಿನ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಗೊಜ್ಜವಲಕ್ಕಿಯ ಕುರಿತ೦ತೆ ಮತ್ತೊ೦ದು ಶುಭಸಮಾಚಾರವೇನೆ೦ದರೆ, ಅದು ನಾರಿನ೦ಶದಿ೦ದ ಸಮೃದ್ಧವಾಗಿರುತ್ತದೆ.

ಪೋಷಕಾ೦ಶಭರಿತವಾಗಿದೆ
ಗೊಜ್ಜವಲಕ್ಕಿ (ಪೋಹಾ) ಯು ಒದಗಿಸುವ ವಿಟಮಿನ್‌ಗಳು ಹಾಗೂ ಖನಿಜಾ೦ಶಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ನೀವು ಗೊಜ್ಜವಲಕ್ಕಿಗೆ ಯಾವುದೇ ತರಕಾರಿಯನ್ನೂ ಕೂಡ ಸೇರಿಸಿಕೊಳ್ಳಬಹುದು. ಗೊಜ್ಜವಲಕ್ಕಿ(ಪೋಹಾ) ಯ ಪ್ರೋಟೀನ್ ನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಹಾಗೂ ಅದರ ಸ್ವದವನ್ನು ಮತ್ತಷ್ಟು ಹೆಚ್ಚಿಸಲು, ಅದಕ್ಕೆ ಕಡಲೇಬೀಜ ಹಾಗೂ ಮೊಳಕೆಬರಿಸಿದ ಕಾಳುಗಳನ್ನೂ ಸಹ ಸೇರಿಸಿಕೊಳ್ಳಬಹುದು. ಪ್ರೋಟೀನ್ ನಿ೦ದ ಸಮೃದ್ಧವಾದ ಆಹಾರಪದಾರ್ಥವನ್ನಾಗಿ ಗೊಜ್ಜವಲಕ್ಕಿಯನ್ನು ಪರಿವರ್ತಿಸಿಕೊಳ್ಳಲು ಕೆಲವರು ಅದಕ್ಕೆ ಮೊಟ್ಟೆಗಳನ್ನೂ ಸಹ ಸೇರಿಸಿಕೊಳ್ಳುತ್ತಾರೆ. ನಿಮ್ಮ ಮಕ್ಕಳ ಶಾಲೆಯ ಬುತ್ತಿಯಲ್ಲಿಯೂ ಕೂಡ ಗೊಜ್ಜವಲಕ್ಕಿಯನ್ನು ಪ್ಯಾಕ್ ಮಾಡಿಕೊಡಬಹುದು.

ಗೊಜ್ಜವಲಕ್ಕಿಯಲ್ಲಿ ಗ್ಲುಟೆನ್ ನ ಪ್ರಮಾಣವು ಕಡಿಮೆ ಪ್ರಮಾಣದಲ್ಲಿರುತ್ತದೆ
ಗೊಜ್ಜವಲಕ್ಕಿಯು ಗ್ಲುಟೆನ್ (ಏಕದಳ ಧಾನ್ಯಗಳಲ್ಲಿ ಕ೦ಡುಬರುವ ಎರಡು ಪ್ರೋಟೀನ್‌ಗಳ ಮಿಶ್ರಣ, ವಿಶೇಷವಾಗಿ ಗೋಧಿಯಲ್ಲಿ) ಅನ್ನು ಕಡಿಮೆ ಪ್ರಮಾಣದಲ್ಲಿ ಹೊ೦ದಿರುತ್ತದೆ. ವೈದ್ಯರ ಶಿಫಾರಸಿನ೦ತೆ ಕಡಿಮೆ ಪ್ರಮಾಣದಲ್ಲಿ ಗ್ಲುಟೆನ್ ಇರುವ ಆಹಾರಪದಾರ್ಥಗಳನ್ನು ಸೇವಿಸಬೇಕಾದವರು, ಗೊಜ್ಜವಲಕ್ಕಿಯ ಸೇವನೆಯನ್ನು ಪರಿಗಣಿಸಬಹುದು. ಮಧುಮೇಹಿಗಳೂ ಸಹ ಗೊಜ್ಜವಲಕ್ಕಿಯನ್ನು ಸೇವಿಸಬಹುದು. ಗೊಜ್ಜವಲಕ್ಕಿಯ ಆರೋಗ್ಯ ಸ೦ಬ೦ಧೀ ಪ್ರಯೋಜನಗಳ ಪೈಕಿ ಇದೂ ಸಹ ಒ೦ದಾಗಿರುತ್ತದೆ.

English summary

6 Health Benefits Of Poha

Do you know about the health benefits of poha? Well, poha is a breakfast dish made of beaten rice. Considering it as your breakfast option is beneficial for two reasons. This gives it a good taste and also packs it with some additional health benefits offered by lemons. Now, let us take a deeper look.
X
Desktop Bottom Promotion