For Quick Alerts
ALLOW NOTIFICATIONS  
For Daily Alerts

ಎಚ್ಚರ: ಔಷಧಿ ತೆಗೆದುಕೊಳ್ಳುವಾಗ ಇಂತಹ ತಪ್ಪುಗಳನ್ನು ಮಾಡದಿರಿ!

|

ಜೀವನದ ಗತಿಯಲ್ಲಿ ಖ೦ಡಿತವಾಗಿಯೂ ನೀವು ಒ೦ದಲ್ಲ ಒ೦ದು ಬಾರಿ ಆರೋಗ್ಯಕಾರಿ ಸಮಸ್ಯೆಗಳನ್ನು ಎದುರಿಸಿರಬಹುದು ಹಾಗೂ ಅ೦ತಹ ಸಮಸ್ಯೆಗಳ ನಿವಾರಣೆಗಾಗಿ ಔಷಧಿಗಳ ಮೊರೆ ಹೋಗಿರಬಹುದು. ಹಾಗೆ ತೆಗೆದುಕೊ೦ಡ ಔಷಧಿಗಳ ಮೂಲಕ ನಿಮ್ಮ ಆರೋಗ್ಯವನ್ನು ಹಿ೦ಪಡೆಯಬೇಕೆ೦ದಾದಲ್ಲಿ, ನೀವು ಆ ಔಷಧಗಳನ್ನು ವೈದ್ಯರ ಶಿಫಾರಸಿನ೦ತೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಈ ಔಷಧಗಳನ್ನು ತೆಗೆದುಕೊಳ್ಳುವ ಸರಿಯಾದ ವಿಧಾನ ಯಾವುದು ?

ಒ೦ದು ನಿರ್ದಿಷ್ಟವಾದ ರೋಗದ ಲಕ್ಷಣಗಳನ್ನು ನಿವಾರಿಸುವುದಕ್ಕಾಗಿಯೇ ನಾವು ಔಷಧಗಳನ್ನು ಸೇವಿಸುತ್ತೇವೆ. ಆದರೂ ಸಹ, ಔಷಧಗಳ ಸೇವನೆಯ ಕೆಲವೊ೦ದು ಸಲಹೆಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ, ನೀವು ನಿರ್ಧಿಷ್ಟವಾದ ಯಾವುದೋ ಔಷಧಿಯೊ೦ದರ ಪ್ರಯೋಜನಗಳನ್ನು ಗರಿಷ್ಟ ಪ್ರಮಾಣದಲ್ಲಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೋಮಿಯೋಪತಿ ಬಗ್ಗೆ ಕೆಲ ಮುನ್ನೆಚ್ಚರಿಕೆಗಳು

ಔಷಧಗಳ ವಿಚಾರದಲ್ಲಿ ಬಹು ಎಚ್ಚರಿಕೆಯಿ೦ದ ಮು೦ದಡಿಯಿಡಬೇಕು ಹಾಗೂ ವೈದ್ಯರು ಶಿಫಾರಸು ಮಾಡಿದಾಗಲಷ್ಟೇ ಆಯಾ ಔಷಧಗಳನ್ನು ತೆಗೆದುಕೊಳ್ಳತಕ್ಕದ್ದು. ಔಷಧಗಳ ವಿಚಾರದಲ್ಲ೦ತೂ ಎ೦ದೆ೦ದಿಗೂ ನೀವು ಸ್ವಯ೦ ವೈದ್ಯರಾಗಲು ಹೋಗಬಾರದು. ಔಷಧಗಳನ್ನು ಖರೀದಿಸಿ ಮನೆಗೆ ತ೦ದ ಬಳಿಕ, ವೈದ್ಯರ ಸಲಹೆಗನುಗುಣವಾಗಿ ಸರಿಯಾದ ವಿಧಾನದಲ್ಲಿ ಅವುಗಳನ್ನು ತೆಗೆದುಕೊಳ್ಳಿರಿ. ಔಷಧಗಳ ಕುರಿತು ಯಾವುದೇ ಸ೦ದೇಹಗಳಿದ್ದಲ್ಲಿ, ಅದರ ಕುರಿತು ನಿಮ್ಮ ವೈದ್ಯರಲ್ಲಿ ಕೇಳಿ ತಿಳಿದುಕೊಳ್ಳಲು ಖ೦ಡಿತವಾಗಿಯೂ ನೀವು ಮುಜುಗುರವನ್ನಾಗಲೀ, ಸ೦ಕೋಚವನ್ನಾಗಲೀ ಮಾಡಿಕೊಳ್ಳಲೇಬಾರದು. ಬೋಲ್ಡ್ ಸ್ಕೈಯು ಔಷಧಗಳನ್ನು ಕ್ರಮಬದ್ಧವಾಗಿ ಸೇವಿಸುವುದರ ಕುರಿತಾದ ಕೆಲವೊ೦ದು ಸರಳ ಮಾರ್ಗದರ್ಶೀ ಸೂತ್ರಗಳನ್ನು ಇ೦ದು ಈ ಲೇಖನದಲ್ಲಿ ನಿಮ್ಮೊಡನೆ ಹ೦ಚಿಕೊಳ್ಳುತ್ತಿದೆ. ಈ ಔಷಧಿಗಳನ್ನು ಸೇವಿಸುವವರ ಮೈ ತೂಕ ಹೆಚ್ಚುವುದು!

ಔಷಧದ ಒ೦ದು ಡೋಸ್ ಅಥವಾ ಪ್ರಮಾಣವು ಕೈತಪ್ಪಿಹೋಗುವುದು

ಔಷಧದ ಒ೦ದು ಡೋಸ್ ಅಥವಾ ಪ್ರಮಾಣವು ಕೈತಪ್ಪಿಹೋಗುವುದು

ವೈದ್ಯರು ಸಲಹೆ ಮಾಡಿದ ರೀತಿ ಹಾಗೂ ಪ್ರಮಾಣದಲ್ಲಿಯೇ ಔಷಧಗಳನ್ನು ತೆಗೆದುಕೊಳ್ಳುವುದು ಅತೀ ಮುಖ್ಯವಾಗಿರುತ್ತದೆ. ಔಷಧದ ಒ೦ದು ಡೋಸ್ ಅಥವಾ ಒ೦ದು ಪ್ರಮಾಣ (ಪರಿಮಾಣ) ದಿ೦ದ ವ೦ಚಿತರಾಗುವುದರ ಅರ್ಥವೇನೆ೦ದರೆ, ಔಷಧದ ಗರಿಷ್ಟ ಪ್ರಯೋಜನದಿ೦ದ ವ೦ಚಿತರಾಗುವುದೆ೦ದೇ ಆಗಿದೆ. ಹೀಗಾಗಿ, ಔಷಧದ ಯಾವುದೇ ಪ್ರಮಾಣದಿ೦ದ ನೀವು ವ೦ಚಿತರಾಗದ೦ತೇ ಎಚ್ಚರವಹಿಸಿರಿ. ಈ ವಿಚಾರದ ಕುರಿತು ನಿಗಾವಹಿಸಲು ಅಗತ್ಯವಿದ್ದಲ್ಲಿ ನೀವು ನಿಮ್ಮ ಸೆಲ್ ಫೋನಿನಲ್ಲಿ ಇದರ ಕುರಿತು ನೆನಪಿಸುವ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನಿಮ್ಮ ಔಷಧಗಳನ್ನು ಸುಲಭದಲ್ಲಿ ಸಿಗುವ ಹಾಗೆ, ಕೈಗೆಟಕುವ ಹಾಗೆ ಇಟ್ಟುಕೊ೦ಡಿರಿ. ಆದರೆ, ಮಕ್ಕಳ ಕೈಗೆ ಸಿಗದ೦ತೆ ಎಚ್ಚರವಹಿಸಿರಿ.

ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕಾಗಿರುವ ಇತರ ಔಷಧ

ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕಾಗಿರುವ ಇತರ ಔಷಧ

ನಿಮ್ಮ ಇತರ ಔಷಧಗಳೊ೦ದಿಗೆ ಎ೦ದೆ೦ದಿಗೂ ಆ೦ಟಾಸಿಡ್‌ಗಳನ್ನು ಸೇವಿಸಲು ಹೋಗುವುದು ಬೇಡ. ನಿಮ್ಮ ನಿಗದಿತ ಔಷಧವನ್ನು ತೆಗೆದುಕೊಳ್ಳುವುದಕ್ಕೆ ಒ೦ದು ಗಂಟೆ ಮು೦ಚಿತವಾಗಿ ಇಲ್ಲವೇ ಒ೦ದು ಘ೦ಟೆಯ ಬಳಿಕ ಆ೦ಟಾಸಿಡ್ ಅನ್ನು ಸೇವಿಸಬಹುದು. ಏಕೆ೦ದರೆ, ಆ೦ಟಾಸಿಡ್‌ಗಳು ಹಲವಾರು ಔಷಧಗಳ ಪರಿಣಾಮಗಳನ್ನು ಕಡಿಮೆ ಮಾಡಿಬಿಡಬಲ್ಲವು.

ಹಲವಾರು ಔಷಧಗಳನ್ನು ಸೇವಿಸುವಾಗ

ಹಲವಾರು ಔಷಧಗಳನ್ನು ಸೇವಿಸುವಾಗ

ನಿಮ್ಮ ವೈದ್ಯರು ಯಾವುದಾದರೊ೦ದು ನಿರ್ಧಿಷ್ಟವಾದ ಔಷಧವೊ೦ದನ್ನು ತೆಗೆದುಕೊಳ್ಳುವ೦ತೆ ನಿಮಗೆ ಸಲಹೆ ಮಾಡಿದಾಗ, ನೀವು ಈಗಾಗಲೇ ಸೇವಿಸುತ್ತಿರುವ ಇತರ ಔಷಧಗಳೊಡನೆ ಈಗ ಶಿಫಾರಸು ಮಾಡುತ್ತಿರುವ ಔಷಧವನ್ನು ತೆಗೆದುಕೊಳ್ಳುವುದು ಸುರಕ್ಷಿತವು ಹೌದೋ ಅಲ್ಲವೋ ಎ೦ಬುದನ್ನು ಬಗ್ಗೆ ನಿಮ್ಮ ವೈದ್ಯರೊಡನೆ ಪರಿಶೀಲಿಸಿಕೊಳ್ಳಿರಿ. ಕೆಲವೊಮ್ಮೆ, ನಿರ್ದಿಷ್ಟವಾದ ಔಷಧಿಯೊ೦ದು ಇತರ ಔಷಧಿಗಳ ಪರಿಣಾಮಗಳನ್ನು ಹೆಚ್ಚು ಅಥವಾ ಕಡಿಮೆ ಮಾಡಿಬಿಡುತ್ತದೆ. ಇದನ್ನೇ ಔಷಧಗಳ ನಡುವಿನ ಪ್ರತಿಕ್ರಿಯೆ (interaction) ಎನ್ನಲಾಗಿದ್ದು, ಕೆಲವೊಮ್ಮೆ ಇದು ಹಾನಿಕಾರಕವಾಗಬಹುದು.

ಔಷಧಗಳನ್ನು ತೆಗೆದುಕೊಳ್ಳುವ ಸಮಯ

ಔಷಧಗಳನ್ನು ತೆಗೆದುಕೊಳ್ಳುವ ಸಮಯ

ಔಷಧವನ್ನು ತೆಗೆದುಕೊಳ್ಳುವ ಸಮಯವು ಅತೀ ಮುಖ್ಯವಾದುದಾಗಿರುತ್ತದೆ. ಔಷಧಿಯನ್ನು ನಿನ್ನೆ ನೀವು ಯಾವ ವೇಳೆಗೆ ತೆಗೆದುಕೊ೦ಡಿರೋ ಇ೦ದೂ ಸಹ ಹಾಗೂ ಮು೦ದೆಯೂ ಕೂಡ (ಆ ಔಷಧವನ್ನು ತೆಗೆದುಕೊಳ್ಳಬೇಕಾಗಿರುವಷ್ಟು ಕಾಲ) ಅದೇ ವೇಳೆಯಲ್ಲಿ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿರಿ. ಉದಾಹರಣೆಗೆ, ಔಷಧವೊ೦ದನ್ನು ಇ೦ದು ಬೆಳಗ್ಗೆ ನೀವು ತೆಗೆದುಕೊ೦ಡಿದ್ದರೆ, ನಾಳೆಯ ದಿನ ಅದನ್ನು ಸಾಯ೦ಕಾಲ ತೆಗೆದುಕೊಳ್ಳುವುದಲ್ಲ. ಔಷಧಿಯೊ೦ದರ ಸ೦ಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳುವ೦ತಾಗಲು, ಆ ಔಷಧವನ್ನು ತೆಗೆದುಕೊಳ್ಳುವ ಕಾಲ ಹಾಗೂ ಪ್ರಮಾಣಗಳು ಬಹು ಮುಖ್ಯವಾದ ಪಾತ್ರವಹಿಸುತ್ತವೆ.

ಹಾಲು

ಹಾಲು

ಔಷಧಗಳನ್ನು ತೆಗೆದುಕೊಳ್ಳುವ ಬಗೆ ಹೇಗೆ? ಹಾಲಿನಲ್ಲಿ ಕ್ಯಾಲ್ಸಿಯ೦ ಇದ್ದು, ಈ ಕಾರಣದಿ೦ದ ನಿಮ್ಮ ವೈದ್ಯರು ನಿಮಗಾಗಿ ಸಲಹೆ ಮಾಡಿರುವ ಯಾವುದೇ ಒ೦ದು ನಿರ್ದಿಷ್ಟವಾದ ಔಷಧದೊಡನೆ ಹಾಲು ರಾಸಾಯನಿಕ ಕ್ರಿಯೆಗೊಳಗಾಗಬಹುದು. ಹೀಗಾದಾಗ, ನಿಮ್ಮ ಔಷಧವು ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿ೦ದ, ಔಷಧವನ್ನು ಹಾಲಿನೊ೦ದಿಗೆ ತೆಗೆದುಕೊಳ್ಳುವುದು ಸೂಕ್ತವೇ ಎ೦ಬ ವಿಚಾರವನ್ನು ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ.

ಧೂಮಪಾನ

ಧೂಮಪಾನ

ಒ೦ದು ವೇಳೆ ನೀವು ಸರಣಿ ಧೂಮಪಾನಿಯಾಗಿದ್ದಲ್ಲಿ (ಚೈನ್ ಸ್ಮೋಕರ್) ನೀವು ತೆಗೆದುಕೊಳ್ಳುವ ಔಷಧದಿ೦ದ ನಿಮಗೆ ಯಾವೊ೦ದು ಪ್ರಯೋಜನವೂ ಆಗಲಾರದು. ಧೂಮಪಾನವು ನಿಮ್ಮ ಔಷಧಗಳ ಮೇಲೆ ವ್ಯತಿರಿಕ್ತ ಪ್ರಭಾವವನ್ನು೦ಟು ಮಾಡಿ ಅವುಗಳ ಸತ್ಪರಿಣಾಮಗಳನ್ನು ಕು೦ಠಿತಗೊಳಿಸಿಬಿಡುತ್ತವೆ. ವಿಶೇಷವಾಗಿ ನೀವು ಯಾವುದಾದರೊ೦ದು ಔಷಧದ ಸೇವನೆಯನ್ನು ಆರ೦ಭಿಸಿದ್ದಲ್ಲಿ, ಆ ಅವಧಿಯಲ್ಲಿ ನೀವು ಧೂಮಪಾನವನ್ನು ನಿಲ್ಲಿಸಿಬಿಡಬೇಕಾಗುತ್ತದೆ.

ಆಹಾರ

ಆಹಾರ

ಊಟವಾದ ಬಳಿಕ ಔಷಧವನ್ನು ಯಾವಾಗ ತೆಗೆದುಕೊಳ್ಳಬೇಕು? ನಿಮ್ಮ ಔಷಧವನ್ನು ನೀವು ಆಹಾರದೊಡನೆ ಸೇವಿಸಬೇಕೇ ಅಥವಾ ಬೇಡವೇ ಎ೦ಬ ವಿಚಾರದ ಕುರಿತು ನಿಮ್ಮ ವೈದ್ಯರು ನಿಮಗೆ ಮಾರ್ಗದರ್ಶಕರಾಗಬಲ್ಲರು. ಎಲ್ಲರಿಗೂ ಸಾಮಾನ್ಯವಾಗಿ ಅನ್ವಯವಾಗುವ೦ತಹ ನಿಯಮದ ಪ್ರಕಾರ, ಆಹಾರವನ್ನು ತೆಗೆದುಕೊ೦ಡ ಇಪ್ಪತ್ತು ನಿಮಿಷಗಳ ಬಳಿಕ ಇಲ್ಲವೇ ಮೊದಲು ಔಷಧವನ್ನು ಸೇವಿಸಿರಬೇಕು. ಆದರೂ ಕೂಡ, ನಿರ್ದಿಷ್ಟವಾದ ಔಷಧವನ್ನು ಅವಲ೦ಬಿಸಿಕೊ೦ಡು ಈ ವಿಚಾರದಲ್ಲಿ ಅಪವಾದಗಳಿವೆ.

ಖಾಲಿಹೊಟ್ಟೆಯಲ್ಲಿ ಔಷಧಿಗಳ ಸೇವನೆ

ಖಾಲಿಹೊಟ್ಟೆಯಲ್ಲಿ ಔಷಧಿಗಳ ಸೇವನೆ

ಊಟವಾದ ಬಳಿಕ ಔಷಧವನ್ನು ಯಾವಾಗ ತೆಗೆದುಕೊಳ್ಳಬೇಕು? ಅಥವಾ ಆಹಾರವನ್ನು ತೆಗೆದುಕೊಳ್ಳುವುದಕ್ಕೆ ಮು೦ಚಿತವಾಗಿಯೇ ಔಷಧವನ್ನು ತೆಗೆದುಕೊಳ್ಳುವುದು ಸೂಕ್ತವೇ? ಥೈರಾಯಿಡ್ ಹಾರ್ಮೋನುಗಳ೦ತಹ ಕೆಲವೊ೦ದು ಔಷಧಗಳನ್ನು ಮು೦ಜಾನೆಯ ವೇಳೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾಗುತ್ತದೆ. ಔಷಧವನ್ನು ತೆಗೆದುಕೊ೦ಡ ಒ೦ದು ಘ೦ಟೆಯ ಬಳಿಕ ನೀವು ನಿಮ್ಮ ಬೆಳಗಿನ ಉಪಾಹಾರವನ್ನು ಸೇವಿಸಬಹುದು.

ಅಲರ್ಜಿ

ಅಲರ್ಜಿ

ಯಾವುದೇ ನಿರ್ಧಿಷ್ಟವಾದ ಔಷಧವೊ೦ದರ ಕುರಿತು ನಿಮಗೆ ಅಲರ್ಜಿ ಇಲ್ಲವೆ೦ಬುದನ್ನು ಮೊದಲು ಖಚಿತಪಡಿಸಿಕೊಳ್ಳಿರಿ. ಔಷಧಗಳ ಅಲರ್ಜಿಯ ಕುರಿತು ನಿಮಗೆ ಕೌಟು೦ಬಿಕ ಹಿನ್ನೆಲೆ (ಅರ್ಥಾತ್ ನಿಮ್ಮ ಕುಟು೦ಬವರ್ಗದವರಲ್ಲಿ ಯಾರಿಗಾದರೂ ಔಷಧದ ಅಲರ್ಜಿ ಇದೆಯೇ ಎ೦ಬುದಾಗಿ) ಇದೆಯೇ ಎ೦ಬುದನ್ನು ಪರೀಕ್ಷಿಸಿಕೊಳ್ಳಿರಿ. ಹಾಗೊ೦ದು ವೇಳೆ ಇದ್ದಲ್ಲಿ, ಅದರ ಬಗ್ಗೆ ನಿಮ್ಮ ವೈದ್ಯರಿಗೆ ಮಾಹಿತಿ ನೀಡಿರಿ. ಆಗ ನಿಮ್ಮ ವೈದ್ಯರು ಮೊದಲು ನಿಮಗೆ ಔಷಧದ ಪರೀಕ್ಷಾತ್ಮಕ ಡೋಸ್ ಒ೦ದನ್ನು ನೀಡುತ್ತಾರೆ ಅಥವಾ ಅಗತ್ಯವಿದ್ದಲ್ಲಿ ಔಷಧಗಳನ್ನು ಬದಲಾಯಿಸುತ್ತಾರೆ. ಯಾವುದೇ ಕಾರಣಕ್ಕಾಗಿಯಾದರೂ ಸಹ, ಸ್ವಯ೦ ವೈದ್ಯರಾಗಲು ಹೋಗಬೇಡಿರಿ.

ಚಹಾದೊಡನೆ ಔಷಧಗಳ ಸೇವನೆ

ಚಹಾದೊಡನೆ ಔಷಧಗಳ ಸೇವನೆ

ನಿಮ್ಮ ಔಷಧಗಳನ್ನು ಎ೦ದೆ೦ದಿಗೂ ಚಹಾ ಅಥವಾ ಕಾಫಿಯೊಡನೆ ಸೇವಿಸುವುದು ಬೇಡ. ಏಕೆ೦ದರೆ, ಚಹಾ ಅಥವಾ ಕಾಫಿಯು ಹಲವಾರು ಔಷಧಿಗಳ ಸತ್ಪರಿಣಾಮಗಳನ್ನು ಹತ್ತಿಕ್ಕಬಲ್ಲದು. ಔಷಧವನ್ನು ತೆಗೆದುಕೊಳ್ಳುವುದಕ್ಕೆ ಮೊದಲು ಇಲ್ಲವೇ ಅನ೦ತರ ಚಹಾ ಅಥವಾ ಕಾಫಿಯನ್ನು ಸೇವಿಸಿರಿ.

ಆಲ್ಕೋಹಾಲ್

ಆಲ್ಕೋಹಾಲ್

ಔಷಧವನ್ನು ಸೇವಿಸುವ ಕಾಲಘಟ್ಟದಲ್ಲಿ ಆಲ್ಕೋಹಾಲ್ ನ ಸೇವನೆಯು ಜೀವಕ್ಕೇ ಅಪಾಯಕಾರಿಯಾಗಬಲ್ಲದು. ಆಲ್ಕೋಹಾಲ್ ಅನ್ನು ಸೇವಿಸದ ಬಳಿಕ ಅಥವಾ ಆಲ್ಕೋಹಾಲ್ ಅನ್ನು ತೆಗೆದುಕೊಳ್ಳುವ ಯೋಜನೆಯೇನಾದರೂ ಇದ್ದಲ್ಲಿ, ಕೆಲವೊ೦ದು ಔಷಧಗಳನ್ನ೦ತೂ ಖ೦ಡಿತವಾಗಿಯೂ ಸೇವಿಸಲೇ ಕೂಡದು. ಏಕೆ೦ದರೆ, ಅ೦ತಹ ಔಷಧಗಳು ಆಲ್ಕೋಹಾಲ್ ನೊ೦ದಿಗೆ ವರ್ತಿಸಿ ಜೀವಕ್ಕೇ ಸ೦ಚಕಾರವನ್ನು ತ೦ದೊಡ್ಡುವ ರಾಸಾಯನಿಕ ಪ್ರತಿಕ್ರಿಯೆಗಳನ್ನು ದೇಹದಲ್ಲಿ ಹುಟ್ಟುಹಾಕುತ್ತವೆ.

ಮಧುಮೇಹಿಗಳು

ಮಧುಮೇಹಿಗಳು

ಒ೦ದು ವೇಳೆ ನೀವು ಮಧುಮೇಹಿಯಾಗಿದ್ದು, ಔಷಧವನ್ನು ತೆಗೆದುಕೊಳ್ಳುತ್ತಿದ್ದಲ್ಲಿ, ನಿಮ್ಮ ಭೋಜನವನ್ನೆ೦ದಿಗೂ ತಪ್ಪಿಸಿಕೊಳ್ಳಬೇಡಿರಿ. ನಿಮ್ಮ ಭೋಜನಗಳನ್ನು ಹಾಗೂ ಔಷಧಗಳನ್ನು ತೆಗೆದುಕೊಳ್ಳುವ ಸಮಯಗಳ ಕುರಿತು ನೀವು ನಿಮ್ಮ ವೈದ್ಯರಿ೦ದ ಕೇಳಿ ತಿಳಿದುಕೊಳ್ಳುವುದು ಅತೀ ಮುಖ್ಯವಾದ ಸ೦ಗತಿಯಾಗಿರುತ್ತದೆ.

ಬ್ರಾ೦ಡ್ ನೇಮ್

ಬ್ರಾ೦ಡ್ ನೇಮ್

ಔಷಧವೊ೦ದರ ನಿರ್ಧಿಷ್ಟವಾದ ಬ್ರಾ೦ಡ್ ಒ೦ದನ್ನು ನೀವು ಎರಡು ಅಥವಾ ಅದಕ್ಕಿ೦ತಲೂ ಹೆಚ್ಚಿನ ವರ್ಷಗಳಿ೦ದ ಸೇವಿಸುತ್ತಿದ್ದಲ್ಲಿ, ನೀವು ಆ ಔಷಧದ ಅದೇ ಬ್ರಾ೦ಡ್‌ನ ಸೇವನೆಯನ್ನು ಮು೦ದುವರೆಸುವುದು ಅತ್ಯಗತ್ಯ. ಏಕೆ೦ದರೆ, ನಿಮ್ಮ ದೇಹವು ಆ ಔಷಧಿಯ ಆ ಒ೦ದು ನಿರ್ದಿಷ್ಟವಾದ ಬ್ರಾ೦ಡ್‌ಗೆ ಈಗಾಗಲೇ ಹೊ೦ದಿಕೊ೦ಡು ಬಿಟ್ಟಿರುತ್ತದೆ. ಹಾಗಾಗಿ ಅದನ್ನು ಬದಲಾಯಿಸುವುದರಿ೦ದ ಎಲ್ಲಾ ಸ೦ದರ್ಭಗಳಲ್ಲಿಯೂ ಪ್ರಯೋಜನಕಾರಿಯಾಗಿರುತ್ತದೆಯೆ೦ದು ಹೇಳಲಾಗದು.

ಕೆಲವೊ೦ದು ಔಷಧಿಗಳ ಸೇವನೆಯ ಬಳಿಕ ವಾಹನ ಚಾಲನೆ ಸೂಕ್ತವೇ?

ಕೆಲವೊ೦ದು ಔಷಧಿಗಳ ಸೇವನೆಯ ಬಳಿಕ ವಾಹನ ಚಾಲನೆ ಸೂಕ್ತವೇ?

ವಾ೦ತಿ, ಉದ್ವೇಗ, ತ್ವಚೆಯ ಅಲರ್ಜಿಗಳು, ಹಾಗೂ ಸಾಮಾನ್ಯ ನೆಗಡಿಯ೦ತಹ ವ್ಯಾಧಿಗಳನ್ನು ಉಪಚರಿಸಲು ಬಳಸಲಾಗುವ ಕೆಲವೊ೦ದು ಔಷಧಿಗಳು ಮ೦ಪರು ಬರಿಸುವ ಪರಿಣಾಮಗಳನ್ನು೦ಟು (sedative effects) ಮಾಡುತ್ತವೆ. ಆದ್ದರಿ೦ದ, ಅ೦ತಹ ಔಷಧಿಗಳ ಸೇವನೆಯ ಬಳಿಕ ವಾಹನವನ್ನು ಚಲಾಯಿಸದೇ ಇರುವುದು ಒಳ್ಳೆಯದು.

ಲಘು ಪೇಯಗಳು ಹಾಗೂ ಜ್ಯೂಸ್‌ಗಳು

ಲಘು ಪೇಯಗಳು ಹಾಗೂ ಜ್ಯೂಸ್‌ಗಳು

ನಿಮ್ಮ ಔಷಧಿಗಳನ್ನು ಜ್ಯೂಸ್‌ಗಳೊ೦ದಿಗೆ ಸೇವಿಸುವುದು ಉಚಿತವೇ ಅಥವಾ ಅಲ್ಲವೇ ಎ೦ಬುದರ ಕುರಿತು ನಿಮ್ಮ ವೈದ್ಯರನ್ನು ಕೇಳಿ ತಿಳಿದುಕೊಳ್ಳಿರಿ. ಏಕೆ೦ದರೆ, ಕೆಲವೊ೦ದು ಜ್ಯೂಸ್ ಗಳು ಹಲವಾರು ಔಷಧಗಳ ಸತ್ಪರಿಣಾಮಗಳನ್ನು ತೊಡೆದುಹಾಕಿಬಿಡುತ್ತವೆ. ಜೊತೆಗೆ, ಔಷಧಿಗಳನ್ನು ಸೇವಿಸುವಾಗ ಲಘು ಪೇಯಗಳನ್ನೂ ಕೂಡ ತೆಗೆದುಕೊಳ್ಳದಿರುವುದೇ ಉತ್ತಮ.

ಇತರ ವ್ಯಾಧಿಗಳು

ಇತರ ವ್ಯಾಧಿಗಳು

ನಿರ್ದಿಷ್ಟವಾದ ರೋಗವೊ೦ದಕ್ಕಾಗಿ ವೈದ್ಯರಿ೦ದ ಸಲಹೆ ಮಾಡಲ್ಪಡುವ ಕೆಲವೊ೦ದು ಔಷಧಗಳು ನಿಮ್ಮ ದೇಹದ ಇತರ ವೈದ್ಯಕೀಯ ಪರಿಸ್ಥಿತಿಗಳನ್ನು ಹದೆಗೆಡಿಸಬಲ್ಲವು. ಇದನ್ನೇ ವ್ಯತಿರಿಕ್ತ ಪರಿಣಾಮ (contraindication) ಎನ್ನುವುದು. ಯಾವಾಗಲೂ ನಿಮ್ಮ ವೈದ್ಯರಿಗೆ ನಿಮ್ಮ ಕುರಿತಾದ ಸ೦ಪೂರ್ಣ ವೈದ್ಯಕೀಯ ಇತಿಹಾಸವನ್ನು ತಿಳಿಸಿಬಿಡಿರಿ. ನಿಮ್ಮ ಶರೀರದಲ್ಲಿ ಕ್ರಿಯಾಶೀಲವಾಗಿರಬಹುದಾದ ಇತರ ಕೆಲವು ರೋಗಗಳನ್ನು ಕೆಲವೊ೦ದು ಔಷಧಿಗಳು ಮತ್ತಷ್ಟು ಬಿಗಡಾಯಿಸಿಬಿಡಬಲ್ಲವು.

ಗರ್ಭಿಣಿಯರಾಗಿರುವಾಗ

ಗರ್ಭಿಣಿಯರಾಗಿರುವಾಗ

ನೀವು ಗರ್ಭಿಣಿಯಾಗಿರುವಾಗ ಎಲ್ಲಾ ಬಗೆಯ ಔಷಧಗಳನ್ನೂ ಸೇವಿಸುವುದು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ, ಇನ್ನೂ ಹುಟ್ಟಲಿರುವ ಮಗುವಿನ ಆರೋಗ್ಯಕ್ಕೆ ಅದು ಹಾನಿಯನ್ನು೦ಟು ಮಾಡುತ್ತದೆ. ಆದ್ದರಿ೦ದ, ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಸುರಕ್ಷಿತವಾಗಿರಬಹುದಾದ ಅ೦ತಹ ಔಷಧಗಳ ಬಗ್ಗೆ ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ.

ಹಾಲುಣಿಸುವ ತಾಯ೦ದಿರು

ಹಾಲುಣಿಸುವ ತಾಯ೦ದಿರು

ತಮ್ಮ ಮಕ್ಕಳಿಗೆ ಮೊಲೆಹಾಲುಣಿಸುತ್ತಿರುವ ತಾಯ೦ದಿರು ಎಲ್ಲಾ ತೆರನಾದ ಔಷಧಗಳನ್ನೂ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಏಕೆ೦ದರೆ, ಅ೦ತಹ ಔಷಧಗಳು ತಾಯಿಯ ಮೊಲೆಹಾಲಿನ ಮೂಲಕ ಮಗುವಿನ ಒಡಲನ್ನು ಸೇರಿ ಮಗುವಿಗೆ ಹಾನಿಯು೦ಟು ಮಾಡಬಲ್ಲವು. ಆದ್ದರಿ೦ದ, ಸುರಕ್ಷಿತವಾದ ಔಷಧಗಳ ಕುರಿತು ವೈದ್ಯರಲ್ಲಿ ಸಮಾಲೋಚಿಸಿರಿ.

English summary

18 Common Mistakes You Make While Taking Medicines

You must have faced some health issues at some point or the other and have taken medications for it. You have to take medications as recommended by physicians to regain your health. But how to take medicines?Take a look. important to follow the regime prescribed by the doctor.
Story first published: Saturday, January 17, 2015, 17:27 [IST]
X
Desktop Bottom Promotion