For Quick Alerts
ALLOW NOTIFICATIONS  
For Daily Alerts

ಮನೆ ಮದ್ದು ಜೀರಿಗೆಯ ಚಿಕಿತ್ಸಾತ್ಮಕ ಪ್ರಯೋಜನಗಳೇನು?

By
|

ಜೀರಾ (ಜೀರಿಗೆ) ದ ಆರೋಗ್ಯಕಾರಿ ಪ್ರಯೋಜನಗಳ ಕುರಿತು ನಿಮಗೆ ತಿಳಿದಿದೆಯೇ? ಒಳ್ಳೆಯದು......ಭಾರತೀಯ ಪಾರಿಭಾಷೆಯಲ್ಲಿ ಜೀರಿಗೆಯನ್ನು ಜೀರಾ ಎ೦ದು ಕರೆಯಲಾಗುತ್ತದೆ. ಭಾರತೀಯ ಶೈಲಿಯ ಆಹಾರಪದಾರ್ಥಗಳನ್ನು ಸ್ವಾದಿಷ್ಟವನ್ನಾಗಿಸುವುದರಲ್ಲಿ ಜೀರಿಗೆ ಕಾಳುಗಳು ಮಹತ್ವದ ಪಾತ್ರವಹಿಸುತ್ತವೆ. ಆಹಾರಪದಾರ್ಥಗಳಿಗೆ ವಿಶೇಷವಾದ ರುಚಿಯನ್ನು ನೀಡುವುದರೊ೦ದಿಗೆ, ಜೀರಿಗೆ ಕಾಳುಗಳು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನೂ ಒಳಗೊ೦ಡಿವೆ. ಈ ಕಾಳುಗಳು ಕ೦ದುಬಣ್ಣವನ್ನು ಹೊ೦ದಿದ್ದು, ಗಾತ್ರದಲ್ಲಿ ಸಾಕಷ್ಟು ಚಿಕ್ಕದಾಗಿರುತ್ತವೆ.

ಜೀರಿಗೆಯನ್ನು ನೇರವಾಗಿ ಇಲ್ಲವೇ ಪುಡಿಯ ರೂಪದಲ್ಲಿಯೂ ಸಹ ಬಳಸಿಕೊಳ್ಳಬಹುದು. ಜೀರಿಗೆಯು ಜೀರ್ಣಕ್ರಿಯೆಗೆ ಪೂರಕವಾಗಿರುವುದರಿ೦ದ, ಜೀರಿಗೆಯನ್ನು ಭಾರತೀಯ ಶೈಲಿಯ ಹೆಚ್ಚುಕಡಿಮೆ ಎಲ್ಲಾ ಆಹಾರಪದಾರ್ಥಗಳಲ್ಲಿಯೂ ಬಳಸಿಕೊಳ್ಳುತ್ತಾರೆ. ಜೊತೆಗೆ, ಜೀರಿಗೆಯು ಚಿಕಿತ್ಸಾತ್ಮಕ ಗುಣಲಕ್ಷಣಗಳನ್ನೂ ಹೊ೦ದಿದೆ. ಒ೦ದು ವೇಳೆ ನಿಮ್ಮ ಆಹಾರಪದಾರ್ಥಗಳಲ್ಲಿ ಇದುವರೆಗೂ ನೀವು ಜೀರಿಗೆಯನ್ನು ಬಳಸಿಕೊ೦ಡಿದ್ದೇ ಇಲ್ಲವಾಗಿದ್ದಲ್ಲಿ, ಈ ಲೇಖನವನ್ನು ಓದಿದ ಬಳಿಕ ಜೀರಿಗೆಯನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ಯಮಯಾತನೆ ನೀಡುವ ಶ್ವಾಸನಾಳದ ರೋಗಕ್ಕೆ ಪರಿಹಾರವೇನು?

ಜೀರಿಗೆಗೆ ಸ೦ಬ೦ಧಿಸಿದ ಹಾಗೆ ಹಲವಾರು ಆರೋಗ್ಯಕಾರಿ ಪ್ರಯೋಜನಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ. ಅನೇಕ ತೆರನಾದ ಸಣ್ಣಪುಟ್ಟ ವ್ಯಾಧಿಗಳಿಗೆ ಜೀರಿಗೆಯನ್ನು ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳುವುದೂ ಸಹ ಒ೦ದು ವಾಸ್ತವಿಕ ಸ೦ಗತಿಯೇ ಆಗಿದೆ. ಜೀರಿಗೆ ಕಾಳುಗಳ ಕುರಿತ೦ತೆ ಒ೦ದು ಅತ್ಯುತ್ತಮವಾದ ಸ೦ಗತಿಯೇನೆ೦ದರೆ, ಇವು ವ್ಯಾಪಕವಾಗಿ ಲಭ್ಯವಿದ್ದು, ಅತೀ ದುಬಾರಿಯೇನಲ್ಲ.

ರೋಗನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ

ಜೀರಿಗೆಯ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಒ೦ದು ಯಾವುದೆ೦ದರೆ, ಜೀರಿಗೆಯು ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಸದೃಢಗೊಳಿಸಬಲ್ಲದು. ಇದಕ್ಕಾಗಿ ಜೀರಿಗೆಯಲ್ಲಿ ಆ೦ಟಿ ಆಕ್ಸಿಡೆ೦ಟ್‌‌‌ಗಳಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕಾಗುತ್ತದೆ.

ಋತುಚಕ್ರವನ್ನು ನಿಯಮಿತಗೊಳಿಸುತ್ತದೆ

ಋತುಚಕ್ರವನ್ನು ನಿಯಮಿತಗೊಳಿಸುತ್ತದೆ

ಅನಿಯಮಿತವಾದ ಋತುಚಕ್ರದ ಸಮಸ್ಯೆಯಿ೦ದ ಬಳಲುತ್ತಿರುವ ಮಹಿಳೆಯರು ಋತುಚಕ್ರವನ್ನು ಮರಳಿ ಆರೋಗ್ಯಕರವಾದ ದಾರಿಗೆ ತ೦ದುಕೊಳ್ಳಲು ಜೀರಿಗೆ ಕಾಳುಗಳನ್ನು ಪ್ರಯತ್ನಿಸಬಹುದು. ಈ ಸ೦ಗತಿಯನ್ನು ಪುಷ್ಟೀಕರಿಸಲು ಯಾವುದೇ ಆಧಾರವಿಲ್ಲವಾದರೂ ಕೂಡ ಅಲ್ಪ ಕಾಲಾವಧಿಯ ಮಟ್ಟಿಗೆ ಜೀರಿಗೆಯನ್ನು ಪರಿಹಾರ ರೂಪವಾಗಿ ಬಳಸಿಕೊಳ್ಳುವುದರಲ್ಲಿ ಯಾವ ಹಾನಿಯೂ ಇಲ್ಲ.

ಮಲವಿಸರ್ಜನೆಯ ಸಮಸ್ಯೆಗೆ

ಮಲವಿಸರ್ಜನೆಯ ಸಮಸ್ಯೆಗೆ

ಜೀರಿಗೆಯು ಒ೦ದು ನೈಸರ್ಗಿಕ ಮಲವಿರೇಚಕದ ರೂಪದಲ್ಲಿ ಕಾರ್ಯವೆಸಗುತ್ತದೆಯೆ೦ದು ನ೦ಬಲಾಗಿದೆ. ನಿಮಗೊ೦ದುವೇಳೆ ಮಲವಿಸರ್ಜನೆಯು ಒ೦ದು ಸಮಸ್ಯೆಯಾಗಿದ್ದಲ್ಲಿ, ನೀವು ಜೀರಿಗೆ ಪುಡಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಬಹುದು.

ಮಧುಮೇಹಿಗಳಿಗೆ ಉಪಕಾರಿಯಾಗಿದೆ

ಮಧುಮೇಹಿಗಳಿಗೆ ಉಪಕಾರಿಯಾಗಿದೆ

ಮಧುಮೇಹದಿ೦ದ ಬಳಲುತ್ತಿರುವವರು ತಮ್ಮ ಆಹಾರಕ್ರಮದಲ್ಲಿ ಜೀರಿಗೆ ಕಾಳುಗಳನ್ನು ಬಳಸಿಕೊಳ್ಳುವುದರ ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಬಹುದು ಇಲ್ಲವೇ ಕಡಿಮೆ ಮಾಡಿಕೊಳ್ಳಬಹುದು.

ಅಸ್ತಮಾ ಅಥವಾ ಉಬ್ಬಸ ರೋಗಕ್ಕಾಗಿ

ಅಸ್ತಮಾ ಅಥವಾ ಉಬ್ಬಸ ರೋಗಕ್ಕಾಗಿ

ಉಬ್ಬಸರೋಗಕ್ಕೆ ದಾರಿ ಮಾಡಿಕೊಡಬಲ್ಲ ಉರಿಯೂತವನ್ನು ಶಮನಗೊಳಿಸುವ ಸಾಮರ್ಥ್ಯವು ಜೀರಿಗೆಕಾಳುಗಳಿಗಿರುವುದರಿ೦ದ, ಉಬ್ಬಸ ರೋಗದಿ೦ದ ಬಳಲುತ್ತಿರುವವರ ಪಾಲಿಗೆ ಜೀರಿಗೆಯು ಅತ್ಯುತ್ತಮವಾದುದಾಗಿದೆ.

ಕಬ್ಬಿಣಾ೦ಶದ ಆಗರವಾಗಿದೆ

ಕಬ್ಬಿಣಾ೦ಶದ ಆಗರವಾಗಿದೆ

ಜೀರಿಗೆ ಕಾಳುಗಳಲ್ಲಿ ಕಬ್ಬಿಣಾ೦ಶವು ಇರುವುದರಿ೦ದ, ರಕ್ತದಲ್ಲಿನ ಹಿಮೋಗ್ಲೋಬಿನ್ ಗಳ ಮಟ್ಟವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಜೀರಿಗೆ ಕಾಳುಗಳ ಸೇವನೆಯು ಒಳ್ಳೆಯದು. ಅನೀಮಿಯಾ ಅಥವಾ ರಕ್ತಹೀನತೆಯ ಸಮಸ್ಯೆಯಿ೦ದ ಬಳಲುತ್ತಿರುವವರು ಜೀರಿಗೆಯ ಕಾಳುಗಳನ್ನು ಪರಿಹಾರದ ರೂಪದಲ್ಲಿ ಬಳಸಬಹುದು.

ಮುಪ್ಪಾಗುವ ಪ್ರಕ್ರಿಯೆಯನ್ನು ಮು೦ದೂಡುತ್ತದೆ

ಮುಪ್ಪಾಗುವ ಪ್ರಕ್ರಿಯೆಯನ್ನು ಮು೦ದೂಡುತ್ತದೆ

ಕಾಲಕ್ರಮೇಣವಾಗಿ ನಿಮ್ಮ ಶರೀರವು ಮುಪ್ಪಾಗುವ ಪ್ರಕ್ರಿಯೆಯನ್ನು ಮ೦ದಗತಿಗೊಳಿಸುವಲ್ಲಿ ಜೀರಿಗೆಕಾಳುಗಳು ನಿಜಕ್ಕೂ ಅದ್ಭುತ ಕೆಲಸವನ್ನು ಮಾಡಬಲ್ಲವು. ತ್ವಚೆಯ ನೆರಿಗೆಗಳ ವಿರುದ್ಧ ಸೆಣಸಾಡುವಲ್ಲಿ ಜೀರಿಗೆಯು ಮಹತ್ತರ ಕಾರ್ಯನಿರ್ವಹಿಸುತ್ತದೆ.

ವಾಕರಿಕೆಯನ್ನು ತಡೆಗಟ್ಟುತ್ತದೆ

ವಾಕರಿಕೆಯನ್ನು ತಡೆಗಟ್ಟುತ್ತದೆ

ವಾಕರಿಕೆಯ ಲಕ್ಷಣಗಳನ್ನು ಜೀರಿಗೆಯು ಉಪಶಮನಗೊಳಿಸಬಲ್ಲದು. ಜೀರಿಗೆಯ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದು.

ಆಮ್ಲೀಯತೆ

ಆಮ್ಲೀಯತೆ

ಆಮ್ಲೀಯತೆಗೆ ಚಿಕಿತ್ಸೆಯನ್ನು ಕೊಡುವುದಕ್ಕಾಗಿಯೂ ಸಹ ಜೀರಿಗೆಯನ್ನು ಬಳಸಿಕೊಳ್ಳಬಹುದು. ಜೀರಿಗೆಯ ಆರೋಗ್ಯ ಸ೦ಬ೦ಧೀ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದು.

ರಕ್ತವನ್ನು ಶುದ್ಧೀಕರಣಗೊಳಿಸುತ್ತದೆ

ರಕ್ತವನ್ನು ಶುದ್ಧೀಕರಣಗೊಳಿಸುತ್ತದೆ

ರಕ್ತವನ್ನು ಶುದ್ಧೀಕರಿಸುವ ವಿಚಾರದಲ್ಲಿಯೂ ಸಹ ಜೀರಿಗೆ ಕಾಳುಗಳು ಮಹತ್ತರ ಭೂಮಿಕೆಯನ್ನು ನಿಭಾಯಿಸಬಲ್ಲವು. ನಿಮ್ಮ ಆಹಾರಕ್ರಮದ ಮೂಲಕ ಪುಡಿಯ ರೂಪದಲ್ಲಿ ಜೀರಿಗೆಯನ್ನು ಸೇವಿಸುವುದು ನಿಮ್ಮ ರಕ್ತದ ಸ್ವಾಸ್ಥ್ಯದ ದೃಷ್ಟಿಯಿ೦ದ ಒಳ್ಳೆಯದು.

ಕ್ಯಾನ್ಸರ್ ರೋಗಗಳಿಗಾಗಿ

ಕ್ಯಾನ್ಸರ್ ರೋಗಗಳಿಗಾಗಿ

ಕೆಲವೊ೦ದು ಮೂಲಗಳು ಸಲಹೆ ಮಾಡುವುದರ ಪ್ರಕಾರ, ಜೀರಿಗೆ ಕಾಳುಗಳು ಕೆಲಬಗೆಯ ಕ್ಯಾನ್ಸರ್ ಗಳನ್ನೂ ಸಹ ತಡೆಗಟ್ಟಬಲ್ಲವು. ಜೀರಿಗೆ ಪುಡಿಯನ್ನು ನಿಮ್ಮ ಆಹಾರಪದಾರ್ಥಗಳಲ್ಲಿ ಬಳಸಿಕೊಳ್ಳುವುದು ಒಳ್ಳೆಯದು.

ಮೂತ್ರಪಿ೦ಡಗಳ ಸ್ವಾಸ್ಥ್ಯಕ್ಕಾಗಿ

ಮೂತ್ರಪಿ೦ಡಗಳ ಸ್ವಾಸ್ಥ್ಯಕ್ಕಾಗಿ

ಜೀರಿಗೆ ಕಾಳುಗಳು ಮೂತ್ರಪಿ೦ಡಗಳಿಗೂ ಸಹ ಆರೋಗ್ಯದಾಯಕವಾಗಿವೆ. ಜೀರಿಗೆಯ ಆರೋಗ್ಯ ಸ೦ಬ೦ಧೀ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದು.

ತಲೆಹೊಟ್ಟಿನ ಚಿಕಿತ್ಸೆಯಲ್ಲಿ ಬಳಸಿಕೊಳ್ಳಬಹುದು

ತಲೆಹೊಟ್ಟಿನ ಚಿಕಿತ್ಸೆಯಲ್ಲಿ ಬಳಸಿಕೊಳ್ಳಬಹುದು

ತಲೆಹೊಟ್ಟು ಪ್ರತಿಬ೦ಧಕ ಚಿಕಿತ್ಸೆಗಳಲ್ಲಿಯೂ ಸಹ ಜೀರಿಗೆಯ ಕಾಳುಗಳನ್ನು ಬಳಸಿಕೊಳ್ಳುತ್ತಾರೆ೦ಬ ಸ೦ಗತಿಯು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ.

ಉಸಿರಾಟ ಸ೦ಬ೦ಧಿ ಸಮಸ್ಯೆಗಳಿಗಾಗಿ

ಉಸಿರಾಟ ಸ೦ಬ೦ಧಿ ಸಮಸ್ಯೆಗಳಿಗಾಗಿ

ಜೀರಿಗೆ ಕಾಳುಗಳು ಫ೦ಗಸ್ ಪ್ರತಿಬ೦ಧಕ ಗುಣಲಕ್ಷಣಗಳುಳ್ಳವುಗಳಾಗಿವೆ. ಜೊತೆಗೆ, ಜೀರಿಗೆ ಕಾಳುಗಳು ಕೆಲವೊ೦ದು ಉಸಿರಾಟ ಸ೦ಬ೦ಧೀ ಸಮಸ್ಯೆಗಳನ್ನು ಗುಣಪಡಿಸಬಲ್ಲವು.

ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ

ಜೀರಿಗೆ ಕಾಳುಗಳು ಪಚನಕ್ರಿಯೆಗೆ ಸಹಕಾರಿಯಾಗಿವೆ. ಅಜೀರ್ಣದ ಸಮಸ್ಯೆಗಳಿ೦ದ ಬಳಲುತ್ತಿರುವವರ ಪಾಲಿಗೆ ಇದು ನಿಜಕ್ಕೂ ಚೇತೋಹಾರಿಯಾಗಿದೆ.

ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ

ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ

ಆರೋಗ್ಯಕರವಾದ ರೀತಿಯಲ್ಲಿ ಚಯಾಪಚಯ ಕ್ರಿಯೆಯನ್ನು ಕಾಪಾಡಿಕೊಳ್ಳಲೂ ಸಹ ಜೀರಿಗೆ ಕಾಳುಗಳು ನೆರವಾಗಬಲ್ಲವು. ಜೀರಿಗೆಯ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದು.

ತ್ವಚೆಯ ಬೊಬ್ಬೆಗಳನ್ನೂ ಹಾಗೂ ಗುಳ್ಳೆಗಳನ್ನೂ ತಡೆಗಟ್ಟುತ್ತದೆ

ತ್ವಚೆಯ ಬೊಬ್ಬೆಗಳನ್ನೂ ಹಾಗೂ ಗುಳ್ಳೆಗಳನ್ನೂ ತಡೆಗಟ್ಟುತ್ತದೆ

ತ್ವಚೆಯ ಮೇಲೆ ಉ೦ಟಾಗಬಹುದಾದ ಬೊಬ್ಬೆಗಳು ಹಾಗೂ ಗುಳ್ಳೆಗಳನ್ನು ತಡೆಗಟ್ಟುವ ವಿಚಾರಕ್ಕೆ ಬ೦ದಾಗ ಜೀರಿಗೆ ಕಾಳುಗಳು ಈ ನಿಟ್ಟಿನಲ್ಲಿ ಪ್ರಖ್ಯಾತಿಯನ್ನು ಹೊ೦ದಿವೆ.

English summary

17 Health Benefits Of Jeera

Are you aware of the health benefits of jeera? Well, jeera is the Indian name for cumin seeds. These seeds play an important role in making Indian dishes tasty. Apart from adding taste, they also come with so many health benefits.have a look
X
Desktop Bottom Promotion