For Quick Alerts
ALLOW NOTIFICATIONS  
For Daily Alerts

ಖಾಲಿ ಹೊಟ್ಟೆಯಲ್ಲಿ ಹಣ್ಣುಗಳ ಸೇವನೆ ದೇಹಕ್ಕೆ ಆರೋಗ್ಯಕಾರಿ ಹೇಗೆ?

By Super
|

ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಹಣ್ಣುಗಳು ಎಂದರೆ ಆಯಾ ಋತುಮಾನದಲ್ಲಿ ಸ್ಥಳೀಯವಾಗಿ ಲಭ್ಯವಾಗುತ್ತಿದ್ದ ಹಣ್ಣುಗಳು ಮಾತ್ರ. ಹೆಚ್ಚೆಂದರೆ ಮೂಸಂಬಿ ಮತ್ತು ಸೇಬು, ಅದೂ ಎಷ್ಟೋ ದಿನಗಳ ಹಿಂದಿನ ಒಣಗಿದ ಫಲಗಳು. ಇಂದು ಕಾಲದೊಂದಿಗೇ ಮಾರುಕಟ್ಟೆಯಲ್ಲಿ ವಿವಿಧ ದೇಶಗಳ, ನಮ್ಮದೇ ದೇಶದ ವಿವಿಧ ರಾಜ್ಯಗಳ ವಿವಿಧ ಹಣ್ಣುಗಳು ತಾಜಾ ರೂಪದಲ್ಲಿಯೇ ದೊರಕುತ್ತಿವೆ. ಆದರೆ ಹಣ್ಣುಗಳನ್ನು ಸೇವಿಸುವ ಕ್ರಮ ಮಾತ್ರ ಇಂದಿಗೂ ಬದಲಾಗಿಲ್ಲ. ಏಕೆಂದರೆ ಹಿಂದೆ ಹೆಚ್ಚಾಗಿ ಬೆಳೆಯಲಾಗುತ್ತಿದ್ದ ಬಾಳೆಹಣ್ಣನ್ನು ನಮ್ಮ ಹಿರಿಯರು ಊಟದ ಬಳಿಕ ಸೇವಿಸುತ್ತಿದ್ದರು. ಮಧುಮೇಹಿಗಳು ತಿನ್ನಬಹುದಾದ 18 ಸಿಹಿ ಹಣ್ಣುಗಳು!

ಇದೇ ಅಭ್ಯಾಸವನ್ನು ನಾವು ಇತರ ಹಣ್ಣುಗಳಿಗೂ ಅನ್ವಯಿಸಿಕೊಂಡಿದ್ದೇವೆ. ಆಹಾರತಜ್ಞರ ಪ್ರಕಾರ ಹಣ್ಣುಗಳನ್ನು ಊಟದ ಬಳಿಕ ಸೇವಿಸುವುದು ಒಳಿತಲ್ಲ! ನಿಜವಾಗಿ ಹೇಳಬೇಕೆಂದರೆ ಹಣ್ಣುಗಳನ್ನು ಆಹಾರದ ಬದಲಿಗೆ ಸೇವಿಸುವುದು ಉತ್ತಮ, ಅಂದರೆ ಹೊಟ್ಟೆ ಖಾಲಿಯಿದ್ದಾಗ ಮೊದಲಾಗಿ ಸೇವಿಸಬೇಕಾಗಿರುವುದು ಹಣ್ಣುಗಳನ್ನು!

ಈ ಸಲಹೆಗೆ ಪ್ರಮುಖ ಕಾರಣವಿದೆ. ಏಕೆಂದರೆ ಹಣ್ಣುಗಳು ಹಲವು ಪೋಷಕಾಂಶಗಳ ಆಗರವಾಗಿವೆ. ವಾಸ್ತವವಾಗಿ ನಾವು ಊಟಮಾಡುವ ಅನ್ನವೂ ಬೇಯುವ ಮುನ್ನ ಪೋಷಕಾಂಶಗಳ ಆಗರವಾಗಿತ್ತು. ಆದರೆ ಬೇಯಿಸಿ ನೀರು ಬಸಿದ ಬಳಿಕ ಉಳಿದಿರುವುದು ಕೊಂಚ ಮಾತ್ರ. ಹಣ್ಣುಗಳನ್ನು ಹಾಗೆಯೇ ಸೇವಿಸುವುದರಿಂದ ಹೊಟ್ಟೆಗೆ ಪೋಷಕಾಂಶಗಳು ನೈಸರ್ಗಿಕ ರೂಪದಲ್ಲಿ ದೊರಕಿದಂತಾಗುತ್ತದೆ ಹಾಗೂ ಕನಿಷ್ಟ ಪ್ರಮಾಣದ ಆಹಾರದ ಮೂಲಕ ಗರಿಷ್ಟ ಪೋಷಕಾಂಶಗಳೂ ಲಭಿಸಿದಂತಾಗುತ್ತದೆ. ಪರಿಣಾಮವಾಗಿ ದೇಹದಲ್ಲಿದ್ದ ವಿಷಕಾರಿ ವಸ್ತುಗಳು ವಿಸರ್ಜಿಸಲ್ಪಡಲು ಹೆಚ್ಚಿನ ಚೈತನ್ಯ ದೊರಕಿದಂತಾಗಿ ಆರೋಗ್ಯ ವೃದ್ಧಿಸುತ್ತದೆ.

ಕಿತ್ತಳೆ, ಮೂಸಂಬಿ ಮೊದಲಾದ ಹಣ್ಣುಗಳಲ್ಲಿ ಆಮ್ಲೀಯ ಅಂಶವಿರುವುದರಿಂದ ಬರಿಹೊಟ್ಟೆಯಲ್ಲಿ ತಿನ್ನಬಾರದು ಎಂಬ ನಂಬಿಕೆ ಹಲವರಲ್ಲಿದೆ. ವಾಸ್ತವವಾಗಿ ನಮ್ಮ ಹೊಟ್ಟೆಯಲ್ಲಿರುವ ಜಠರರಸವೇ ಅತ್ಯಂತ ಆಮ್ಲೀಯವಾಗಿದ್ದು ಯಾವುದೇ ಹಣ್ಣುಗಳು ಈ ಆಮ್ಲದೆದುರಿಗೆ ಸಾಟಿಯಲ್ಲ. ಹೊಟ್ಟೆ ಸೇರಿದ ಬಳಿಕ ಇವು ಕ್ಷಾರೀಯವಾಗಿಬಿಡುತ್ತವೆ. ಹಣ್ಣುಗಳ ಪೋಷಕಾಂಶಗಳ ಗರಿಷ್ಟ ಲಾಭ ಪಡೆಯಬೇಕೆಂದಿದ್ದಲ್ಲಿ ಹಣ್ಣುಗಳನ್ನು ಹಸಿಯಾಗಿ ಅಥವಾ ಹಣ್ಣುಗಳ ತಿರುಳಿನಿಂದ ಹಿಂಡಿ ತೆಗೆದ ರಸವನ್ನು ಮಾತ್ರ ಸೇವಿಸಬೇಕು. ಮಾರುಕಟ್ಟೆಯಲ್ಲಿ ದೊರಕುವ ಹಣ್ಣಿನ ರಸಗಳು ಸಂಪೂರ್ಣವಾಗಿ ಹಣ್ಣಿನ ರಸವಲ್ಲ. ಅವುಗಳಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಶೇಖಡಾ ಮಾತ್ರ ಹಣ್ಣಿನ ತಿರುಳು ಇರುತ್ತದೆ (fruit pulp). ಹಣ್ಣುಗಳಲ್ಲಿರುವ ಮಿಟಮಿನ್‌ನ ಸತ್ಯಾಂಶಗಳೇನು?

ಇನ್ನುಳಿದ ಪ್ರಮಾಣವೆಲ್ಲಾ ಕೃತಕ ರುಚಿಕೊಡುವ ರಸಾಯನಿಕಗಳು ಹಾಗೂ ನೀರು ಮತ್ತು ಹೆಚ್ಚು ಹೊತ್ತು ಕೆಡದೇ ಇರಲು ಬಳಸುವ ರಸಾಯನಿಕಗಳು (preservatives). ಇವುಗಳ ಸೇವನೆಯಿಂದ ಹಣ್ಣಿನ ರಸ ಕುಡಿಯುತ್ತಿರುವ ರುಚಿ ಸಿಗುತ್ತದಾದರೂ ನಿಜವಾದ ಹಣ್ಣಿನ ರಸದ ಪೋಷಕಾಂಶಗಳಲ್ಲ!. ಕಿತ್ತಳೆ ಮೊದಲಾದ ರಸಗಳನ್ನು ಪ್ಯಾಶ್ಚರೀಕರಿಸದೇ ಹೆಚ್ಚು ಹೊತ್ತು ಇಡಲು ಸಾಧ್ಯವಿಲ್ಲವಾದುದರಿಂದ ಈ ರಸಗಳೂ ತಾಜಾ ಹಣ್ಣಿನ ರಸಗಳಿಗೆ ಸಾಟಿಯಲ್ಲ. ಏಕೆಂದರೆ ಪ್ಯಾಶ್ಚರೀಕರಿಣದ (ಬೇಯಿಸಿ ಆರಿಸುವ) ಸಮಯದಲ್ಲಿ ಹೆಚ್ಚಿನ ವಿಟಮಿನ್ನುಗಳು ನಾಶವಾಗುತ್ತವೆ. ಹಣ್ಣುಗಳ ನಿಜವಾದ ಸಾಮರ್ಥ್ಯ ಅರಿಯಲು ಒಂದು ಸುಲಭ ವಿಧಾನವಿದೆ.

ಮುಂದಿನ ಮೂರು ದಿನಗಳವೆರೆಗೆ ಕೇವಲ ತಾಜಾಹಣ್ಣುಗಳನ್ನು ಮಾತ್ರ ತಿನ್ನಿ. ನೀರನ್ನು ಬಿಟ್ಟು ಬೇರೆ ಯಾವ ಆಹಾರವನ್ನೂ ತಿನ್ನಬೇಡಿ. ನಾಲ್ಕನೆಯ ದಿನ ನಿಮಗೆ ಹೇಗೆನಿಸುತ್ತದೆ ಎಂದು ಪರಾಮರ್ಶಿಸಿ. ನಿಮ್ಮ ಸ್ನೇಹಿತರು ನಿಮ್ಮ ಬಗ್ಗೆ ಏನೆನ್ನುತ್ತಾರೆ ಎಂದು ತಿಳಿದುಕೊಳ್ಳಿ. ನಾಲ್ಕನೆಯ ದಿನ ನಿಮ್ಮನ್ನು ನೋಡಿದವರು ಖಂಡಿತಾ ನಿಮ್ಮ ಚರ್ಮದ ಹೊಳಪನ್ನು ಗಮನಿಸುತ್ತಾರೆ. ವಿವಿಧ ಹಣ್ಣುಗಳು ನಮ್ಮ ದೇಹಕ್ಕೆ ನೀಡುವ ಪ್ರಯೋಜನಗಳನ್ನು ಅರಿಯೋಣ, ಬನ್ನಿ.

ಕಿವಿ ಹಣ್ಣು

ಕಿವಿ ಹಣ್ಣು

ವಾಸ್ತವವಾಗಿ ಕಿವಿಹಣ್ಣು ಬಂದಿದ್ದು ಚೀನಾದಿಂದ.ಗಾಢಹಸಿರು ಬಣ್ಣದ ಮುಷ್ಟಿಗಾತ್ರದ ಅರ್ಧದಷ್ಟಿರುವ ಈ ಪುಟ್ಟ ಹಣ್ಣಿನಲ್ಲಿರುವ ಪೋಷಕಾಂಶಗಳ ಭಂಡಾರವೇ ಇದೆ. ಪೊಟ್ಯಾಶಿಯಂ, ಮೆಗ್ನೀಶಿಯಂ, ವಿಟಮಿನ್ ಇ ಮತ್ತು ಕರಗುವ ನಾರು ಈ ಹಣ್ಣನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸುತ್ತದೆ. ಮುಖ್ಯವಾಗಿ ಇದರಲ್ಲಿ ಕಿತ್ತಳೆಗಿಂತಲೂ ದುಪ್ಪಟ್ಟು ಪ್ರಮಾಣದ ವಿಟಮಿನ್ ಸಿ ಇರುವುದರಿಂದ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಬಡಿಸಲು ಅತ್ಯುತ್ತಮ ಆಹಾರವಾಗಿದೆ.

ಸೇಬುಹಣ್ಣು

ಸೇಬುಹಣ್ಣು

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುವುದು ಎಂಬ ಗಾದೆ ನಿಜಕ್ಕೂ ಅರ್ಥಪೂರ್ಣವಾಗಿವೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣ ಕಡಿಮೆಯಿದ್ದರೂ ಇತರ ಆಂಟಿಆಕ್ಸಿಡೆಂಟುಗಳು ಮತ್ತು ಫ್ಲೇವನಾಯ್ಡುಗಳು ಹೆಚ್ಚಾಗಿವೆ. ಈ ಫ್ಲೇವನಾಯ್ಡ್ ಇತರ ಹಣ್ಣುಗಳ ಮೂಲಕ ಲಭ್ಯವಾದ ವಿಟಮಿನ್ ಸಿ ಅಂಶವನ್ನು ಶರೀರ ಪೂರ್ಣವಾಗಿ ಉಪಯೋಗಿಸಿಕೊಳ್ಳಲು ನೆರವಾಗುತ್ತದೆ. ಸೇಬಿನಲ್ಲಿರುವ ಕರಗುವ ನಾರು ಕರುಳುಗಳಲ್ಲಿ ಆಹಾರದ ಚಲನೆಗೆ ಸಹಕರಿಸುತ್ತದೆ, ತನ್ಮೂಲಕ ಜಠರ, ಕರುಳುಗಳ ಒಳಭಾಗದಲ್ಲಿ ಸೋಂಕು ಉಂಟಾಗುವುದರಿಂದ ತಡೆಯುತ್ತದೆ. ಒಟ್ಟಾರೆ ದಿನನಿತ್ಯದ ಸೇಬಿನ ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿನಿಂದ ರಕ್ಷಣೆ ದೊರಕಿದಂತಾಗುತ್ತದೆ. ಸೇಬುಗಳಲ್ಲಿ ವಿವಿಧ ಪ್ರಕಾರಗಳಿದ್ದರೂ ಹಸಿರು ಸೇಬು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ.

ಸ್ಟ್ರಾಬೆರಿ

ಸ್ಟ್ರಾಬೆರಿ

ಸುಮಾರು ಹತ್ತು ವರ್ಷಗಳ ಹಿಂದೆ ಈ ಹಣ್ಣು ಕೇವಲ ಚಿತ್ರದಲ್ಲಿ ಮಾತ್ರ ಕಾಣಸಿಗುತ್ತಿತ್ತು. ಆದರೆ ಇತ್ತೇಚೆಗೆ ಮಹಾರಾಷ್ಟ್ರದ ಮಹಾಬಲೇಶ್ವರದ ಬಳಿ ಹೇರಳವಾಗಿ ಬೆಳೆಯಲಾಗುವ ಈ ಹುಳಿಮಿಶ್ರಿತ ಸಿಹಿಯಾದ ಹಣ್ಣು ಕರ್ನಾಟಕದಲ್ಲಿಯೂ ಲಭ್ಯವಾಗುತ್ತಿದೆ. ಎಲ್ಲಾ ಹಣ್ಣುಗಳಲ್ಲಿ ಬೀಜ ಒಳಭಾಗದಲ್ಲಿದ್ದರೆ ಈ ಹಣ್ಣುಗಳ ಹೊರಭಾಗದಲ್ಲಿ ಚುಕ್ಕೆಗಳಂತೆ ಬೀಜಗಳಿರುವುದು ಇದರ ವಿಶೇಷ. ದೇಹದಲ್ಲಿ ಕ್ಯಾನ್ಸರ್ ಬರದಂತೆ ತಡೆಯುವ ಆಂಟಿ ಆಕ್ಸಿಡೆಂಟುಗಳು ಈ ಪುಟ್ಟ ಹಣ್ಣಿನಲ್ಲಿ ಅತ್ಯಧಿಕವಾಗಿರುವುದು ಇದರ ಪ್ರಮುಖ ಗುಣವಾಗಿದೆ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಸಾಮಾನ್ಯವಾಗಿ ಔಷಧಿಗಳು ಕಹಿಯಾಗಿರುತ್ತವೆ. ಕಿತ್ತಳೆಗೆ ಸಿಹಿಯಾದ ಔಷಧಿ ಎಂಬ ಅನ್ವರ್ಥನಾಮವೂ ಇದೆ. ದೇಹವನ್ನು ಕಾಡುವ ವೈರಸ್ಸುಗಳನ್ನು ಹೊಡೆದೋಡಿಸಲು ಇದುವರೆಗೆ ಯಾವುದೇ ಖಚಿತ ಔಷಧಿಯಿಲ್ಲ. ಜೌಷಧಿಗಳೇನಿದ್ದರೂ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಕರಿಸುವ ಪೂರಕ ಆಹಾರಗಳು ಮಾತ್ರ. ಇದೇ ಕೆಲಸವನ್ನು ತಾಜಾ ಕಿತ್ತಳೆ ಹಣ್ಣಿನ ರಸ ಸಮರ್ಥವಾಗಿ ಮಾಡುತ್ತದೆ.ದಿನಕ್ಕೆ ಎರಡರಿಂದ ನಾಲ್ಕು ಕಿತ್ತಳೆ ಹಣ್ಣುಗಳನ್ನು ತಿನ್ನುವುದರಿಂದ ಶೀತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ರಕ್ತದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ಅನ್ನು ಕಡಿಮೆಗೊಳಿಸುವುದು, ಮೂತ್ರಪಿಂಡಗಳಲ್ಲಿ ಒಂದು ವೇಳೆ ಚಿಕ್ಕ ಕಲ್ಲುಗಳಿದ್ದರೆ ಅವುಗಳನ್ನು ಕರಗಿಸುವುದು, ಹೊಟ್ಟೆ, ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವುದು ಕಿತ್ತಳೆರಸದ ಇನ್ನಿತರ ಪ್ರಯೋಜನಗಳಾಗಿವೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಹಣ್ಣುಗಳಲ್ಲಿ ಅತ್ಯಧಿಕ ನೀರು ಹೊಂದಿರುವ ಹಣ್ಣು ಎಂದರೆ ಕಲ್ಲಂಗಡಿ. ಇದರಲ್ಲಿರುವ ನೀರಿನ ಪ್ರಮಾಣ ಶೇ 92! ಇದೇ ಕಾರಣದಿಂದಾಗಿ ಬಾಯಾರಿಕೆ ತಣಿಸಲು ಈ ಹಣ್ಣಿಗೆ ಸರಿಸಾಟಿಯಿಲ್ಲ. ಇನ್ನುಳಿದ ಪ್ರಮಾಣದಲ್ಲಿ ಅಧಿಕ ಪೋಷಕಾಂಶಗಳಿವೆ. ಇದರಲ್ಲಿ ಪ್ರಮುಖವಾದುದು ಗ್ಲುಟಾಥಿಯೋನ್ (glutathione) ಎಂಬ ಪೋಷಕಾಂಶ, ಇದು ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತದೆ. ಅಲ್ಲದೇ ಇನ್ನೊಂದು ಪೋಷಕಾಂಶ ಲೈಕೋಪೀನ್ (lycopene) ದೇಹವನ್ನು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಕಲ್ಲಂಗಡಿಯಲ್ಲಿ ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ಸಹಾ ಹೇರಳವಾಗಿದ್ದು ಅರೋಗ್ಯವನ್ನು ವೃದ್ಧಿಸುವಲ್ಲಿ ಸಹಕರಿಸುತ್ತವೆ.

ಪೇರಲೆ ಮತ್ತು ಪಪ್ಪಾಯಿ

ಪೇರಲೆ ಮತ್ತು ಪಪ್ಪಾಯಿ

ಈ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಅಲ್ಲದೇ ಕರಗುವ ನಾರು ಸಹಾ ಹೇರಳವಾಗಿದ್ದು ಮಲಬದ್ಧತೆಯನ್ನು ತಡೆಯುತ್ತದೆ. ಪಪ್ಪಾಯಿಯಲ್ಲಿ ಕೆರೋಟಿನ್ ಎಂಬ ಅಂಶ ಕಣ್ಣಿಗೆ, ಉಗುರು ಮತ್ತು ಕೂದಲಿನ ಪೋಷಣೆಗೆ ಉತ್ತಮವಾಗಿದೆ. ಪೇರಳೆಯ ಬೀಜಗಳು ತುಂಬಾ ದೃಢವಾದುದರಿಂದ ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ. ಇದರಿಂದಾಗಿ ಚೆನ್ನಾಗಿ ಕಳಿತ ಪೇರಲೆ ಹಣ್ಣುಗಳನ್ನು ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಪೂರ್ಣ ಪ್ರಯೋಜನವನ್ನು ಪಡೆಯಬಹುದು.

ಸೀತಾಫಲ

ಸೀತಾಫಲ

ಸೀತಾಫಲಗಳಲ್ಲಿ ವಿಟಮಿನ್ ಸಿ ಯು ಹೇರಳವಾಗಿದೆ. ಶರೀರದಲ್ಲಿ ವಿಟಮಿನ್ ಸಿ ಉಪಸ್ಥಿತಿಯೇ, ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸುವ ಮೂಲಭೂತ ಅ೦ಶವಾಗಿದೆ. ವಿಟಮಿನ್ ಸಿ ಯು ನಿಮ್ಮ ಶರೀರದಲ್ಲಿ ಇನ್ಸುಲಿನ್ ನ ಮಟ್ಟವನ್ನು ನಿಯಮಿತಗೊಳಿಸುವುದರಲ್ಲಿ ಸಹಕಾರಿಯಾಗಿದೆ. ಸೀತಾಫಲಗಳಲ್ಲಿ ವಿಟಮಿನ್ ಸಿ ಯು ಅತ್ಯುನ್ನತ ಮಟ್ಟದಲ್ಲಿದ್ದು, ಇವುಗಳ ಸೇವನೆಯಿ೦ದ, ನೀವು ತೆಗೆದುಕೊಳ್ಳುವ ಬೇರಾವುದೇ ಔಷಧಿಗಿ೦ತಲೂ ಬಹು ಪರಿಣಾಮಕಾರಿಯಾದ ರೀತಿಯಲ್ಲಿ ಮಧುಮೇಹವನ್ನು ನಿಯ೦ತ್ರಿಸಲು ಇವು ನೆರವಾಗುತ್ತವೆ.

English summary

Why Eat Fruit On An Empty Stomach

We all think eating fruits means just buying fruits, cutting it and just popping it into our mouths. It's not as easy as you think. It's important to know how and *when* to eat. What is the correct way of eating fruits? It's not as easy as you think. It's important to know how and *when* to eat. What is the correct way of eating fruits?
X
Desktop Bottom Promotion