Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ನವರಾತ್ರಿಯ ವ್ರತಾಚರಣೆಗೆ ಸಹಕಾರಿಯಾಗಿರುವ ಸಾತ್ವಿಕ ಆಹಾರಗಳು
ನವರಾತ್ರಿ ಹಬ್ಬ ಹಿಂದೂಗಳಿಗೆ ಅತಿ ವಿಶೇಷವಾದುದು ಎಂಬ ಪ್ರತೀತಿ ಇದೆ. ಒಂಭತ್ತು ದಿನಗಳು ದೇವಿಯ ಆರಾಧನೆಯನ್ನು ಮಾಡಿ ದೇವರ ಆಶೀರ್ವಾದವನ್ನೂ ಕೃಪಾಕಟಾಕ್ಷವನ್ನೂ ಬೇಡಿಕೊಂಡು ಹೆಚ್ಚು ಪವಿತ್ರವಾಗಿ ಈ ದಿನವನ್ನು ನಾವು ಕಳೆಯುತ್ತೇವೆ. ನವ ದುರ್ಗೆಯರ ಆರಾಧನೆಯನ್ನು ಈ ಒಂಭತ್ತು ದಿನಗಳು ಒಳಗೊಂಡಿದ್ದು ಅತಿ ವಿಶೇಷ ಎಂದೆನಿಸಿದೆ. ನವರಾತ್ರಿಗೆ ಸುಲಭದಲ್ಲಿ ಮಾಡಬಹುದಾದ ಸ್ನ್ಯಾಕ್ಸ್ ರೆಸಿಪಿ
ಈ ದಿನಗಳಲ್ಲಿ ನಾವು ಮುಂಜಾನೆಯೇ ಎದ್ದು ಸ್ನಾನವನ್ನು ಮಾಡಿ ದೇವರ ಸ್ತೋತ್ರಗಳನ್ನು ಪಠಿಸಿ ದೇವರನ್ನು ಆರಾಧಿಸಬೇಕು. ಈ ದಿನಗಳಲ್ಲಿ ಆದಷ್ಟು ಸಾತ್ವಿಕ ಆಹಾರಗಳನ್ನು ಸೇವಿಸಬೇಕು ಎಂಬುದು ಕಡ್ಡಾಯವಾಗಿದೆ. ಶಾಖಾಹಾರಿ ಆಹಾರಗಳಿಗೆ ಈ ದಿನಗಳಲ್ಲಿ ಪ್ರಾಶಸ್ತ್ಯ ಹೆಚ್ಚು. ದೇವಿಯನ್ನು ಆರಾಧಿಸುವುದರಿಂದ ಆದಷ್ಟು ಶುಚಿಯಾಗಿ ಕಟ್ಟುನಿಟ್ಟಾಗಿ ನವರಾತ್ರಿ ವ್ರತವನ್ನು ಕೈಗೊಳ್ಳಬೇಕಾಗುತ್ತದೆ. ಈ ದಿನಗಳಲ್ಲಿ ಹೆಚ್ಚಿನವರು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಬರಿಯ ಹಣ್ಣು ಹಂಪಲುಗಳನ್ನು ಸೇವಿಸಿ ದೇವರ ನಾಮ ಸ್ಮರಣೆಯಲ್ಲಿ ನಿರತರಾಗಿರುತ್ತಾರೆ. ನವರಾತ್ರಿಗಾಗಿ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸುವುದು ಹೇಗೆ?
ನೀವು ಸೇವಿಸುವ ಆಹಾರ ಹೇಗಿರಬೇಕು ಮತ್ತ ಉಪವಾಸವನ್ನು ಕೈಗೊಂಡರೂ ಅದು ನಿಮ್ಮ ಆರೋಗ್ಯದ ಮೇಲೆ ಹೇಗೆ ಕೆಟ್ಟ ಪರಿಣಾಮವನ್ನು ಬೀರಬಾರದು ಎಂಬ ಅಂಶಗಳ ಮೇಲೆ ಇಂದಿನ ನಮ್ಮ ಲೇಖನ ದೃಷ್ಟಿ ಬೀರುತ್ತಿದೆ. ವ್ರತವನ್ನು ಕೈಗೊಳ್ಳುವವರು ಆದಷ್ಟು ಆಯುರ್ವೇದ ಗುಣಗಳಿರುವ ಆಹಾರವನ್ನು ಸೇವಿಸುವುದು ಹೆಚ್ಚು ಉತ್ತಮವಾಗಿರುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಆರ್ಯರ್ವೇದ ಗುಣಗಳಿರುವ ಆಹಾರಗಳ ಪಟ್ಟಿಯನ್ನು ನಾವು ನಿಮಗೆ ನೀಡುತ್ತಿದ್ದು ಇದು ನಿಜಕ್ಕೂ ನಿಮ್ಮ ವ್ರತಾಚರಣೆಯಲ್ಲಿ ಯಾವುದೇ ಹಾನಿಯನ್ನು ಉಂಟು ಮಾಡದೇ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ರಾತ್ರಿ ಸಮಯದಲ್ಲಿ ಆರೋಗ್ಯಪೂರ್ಣ ಆಹಾರಗಳನ್ನು ಸೇವಿಸಿ
ವ್ರತಾಚರಣೆ ಮಾಡುವ ಹಿಂದಿನ ದಿನ ಆರೋಗ್ಯ ಪೂರ್ಣ ಆಹಾರಗಳನ್ನು ಸೇವಿಸಿ ಇದರಿಂದ ವ್ರತದ ದಿನ ಸಾಕಷ್ಟು ಶಕ್ತಿ ನಿಮಗುಂಟಾಗುತ್ತದೆ. ವ್ರತದ ದಿನದಂದು ಆರೋಗ್ಯಪೂರ್ಣ ಜೀರ್ಣಕ್ರಿಯೆಗೆ ಇದು ಸಹಕಾರಿ.

ತಾಜಾ ಹಣ್ಣುಗಳನ್ನು ಸೇವಿಸಿ
ಉಪವಾಸದ ಸಮಯದಲ್ಲಿ ನೀವು ಸೇವಿಸುವ ಹಣ್ಣುಗಳು ತಾಜಾ ಆಗಿರಲಿ. ದೇಹಕ್ಕೆ ಅಗತ್ಯವಿರುವ ನ್ಯೂಟ್ರೀನ್ ಪ್ರೊಟೀನ್‌ಗಳನ್ನು ಇದು ಒದಗಿಸುತ್ತದೆ. ಬಾಳೆಹಣ್ಣನ್ನು ಒಂದು ಲೋಟ ಹಾಲಿನೊಂದಿಗೆ ಸ್ವೀಕರಿಸುವುದು ಹೊಟ್ಟೆಯನ್ನು ತುಂಬಿಸುತ್ತದೆ.

ಹಣ್ಣಿನ ರಸ
ತಾಜಾ ಹಣ್ಣಿನ ರಸವನ್ನು ಸೇವಿಸಿ. ಮಿಲ್ಕ್ ಶೇಕ್ ಅನ್ನು ಸೇವಿಸುವುದು ನಿಮ್ಮ ಹೊಟ್ಟೆ ತುಂಬುವಂತೆ ಮಾಡುತ್ತದೆ.

ಹುರಿದ ಆಹಾರಗಳು ಬೇಡ
ವ್ರತದ ಸಂದರ್ಭದಲ್ಲಿ, ಜನರು ಹುರಿದ ಆಹಾರಗಳನ್ನು ಸಾಕಷ್ಟು ತೆಗೆದುಕೊಳ್ಳುತ್ತಾರೆ. ಅತಿಯಾದ ತೂಕವನ್ನು ನಿವಾರಿಸಲು ಈ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸದಿರಿ.

ಖರ್ಜೂರ
ಬರೀ ಒಂದು ಆಹಾರ ತೆಗೆದುಕೊಳ್ಳುವಾಗ ಅದರ ಜೊತೆ ಖರ್ಜೂರವನ್ನು ತಿನ್ನಲು ಮರೆಯದಿರಿ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದು ಮಾತ್ರವಲ್ಲ, ಹೊಟ್ಟೆ ಹಸಿವನ್ನು ನಿಯಂತ್ರಿಸಿ, ನೀವು ಮಾಡುವ ಕೆಲಸದಲ್ಲಿ ಕಾರ್ಯಮಗ್ನರಾಗುವಂತೆ ಮಾಡುತ್ತದೆ.

ತುಪ್ಪ
ವ್ರತದ ಅಡುಗೆಗಳನ್ನು ತಯಾರಿಸುವಾಗ ತುಪ್ಪವನ್ನು ಹಾಕಿ ತಯಾರಿಸಲು ಮರೆಯಬೇಡಿ. ಇದು ನರಗಳಿಗೆ ಶಕ್ತಿಯನ್ನು ತುಂಬುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಬಾದಾಮಿ
ಆಹಾರವನ್ನು ತೆಗೆದುಕೊಳ್ಳುವಾಗ 2-3 ಬಾದಾಮಿಯನ್ನು ಬಾಯಿಗೆ ಹಾಕಿಕೊಳ್ಳಿ. ಇದರಲ್ಲಿರುವ ಪೋಷಕಾಂಶ ನಿಮ್ಮ ಸುಸ್ತನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಅಂಜೂರ
ಉಪವಾಸ ಮಾಡುವವರು ತಿನ್ನಬೇಕಾದ ಮತ್ತೊಂದು ಬೆಸ್ಟ್ ಹಣ್ಣೆಂದರೆ ಅಂಜೂರ. ಇದರಲ್ಲಿ ಅಧಿಕ ಪೋಷಕಾಂಶವಿದ್ದು, 2 ಹೊತ್ತು ಊಟ ಮಾಡದೆ ಬರೀ ಒಂದು ಹೊತ್ತು ಊಟ ಮಾಡಿದರೂ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಅಂಜೂರದಿಂದ ಪಡೆಯಬಹುದು.

ನಿಂಬೆ ಹಣ್ಣು
ಉಪವಾಸ ಮಾಡುವವರು ಆಹಾರವನ್ನು ತೆಗೆದುಕೊಳ್ಳುವಾಗ ಲೋಟ ನಿಂಬೆ ಶರಬತ್ತು ಕುಡಿಯಿರಿ. ಇದು ದೇಹದಲ್ಲಿ ಉತ್ಸಾಹವನ್ನು ತುಂಬಿ ಸುಸ್ತನ್ನು ಹೋಗಲಾಡಿಸುತ್ತದೆ.

ಸೇಬು ಹಣ್ಣುಗಳು
ಹಣ್ಣುಗಳನ್ನು ತಿನ್ನುವಾಗ ಸೀಸನ್ ಫುಡ್ ತಿನ್ನಿ, ಆಹಾರ ತಿಂದ ಬಳಿಕ ಒಂದು ಸೇಬು ತಿನ್ನುವುದು ಒಳ್ಳೆಯದು.

ಶುಂಠಿ
ಈರುಳ್ಳಿ, ಬೆಳ್ಳುಳ್ಳಿ ವ್ರತ ಅಡುಗೆಗಳಲ್ಲಿ ಬಳಸುವುದಿಲ್ಲ, ಆದರೆ ಶುಂಠಿಯನ್ನು ಬಳಸಬಹುದು, ಶುಂಠಿ ಬಳಸಿ, ಅದರ ಗುಣ ಪಡೆಯಿರಿ.

ಸರಿಯಾಗಿ ನೀರು ಕುಡಿಯಿರಿ
ಆರೋಗ್ಯಕರ ಉಪವಾಸಕ್ಕಾಗಿ ಇದೊಂದು ಒಳ್ಳೆಯ ಸಲಹೆಯಾಗಿದೆ. ಏನನ್ನೂ ತಿನ್ನದೆ ವ್ರತವನ್ನು ಹಿಡಿಯುವ ಭಕ್ತಾದಿಗಳು ಸಾಕಷ್ಟು ನೀರನ್ನು ಕುಡಿಯಲೇಬೇಕು. ಇದು ನಿಮ್ಮನ್ನು ಹೊಟ್ಟೆ ಭರ್ತಿಯಾಗಿರುವಂತೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.



Click it and Unblock the Notifications











