For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ಬಿಪಿ ತಗ್ಗಿಸುವ ವಿಧಾನಗಳು

By Hemanth P
|

ಬಿಪಿ ಅಥವಾ ರಕ್ತದೊತ್ತಡವು ನಮ್ಮ ದೇಹದಲ್ಲಿನ ರಕ್ತ ಪರಿಚಲನೆ ವ್ಯವಸ್ಥಿತವಾಗಿ ನಡೆಯಲು ಇರುವಂತಹ ಒತ್ತಡ. ಕೆಲವೊಮ್ಮೆ ಸಾಮಾನ್ಯಕ್ಕಿಂತ ಕಡಿಮೆ ಒತ್ತಡ ಇರಬಹುದು ಮತ್ತು ಕೆಲವು ಸಲ ಇದು ಸಾಮಾನ್ಯ ಒತ್ತಡಕ್ಕಿಂತ ಅಧಿಕವಾಗಿರಬಹುದು. ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ರಕ್ತ ಪರಿಚಲನೆಯ ಒತ್ತಡವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ತುಂಬಾ ಕಡಿಮೆ ಅಥವಾ ಅತಿಯಾದ ರಕ್ತದೊಡ್ಡವು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಕಡಿಮೆ ರಕ್ತದೊತ್ತಡ ಅಥವಾ ಕಡಿಮೆ ಬಿಪಿಯು ತಲೆತಿರುಗುವಿಕೆ, ವಾಕರಿಕೆ ಮತ್ತು ಅಪರೂಪದ ಸಂದರ್ಭದಲ್ಲಿ ಇದು ಆಘಾತ ಉಂಟುಮಾಡಬಹುದು. ಅಧಿಕ ರಕ್ತದೊತ್ತಡ ಅಥವಾ ಅಧಿಕ ಬಿಪಿಯು ಅತಿಯಾದ ಉದ್ವೇಗ, ಒತ್ತಡದಿಂದಾಗಿ ಮುಜುಗರ, ಅಧಿಕ ರಕ್ತದೊತ್ತಡ ಉಂಟಾಗಬಹುದು ಮತ್ತು ಕೆಲವೊಂದು ಸಂದರ್ಭಗಳಲ್ಲಿ ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಇದರಿಂದಾಗಿ ಪ್ರತಿಯೊಬ್ಬರು ರಕ್ತದೊತ್ತಡದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು ಮತ್ತು ಕಾಲಕಾಲಕ್ಕೆ ಇದನ್ನು ಪರೀಕ್ಷಿಸುತ್ತಿರಬೇಕು.

ಅಧಿಕ ರಕ್ತದೊತ್ತಡವು ಕಡಿಮೆ ರಕ್ತದೊತ್ತಡಕ್ಕಿಂತ ತುಂಬಾ ಅಪಾಯಕಾರಿ. ಅಧಿಕ ರಕ್ತದೊತ್ತಡವು ಅಪರೂಪದ ಪ್ರಕರಣಗಳಲ್ಲಿ ಮಾರಣಾಂತಿಕವಾಗಬಹುದು ಮತ್ತು ಇದು ಹೆಚ್ಚಿನ ಜನರಲ್ಲಿ ಕಂಡುಬರುತ್ತದೆ. ಇಂದಿನ ದಿನಗಳಲ್ಲಿ ಜನರಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಒತ್ತಡದ ಜೀವನವು ಇದಕ್ಕೆ ಕಾರಣವಾಗಿದೆ.

ರಕ್ತದೊತ್ತಡ ಕಡಿಮೆ ಮಾಡಲು ಹಲವಾರು ರೀತಿಯ ಮದ್ದುಗಳಿವೆ. ಈ ಮದ್ದು ನಿಮ್ಮ ದೇಹದಲ್ಲಿ ಒತ್ತಡ ನಿಯಂತ್ರಿಸಲು ನೆರವಾಗುತ್ತದೆ. ಆದರೆ ಇದನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ. ಒಂದು ಸಲ ಇದನ್ನು ಪಾಲಿಸದಿದ್ದರೆ ಅದು ಕೆಟ್ಟ ಪರಿಣಾಮ ಬೀರಬಹುದು.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಇದನ್ನು ಕಡಿಮೆಗೊಳಿಸಲು ಹಲವಾರು ಮನೆಮದ್ದು ಇದೆ. ಇದು ತುಂಬಾ ಸುರಕ್ಷಿತ ಮತ್ತು ಯಾವುದೇ ರೀತಿಯ ಅಡ್ಡಪರಿಣಾಮ ಬೀರುವುದಿಲ್ಲ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಇರುವ ಕೆಲವೊಂದು ಟಿಪ್ಸ್ ಗಳನ್ನು ಪಟ್ಟಿಮಾಡಲಾಗಿದೆ.

1. ನಿಯಮಿತ ವ್ಯಾಯಾಮ ಮಾಡಿ

1. ನಿಯಮಿತ ವ್ಯಾಯಾಮ ಮಾಡಿ

ವ್ಯಾಯಾಮವು ನಿಮ್ಮ ದೇಹದಲ್ಲಿನ ಒತ್ತಡ ಮತ್ತು ಉದ್ವೇಗ ಕಡಿಮೆ ಮಾಡುತ್ತದೆ. ವ್ಯಾಯಾಮವು ನಿಮ್ಮ ದೇಹದಲ್ಲಿ ಒಳ್ಳೆಯ ಭಾವನೆ ಮೂಡಿಸುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಇದು ಉದ್ವೇಗ ಕಡಿಮೆ ಮಾಡಿ ಅಧಿಕ ಒತ್ತಡ ತಗ್ಗಿಸುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹದ ತೂಕವು ನಿಯಂತ್ರಣದಲ್ಲಿರುತ್ತದೆ. ಅತಿಯಾದ ತೂಕವು ರಕ್ತದೊತ್ತಡ ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ತಗ್ಗಿಸಲು ನಿಯಮಿತವಾಗಿ ವ್ಯಾಯಾಮ ತುಂಬಾ ಲಾಭಕಾರಿ.

2. ಆರೋಗ್ಯಕರ ಆಹಾರ

2. ಆರೋಗ್ಯಕರ ಆಹಾರ

ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಆಹಾರ ಮತ್ತು ಅಧಿಕ ಕೊಬ್ಬು ಇರುವ ಆಹಾರವು ವ್ಯಕ್ತಿಯೊಬ್ಬನಲ್ಲಿ ಬಿಪಿ ಉಂಟುಮಾಡಬಹುದು. ರಕ್ತದೊತ್ತಡ ಹೆಚ್ಚಿಸುವ ಆಹಾರಗಳನ್ನು ಕಡೆಗಣಿಸಿ. ಕೆಲವೊಂದು ಹಣ್ಣುಗಳು, ಧಾನ್ಯ ಮತ್ತು ತರಕಾರಿಗಳು ಒತ್ತಡವನ್ನು 2-5 ಎಂಎಂನಷ್ಟು ಕಡಿಮೆ ಮಾಡುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಸಲಾಡ್, ಧಾನ್ಯದ ಬ್ರೆಡ್, ಹಣ್ಣುಗಳು, ಸೂಪ್ ಇತ್ಯಾದಿಗಳಿರಲಿ ಮತ್ತು ಇದನ್ನು ನಿಯಮಿತವಾಗಿ ಸೇವಿಸಿ. ಒಳ್ಳೆಯ ಆಹಾರಕ್ರಮ ಹಾಗೂ ಆಹಾರವು ರಕ್ತದೊತ್ತಡವನ್ನು 2-5 ಎಂಎಂನಷ್ಟು ಕಡಿಮೆ ಮಾಡುತ್ತದೆ. ಮನೆಮದ್ದನ್ನು ಉಪಯೋಗಿಸಿ ಬಿಪಿಯನ್ನು ನೈಸರ್ಗಿಕವಾಗಿ ತಗ್ಗಿಸಲು ಇದು ಒಳ್ಳೆಯ ಟಿಪ್ಸ್.

3. ಚಟಗಳನ್ನು ಬಿಟ್ಟುಬಿಡಿ

3. ಚಟಗಳನ್ನು ಬಿಟ್ಟುಬಿಡಿ

ಸಿಗರೇಟ್, ತಂಬಾಕು ಮತ್ತು ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ. ಆಲ್ಕೋಹಾಲ್ ನಲ್ಲಿರುವ ಕೆಲವೊಂದು ಅಂಶಗಳು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಆದರೆ ನಿಯಮಿತವಾಗಿ ಅಧಿಕ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆಯಿಂದ ರಕ್ತದೊತ್ತಡವು 5-10 ಎಂಎಂನಷ್ಟು ಹೆಚ್ಚಾಗುತ್ತದೆ. ಅದೇ ರೀತಿ ತಂಬಾಕು ಮತ್ತು ಸಿಗರೇಟ್ ನಿಂದ ಕೂಡ. ರಕ್ತದೊತ್ತಡಕ್ಕೆ ದೇಹದಲ್ಲಿನ ಕೆಫಿನ್ ಮಟ್ಟವು ಕಾರಣವಾಗಬಹುದು.

4. ಉಪ್ಪು ಕಡಿಮೆ ಮಾಡಿ

4. ಉಪ್ಪು ಕಡಿಮೆ ಮಾಡಿ

ಉಪ್ಪಿನಲ್ಲಿ ಸೋಡಿಯಂ ಅಂಶವಿದೆ. ಸೋಡಿಯಂ ರಕ್ತದೊತ್ತಡ ಹೆಚ್ಚಿಸುತ್ತದೆ ಮತ್ತು ಸಮಸ್ಯೆ ಉಂಟು ಮಾಡುತ್ತದೆ. ಉಪ್ಪಿನ ಮೂಲಕ ನಮ್ಮ ದೇಹವು ಸೋಡಿಯಂನ್ನು ಹೀರಿಕೊಳ್ಳುತ್ತದೆ. ಬಿಪಿ ಕಡಿಮೆ ಮಾಡಲು ದಿನದಲ್ಲಿ 5 ಗ್ರಾಂಗಿಂತ ಹೆಚ್ಚು ಉಪ್ಪು ಸೇವಿಸಬೇಡಿ. ಸೋಡಿಯಂ ಇರುವ ಇತರ ಆಹಾರಗಳನ್ನು ಕೂಡ ಕಡೆಗಣಿಸಿ.

5. ನಿಯಮಿತವಾಗಿ ಬಿಪಿ ಪರೀಕ್ಷಿಸಿ

5. ನಿಯಮಿತವಾಗಿ ಬಿಪಿ ಪರೀಕ್ಷಿಸಿ

ರಕ್ತದೊತ್ತಡದ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬಾರದು. ನಿಯಮಿತವಾಗಿ ಪರೀಕ್ಷೆ ಮಾಡುವುದರಿಂದ ರಕ್ತದೊತ್ತಡದ ಏರುಪೇರನ್ನು ತಿಳಿದುಕೊಳ್ಳಬಹುದು. ದೊಡ್ಡ ಮಟ್ಟದ ಏರುಪೇರಿದ್ದರೆ ಆಗ ನೀವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಬಿಪಿ ಇಳಿಸಲು ನೀವು ತೆಗೆದುಕೊಳ್ಳುತ್ತಿರುವ ಮನೆಮದ್ದಿನ ಪರಿಣಾಮ ತಿಳಿದುಕೊಳ್ಳಲು ಇದು ನೆರವಾಗಲಿದೆ. ಬಿಪಿಯನ್ನು ನೈಸರ್ಗಿಕವಾಗಿ ತಗ್ಗಿಸಲು ಈ ಮೇಲಿನ ಟಿಪ್ಸ್ ಗಳನ್ನು ಪಾಲಿಸಿ, ಯಾವಾಗಲೂ ಸಂತಸದಿಂದ ಮತ್ತು ಒತ್ತಡ ರಹಿತವಾಗಿರಿ.

English summary

How To Lower BP Naturally

BP or blood pressure is the pressure with which the systematic circulation of blood happens in our body. This pressure sometimes become lower than the normal pressure and sometimes is higher than the normal pressure.
Story first published: Wednesday, January 8, 2014, 15:09 [IST]
X
Desktop Bottom Promotion