For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಮಿಲನಕ್ಕೆ ಪೂರಕ ಈ 20 ಕಾರಣಗಳು!

By Hemanth P
|

ಮದುವೆಯಾದ ದಂಪತಿ ಅಷ್ಟೊಂದು ಆರೋಗ್ಯವಾಗಿರಲು ಕಾರಣವೇನೆಂದು ನಿಮಗೆ ಅಚ್ಚರಿಯಾಗಬಹುದು. ಆದರೆ ಇದಕ್ಕೆ ಏಕೈಕ ಕಾರಣ ಸಂಭೋಗ. ಬೇಗನೆ ಮಲಗಿ ಕೆಲವೇ ನಿಮಿಷಗಳಲ್ಲಿ ಸಂಭೋಗ ನಡೆಸುವ ಜೋಡಿ ಕೂಡ ದೀರ್ಘಕಾಲ ಬಾಳುತ್ತಾರೆ. ಸಂಭೋಗ ಮತ್ತು ಆ ಸಮಯದಲ್ಲಿ ಕಳೆಯುವ ರಸನಿಮಿಷಗಳಲ್ಲಿ ಅದ್ಭುತವಾದ ಕೆಲವೊಂದು ಗುಣಗಳಿವೆ.

ಸಂಭೋಗದಿಂದ ನೀವು ಆರೋಗ್ಯವಾಗಿರಬಲ್ಲ 20 ಕಾರಣಗಳನ್ನು ನೀವು ತಿಳಿದುಕೊಂಡರೆ ಆಗ ದಿನನಿತ್ಯ ಮಲಗುದಕ್ಕಿಂತ ಬೇಗನೆ ಮಲಗಬಹುದು. ದಿನನಿತ್ಯ ಸಂಭೋಗ ನಡೆಸುವುದರಿಂದ ದಂಪತಿಗೆ ಬರುವ ಸಾಮಾನ್ಯ ರೋಗಗಳಾದ ಜ್ವರ ಮತ್ತು ತಲೆನೋವು ಕಡಿಮೆಯಾಗುತ್ತದೆ.

ಸಂಭೋಗದ ವೇಳೆ ದೇಹವು ಒಂದು ರಾಸಾಯನಿಕವನ್ನು ಮೆದುಳಿನಲ್ಲಿ ಬಿಡುಗಡೆ ಮಾಡುತ್ತದೆ. ಅದು ದೇಹವನ್ನು ಆರಾಮವಾಗಿರುವಂತೆ ಸೂಚನೆಯನ್ನು ಕಳುಹಿಸುತ್ತದೆ. ಮಹಿಳೆಯ ರಕ್ತಕಣಗಳಲ್ಲಿ ಬಿಡುಗಡೆಯಾಗುವ ಆಕ್ಸಿಟೋಸಿನ್ ಎನ್ನುವ ಸಂಯುಕ್ತವು ಒತ್ತಡವನ್ನು ಕಡಿಮೆ ಮಾಡುತ್ತದೆ.

ಮಹಿಳೆಯರ ಜನನಾಂಗ ಸಮಸ್ಯೆಗೆ ಸೂಕ್ತ ಸಲಹೆಗಳು

ಇದನ್ನು ಮುದ್ದಾಡುವ ಅಥವಾ ಒಟ್ಟಾಗಿಸುವ ಹಾರ್ಮೋನು ಎಂದು ಕರೆಯಲಾಗುತ್ತದೆ. ಈ ಹಾರ್ಮೋನು ಎಷ್ಟು ಪ್ರಬಲವಾಗಿದೆಯೆಂದರೆ ಅದು ದೇಹದಲ್ಲಿ ಶಾಂತ ಮತ್ತು ಕ್ಷೇಮವನ್ನು ಉಂಟುಮಾಡುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ. ಸಂಭೋಗವು ಇಷ್ಟೆಲ್ಲ ಆರೋಗ್ಯ ಲಾಭವನ್ನು ನೀಡುವಾಗ ನಾವಿದನ್ನು ದಿನಾಲೂ ಅನುಭವಿಸಿ ಫಿಟ್ ಆಗಿ ಉಳಿದುಕೊಳ್ಳಬಹುದಲ್ಲವೇ? ಪ್ರತೀದಿನ ಸಂಭೋಗ ನಡೆಸಿದರೆ ಸಿಗುವ ಆರೋಗ್ಯ ಲಾಭಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸೋಂಕು ನಿರೋಧಕ

ಸೋಂಕು ನಿರೋಧಕ

ಸಂಭೋಗದಿಂದ ದೇಹದಲ್ಲಿ ಉತ್ತಮ ಮಟ್ಟದ ಹಾರ್ಮೋನು ಮತ್ತು ಇತರ ಸಂಯುಕ್ತಗಳು ಬಿಡುಗಡೆಯಾಗುವ ಕಾರಣ ಅದು ಸೋಂಕನ್ನು ನಿರೋಧಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುವ ಕಾರಣ ದೇಹದಲ್ಲಿ ಸೋಂಕು ಕಡಿಮೆಯಾಗುತ್ತದೆ.

ಉತ್ತಮ ನಿದ್ರೆ

ಉತ್ತಮ ನಿದ್ರೆ

ಸಂಭೋಗದ ವೇಳೆ ಬಿಡುಗಡೆಯಾಗುವ ಆಕ್ಸಿಟೋಸಿನ್ ನಿಂದ ಉತ್ತಮ ನಿದ್ರೆ ಬರುತ್ತದೆ. ನಿಮಗೆ ರಾತ್ರಿ ನಿದ್ರೆ ಬರದೇ ಇದ್ದರೆ ಸಂಭೋಗವು ನಿಮಗೆ ಉತ್ತಮ ನಿದ್ರೆಗೆ ಕಾರಣವಾಗಬಹುದು.

ಹೃದಯದ ಆರೋಗ್ಯ ವೃದ್ಧಿ

ಹೃದಯದ ಆರೋಗ್ಯ ವೃದ್ಧಿ

ದಿನಾಲೂ ಸಂಭೋಗ ನಡೆಸುವುದರಿಂದ ದೇಹದಲ್ಲಿನ ರಕ್ತನಾಳಗಳಲ್ಲಿ ರಕ್ತದ ಸಂಚಲನವು ಸರಿಯಾಗಿ ಆಗುತ್ತದೆ. ಇದರಿಂದ ಹೃದಯದ ಆರೋಗ್ಯವು ಉತ್ತಮವಾಗುತ್ತದೆ.

ಹಾರ್ಮೋನು ಮಟ್ಟ ಸಮತೋಲನದಲ್ಲಿಡಲು

ಹಾರ್ಮೋನು ಮಟ್ಟ ಸಮತೋಲನದಲ್ಲಿಡಲು

ದಿನನಿತ್ಯ ಸಂಭೋಗ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಉತ್ತಮ ಲಾಭವೆಂದರೆ ಅದು ಹಾರ್ಮೋನು ಮಟ್ಟವನ್ನು ಸರಿಯಾಗಿಡುತ್ತದೆ. ನಿಮ್ಮ ಋತುಚಕ್ರದ ಒಂದು ವಾರಕ್ಕೆ ಮೊದಲು ದಿನನಿತ್ಯ ಸಂಭೋಗದಲ್ಲಿ ತೊಡಗಿದರೆ ಆಗ ಹಾರ್ಮೋನುಗಳ ಸಮತೋಲನಕ್ಕೆ ನೆರವಾಗುತ್ತದೆ.

ಸೆಳೆತ ತಗ್ಗಿಸುತ್ತದೆ

ಸೆಳೆತ ತಗ್ಗಿಸುತ್ತದೆ

ಋತುಚಕ್ರದ ಒಂದು ದಿನದ ಮೊದಲು ಸಂಭೋಗ ನಡೆಸುವುದರಿಂದ ಸೆಳೆತದಿಂದ ಪಾರಾಗಬಹುದು. ಸಂಭೋಗದಲ್ಲಿರುವ ಗುಣಪಡಿಸುವ ಅಂಶವು ಹೊಟ್ಟೆ ಉಬ್ಬರುವುದನ್ನು ತಡೆಯುತ್ತದೆ.

ಸ್ನಾಯುಗಳನ್ನು ಬಲಪಡಿಸುತ್ತದೆ

ಸ್ನಾಯುಗಳನ್ನು ಬಲಪಡಿಸುತ್ತದೆ

ಸಂಭೋಗ ನಡೆಸುವಾಗ ಸ್ನಾಯುಗಳು, ಅದರಲ್ಲೂ ಶ್ರೋಣಿಯ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಮಹಿಳೆಯರಲ್ಲಿ ಸಂಭೋಗದ ವೇಳೆ ಶ್ರೋಣಿಯ ಸ್ನಾಯುಗಳು ಬಿಗಿಯಾಗುವ ಕಾರಣದಿಂದ ಗರ್ಭಿಣಿಯಾದಾಗ ಅದು ಬಲಿಷ್ಠವಾಗುತ್ತದೆ.

ಬೆನ್ನಿಗೆ ಒಳ್ಳೆಯದು

ಬೆನ್ನಿಗೆ ಒಳ್ಳೆಯದು

ಸಂಭೋಗದ ಮತ್ತೊಂದು ಆರೋಗ್ಯ ಲಾಭವೆಂದರೆ ಅದು ಬೆನ್ನಿಗೆ ತುಂಬಾ ಒಳ್ಳೆಯದು. ಸಂಭೋಗದ ವೇಳೆ ಸೊಂಟಕ್ಕೆ ಹೆಚ್ಚಿನ ವ್ಯಾಯಾಮವಾಗುವ ಕಾರಣ ಅದು ಟ್ರೆಡ್ ಮಿಲ್ ಅಥವಾ ಜಿಮ್ ನಲ್ಲಿ ಭಾರ ಎತ್ತುವುದಕ್ಕೆ ಸಮ.

ಪಾರ್ಶ್ವವಾಯು ತಡೆಯುತ್ತದೆ

ಪಾರ್ಶ್ವವಾಯು ತಡೆಯುತ್ತದೆ

ಅಪರೂಪಕ್ಕೆ ಸಂಭೋಗ ಮಾಡುವವರಿಗಿಂತ ವಾರದಲ್ಲಿ ಎರಡಕ್ಕಿಂತ ಹೆಚ್ಚು ಸಲ ಸಂಭೋಗ ನಡೆಸುವ ವ್ಯಕ್ತಿಗೆ ಪಾರ್ಶ್ವವಾಯು ಬರುವ ಸಾಧ್ಯತೆ ತುಂಬಾ ಕಡಿಮೆ.

ಅಸ್ಥಿರಂಧ್ರತೆಗೆ ತಡೆ

ಅಸ್ಥಿರಂಧ್ರತೆಗೆ ತಡೆ

ನಿಯಮಿತವಾಗಿ ಸಂಭೋಗದಲ್ಲಿ ತೊಡಗುವ ಮಹಿಳೆಯರಲ್ಲಿ ಟೆಸ್ಟೊಸ್ಟೆರೊನ್ ಮಟ್ಟವು ಅಧಿಕವಾಗಿರುವುದರಿಂದ ಇದು ಮೂಳೆ ಸಾಂದ್ರತೆ ಹೆಚ್ಚಿಸಿ, ಅಸ್ಥಿರಂಧ್ರತೆಯನ್ನು ತಡೆಯುತ್ತದೆ.

ವಯಸ್ಸಾಗುವುದರ ವಿರುದ್ಧ ಹೋರಾಟ

ವಯಸ್ಸಾಗುವುದರ ವಿರುದ್ಧ ಹೋರಾಟ

ಸಂಭೋಗದ ಅತ್ಯುತ್ತಮ ಆರೋಗ್ಯ ಲಾಭವೆಂದರೆ ಅದು ವಯಸ್ಸಾಗುವುದರ ವಿರುದ್ಧ ಹೋರಾಡುತ್ತದೆ. ಸಂಭೋಗದಿಂದ ಉತ್ತಮ ನಿದ್ರೆ ಬರುವ ಕಾರಣ ಅದು ನಿಮ್ಮ ತ್ವಚೆಯನ್ನು ಸುಂದರವಾಗಿಸುತ್ತದೆ.

ನಿಮ್ಮನ್ನು ಫಿಟ್ ಆಗಿಡುತ್ತದೆ

ನಿಮ್ಮನ್ನು ಫಿಟ್ ಆಗಿಡುತ್ತದೆ

ದಿನನಿತ್ಯ ಸಂಭೋಗ ನಡೆಸುವುದರಿಂದ ಅದು ನಿಮ್ಮನ್ನು ಫಿಟ್ ಆಗಿಡುತ್ತದೆ. 30 ನಿಮಿಷಗಳ ರಸನಿಮಿಷಗಳು ಮತ್ತು ಅನ್ಯೋನ್ಯತೆಯು ಜಿಮ್ ನಲ್ಲಿ ಕಳೆಯುವ 30 ನಿಮಿಷಗಳಿಗೆ ಸಮ.

ಜನನಾಂಗದ ಕಾನ್ಸರ್‌ನ ಅಪಾಯ ಕಡಿಮೆ

ಜನನಾಂಗದ ಕಾನ್ಸರ್‌ನ ಅಪಾಯ ಕಡಿಮೆ

ಪುರುಷರಿಗೆ ಇದು ಜನನಾಂಗದ ಕ್ಯಾನ್ಸರ್ ನ ಅಪಾಯವನ್ನು ಭಾರೀ ಮಟ್ಟದಲ್ಲಿ ಕಡಿಮೆ ಮಾಡುತ್ತದೆ. ನೀವು ಹೊರಚೆಲ್ಲುವ ಹೆಚ್ಚಿನ ದ್ರವಗಳು ಜನನಾಂಗದ ಗ್ರಂಥಿಯಿಂದ ಬರುತ್ತದೆ. ಈ ದ್ರವಗಳು ಹೊರಬರುವುದು ನಿಂತು ಗ್ರಂಥಿಗಳಲ್ಲಿ ಸಂಗ್ರಹವಾದಾಗ ಅದು ಜನನಾಂಗದ ಕ್ಯಾನ್ಸರ್ ನಂತಹ ಸಮಸ್ಯೆಗಳಿಗೆ ಕಾರಣವಾಗಹುದು.

ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳ್ಳಲು

ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳ್ಳಲು

ಇದು ನಿಮ್ಮ ದೇಹಕ್ಕೆ ಒಳ್ಳೆಯ ವ್ಯಾಯಾಮ ನೀಡುವ ಕಾರಣ ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಹೃದಯವು ಹೆಚ್ಚಿನ ರಕ್ತವನ್ನು ಹೊರಹಾಕುವುದರಿಂದ ನೀವು ಕ್ರಿಯಾತ್ಮಕವಾಗಿ ಮತ್ತು ಎಲ್ಲಾ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

ನೈಸರ್ಗಿಕ ನೋವು ನಿವಾರಕ

ನೈಸರ್ಗಿಕ ನೋವು ನಿವಾರಕ

ಸಂಭೋಗದ ವೇಳೆ ಪುರುಷ ಮತ್ತು ಮಹಿಳೆಯ ದೇಹವು ಎಂಡ್ರೋಫಿನ್ಸ್ ಎನ್ನುವ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಇದು ನೈಸರ್ಗಿಕ ನೋವುನಿವಾರಕದಂತೆ ಕೆಲಸ ಮಾಡುತ್ತದೆ.

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ಸಂಭೋಗದ ವೇಳೆ ಬಿಡುಗಡೆಯಾಗುವ ಡೋಪಮೈನ್ ನ್ನು ಬಿಡುಗಡೆ ಮಾಡುತ್ತದೆ. ಇದು ಒತ್ತಡದ ಹಾರ್ಮೋನಿನ ವಿರುದ್ಧ ಹೋರಾಡುತ್ತದೆ. ಇದು ಸಂಭೋಗದ ಅತ್ಯುತ್ತಮ ಆರೋಗ್ಯ ಲಾಭ.

ನಿಮಿರುವಿಕೆ ನಿಷ್ಕ್ರೀಯತೆಗೆ ಒದ್ದೋಡಿಸುತ್ತದೆ

ನಿಮಿರುವಿಕೆ ನಿಷ್ಕ್ರೀಯತೆಗೆ ಒದ್ದೋಡಿಸುತ್ತದೆ

ಇದು ಪುರುಷರಿಗೆ ಆಗುವ ಅತ್ಯುತ್ತಮ ಆರೋಗ್ಯ ಲಾಭ. ಕಾಮೋತ್ತೇಜನದಿಂದ ರಕ್ತಸಂಚಲನವು ಹೆಚ್ಚಾಗಿ ಅದು ಶಿಶ್ನದ ಅಪಧಮನಿಗಳಿಗೆ ಸಂಚಾರವಾಗುತ್ತದೆ. ಇದರಿಂದ ಅಂಗಾಂಶ ಆರೋಗ್ಯಕರವಾಗಿ ಸಂಭೋಗ ನಿರಂತವಾಗಿರುವಂತೆ ಮಾಡುತ್ತದೆ.

ಸಾಮರ್ಥ್ಯವೃದ್ಧಿ

ಸಾಮರ್ಥ್ಯವೃದ್ಧಿ

ಇದು ನಿಮ್ಮ ಸಾಮರ್ಥ್ಯವನ್ನು ಅತ್ಯಧಿಕ ಮಟ್ಟದಲ್ಲಿ ಹೆಚ್ಚಿಸುತ್ತದೆ. 15ರಿಂದ 30 ನಿಮಿಷ ಕಾಲ ರಸನಿಮಿಷಗಳಲ್ಲಿ ತೊಡಗಿದರೆ ಉತ್ತಮ ನಿದ್ರೆಯೊಂದಿಗೆ ಮರುದಿನ ನಿಮ್ಮ ಸಾಮರ್ಥ್ಯವು ವೃದ್ಧಿಯಾಗಿರುತ್ತದೆ.

ತಲೆನೋವಿಗೆ ತಕ್ಷಣದ ಮದ್ದು

ತಲೆನೋವಿಗೆ ತಕ್ಷಣದ ಮದ್ದು

ಇದು ನೋವು ನಿವಾರಕ ಮತ್ತು ಹಲವಾರು ಸಂಯುಕ್ತ ಹಾಗೂ ರಾಸಾಯನಿಕ ಬಿಡುಗಡೆ ಮಾಡುತ್ತದೆ. ಇದರಿಂದ ತಲೆನೋವು ನಿವಾರಣೆಯಾಗುತ್ತದೆ.

ಜ್ವರಕ್ಕೂ ಒಳ್ಳೆಯದು

ಜ್ವರಕ್ಕೂ ಒಳ್ಳೆಯದು

ಸಂಭೋಗದಿಂದ ನೀವು ಹಲವಾರು ರೀತಿಯ ರೋಗಗಳನ್ನು ದೂರವಿರಿಸಬಹುದು. ಅದರಲ್ಲಿ ಜ್ವರವೂ ಒಂದು. ದೇಹದಲ್ಲಿ ಬಿಡುಗಡೆಯಾಗುವ ಹಲವಾರು ಸಂಯುಕ್ತಗಳು ಜ್ವರ ಬರದಂತೆ ತಡೆಯುತ್ತದೆ.

ಗಾಯ ಗುಣಮುಖಕ್ಕೆ

ಗಾಯ ಗುಣಮುಖಕ್ಕೆ

ಸಂಭೋಗದ ಉತ್ತಮ ಆರೋಗ್ಯ ಲಾಭವೆಂದರೆ ಅದು ಗಾಯವನ್ನು ಗುಣಮುಖವಾಗಿಸುತ್ತದೆ. ಮನಶಾಸ್ತ್ರಜ್ಞರಿಂದ ಉತ್ತಮ ರೀತಿಯಲ್ಲಿ ಇದು ಖಿನ್ನತೆಯನ್ನು ನಿವಾರಿಸುತ್ತದೆ.

English summary

20 Reasons To Have Intercourse Daily

Ever wondered how married couples remain so healthy? There is only one reason behind it - intercourse. Couples who get into bed early to have a quickie also have a longer lifespan as sex helps you to stay happy and active.
Story first published: Thursday, August 7, 2014, 11:42 [IST]
X
Desktop Bottom Promotion