For Quick Alerts
ALLOW NOTIFICATIONS  
For Daily Alerts

ಕೆಮ್ಮಿನ ನಿವಾರಣೆಗೆ ಅತಿ ಸೂಕ್ತವಾಗಿರುವ 15 ಸಲಹೆಗಳು

By Super
|

ಮಳೆಗಾಲ ಕಳೆದು ವಸಂತನ ಆಗಮನದೊಂದಿಗೇ ಆಗಮನವಾಗುತ್ತದೆ ಸುರಿಯುವ ಮೂಗು, ನೆಗಡಿ, ಜ್ವರ, ಮೈಕೈ ನೋವು ಮತ್ತು ಮುಖ್ಯವಾಗಿ ಕೆಮ್ಮು. ಇವೆಲ್ಲಾ ನಮ್ಮ ದೇಹವನ್ನು ಪ್ರವೇಶಿಸಿದ ವೈರಸ್ಸುಗಳನ್ನು ಎದುರಿಸಲು ನಮ್ಮ ದೇಹ ಬಳಸಿದ ರಕ್ಷಣಾ ವ್ಯವಸ್ಥೆಗಳು. ಸಾಮಾನ್ಯವಾಗಿ ಇವುಗಳನ್ನು ಫ್ಲೂ ಜ್ವರ ಎಂದು ಕರೆಯುತ್ತೇವೆ. ಈ ಜ್ವರವನ್ನು ಕಡಿಮೆಗೊಳಿಸುವುದೆಂದರೆ ಈಗಾಗಲೇ ವೈರಸ್ಸುಗಳ ವಿರುದ್ಧ ಹೋರಾಡುತ್ತಿರುವ ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಬೆಂಬಲ ಸೂಚಿಸುವುದಷ್ಟೇ. ಜ್ವರ, ಮೈಕೈ ನೋವುಗಳಿಗಿಂತಲೂ ಸುರಿಯುವ ಮೂಗು, ಅದಕ್ಕಿಂತಲೂ ಹೆಚ್ಚಾಗಿ ಸತತವಾಗಿ ಬರುವ ಕೆಮ್ಮು ಜೀವವನ್ನು ಹಿಂಡಿಬಿಡುತ್ತವೆ. ಶೀತ, ಕೆಮ್ಮು, ಕಫ ಹೋಗಲಾಡಿಸುವ ಕಷಾಯ

ಆದರೆ ಕೆಮ್ಮಿಗೆ ಕೇವಲ ಫ್ಲೂ ಒಂದೇ ಕಾರಣ ಎಂದು ಹೇಳುವ ಹಾಗಿಲ್ಲ, ಗಾಳಿಯಲ್ಲಿನ ಪ್ರದೂಷಣೆ, ಯಾವುದೋ ಪರಾಗ ಅಥವಾ ಹೊಗೆಯ ಕಾರಣದ ಅಲರ್ಜಿ, ಅಸ್ತಮಾ, ಒಣಹವೆ ಹಾಗೂ ಧೂಮಪಾನಗಳೂ ಕೆಮ್ಮಿಗೆ ಕಾರಣವಾಗಬಲ್ಲವು. ಬದಲಾಗಿರುವ ಜೀವನಶೈಲಿಯ ಮೂಲಕವೂ ಕೆಮ್ಮಿನ ಸಹಿತ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತಿವೆ. ಸಾಮಾನ್ಯವಾಗಿ ನಾವೆಲ್ಲಾ ಈ ಲಕ್ಷಣಗಳು ಕಂಡ ಕೂಡಲೇ ವೈದ್ಯರ ಬಳಿ ಓಡಿ ಆಲೋಪಥಿಯ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಈ ಔಷಧಿಗಳಿಂದ ಥಟ್ಟನೇ ನಮ್ಮ ಕೆಮ್ಮು ಮಾಯವಾಗಿಬಿಡುತ್ತದೆ ಎಂದು ನಾವೆಲ್ಲಾ ನಂಬಿದ್ದೇವೆ.

ವಾಸ್ತವವೇನೆಂದರೆ ಇದಕ್ಕಿಂತಲೂ ಪರಿಣಾಮಕಾರಿಯಾದ ಔಷಧಿಗಳು ನಮ್ಮ ಅಡುಗೆಮನೆಯಲ್ಲಿಯೇ ಇದೆ! ನಮ್ಮ ಹಿರಿಯರು ಈ ಸುಲಭ ಉಪಾಯಗಳನ್ನು ಅನುಸರಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದರು, ಅಗ್ಗವಾಗಿರುವುದು ಒಂದು ಪ್ರಮುಖ ಕಾರಣವಾದರೆ ಯಾವುದೋ ಅಡ್ಡಪರಿಣಾಮಗಳಿಲ್ಲದಿರುವುದು ಈ ಔಷಧಿಗಳನ್ನು ಬಳಸಲು ಇನ್ನೊಂದು ಸಕಾರಣವಾಗಿದೆ. ಈ ಕೆಮ್ಮಿಗೆ ಥಟ್ಟನೇ ಆರಾಮ ನೀಡುವ ಹದಿನೈದು ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಶೀತ ಮತ್ತು ಕೆಮ್ಮಿನ ಮೂಲಕ ನಮ್ಮ ದೇಹದಿಂದ ಸಾಕಷ್ಟು ನೀರು ಹೊರಹರಿಯುತ್ತದೆ. ಇದಕ್ಕೂ ಮುಖ್ಯವಾಗಿ ವೈರಸ್ಸುಗಳ ವಿರುದ್ಧ ಸೆಣೆಸಲು ನಮ್ಮ ಬಿಳಿರಕ್ತಕಣಗಳಿಗೆ ಹೆಚ್ಚಿನ ನೀರು ಬೇಕು. ಆ ಕಾರಣ ಸಾಧ್ಯವಾದರೆ ಬಿಸಿನೀರು, ಇಲ್ಲದಿದ್ದರೆ ಉಗುರುಬೆಚ್ಚನೆಯ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಯುತ್ತಲೇ ಇರುವುದು ಒಳ್ಳೆಯದು. ತಣ್ಣನೆಯ ಅಥವಾ ಐಸ್ ನೀರು ಸರ್ವಥಾ ಸಲ್ಲದು.

ಕೆಮ್ಮಿನ ಗುಳಿಗೆಗಳನ್ನು ಸೇವಿಸಿ (lozenges)

ಕೆಮ್ಮಿನ ಗುಳಿಗೆಗಳನ್ನು ಸೇವಿಸಿ (lozenges)

ವಾಸ್ತವವಾಗಿ ಕೆಮ್ಮಿಗೆ ಕಾರಣ ನಮ್ಮ ಬಿಳಿರಕ್ತಕಣಗಳು. ಇವು ವೈರಸ್ಸುಗಳೊಂದಿಗೆ ಹೋರಾಡಿ ತಾವೂ ಸತ್ತು ವೈರಿಗಳನ್ನೂ ಸಾಯಿಸಿ ಕಫದ ಮೂಲಕ ದೇಹದಿಂದ ಹೊರಬರುತ್ತವೆ. ಈ ಕಫ ಗಂಟಲಿನ ಒಳಭಾಗ ಹಾಗೂ ಮೂಗಿನ ಹೊಳ್ಳೆಗಳ ಹಿಂಭಾಗದ ಗೋಡೆಗಳಲ್ಲಿ ಅಂಟಿಕೊಳ್ಳುತ್ತದೆ. ಕೆಮ್ಮಿನ ಮೂಲಕ ಗಂಟಲ ಒಳಭಾಗದಲ್ಲಿ ಮುಂಭಾಗದಲ್ಲಿರುವ ಕಫ ಸುಲಭವಾಗಿ ಹೊರಬರುತ್ತದೆ. ಆದರೆ ಹಿಂಭಾಗದಲ್ಲಿರುವ ಕಫ ಅಷ್ಟು ಸುಲಭವಾಗಿ ಬರುವುದಿಲ್ಲ. ಏಕೆಂದರೆ ಗಾಳಿಯ ಒತ್ತಡ ಹಿಂಭಾಗದಲ್ಲಿ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲಿ ದೊರಕುವ ಮೆಂಥಾಲ್ ಯುಕ್ತ ಗುಳಿಗೆಗಳು ಈ ಕಫವನ್ನು ಸಡಿಲಗೊಳಿಸುತ್ತವೆ. ಮುಂದಿನ ಕೆಮ್ಮಿನ ಮೂಲಕ ಈ ಸಡಿಲವಾದ ಕಫ ಸುಲಭವಾಗಿ ಹೊರಬರುತ್ತದೆ.

ಬಿಸಿಯಾದ ಕಾಫಿ ಅಥವಾ ಟೀ ಕುಡಿಯಿರಿ

ಬಿಸಿಯಾದ ಕಾಫಿ ಅಥವಾ ಟೀ ಕುಡಿಯಿರಿ

ಬಿಸಿಬಿಸಿಯಾದ ಕಾಫಿ ಅಥವಾ ಟೀ ಕುಡಿಯುವ ಮೂಲಕವೂ ಗಂಟಲ ಕಫ ಸಡಿಲಗೊಳ್ಳುತ್ತದೆ. ವಾಸ್ತವವಾಗಿ ಬಿಸಿಪೇಯ ಗಂಟಲಲ್ಲಿಳಿಯುತ್ತಿದ್ದಂತೆ ಒಂದಿಷ್ಟು ಆವಿ ಮೇಲೆ ಬರುತ್ತದೆ. ಈ ಆವಿಯೇ ಕಫವನ್ನು ಸಡಿಲಗೊಳಿಸುವುದು. ಆದರೆ ಗಂಟಲು ಸುಟ್ಟು ಹೋಗುವಷ್ಟು ಬಿಸಿ ಇರದಂತೆ ಎಚ್ಚರಿಕೆ ವಹಿಸಬೇಕು. ಹಾಲುರಹಿತ ಟೀ ಯಲ್ಲಿ ಕೆಲವು ಪುದಿನಾ ಎಲೆಗಳನ್ನು ಕುದಿಸಿ ಕುಡಿದರೆ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಜೇನು ಮಿಶ್ರಿಯ ಬಿಸಿನೀರನ್ನು ಸೇವಿಸಿ

ಜೇನು ಮಿಶ್ರಿಯ ಬಿಸಿನೀರನ್ನು ಸೇವಿಸಿ

ಒಂದು ಚಿಕ್ಕ ಚಮಚ ಶುದ್ಧ ಜೇನುತುಪ್ಪವನ್ನು ಬಿಸಿನೀರಿನಲ್ಲಿ ಕದಡಿ ಕುಡಿಯುವ ಮೂಲಕವೂ ಗಂಟಲಿನ ಕಫ ಸಡಿಲಗೊಳ್ಳುತ್ತದೆ.

ಹಬೆಸ್ನಾನ ಮಾಡಿರಿ

ಹಬೆಸ್ನಾನ ಮಾಡಿರಿ

ಸ್ನಾನಗೃಹದಲ್ಲಿ ಸಾಕಷ್ಟು ಆವಿಯಾಗುವಂತೆ ಮಾಡಿ ಈ ಆವಿಯನ್ನು ಉಸಿರಾಡುತ್ತಾ ಬಿಸಿಬಿಸಿ ನೀರಿನಿಂದ ಸ್ನಾನ ಮಾಡುವ ಮೂಲಕ ಮೂಗಿನ ಹೊಳ್ಳೆ, ಗಂಟಲು, ಶ್ವಾಸನಾಳಗಳು ಸ್ವಚ್ಛಗೊಳ್ಳುತ್ತವೆ. ಕಫ ಕರಗಿ ಕೆಮ್ಮು ಥಟ್ಟನೇ ಕಡಿಮೆಯಾಗುತ್ತದೆ. ಅಲರ್ಜಿಯಿಂದಾದ ಕೆಮ್ಮಿಗೂ ಈ ವಿಧಾನ ಅತ್ಯುತ್ತಮವಾಗಿದೆ.

ಆರ್ದ್ರತೆ ನೀಡುವ ಯಂತ್ರವನ್ನು ಅಳವಡಿಸಿರಿ

ಆರ್ದ್ರತೆ ನೀಡುವ ಯಂತ್ರವನ್ನು ಅಳವಡಿಸಿರಿ

ಈಗ ಮಾರುಕಟ್ಟೆಯಲ್ಲಿ ಆರ್ದ್ರತೆಯನ್ನು ಗಾಳಿಯಲ್ಲಿ ಕೃತಕವಾಗಿ ಸೇರಿಸುವ ಯಂತ್ರಗಳು ಲಭ್ಯವಿವೆ. ಅಷ್ಟೊಂದು ದುಬಾರಿಯಲ್ಲದ ಈ ಸಾಧನ ಆರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನೀರು ಆವಿಯಾಗುವ ಪ್ರಮಾಣ ಅತಿ ಕಡಿಮೆಯಾಗಿಬಿಡುವುದರಿಂದ ಗಾಳಿಯಲ್ಲಿ ಆರ್ದ್ರತೆ ಕಡಿಮೆಯಾಗುತ್ತದೆ. ಇದನ್ನೇ ಒಣಹವೆ ಎನ್ನುತ್ತೇವೆ. ಮನೆಯೊಳಗೆ ಈ ಯಂತ್ರದ ಮೂಲಕ ಆರ್ದ್ರತೆಯನ್ನು ಹೆಚ್ಚಿಸುವುದರಿಂದ ಚರ್ಮ, ಕೂದಲುಗಳ ಆರೋಗ್ಯ ಹೆಚ್ಚುತ್ತದೆ. ಉಸಿರಾಟ ಸರಾಗವಾಗುತ್ತದೆ ಹಾಗೂ ಕೆಮ್ಮಿನಿಂದ ಶೀಘ್ರ ಪರಿಹಾರ ದೊರಕುತ್ತದೆ.

ಅಶುದ್ಧ ಗಾಳಿಯಿಂದ ಸಾಧ್ಯವಾದಷ್ಟು ದೂರವಿರಿ

ಅಶುದ್ಧ ಗಾಳಿಯಿಂದ ಸಾಧ್ಯವಾದಷ್ಟು ದೂರವಿರಿ

ಯಾವುದೇ ಹೊಗೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಪೂಜೆ, ಸುವಾಸನೆಗಾಗಿ ಬಳಸುವ ಊದುಬತ್ತಿಗಳ ಸಹಿತ. ಗಾಳಿಯಲ್ಲಿರುವ ಹೊಗೆ, ಪರಾಗರೇಣು, ಸುಗಂಧದ್ರವ್ಯ ಮೊದಲಾದವು ಅಲರ್ಜಿಯುಂಟುಮಾಡಬಹುದು. ಚಳಿಗಾಲದಲ್ಲಿ ವಿಶೇಷವಾಗಿ ಈ ವಿಷಯದ ಬಗ್ಗೆ ಎಚ್ಚರಿಕೆ ವಹಿಸಬೇಕು.

ಮೂಗಿನ ಹೊಳ್ಳೆಗಳನ್ನು ತೆರೆಯುವ ಸ್ಪ್ರೇಗಳು (Decongestants)

ಮೂಗಿನ ಹೊಳ್ಳೆಗಳನ್ನು ತೆರೆಯುವ ಸ್ಪ್ರೇಗಳು (Decongestants)

ಔಷಧಿ ಅಂಗಡಿಗಳಲ್ಲಿ ಕಟ್ಟಿರುವ ಮೂಗನ್ನು ತೆರೆಯುವ ಕೆಲವು ಸ್ಪ್ರೇಗಳು ದೊರಕುತ್ತವೆ. ವಿಕ್ಸ್ ಇನ್ಹೇಲರ್ ಒಂದು ಉದಾಹರಣೆ. ಇದರಿಂದ ಕಿಕ್ಕಿರಿದು ತುಂಬಿರುವ ಮೂಗಿನ ಒಳಭಾಗ ಕೊಂಚ ತೆರೆದಂತಾಗಿ ಗಾಳಿಯ ಸಾಗಾಟ ಸರಾಗವಾಗುತ್ತದೆ. ಆದರೆ ಈ ಉಪಶಮನ ತಾತ್ಕಾಲಿಕ ಮಾತ್ರ. ಕೊಂಚ ಹೊತ್ತಿನ ಬಳಿಕ ಮತ್ತೆ ಮೂಗು ಕಟ್ಟಿಕೊಳ್ಳುವುದರಿಂದ ಆಗಾಗ್ಯೆ ಇದನ್ನು ಉಪಯೋಗಿಸಬೇಕಾಗುತ್ತದೆ. ಆದುದರಿಂದ ಈ ವಿಧಾನವನ್ನು ಚಿಕ್ಕ ಪ್ರಮಾಣದ ಶೀತವಾದರೆ ಮಾತ್ರ ಅನುಸರಿಸಬೇಕು.

ಉಪ್ಪುನೀರಿನಲ್ಲಿ ಮುಕ್ಕಳಿಸಿ

ಉಪ್ಪುನೀರಿನಲ್ಲಿ ಮುಕ್ಕಳಿಸಿ

ಬಿಸಿನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಬಾಯಿಯನ್ನು ಮುಕ್ಕಳಿಸಿ. ಬಾಯಿಯನ್ನು ಮೇಲೆತ್ತಿ ಗಳಗಳ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಉಪ್ಪಿನ ಕಾರಣ ಕಟ್ಟಿಕೊಂಡಿದ್ದ ಕಫ ಸಡಿಲವಾಗಿ ಹೊರಬರುತ್ತದೆ.

ಮಸಾಲಾ ಟೀ ಕುಡಿಯಿರಿ

ಮಸಾಲಾ ಟೀ ಕುಡಿಯಿರಿ

ಅರಿಶಿನ ಬೆರೆಸಿದ ಹಾಲನ್ನು ಉಪಯೋಗಿಸಿ ಮಾಡಿದ ಟೀ ಕುಡಿಯುವ ಮೂಲಕ ಕೆಮ್ಮು ಶೀಘ್ರವಾಗಿ ಗುಣವಾಗುತ್ತದೆ. ಅರಿಶಿನದ ಪ್ರತಿಜೀವಿಕ (antibiotic) ಗುಣಗಳ ಕಾರಣ ಕಫ ಶೀಘ್ರವಾಗಿ ಹೊರಬರುತ್ತದೆ. ಇದು ಮಕ್ಕಳಿಗೂ ಹಿರಿಯರಿಗೂ ಕುಡಿಯಲು ಸುರಕ್ಷಿತವಾಗಿದೆ.

ಲಿಂಬೆ, ದಾಲ್ಚಿನ್ನಿ ಮತ್ತು ಜೇನು ಸೇರಿಸಿದ ಬಿಸಿನೀರು ಸೇವಿಸಿ

ಲಿಂಬೆ, ದಾಲ್ಚಿನ್ನಿ ಮತ್ತು ಜೇನು ಸೇರಿಸಿದ ಬಿಸಿನೀರು ಸೇವಿಸಿ

ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿಯನ್ನು ಕೆಲವು ನಿಮಿಷಗಳ ಕಾಲ ಬೇಯಿಸಿದ ಬಳಿಕ ಒಲೆಯಿಂದ ಇಳಿಸಿ ಒಂದು ಲೋಟಕ್ಕೆ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ಸಾಧ್ಯವಾದಷ್ಟು ಬಿಸಿಯಾಗಿರುವಾಗಲೇ ಕುಡಿಯುವ ಮೂಲಕ ಕೆಮ್ಮಿಗೆ ಮತ್ತು ಶೀತಕ್ಕೆ ಶೀಘ್ರ ಉಪಶಮನ ದೊರಕುತ್ತದೆ.

ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

ಒಂದು ಲೋಟ ನೀರಿಗೆ ಕೆಲವು ಹರಳು ಉಪ್ಪು ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಕುದಿಸಬೇಕು. ಸುಮಾರು ಐದು ನಿಮಿಷ ಕುದಿಸಿದ ಬಳಿಕ ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಿರುವಾಗಲೇ ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುತ್ತದೆ.

ನೆಲ್ಲಿಕಾಯಿಯನ್ನು ಸೇವಿಸಿ

ನೆಲ್ಲಿಕಾಯಿಯನ್ನು ಸೇವಿಸಿ

ಹಸಿನೆಲ್ಲಿಕಾಯಿಯನ್ನು ತಿನ್ನುವುದರಿಂದ ಶೀತವಾಗದಂತೆ ತಡೆಗಟ್ಟಬಹುದು. ಚಳಿ ಪ್ರಾರಂಭವಾಗುತ್ತಿದ್ದತೆಯೇ ಕೆಲವು ನೆಲ್ಲಿಕಾಯಿಗಳನ್ನು ಮನೆಯಲ್ಲಿರಿಸಿ ಆಗಾಗ ತಿನ್ನುತ್ತಿರುವುದರಿಂದ ಶೀತ, ಕೆಮ್ಮು ನೆಗಡಿಗಳಿಂದ ದೂರವಿರಬಹುದು. ದೇಹದ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ನೆಲ್ಲಿಕಾಯಿ ಆರೋಗ್ಯವನ್ನು ಕಾಪಾಡುತ್ತದೆ.

ಸಾಂಬಾರ ಪದಾರ್ಥಗಳನ್ನು ಸೇರಿಸಿದ ಟೀ ಕುಡಿಯಿರಿ

ಸಾಂಬಾರ ಪದಾರ್ಥಗಳನ್ನು ಸೇರಿಸಿದ ಟೀ ಕುಡಿಯಿರಿ

ತುಳಸಿ, ಮತ್ತು ಕಾಳು ಮೆಣಸನ್ನು ಸಮಪ್ರಮಾಣದಲ್ಲಿ ಪುಡಿಮಾಡಿ, ಒಂದು ಇಂಚಿನಷ್ಟು ದೊಡ್ಡ ಶುಂಠಿಯನ್ನು ಜಜ್ಜಿ ಎಲ್ಲವನ್ನೂ ಒಂದು ಲೋಟ ನೀರಿನಲ್ಲಿ ಕುದಿಸಿ ಎಷ್ಟು ಸಾಧ್ಯವೋ ಅಷ್ಟು ಬಿಸಿಯಿರುವಾಗಲೇ ಕುಡಿಯುವ ಮೂಲಕ ಎಷ್ಟೇ ಗಟ್ಟಿಯಾದ ಕಫವಿದ್ದರೂ ಶೀಘ್ರ ಉಪಶಮನ ದೊರಕುತ್ತದೆ.

English summary

15 Tips For Instant Cough Relief

Winter always makes us prone to infections such as flu. Cold and cough are the most common symptoms of flu. Cough can stand in the way of many things that you have planned for the winter. The following are a few instant home remedies for cough.
X
Desktop Bottom Promotion