For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ತಡೆಗಟ್ಟುವ ಮಾರ್ಗಗಳು

By Staff
|

ಕೊಲೆಸ್ಟ್ರಾಲ್ ದೇಹದಲ್ಲಿರುವ ಕೊಬ್ಬಿನಂಶವಾಗಿದೆ. ಇದು ನಾವು ತಿನ್ನುವ ಆಹಾರಗಳಿಂದ ಉತ್ಪತ್ತಿಯಾಗುತ್ತದೆ. ಕೊಲೆಸ್ಟ್ರಾಲ್ ದೇಹಕ್ಕೆ ತುಂಬಾ ಅಗತ್ಯ. ಕೊಲೆಸ್ಟ್ರಾಲ್ ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆದರೆ ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ. ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್. ದೇಹದಲ್ಲಿ ಈ ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾದರೆ ಮಾತ್ರ ಕಷ್ಟ. ಆದ್ದರಿಂದ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಇರುವ ಆಹಾರಗಳು ನಮ್ಮ ನಾವು ತಿನ್ನುವ ಆಹಾರದಲ್ಲಿದ್ದರೆ ಒಳ್ಳೆಯದು.

ಕೊಲೆಸ್ಟ್ರಾಲ್ ಮಧ್ಯ ವಯಸ್ಸು ದಾಟಿದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಯೌವನಪ್ರಾಯದಲ್ಲಿ ಸರಿಯಾದ ಜೀವನ ಶೈಲಿ ನಡೆಸಿದರೆ ಈ ಕೊಲೆಸ್ಟ್ರಾಲ್ ಸಮಸ್ಯೆ ಕಂಡು ಬರುವುದು ತುಂಬಾ ಕಡಿಮೆ. ಆದ್ದರಿಂದ ಕೊಲೆಸ್ಟ್ರಾಲ್ ಬಂದು ಕಷ್ಟ ಪಡುವ ಬದಲು ಕೊಲೆಸ್ಟ್ರಾಲ್ ಬರುವುದನ್ನು ತಡೆಗಟ್ಟಲು ಈ ಕೆಳಗಿನ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.

Tips For Avoid Cholesterol

* ಕೆಲವರು ನಾನೇನು ದಪ್ಪವಿಲ್ಲ, ನಾನೇಕೆ ವ್ಯಾಯಾಮ ಮಾಡಬೇಕು ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು. ದಪ್ಪವಿರಲಿ ಸಣ್ಣಗಿರಲಿ ವ್ಯಾಯಾಮ ಮಾಡಿದರೆ ದೇಹವು ಗಟ್ಟಿಮುಟ್ಟಾಗುತ್ತದೆ ಹಾಗೂ ದೇಹದಲ್ಲಿ ಅಧಿಕ ಕೊಬ್ಬಿನಂಶ ನಿಲ್ಲದಂತೆ ನೋಡಿಕೊಳ್ಳುತ್ತದೆ. ಪ್ರತಿದಿನ 30 ನಿಮಿಷ ಕಾಲ ವ್ಯಾಯಾಮ ಮಾಡಿದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ.

* ಎಣ್ಣೆಯಲ್ಲಿ ಕರಿದ ತಿಂಡಿಗಳು ತಿನ್ನಲು ರುಚಿಕರವಾಗಿರುತ್ತದೆ. ಆದರೆ ಎಣ್ಣೆಯಲ್ಲಿ ಕರಿದಂತಹ ತಿಂಡಿಗಳನ್ನು ಹೆಚ್ಚಾಗಿ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಆರೋಗ್ಯದ ದೃಷ್ಟಿಯಿಂದ ಬಾಯಿ ರುಚಿಗೆ ಸ್ವಲ್ಪ ಕಡಿವಾಣ ಹಾಕಬೇಕಾಗುತ್ತದೆ.

* ಹಾಟ್ ಬದಲು ವೈನ್, ಬೀರ್ ಇವುಗಳನ್ನು ಮಿತಿಯಲ್ಲಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಮದ್ಯ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗುತ್ತಾ ಹೋಗುತ್ತದೆ.

* ಅಧಿಕ ತೂಕವಿರುವವರು, ಒಬೆಸಿಟಿ ಸಮಸ್ಯೆ ಇರುವವರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಕೊಲೆಸ್ಟ್ರಾಲ್ ಮಾತ್ರವಲ್ಲ ಇತರ ಸಮಸ್ಯೆ ಕೂಡ ಕಂಡು ಬರಬಹುದು. ಆದ್ದರಿಂದ ನಿಮ್ಮ ದೇಹದ ತೂಕ ಸರಿಯಾಗಿರುವಂತೆ ನೋಡಿಕೊಳ್ಳಿ.

* ಕೊಲೆಸ್ಟ್ರಾಲ್ ಉತ್ಪಾದನೆಯಾಗುವುದು ಸ್ಯಾಚುರೇಟೆಡ್ ಕೊಬ್ಬಿನಂಶದಿಂದ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಉತ್ತಮವಾದ ಪಥ್ಯವೆಂದರೆ ಸಾಧ್ಯವಿದ್ದಷ್ಟು ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರಗಳನ್ನು ದೂರವಿರಿಸಿ ಮತ್ತು ಸಾಧ್ಯವಿದ್ದರೆ ಸಂಪೂರ್ಣವಾಗಿ ಅಂತ ಕೊಬ್ಬಿನ ಪದಾರ್ಥಗಳನ್ನು ಹೊರಗಿಟ್ಟುಬಿಡಿ. ಕೆಲವೊಂದು ಸಂದರ್ಭಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸಂಪೂರ್ಣ ತಿನ್ನದಿರಲು ಸಾಧ್ಯವಿಲ್ಲದಿದ್ದರೆ ಅಂಥ ಪದಾರ್ಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ.

* ಬಹಳ ದಿನಗಳವರೆಗೆ ಕಾಯ್ದಿರಿಸುವಂತೆ ತಯಾರಿಸಿದ ಆಹಾರಗಳಲ್ಲಿ ಮತ್ತು ಹೆಚ್ಚು ಕೊಬ್ಬಿನಂಶವಿರುವ ಮಾಂಸಾಹಾರಗಳಲ್ಲಿ ಆಹಾರಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುತ್ತದೆ. ಸ್ಯಾಚುರೇಟೆಡ್ ತರಕಾರಿ ಕೊಬ್ಬುಗಳನ್ನೂ ದೂರವಿಡಬೇಕು. ಇವುಗಳೂ ಕೂಡ ದೇಹದಲ್ಲಿ ಕೆಟ್ಟ ರೀತಿಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ.

English summary

Tips to Avoid Cholesterol

Cholesterol is a substance produced naturally in the body. There are two types of Cholesterol: HDL, commonly known as good cholesterol, and LDL, commonly referred to as bad cholesterol. A high level of cholesterol in the body can cause serious problems.
X
Desktop Bottom Promotion