For Quick Alerts
ALLOW NOTIFICATIONS  
For Daily Alerts

ನಾವು ನಿರ್ಲಕ್ಷ್ಯ ಮಾಡುವ ಜಾಂಡೀಸ್ ನ ಲಕ್ಷಣಗಳಿವು!

|

ಜಾಂಡೀಸ್ ಅಂದರೆ ಅರಿಶಿಣ ಕಾಮಲೆ ಬಂದರೆ ನಮ್ಮ ದೇಹದಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬರುತ್ತವೆ. ಜಾಂಡೀಸ್ ಅನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸುವುದು ಸುಲಭ. ಗಮನಿಸದೇ ಬಿಟ್ಟರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು!

ದೇಹದಲ್ಲಿ ಕೆಂಪು ರಕ್ತಕಣಗಳು ಕಮ್ಮಿಯಾದಾಗ ಜಾಂಡೀಸ್ ಉಂಟಾಗುತ್ತದೆ. ಜಾಂಡೀಸ್ ಬಂದರೆ ಉಗುರುಗಳು, ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಲಕ್ಷಣಗಳು ಜಾಂಡೀಸ್ ತುಂಬಾ ಹೆಚ್ಚಾದಾಗ ಕಂಡು ಬರುವುದು. ಈ ರೀತಿ ಕಂಡು ಬರುವುದಕ್ಕಿಂತ ಮುನ್ನ ಈ ಕೆಳಗಿನ ಕೆಲವು ಲಕ್ಷಣಗಳು ಕಂಡು ಬರುತ್ತವೆ, ಆದರೆ ಅವುಗಳನ್ನು ನಾವು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇವು ಜಾಂಡೀಸ್ ಕಾಯಿಲೆಯ ಲಕ್ಷಣಗಳಾಗಿವೆ. ಆದ್ದರಿಂದ ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯುವುದು ಒಳ್ಳೆಯದು:

ಜಾಂಡೀಸ್ ನ ಲಕ್ಷಣಗಳು

ಹಳದಿ ಮೂತ್ರ

ಹಳದಿ ಮೂತ್ರ

ಮೂತ್ರ ಹಳದಿ ಬಣ್ಣದಲ್ಲಿದ್ದರೆ ನಿರ್ಲಕ್ಷ್ಯ ಮಾಡುವುದು ಹೆಚ್ಚು. ಏಕೆಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಮೂತ್ರ ಹಳದಿ ಬಣ್ಣದಲ್ಲಿರುತ್ತದೆ.

ನೀರಿನಂಶ ಕಡಿಮೆಯಾದ ಕಾರಣವಾಗಿರಬಹುದೆಂದು ಭಾವಿಸುತ್ತೇವೆ. ಹಳದಿ ಮೂತ್ರ ಕಂಡು ಬಂದರೆ ಸಾಕಷ್ಟು ನೀರು ಕುಡಿಯಿರಿ, ನಂತರ ಕೂಡ ಮೂತ್ರ ಹಳದಿ ಬಣ್ಣದಲ್ಲಿದ್ದರೆ ಅದು ಅರಿಶಿಣ ಕಾಮಲೆಯ ಲಕ್ಷಣವಾಗಿವೆ

ತ್ವಚೆ ಹಾಗೂ ಹಳದಿ ಕಣ್ಣುಗಳು

ತ್ವಚೆ ಹಾಗೂ ಹಳದಿ ಕಣ್ಣುಗಳು

ತ್ವಚೆಯ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತದೆ, ಕಣ್ಣುಗಳಲ್ಲೂ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೀತಿ ಉಂಟಾದರೆ ರಕ್ತಹೀನತೆಯಿಂದ ಉಂಟಾಗುತ್ತಿರಬಹುದು ಎಂದು ಭಾವಿಸುತ್ತೇವೆ. ಕಾರಣವನ್ನು ನೀವೇ ಊಹಿಸುವ ಬದಲು ವೈದ್ಯರನ್ನು ಕಂಡು ಏನು ಸಮಸ್ಯೆಯೆಂದು ಖಚಿತಪಡಿಸಿಕೊಳ್ಳಿ.

ಕೆಳ ಹೊಟ್ಟೆ ನೋವು

ಕೆಳ ಹೊಟ್ಟೆ ನೋವು

ಕೆಳ ಹೊಟ್ಟೆ ಬಲ ಭಾಗದಲ್ಲಿ ನೋವು ಕಂಡು ಬರುತ್ತದೆ. ಸೊಂಟ ನೋವು ಕೂಡ ಕಂಡು ಬರಬಹುದು. ಲಿವರ್ ಗೆ ಹಾನಿಯಾದರೆ ಈ ರೀತಿ ಉಂಟಾಗುವುದು.

ಸಂಧಿ ನೋವು

ಸಂಧಿ ನೋವು

ಸಂಧಿ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಆದ್ದರಿಂದ ಸಂಧಿ ನೋವು ಬಂದ ತಕ್ಷಣ ಜಾಂಡೀಸ್ ಎಂದು ಹೇಳಲು ಸಾಧ್ಯವಿಲ್ಲ. ಇತರ ಜಾಂಡೀಸ್ ಲಕ್ಷಣಗಳ ಜೊತೆ ಸಂಧಿ ನೋವು ಕಾಣಿಸಿದರೆ ತಕ್ಷಣ ವೈದ್ಯರನ್ನು ಕಾಣಿ.

ಜೀರ್ಣಕ್ರಿಯೆಯಲ್ಲಿ ತೊಂದರೆ

ಜೀರ್ಣಕ್ರಿಯೆಯಲ್ಲಿ ತೊಂದರೆ

ಈ ಲಕ್ಷಣವನ್ನು ಅಷ್ಟೇ ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಜೀರ್ಣಕ್ರಿಯೆಯಲ್ಲಿ ತೊಂದರೆ ಆಗುವುದರಿಂದಲೇ ಹಳದಿ ಮೂತ್ರ, ವಾಂತಿ ಬರುವುದು ಈ ರೀತಿಯ ತೊಂದರೆ ಕಾಣಿಸಿಕೊಳ್ಳುವುದು.

ವಾಂತಿ

ವಾಂತಿ

ಬಾಯಿಯಲ್ಲಿ ಕಹಿ ನೀರು ಬಂದು ವಾಂತಿ ಕಂಡು ಬರುವುದು. ಬಾಯಿ ತುಂಬಾ ಕಹಿಯಾಗಿರುತ್ತದೆ.

ತುರಿಕೆ

ತುರಿಕೆ

ಮೈಯೆಲ್ಲಾ ಉರಿಕೆ ಉಂಟಾಗುವುದು. ಅಲರ್ಜಿ ಉಂಟಾದಾಗ ಮಾತ್ರವಲ್ಲ, ಜಾಂಡೀಸ್ ಬಂದಾಗಲೂ ಈ ರೀತಿ ಉಂಟಾಗುತ್ತದೆ. ಆದ್ದರಿಂದ ತುರಿಕೆ ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ.

 ದೇಹದ ಉಷ್ಣತೆ

ದೇಹದ ಉಷ್ಣತೆ

ಜ್ವರ ಬಂದಾಗ ಮಶತ್ರವಲ್ಲ ಜಾಂಡೀಸ್ ಬಂದರೆ ಕೂಡ ದೇಹ ತುಂಬಾ ಬಿಸಿಯಾಗಿರುತ್ತದೆ.

ಸುಸ್ತು

ಸುಸ್ತು

ಸುಸ್ತು ಕಂಡು ಬರುವುದು. ನಿಮ್ಮ ಸುಸ್ತು 2 ವಾರಕ್ಕಿಂತ ಅಧಿಕ ಸಮಯದಿಂದ ಇದ್ದರೆ ಅದು ಜಾಂಡೀಸ್ ನ ಲಕ್ಷಣವಾಗಿರಬಹುದು.

ಮಣ್ಣಿನ ಬಣ್ಣದಲ್ಲಿ ಮಲ ವಿಸರ್ಜನೆಯಾಗುವುದು

ಮಣ್ಣಿನ ಬಣ್ಣದಲ್ಲಿ ಮಲ ವಿಸರ್ಜನೆಯಾಗುವುದು

ಮಲ ವಿಸರ್ಜನೆಗೆ ಹೋದಾಗ ಗಮನಿಸಿ, ಅದು ಮಣ್ಣಿನ ಬಣ್ಣದಲ್ಲಿದ್ದರೆ ಜಾಂಡೀಸ್ ಕಾಯಿಲೆಯ ಲಕ್ಷಣವಾಗಿದೆ.

English summary

Symptoms Of Jaundice That We Ignore | Tips For Health | ನಾವು ನಿರ್ಲಕ್ಷ್ಯ ಮಾಡುವ ಜಾಂಡೀಸ್ ನ ಲಕ್ಷಣಗಳಿವು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Most commonly we will suspect jaundice when we notice a yellowish tinge in our eyes or nail beds along with dark yellow urine. But do you know that these symptoms occur when the amount of bilirubin is already greater than the renal threshold?
X
Desktop Bottom Promotion