For Quick Alerts
ALLOW NOTIFICATIONS  
For Daily Alerts

ಒತ್ತಡ ನಿವಾರಣೆಗೆ ಕೆಲವೊಂದು ಸಲಹೆಗಳು

By Manohar.v
|

ಇಂದು ಆಧುನಿಕ ಜೀವನ ಶೈಲಿಯು ವೇಗವಾಗಿ ಸಾಗುತ್ತಿದ್ದು ಹಾಗೂ ಅಷ್ಟೇ ತಲೆ ನೋವಿಂದ ಕೂಡಿದೆ. ಹೆಚ್ಚಿನವರು ಇದರ ಪರಿಣಾಮದ ಕುರಿತು ಆಲೋಚನೆ ಮಾಡಿರುವುದಿಲ್ಲ. ಆರೋಗ್ಯದಲ್ಲಿ ಉಂಟಾಗುವ ಅನೇಕ ರೀತಿಯ ಸಮಸ್ಯೆಗೆ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ, ಎಂಬುದು ಇನ್ನೊಂದು ಆತಂಕಕಾರಿ ವಿಷಯವಾಗಿದೆ. ಅದು ಯಾವುದೇ ರೀತಿಯಲ್ಲಿ ಇರಬಹುದು, ಕೆಲಸದ ಒತ್ತಡ, ಓದುವುದು, ಯಾವುದೇ ಇರಲಿ, ಹಲವಾರು ರೀತಿಯ ಒತ್ತಡದಿಂದ ನಾವು ಪ್ರತಿ ದಿನ ಬಳಲುತ್ತೇವೆ.

ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯ ಒತ್ತಡಗಳು ದಿನಾ ಸಂಭವಿಸುತ್ತಿದ್ದು, ಕೆಲವೊಮ್ಮೆ ಅದನ್ನು ನಿಭಾಯಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ಆಹಾರವನ್ನು ನೀವು ದಿನಾ ನಿತ್ಯ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುವುದರ ಜೊತೆಗೆ, ಇಂತಹ ಒತ್ತಡದಿಂದ ದೂರ ಇರಬಹುದು.

ಒತ್ತಡವು ನಿಮ್ಮ ಮನಸ್ಸಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಕೆಲವೊಮ್ಮೆ ನಿಮ್ಮ ಮನಸ್ಸನ್ನು ಶಾಂತಚಿತ್ತವಾಗಿ ಇಟ್ಟುಕೊಳ್ಳಲು ನೀವು ಬಯಸಿದಾಗ, ನಿಮ್ಮ ಆಂತರಂಗವು ಒತ್ತಡವನ್ನು ಹೆಚ್ಚಿಸುವ ಕೆಲವೊಂದು ಆಲೋಚನೆಯು ನಿಮ್ಮ ಮನಸ್ಸಿನ ಗೊಂದಲವನ್ನು ಹೆಚ್ಚಿಸುತ್ತದೆ. ಇಂತಹ ವಿಷಯವು ತಕ್ಷಣ ನಿಮ್ಮ ಗಮನಕ್ಕೆ ಬರುವುದಿಲ್ಲ, ಆದರೆ ನಿಮ್ಮ ಆರೋಗ್ಯದ ಮೇಲೆ ಇದು ಖಣಾತ್ಮಕ ಪರಿಣಾಮ ಬೀರಬಹುದು.

ಹಾಗಾಗಿ, ಕೆಲವೊಂದು ಉತ್ತಮ ಆಹಾರಗಳನ್ನು ಸೇವಿಸುವುದರಿಂದ ನೀವು ಒತ್ತಡದಿಂದ ಮುಕ್ತಿ ಹೊಂದಬಹುದು. ಆದಾಗಿಯೂ ಒತ್ತಡವನ್ನು ನಿಯಂತ್ರಿಸಲು ಸ್ನೇಹಿತರೊಂದಿಗೆ ರೆಸಾರ್ಟ್‪ನಲ್ಲಿ ಜಂಕ್ ಆಹಾರ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬೇಡಿ.

ಎಲ್ಲಾ ರೀತಿಯ ಜಂಕ್ ಆಹಾರವನ್ನು ಸೇವಿಸುವುದರಿಂದ ಕೂಡ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ನಿಮ್ಮ ಒತ್ತಡವು ಹೆ್ಚ್ಚಾಗುತ್ತದೆ ಎಂಬುದನ್ನು ನೆನಪಿಡಿ.
ಹಾಗಾಗಿ ಬೋಲ್ಡ್ ಸ್ಕೈ ಕೆಲವೊಂದು ಉತ್ತಮ ಆಹಾರವನ್ನು ನಿಮಗಾಗಿ ಪರಿಚಯಿಸುತ್ತಿದ್ದು, ಇದನ್ನು ದಿನ ನಿತ್ಯ ನಿಮ್ಮ ಆಹಾರದೊಂದಿಗೆ ಸೇವಿಸಿದರೆ ಖಂಡಿತವಾಗಿಯೂ ನೀವು ಒತ್ತಡದಿಂದ ಮುಕ್ತರಾಗಬಹುದು.

ದಿನ ನಿತ್ಯ ಹಾಲು ಕುಡಿಯಿರಿ:

ದಿನ ನಿತ್ಯ ಹಾಲು ಕುಡಿಯಿರಿ:

ನೀವು ಹಾಲನ್ನು ಇಷ್ಟ ಪಡುವಿರಾದರೆ, ನಿಮಗೆ ಇನ್ನಷ್ಟು ರಿಲೀಫ್ ಸಿಗಲಿದೆ..! ಹೌದು ಹಾಲಿನಲ್ಲಿರುವ ವಿಟಮಿನ್ A ಮತ್ತು D, ನಿಮ್ಮ ಆರೋಗ್ಯಕ್ಕೆ ಸೂಕ್ತವಾಗಿರುವ ಪ್ರೋಟಿನ್, ಕ್ಯಾಲ್ಸಿಯಂ, ಹಾಗೂ ಆ್ಯಂಟಿಆಕ್ಸಿಡೆಂಟ್ಸ್ ಅನ್ನು ಒಳಗೊಂಡಿದೆ, ಅಲ್ಲದೆ ಇದು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ.

ಡಾರ್ಕ್ ಚಾಕೊಲೇಟ್:

ಡಾರ್ಕ್ ಚಾಕೊಲೇಟ್:

ಡಾರ್ಕ್ ಚಾಕೊಲೇಟ್ ಮೆಗ್ನಿಶಿಯಂನಿಂದ ಕೂಡಿದ್ದು, ಇದು ನಿಮ್ಮ ದಣಿವು, ಒತ್ತಡ, ಮತ್ತು ಖಿನ್ನತೆಯನ್ನು ದೂರ ಮಾಡುವುದರ ಜೊತೆಗೆ, ಆಶ್ಚರ್ಯಕರ ರೀತಿಯಲ್ಲಿ ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಅದರಲ್ಲೂ ನಿಮ್ಮ ಮೆಚ್ಚಿನ ಡಾರ್ಕ್ ಚಾಕೊಲೇಟ್ ಅನ್ನು ಹಾಲಿನೊಂದಿಗೆ ಸೇವಿಸಿ, ಹಾಗೂ ನಿಮ್ಮ ಒತ್ತಡವನ್ನು ದೂರ ಮಾಡಿ.

ಕಿತ್ತಳೆ ಹಣ್ಣುಗಳು :

ಕಿತ್ತಳೆ ಹಣ್ಣುಗಳು :

ಕಿತ್ತಳೆ ಹಣ್ಣುಗಳು ಆ್ಯಂಟಿಆಕ್ಸಿಡೆಂಟ್ಸ್ ಹಾಗೂ ವಿಟಮಿನ್ A, B,ಮತ್ತು C ಅನ್ನು ಒಳಗೊಂಡಿದ್ದು, ನಿಮ್ಮ ಒತ್ತಡವನ್ನು ದೂರ ಮಾಡಲು ತುಂಬಾ ಸಹಕಾರಿಯಾಗಿದೆ. ನಿಮ್ಮ ದೈನಂದಿನ ಆಹಾರದ ಜೊತೆ ಕೆಲವು ಕಿತ್ತಳೆ ಹಣ್ಣುಗಳನ್ನು ಸೇರಿಸಿರಿ ಹಾಗೂ ಒತ್ತಡವನ್ನು ದೂರ ಮಾಡಿ.

ಬಾದಾಮಿ:

ಬಾದಾಮಿ:

ನೀವು ಕುರುಕಲು ತಿಂಡಿ ಇಷ್ಟ ಪಡುವಿರಾದರೆ, ವಿಟಮಿನ್ C,ಹಾಗೂ E ಅನ್ನು ಹೊಂದಿರುವ ಬಾದಾಮಿಯನ್ನು ದಿನನಿತ್ಯ ಸೇವಿಸಿ. ಇದು ಕೂಡ ನಿಮ್ಮ ಒತ್ತಡವನ್ನು ದೂರ ಮಾಡಲು ಸಹಕಾರಿ ಆಗಲಿದೆ.

ಕಪ್ಪುದ್ರಾಕ್ಷಿ:

ಕಪ್ಪುದ್ರಾಕ್ಷಿ:

ಇದು ವಿಟಮಿನ್ A ಮತ್ತು E ನೊಂದಿಗೆ ಮೆಗ್ನಿಶಿಯಂನಿಂದ ಕೂಡಿದ್ದು ನಿಮ್ಮ ಒತ್ತಡವನ್ನು ನಿಯಂತ್ರಸಲು ಸಹಕಾರಿ ಆಗಲಿದೆ. ಇದನ್ನು ದಿನ ನಿತ್ಯ ಸೇವಿಸುವುದರಿಂದ ನಿಮ್ಮ ತೂಕವನ್ನು ಇಳಿಸುವುದರ ಜೊತೆಗೆ ನಿಮ್ಮ ಮನಸ್ಥಿತಿಯನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ.

ಸೊಪ್ಪು:

ಸೊಪ್ಪು:

ಹೌದು, ತಾಜಾ ಸೊಪ್ಪನ್ನು ದಿನ ನಿತ್ಯ ನಿಮ್ಮ ಆಹಾರದ ಜೊತೆ ಸೇರಿಸುವುದರಿಂದ ಕೂಡ ಒತ್ತಡವನ್ನು ನಿಯಂತ್ರಿಸಬಹುದು. ಸಾಮಾನ್ಯವಾಗಿ ಬಸಳೆ ಸೊಪ್ಪು, ಪಾಲಕ್, ಇತ್ಯಾದಿ ತಾಜಾ ಸೊಪ್ಪಿನಲ್ಲಿ ವಿಟಮಿನ್ A, B, ಮತ್ತು C ಅಂಶಗಳು ಹೊಂದಿದ್ದು, ಇದು ನಿಮ್ಮನ್ನು ಅನಗತ್ಯ ಒತ್ತಡದಿಂದ ರಕ್ಷಿಸುತ್ತದೆ.

English summary

Superfoods For Stress Relief

Modern lifestyle is fast paced and quite hectic. Though many of us don't realize the impact, it is the prime reason for the increasing cases of health issues. Whether you are working, studying or doing nothing, there is certain amount of stress factor present every day.
Story first published: Tuesday, December 24, 2013, 15:10 [IST]
X
Desktop Bottom Promotion