For Quick Alerts
ALLOW NOTIFICATIONS  
For Daily Alerts

ಥೈರಾಯ್ಡ್ ನ ಈ ಲಕ್ಷಣಗಳನ್ನು ನಿರ್ಲಕ್ಷ್ಯಮಾಡಬೇಡಿ

|

ಥೈರಾಯ್ಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಿಂದೆಯೆಲ್ಲಾ ಮಧ್ಯವಯಸ್ಸು ದಾಟಿದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ. ಥೈರಾಯ್ಡ್ ಸಮಸ್ಯೆ ಹಾರ್ಮೋನ್ ಗಳ ವ್ಯತ್ಯಾಸದಿಂದ ಉಂಟಾಗುತ್ತದೆ. ಇದಕ್ಕೆ ಜೀವನ ಶೈಲಿ ಕೂಡ ಒಂದು ಪ್ರಮುಖ ಕಾರಣವೆಂದು ಹೇಳಬಹುದು.

ಥೈರಾಯ್ಡ್ ಸಮಸ್ಯೆ ಕಾಣಿಸಿದಾಗ ತಕ್ಷಣ ಗುರುತಿಸಲು ಸಾಧ್ಯವಾಗದಿದ್ದರೂ, ಕೆಲವೊಂದು ಲಕ್ಷಣಗಳಿಂದ ಗುರುತಿಸಬಹುದು. ಆದ್ದರಿಂದ ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಥೈರಾಯ್ಡ್ ಟೆಸ್ಟ್ ಮಾಡಿಸುವುದು ಒಳ್ಳೆಯದು:

ತೂಕ ಕಮ್ಮಿಯಾಗುವುದು

ತೂಕ ಕಮ್ಮಿಯಾಗುವುದು

ಇದ್ದಕ್ಕಿದ್ದ ಹಾಗೇ ತೂಕದಲ್ಲಿ ಇಳಿಕೆ ಥೈರಾಯ್ಡ್ ನಲ್ಲಿ 2 ವಿಧ. ಹೈಪೋ ಮತ್ತು ಹೈಪರ್. ಹೈಪರ್ ಥೈರಾಯ್ಡ್ ಆಗಿದ್ದರೆ ಇದ್ದಕ್ಕಿದ್ದ ಹಾಗೇ ಮೈ ತೂಕ ತುಂಬಾ ಕಮ್ಮಿಯಾಗುವುದು.

ತೂಕ ಹೆಚ್ಚಾಗುವುದು

ತೂಕ ಹೆಚ್ಚಾಗುವುದು

ಅದೇ ಹೈಪೋ ಥೈರಾಯ್ಡ್ ಆಗಿದ್ದರೆ ಮೈ ತೂಕ ತುಂಬಾ ಹೆಚ್ಚಾಗುವುದು. ಹೀಗೆ ತೂಕ ಹೆಚ್ಚಾಗುವಾಗ ಯಾವ ವ್ಯಾಯಾಮ, ಡಯಟ್ ಪ್ರಭಾವ ಬೀರುವುದಿಲ್ಲ. ಚಿಕಿತ್ಸೆ ತೆಗೆದುಕೊಂಡರೆ ಮಾತ್ರ ತೂಕ ನಿಯಂತ್ರಣಕ್ಕೆ ಬರುವುದು.

ಮೈಕೈ ನೋವು

ಮೈಕೈ ನೋವು

ಯಾವುದೇ ಬಗೆಯ ಹಾರ್ಮೋನಲ್ ಬದಲಾವಣೆಯಾದರೆ ಸ್ನಾಯು ನೋವು ಕಂಡು ಬರುವುದು ಸಹಜ. ಆದ್ದರಿಂದ ಸ್ನಾಯು ನೋವು ಕಂಡು ಬಂದಾಗ ವೈದ್ಯರನ್ನು ಕಂಡು ಪರೀಕ್ಷೆಗೆ ಒಳ ಪಡುವುದು ಒಳ್ಳೆಯದು.

ಕೂದಲು ಉದುರುವುದು

ಕೂದಲು ಉದುರುವುದು

ಥೈರಾಯ್ಡ್ ಸಮಸ್ಯೆ ಇರುವವರಲ್ಲಿಕಂಡು ಬರುವ ಮತ್ತೊಂದು ಲಕ್ಷಣವೆಂದರೆ ವಿಪರೀತ ತಲೆಕೂದಲು ಉದುರುವುದು.

ಅನಿಯಮಿತ ಮುಟ್ಟು

ಅನಿಯಮಿತ ಮುಟ್ಟು

ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಕಂಡು ಬಂದರೆ ಅನಿಯಮಿತ ಮುಟ್ಟು ಕಂಡು ಬರುವುದು. ಅತೀ ಕಡಿಮೆ ರಕ್ತಸ್ರಾವ, ಅಧಿಕ ರಕ್ತ ಸ್ರಾವ, ತಿಂಗಳಿಗೆ ಸರಿಯಾಗಿ ಮುಟ್ಟು ಆಗದಿರುವುದು ಈ ರೀತಿಯ ಲಕ್ಷಣಗಳು ಕಂಡು ಬರುವುದು.

ಗಂಟಲು ಉಬ್ಬುವುದು

ಗಂಟಲು ಉಬ್ಬುವುದು

ಥೈರಾಯ್ಡ್ ಸಮಸ್ಯೆ ಜೊತೆ ಗಳಗಂಡ(ಗ್ವಾಯಟರ್) ಕೂಡ ಇದ್ದರೆ ಗಂಟಲು ಉಬ್ಬುವುದು.

ಮಾನಸಿಕ ಸ್ಥಿತಿ

ಮಾನಸಿಕ ಸ್ಥಿತಿ

ಥೈರಾಯ್ಡ್ ಹಾರ್ಮೋನ್ ಗಳಲ್ಲಿ ಬದಲಾವಣೆಯಾದರೆ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀಳುವುದು. ಜ್ಞಾಪಕ ಶಕ್ತಿ ಕಡಿಮೆಯಾಗುವುದು.

ಖಿನ್ನತೆ

ಖಿನ್ನತೆ

ಕೂದಲು ಉದುರುವುದು, ತೂಕದಲ್ಲಿನ ವ್ಯತ್ಯಾಸ ಇವುಗಳಿಂದಾಗಿ ಖಿನ್ನತೆ ಉಂಟಾಗುವುದು.

ಹಾಟ್ ಫ್ಲಾಷ್

ಹಾಟ್ ಫ್ಲಾಷ್

ಹೈಪರ್ ಆಕ್ಟಿವ್ ಥೈರಾಯ್ಡ್ ಇರುವವರೆಗೆ ಸೆಕೆ ಸಹಿಸಲು ಸಾಧ್ಯವಾಗುವುದಿಲ್ಲ.

ಸಂತಾನೋತ್ಪತ್ತಿಯಲ್ಲಿ ತೊಂದರೆ

ಸಂತಾನೋತ್ಪತ್ತಿಯಲ್ಲಿ ತೊಂದರೆ

ಥೈರಾಯ್ಡ್ ಸಮಸ್ಯೆ ಇರುವವರಿಗೆ ಗರ್ಭಧಾರಣೆಯಲ್ಲಿ ತೊಂದರೆ ಕಂಡು ಬರುವುದು.

 ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ಹೈಪೋಥೈರಾಯ್ಡ್ ಇರುವವರಿಗೆ ಕೊಲೆಸ್ಟ್ರಾಲ್ ಸಮಸ್ಯೆಯೂ ಕಂಡು ಬರುವುದು. ಥೈರಾಕ್ಷಿನ್ ಹಾರ್ಮೋನ್ ಕಡಿಮೆಯಾಗಿ ಕೊಬ್ಬಿನಂಶ ಕರಗಿಸುವ ಸಾಮರ್ಥ್ಯ ಕಡಿಮೆಯಾಗುವುದು.

ನರ ಸಮಸ್ಯೆ

ನರ ಸಮಸ್ಯೆ

ಅಧಿಕ ಒತ್ತಡಕ್ಕೆ ಒಳಗಾಗುವುದು, ಮೂಡ್ ಬದಲಾಗುವುದು ಇವೆಲ್ಲಾ ಹಾರ್ಮೋನ್ ಗಳ ವ್ಯತ್ಯಾಸದಿಂದ ಉಂಟಾಗುವುದು.

 ದೇಹ ಊದಿಕೊಳ್ಳುವುದು

ದೇಹ ಊದಿಕೊಳ್ಳುವುದು

ದೇಹದಲ್ಲಿ ಥೈರಾಕ್ಷಿನ್ ಪ್ರಮಾಣ ಕಡಿಮೆಯಾದಾಗ ದೇಹ ಊದಿಕೊಳ್ಳುವುದು.

ಹೃದಯ ಬಡಿತ ಹೆಚ್ಚಾಗುವುದು

ಹೃದಯ ಬಡಿತ ಹೆಚ್ಚಾಗುವುದು

ಥೈರಾಯ್ಡ್ ಇರುವವರಲ್ಲಿ ಕಂಡು ಬರುವ ಮತ್ತೊಂದು ಲಕ್ಷಣವೆಂದರೆ ತೀವ್ರವಾದ ಹೃದಯದ ಬಡಿತ.

ಸುಸ್ತು

ಸುಸ್ತು

ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಮತ್ತು ತುಂಬಾ ಸುಸ್ತು ಕಂಡು ಬರುವುದು.

English summary

Signs You Have Thyroid Gland Malfunction

Thyroid problems have become fairly common these days. Many people are facing health hazards related to thyroid gland malfunctioning.These are some of the signs that your thyroid gland is not functioning properly.
 
 
X
Desktop Bottom Promotion