For Quick Alerts
ALLOW NOTIFICATIONS  
For Daily Alerts

ಈ ಲಕ್ಷಣಗಳು ಕಂಡು ಬಂದರೆ ರಕ್ತಹೀನತೆ ಇರಬಹುದು

|

ಅನಿಮಿಯಾ (ರಕ್ತಹೀನತೆ) ಅಂದರೆ ದೇಹದಲ್ಲಿ ರಕ್ತಕಣಗಳು ಕಡಿಮೆಯಾಗಿ ಕಂಡು ಬರುವ ಅನಾರೋಗ್ಯ. ದೇಹದಲ್ಲಿ ರಕ್ತಕಣಗಳು ಕಡಿಮೆಯಾದಾಗ ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ. ಈ ರೀತಿ ಪೋಷಕಾಂಶಗಳ ಕೊರತೆ, ಮಾನಸಿಕ ಒತ್ತಡ, ವಂಶ ಪಾರಂಪರ್ಯವಾಗಿ , ಇತರ ಕಾಯಿಲೆಗಳು ಹೀಗೆ ಅನೇಕ ಕಾರಣಗಳಿಂದ ಉಂಟಾಗುತ್ತದೆ.

ಅರಿಶಿಣ ಕಾಮಲೆ, ಕ್ಯಾನ್ಸರ್, ಎಚ್ ಐ ವಿಯಂತಹ ಕಾಯಿಲೆಗಳಿದ್ದರೂ ರಕ್ತಹೀನತೆ ಉಂಟಾಗುತ್ತದೆ. ರಕ್ತ ಹೀನತೆಯನ್ನು ಕೆಲವೊಂದು ಲಕ್ಷಣಗಳಿಂದ ಗುರುತಿಸಬಹುದು. ರಕ್ತ ಹೀನತೆ ಉಂಟಾದರೆ ಈ ಕೆಳಗಿನ ಲಕ್ಷಣಗಳು ನಮ್ಮ ದೇಹದಲ್ಲಿ ಕಂಡು ಬರುತ್ತದೆ:

 ಬಿಳುಚಿಕೊಂಡ ಕಣ್ಣುಗಳು

ಬಿಳುಚಿಕೊಂಡ ಕಣ್ಣುಗಳು

ಕಣ್ಣುಗಳು ತುಂಬಾ ಮಂಕಾಗಿ ಕಾಣುತ್ತದೆ. ಕಣ್ಣನ್ನು ಪರೀಕ್ಷಿಸಿದರೆ ಕಣ್ಣುಗಳು ಬಿಳುಚಿಕೊಂಡಿರುತ್ತದೆ.

ತಲೆಸುತ್ತು

ತಲೆಸುತ್ತು

ಎಲ್ಲಾ ದಿನಾ ಸುಸ್ತು, ತಲೆಸುತ್ತು ಅನಿಸಿದರೆ ರಕ್ತ ಕಣಗಳು ಕಮ್ಮಿಯಾಗಿವೆ ಎಂದರ್ಥ. ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾದರೆ ಎದ್ದು ನಡೆಯುವುದು ಕೂಡ ಕಷ್ಟ. ರಕ್ತ ಕಣಗಳನ್ನು ಹೆಚ್ಚಿಸುವ ಆಹಾರ ತಿಂದರೆ ರಕ್ತ ಕಣಗಳು ಕಡಿಮೆಯಾಗದಂತೆ ನೋಡಿಕೊಳ್ಳಬಹುದು.

 ವಾಂತಿ

ವಾಂತಿ

ರಕ್ತ ಕಣಗಳು ತುಂಬಾ ಕಮ್ಮಿಯಾದರೆ ಬೆಳಗ್ಗೆ ವಾಂತಿ ಬಂದಂತೆ ಅನಿಸುವುದು, ಊಟ ಸರಿಯಾಗಿ ಸೇರುವುದಿಲ್ಲ.

ತಲೆನೋವು

ತಲೆನೋವು

ಆಗಾಗ ತಲೆನೋವಿನ ಸಮಸ್ಯೆ ಇದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ದೇಹದಲ್ಲಿ ರಕ್ತ ಕಣಗಳು ಕಡಿಮೆಯಾಗಿ, ಮೆದುಳಿಗೆ ಅಗತ್ಯವಿರುವಷ್ಟು ಆಮ್ಲಜನಕದ ಪೂರೈಕೆಯಾಗದಿದ್ದಾಗ ತಲೆನೋವು ಉಂಟಾಗುತ್ತದೆ.

ಸುಸ್ತು

ಸುಸ್ತು

ದೇಹದಲ್ಲಿ ರಕ್ತ ಕಣಗಳು ಕಡಿಮೆಯಾದರೆ, ಆಮ್ಲಜನಕ ಕೂಡ ಕಡಿಮೆಯಾಗುತ್ತದೆ. ಇದರಿಂದ ದಿನನಿತ್ಯದ ಕೆಲಸ ಮಾಡಲು ಕೂಡ ಕಷ್ಟವಾಗುತ್ತದೆ.

 ಜೋರಾದ ಹೃದಯ ಬಡಿತ

ಜೋರಾದ ಹೃದಯ ಬಡಿತ

ದೇಹದಲ್ಲಿ ರಕ್ತ ಕಣಗಳು ಕಡಿಮೆಯಾದರೆ, ಆಮ್ಲಜನಕ ಕಡಿಮೆ ದೊರೆಯುವುದರಿಂದ ಹೃದಯ ಜೋರಾಗಿ ಬಡಿದುಕೊಳ್ಳಲಾರಂಭಿಸಿದೆ. ಹೃದಯದ ಬಡಿತ ನಮಗೆ ಕೇಳುವಷ್ಟು ಜೋರಾಗಿ ಬಡಿದುಕೊಳ್ಳುತ್ತದೆ.

 ಬಿಳುಚಿದ ತ್ವಚೆ

ಬಿಳುಚಿದ ತ್ವಚೆ

ರಕ್ತ ಹೀನತೆ ಉಂಟಾದರೆ ತ್ವಚೆ ಬಿಳುಚಿಕೊಳ್ಳುತ್ತದೆ. ಮುಖ ಕಾಂತಿರಹಿತವಾಗುತ್ತದೆ. ಇದರಿಂದ ಸುಲಭದಲ್ಲಿಯೇ ರಕ್ತ ಹೀನತೆ ಉಂಟಾಗಿದೆಯೆಂದು ತಿಳಿಯಬಹುದು.

 ಕೂದಲು ಉದುರುವುದು

ಕೂದಲು ಉದುರುವುದು

ಕೂದಲು ಉದುರುವುದು ಸೌಂದರ್ಯದ ಸಮಸ್ಯೆ ಮಾತ್ರವಲ್ಲ, ಆರೋಗ್ಯದ ಸಮಸ್ಯೆ ಕೂಡ. ತುಂಬಾ ಕೂದಲು ಉದುರುತ್ತಿದ್ದು, ಸುಸ್ತು ಕಂಡು ಬಂದರೆ ಅದರ ರಕ್ತಹೀನತೆಯಿಂದ ಇರಬಹುದು.

ಆಗಾಗ ಕಾಯಿಲೆ ಬೀಳುವುದು

ಆಗಾಗ ಕಾಯಿಲೆ ಬೀಳುವುದು

ಕೆಂಪು ರಕ್ತಕಣಗಳು ಕಡಿಮೆಯಾದರೆ, ಕಾಯಿಲೆ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳು ಕೂಡ ಕಡಿಮೆಯಾಗುತ್ತದೆ. ರಕ್ತ ಹೀನತೆಯನ್ನು ಸರಿಯಾದ ಆಹಾರ ಹಾಗೂ ಚಿಕಿತ್ಸೆಯಿಂದ ಗುಣ ಪಡಿಸಬಹುದು.

English summary

Signs To Show That You Are Anemic | Tips For Health | ರಕ್ತ ಹೀನತೆ ಉಂಟಾಗಿದೆ ಎಂದು ಹೇಳುವ ಲಕ್ಷಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

If you have colourless eyes, it is supposed to be a sign of anemia. Other symptoms of low blood count include pale complexion and persistent fatigue. Here are some of the most obvious signs that show that you are anemic.
Story first published: Saturday, March 2, 2013, 15:50 [IST]
X
Desktop Bottom Promotion