For Quick Alerts
ALLOW NOTIFICATIONS  
For Daily Alerts

ಮಿದುಳನ್ನು ಚುರುಕುಗೊಳಿಸುವ ರಹಸ್ಯ!

By Super
|

ಸಾಮಾನ್ಯವಾಗಿ ನಮ್ಮ ದೇಹವನ್ನು ಸದೃಢವಾಗಿ, ಆರೋಗ್ಯಕರವಾಗಿ ಇಡಲು ಹಲವಾರು ಬೇರೆ ಬೇರೆ ವಿಧದ, ನಮ್ಮ ದೇಹಕ್ಕೆ ಸರಿಹೊಂದುವ ವ್ಯಾಯಾಮ, ಉತ್ತಮ ಆಹಾರ ಪದ್ಧತಿ ಮೊದಲಾದ ಪೂರ್ವಚಿಕಿತ್ಸೆಗಳನ್ನು ಮಾಡುತ್ತೇವೆ. ಇದರಿಂದ ಸದೃಢವಾಗಿರುತ್ತೇವೆ ಕೂಡ. ಆದರೆ ಈ ದೇಹವನ್ನು ನಿಯಂತ್ರಿಸಬಲ್ಲ, ಸದಾ ಚಟುವಟಿಕೆಯಿಂದ ಕೂಡಿರುವಂತೆ ಮಾಡಬಲ್ಲ ಬ್ರೈನ್/ ಮೆದುಳಿನ ಬಗ್ಗೆ ಅಥವಾ ಅದರ ಆರೋಗ್ಯದ ಬಗ್ಗೆ ಎಂದಾದರೂ ಯೋಚಿಸಿದ್ದೀರೆ?

ಸಾಮಾನ್ಯವಾಗಿ ಮೆದುಳಿಗೆ ಯೋಚನೆ ಮಾಡುವ ಕೆಲಸವನ್ನು ಕೊಟ್ಟರೆ ಮಿದುಳು ಚಟುವಟಿಕೆ ಯಿಂದಿರುತ್ತದೆ ಎಂಬ ಮಾತಿದೆ. ಆದರೆ ಇದು ನಿಜವಾಗಿಯೂ ಸಾಲದು.ನಿಮ್ಮ ಮೆದುಳಿಗೆ ಯಾವುದೇ ಕೆಲಸವನ್ನು ಕೊಡದೆ ಅದು ಶಕ್ತಿಯನ್ನು ಕಳೆದುಕೊಳ್ಳುವ ಹಾಗೂ ಮಾನಸಿಕ ಸಾಮರ್ಥ್ಯವನ್ನು ಕಳೆದುಕೊಳ್ಳುವ ಮೊದಲು ಅದನ್ನು ಪುನಶ್ಚೇತನಗೊಳಿಸಬೇಕು.

ಆದ್ದರಿಂದ ಮೆದುಳಿಗೆ ಸಂಬಂಧಪಟ್ಟ ಕೆಲವು ವ್ಯಾಯಾಮಗಳನ್ನು ಮಾಡುವುದು ಉತ್ತಮ. ಅಲ್ಲದೇ ಇಂತಹ ವ್ಯಾಯಾಮಗಳು ಆನಂದದಾಯಕವಾಗಿರುತ್ತವೆ. ಮತ್ತು ಈ ಕ್ರಿಯೆಯನ್ನು ಕೆಲವು ವಾರಗಳವರೆಗೆ ಮತ್ತೆ ಮತ್ತೆ ಮಾಡಿದರೆ ಕೆಲವೇ ದಿನಗಳಲ್ಲಿ ನೀವೆ ವ್ಯತ್ಯಾಸವನ್ನು ಕಾಣಬಲ್ಲಿರಿ!

 ಗ್ರಹಿಕೆ ಸಾಮರ್ಥ್ಯ ಹೆಚ್ಚಿಸಿ

ಗ್ರಹಿಕೆ ಸಾಮರ್ಥ್ಯ ಹೆಚ್ಚಿಸಿ

ಕೆಲಸಕ್ಕೆ ಹೋಗುವಾಗ ಅಥವಾ ಪ್ರಯಾಣವನ್ನು ಮಾಡುವಾಗ ನಿಮ್ಮ ಕೈಯಲ್ಲಿ ಒಂದು ನೋಟ್ ಪ್ಯಾಡ್ ಇರಲಿ. ಪ್ರಯಾಣ ಮಾಡುವಾಗ ನಿಮ್ಮ ಮುಂದೆ ಕಂಡ ವಸ್ತು ಅಥವಾ ವ್ಯಕ್ತಿಯ ಚಿತ್ರವನ್ನು ಬಿಡಿಸಿ. ಹೀಗೆ ಪ್ರತಿದಿನವೂ ಮಾಡಿ, ನಂತರ ವಾರದ ಕೊನೆಯ ದಿನ ವಾರದ ಆರಂಭದಲ್ಲಿ ಬಿಡಿಸಿದ ಎಲ್ಲಾ ಚಿತ್ರಗಳನ್ನು ಹಿಂತಿರುಗಿ ನೋಡದೇ ಪುನಃ ಬಿಡಿಸಿ. ಇದು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.

ಶ್ರವಣ

ಶ್ರವಣ

ನಿಮಗೆ ಕರೆ ಬಂದಾಗ ನಿಮ್ಮ ಮೊಬೈಲ್ ನಲ್ಲಿನ ಅವರ ಹೆಸರನ್ನು ನೋಡದೆ ಅವರ ಧ್ವನಿಯ ಮೇಲೆ ಕರೆ ಮಾಡಿದವರು ಯಾರೆಂಬುದನ್ನು ಕಂಡುಹಿಡಿಯಿರಿ. ನಿನಗೆ ಇಷ್ಟವಾದ ಹಾಡನ್ನು ಕೇಳುವಾಗ ಅದರಲ್ಲಿ ಬಳಸಲಾದ ವಾದ್ಯ ಉಪಕರಣ, ಸಂಗೀತ ಯಾವುದೆಂಬುದನ್ನು ಗಮನಿಸಿ ನೆನಪಿಡಿ. ಈ ರೀತಿ ಒಂದು ವಾರಗಳವರೆಗೆ ನಿರಂತರವಾಗಿ ದಿನಕ್ಕೊಂದು ಹಾಡನ್ನು ಆಲಿಸಿ.

ವಾಸನೆ/ ರುಚಿ

ವಾಸನೆ/ ರುಚಿ

ನೀವು ರೆಸ್ಟೋರೆಂಟ್ ಗೆ ಹೋದಾಗ ಇದುವರೆಗೆ ರುಚಿ ನೋಡಿರದ ಖಾದ್ಯಗಳಿಗೆ ಆರ್ಡರ್ ಕೊಡಿ. ಅದರಲ್ಲಿ ಯಾವ ಹರ್ಬ್ಸ್ ಹಾಕಿದ್ದಾರೆ ಎನ್ನುವುದನ್ನು ಅದರ ಸುವಾಸನೆಯಿಂದ ಗ್ರಹಿಸಿ. ಈ ಸರಳ ವ್ಯಾಯಾಮ ನಿಮ್ಮಲ್ಲಿ ಗ್ರಹಿಕೆಯ ಸಾಮರ್ಥ್ಯವನನ್ನು ಹೆಚ್ಚಿಸುವುದು.

ವಾಸನೆ/ಸ್ವರ್ಶ:

ವಾಸನೆ/ಸ್ವರ್ಶ:

ನಿಮ್ಮ ಮನೆಯ ಫ್ರಿಜ್ ಬಾಗಿಲು ತೆರೆಯಿರಿ ಮತ್ತು ಕಣ್ಣು ಮುಚ್ಚಿಕೊಂಡು ಅದರಲ್ಲಿರುವ ವಸ್ತುಗಳನ್ನು ಗುರುತಿಸಿ. ಅವುಗಳನ್ನು ಮುಟ್ಟಿ ಅದು ಯಾವ ವಸ್ತು ಎಂಬುದನ್ನು ಕಂಡುಹಿಡಿಯಿರಿ.

ಸ್ಮರಣೆ

ಸ್ಮರಣೆ

ಪ್ರತಿದಿನ ನಿಮ್ಮ ಮೊಬೈಲಿನಿಂದ ಎರಡು ನಂಬರ್ ಗಳನ್ನು ಗೊತ್ತುಮಾಡಿಕೊಂಡು ಕೆಲವು ಬಾರಿ ಕರೆ ಮಾಡಿ. ನಂತರ ಆ ನಂಬರ್ ಗಳನ್ನು ನೋಡದೇ ನೀವೇ ಡೈಲ್ ಮಾಡಿ. ಹೀಗೆ ಒಂದು ವಾರದವರೆಗೆ ಮಾಡಿ ವಾರದ ಕೊನೆಯಲ್ಲಿ ನೀವು ನೆನಪಿಟ್ಟುಕೊಂಡ ಎಲ್ಲಾ ಸಂಖ್ಯೆಗಳನ್ನೂ ಬರೆದಿಡಿ.

ಅಂತರ,ಪ್ರದೇಶ, ಸಂಪುಟ – ದೃಶ್ಯ ಸಾಮರ್ಥ್ಯಗಳು

ಅಂತರ,ಪ್ರದೇಶ, ಸಂಪುಟ – ದೃಶ್ಯ ಸಾಮರ್ಥ್ಯಗಳು

ದೃಶ್ಯ ಸಾಮಥ್ಯ ಪ್ರದೇಶ, ಸಂಪುಟ ಮೊದಲಾದ ವಿಷಯಗಳಲ್ಲಿ ನಿಮ್ಮ ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸರಳ ಗ್ರಹಿಕೆ ಹೆಚ್ಚು ವಿಷಯ ಸಂಗ್ರಹ ಎಳೆವಯಸ್ಸಿನಲ್ಲಿ ಮಾಡಲೇಬೇಕಾಗುತ್ತದೆ. ನೀವು ಯಾವುದೇ ಒಂದು ಸ್ಥಳಕ್ಕೆ ಹೋಗಿ ಬಂದರೆ ಬಂದ ನಂತರ ಆ ಸ್ಥಳಕ್ಕೆ ಹೋಗುವ ಮಾರ್ಗದ ಸರಳ ನಕಾಶೆಯೊಂದನ್ನು ತಯಾರಿಸಿ. ನಂತರ ಆಯಾವಸ್ತುಗಳ ತೂಕ ಗಾತ್ರಗಳನ್ನು ಪರಿಶೀಲಿಸಿ.

ಆಕೃತಿ ನಿರ್ಮಿಸುವ ಸಾಮರ್ಥ್ಯ

ಆಕೃತಿ ನಿರ್ಮಿಸುವ ಸಾಮರ್ಥ್ಯ

ಇದು ನಿಮ್ಮ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ವ್ಯಾಯಾಮ. ಒಂದು ಜಿಗ್ಸಾ ಪಝಲ್ಸ್ ನ್ನು ತೆಗೆದುಕೊಳ್ಳಿ ಇಂತಿಷ್ಟು ನಿರ್ದಿಷ್ಟ ಸಮಯದೊಳಗೆ ಎಲ್ಲಾ ಮಸ್ತುಗಳನ್ನು ಸರಿಯಾಗಿ ಸ್ಥಳದಲ್ಲಿ ಜೋಡಿಸುವುದಕ್ಕೆ ಆರಂಭಿಸಿ. ಆರಂಭಿಕ ಹಂತದಲ್ಲಿ ಕಡಿಮೆ ವಸ್ತುಗಳನ್ನು ಜೋಡಿಸುವುದಕ್ಕಾಗಿ ಆಯ್ಕೆ ಮಾಡಿ.

ಪ್ರಜ್ಞೆ ತರ್ಕ/ಲಾಜಿಕ್ ಸಾಮರ್ಥ್ಯ

ಪ್ರಜ್ಞೆ ತರ್ಕ/ಲಾಜಿಕ್ ಸಾಮರ್ಥ್ಯ

ಎಷ್ಟೋ ಬಾರಿ ನಮ್ಮ ತರ್ಕಬದ್ಧ ನಿಲುವಿನೊಂದಿಗೆ ನಮ್ಮ ಸುತ್ತಲಿನ ವಸ್ತುಗಳು ಅಥವಾ ಸನ್ನಿವೇಷಗಳು ನಮಗೆ ಬೇಕಾದ ಹಾಗೆ ಇರಬೇಕು ಎಂದು ಬಯಸುತ್ತೇವೆ. ಆದರೆ ಈ ವಿಷಯದಲ್ಲಿ ನಾವು ಸಾಕಷ್ಟು ಬಾರಿ ಎಡವುತ್ತೇವೆ ಕೂಡ. ಈ ವಿಷಯದಲ್ಲಿ ಗೆಲ್ಲಲು ಕೆಲವು ಮಾರ್ಗಗಳಿವೆ: ನಿಮ್ಮ ಶಾಪಿಂಗ್ ಟಿಪ್ಪಣಿಗಳನ್ನು ಸ್ಮರಿಸಿಕೊಳ್ಳಿ. ಇದು ನೆನಪಿಟ್ಟುಕೊಳ್ಳುವುದಕ್ಕೆ ಸುಲಭವೆನಿಸಿದರೂ ಕೊಂಚ ಕಷ್ಟವೇ! ಆದರೂ ಅದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಎಲ್ಲಾ ವಸ್ತುಗಳ ಟಿಪ್ಪಣಿ ನೆನಪಿನಲ್ಲಿ ಉಳಿಯುವಂತೆ ಮಾಡಿ.

ಪದಗಳ ಜೊತೆ ಆಟ ಮೌಖಿಕ ಸಾಮರ್ಥ್ಯ

ಪದಗಳ ಜೊತೆ ಆಟ ಮೌಖಿಕ ಸಾಮರ್ಥ್ಯ

ಪ್ರತಿದಿನವೂ ಮಾತನಾಡುವಾಗ ಅಥವಾ ಬರೆಯುವಾಗ ಸರಿಯಾದ ಪದಗಳನ್ನು ಬಳಸಿ. ಪ್ರತಿದಿನ ಬೆಳಗ್ಗೆ ವಾರ್ತೆಯನ್ನು ವೀಕ್ಷಿಸಿ ಮತ್ತು ಅಲ್ಲಿನ ಮುಖ್ಯಾಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಹೊಸ ಪದಗಳ ಪ್ರಯೋಗ ಆರಂಭಿಸಿ. ಹೊಸ ಭಾಷೆಗಳನ್ನು ಕಲಿಯಿರಿ. ಸ್ವಂತ ಬ್ಲಾಗ್ ಗಳನ್ನು ಬರೆಯಲು ಆರಂಭಿಸಿ.

ನ್ಯೂರೋಬಿಕ್ ವ್ಯಾಯಾಮ

ನ್ಯೂರೋಬಿಕ್ ವ್ಯಾಯಾಮ

ಇದೊಂದು ಮಾನಸಿಕ ವ್ಯಾಯಾಮವಾಗಿದ್ದು ಬುದ್ಧಿಯನ್ನು ಚುರುಕುಗೊಳಿಸುವಲ್ಲಿ ಸಹಾಯಕಾರಿ. ಇಲ್ಲಿ ನ್ಯೂರೋಬಿಕ್ ವ್ಯಾಯಾಮ ಮಾಡುವ ಕೆಲವು ವಿಧಾನಗಳನ್ನು ಹೇಳಲಾಗಿದೆ:

ಎಡಗೈಯಿಂದ ಹಲ್ಲನ್ನು ಉಜ್ಜಿ( ದಿನವೂ ಹಲ್ಲುಜ್ಜುವ ಕೈಯನ್ನು ಇನ್ನೊಂದು ಕೈಗೆ ಬದಲಾಯಿಸಿ)

ಸಕ್ರಿಯವಾಗಿರಿ

ಸಕ್ರಿಯವಾಗಿರಿ

* ನಿಮ್ಮ ಕಣ್ಣನ್ನು ಮುಚ್ಚಿಕೊಂಡು ಬಟ್ಟೆ ಧರಿಸಿ.

* ನಿಮ್ಮ ಊಟವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ. ಆದರೆ ಮಾತನಾಡಬೇಡಿ! ಕೇವಲ ನೋಟಗಳಲ್ಲೇ ಮಾತು ಮುಂದುವರಿಸಿ.

* ಮಳೆಯ ಸದ್ದನ್ನು ಆಲಿಸಿ ಮತ್ತು ಅದೇ ಸಮಯದಲ್ಲಿ ಆ ಶಬ್ದಕ್ಕೆ ತಕ್ಕಂತೆ ಬೆರಳಾಡಿಸಿ.

* ಕೆಲಸ ಮಾಡಲು ವಿಭಿನ್ನ ಮಾರ್ಗವನ್ನು ಆಯ್ದುಕೊಳ್ಳಿ.

ಸಕ್ರಿಯವಾಗಿರಿ:

ದೈಹಿಕ ಚಟುವಟಿಕೆಗಳು ಕೇವಲ ದೇಹ ತೂಕವನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಮೆದುಳಿನ ನರಗಳು ಬೆಳೆಯಲು, ಮೆದುಳಿನಲ್ಲಿ ಆಮ್ಲಜನಕದ ಸರಿಯಾದ ಹರಿವು ಮೊದಲಾದ ಮೆದುಳಿನ ಸಕ್ರಿಯ ಕಾರ್ಯಚಟುವಟಿಕೆಗಳಿಗೆ ಸಹಾಯಕವಾಗುತ್ತದೆ.

ಕೇವಲ ಮೇಲಿನ ವ್ಯಾಯಾಮಗಳನ್ನು ಮಾಡಿದರೆ ಮಾತ್ರ ಪರಿಣಾಮಕಾರಿಯಲ್ಲ. ಇವುಗಳ ಜೊತೆಗೆ ದೈಹಿಕ ಕಾರ್ಯಗಳನ್ನು ಮಾಡುವುದು ಕೂಡ ಅಷ್ಟೇ ಮುಖ್ಯ!

English summary

Make your brain power sharp | ಮಿದುಳನ್ನು ಚುರುಕುಗೊಳಿಸುವ ರಹಸ್ಯ !

You exercise your body to keep fit and active – but what about your mind? With the following clearly defined ways to exercise the different abilities of your brain, you can revive your mental abilities before they slow down due to age or lack of stimuli.
X
Desktop Bottom Promotion