For Quick Alerts
ALLOW NOTIFICATIONS  
For Daily Alerts

ಖಿನ್ನತೆಯಿಂದ ಹೊರಬರಲು ಟಿಪ್ಸ್

By Super
|

ಖಿನ್ನತೆ ಬರಲು ವಯಸ್ಸು ಮತ್ತು ಲಿಂಗಗಳ ಭೇದವಿಲ್ಲ. ಪ್ರತಿಯೊಬ್ಬರು ತಮ್ಮ ಜೀವನದ ಒಂದು ಕಾಲ ಘಟ್ಟದಲ್ಲಿ ಖಿನ್ನತೆಗೆ ಗುರಿಯಾಗುತ್ತಾರೆ. ಇಂದಿನ ಆಧುನಿಕ ಯುಗದ ಕೆಲಸದ, ಕುಟುಂಬದ ಒತ್ತಡದ ಕಾರಣವಾಗಿ ಖಿನ್ನತೆಗೆ ಗುರಿಯಾಗುತ್ತಿರುತ್ತಾರೆ. ಕಾರಣ ಕೆಲಸದಲ್ಲಿ ಮೇಲಾಧಿಕಾರಿಗಳು ತಮ್ಮ ಪಾಲಿನ ಕೆಲಸವನ್ನು ತನ್ನ ಕೈಕೆಳಗಿರುವವರ ಮೇಲೆ ಹಾಕಿ ಅವರು ನಿಶ್ಚಿಂತೆಯಿಂದ ಕುಳಿತುಕೊಳ್ಳುತ್ತಾರೆ. ಈ ಗುರಿಗಳನ್ನು ಸಾಧಿಸಲಾಗದಿದ್ದಾಗ ಆ ನೌಕರರು ಖಿನ್ನತೆಗೆ ಗುರಿಯಾಗುತ್ತಾರೆ.

ಬನ್ನಿ ಇಂತಹ ಮನಸ್ಸಿನ ನೆಮ್ಮದಿಯನ್ನು ಕೆಡಿಸುವ ಖಿನ್ನತೆ ಸಮಸ್ಯೆಗಳಿಂದ ಹೊರಬರಲು ಹಲವಾರು ವಿಧಾನಗಳು ಈಗ ಲಭ್ಯವಿದ್ದು ಅವು ಯಾವುದು ಎಂಬುದನ್ನು ನೋಡೋಣ..

1. ಸ್ವ ಪ್ರಜ್ಞೆ / ಆತ್ಮಪ್ರಜ್ಞೆ

1. ಸ್ವ ಪ್ರಜ್ಞೆ / ಆತ್ಮಪ್ರಜ್ಞೆ

ಕೆಲವು ಜನರು ತಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಅರ್ಥಮಾಡಿಕೊಳ್ಳದೇ ಅದಕ್ಕೆ ಹೊಂದಿಕೊಳ್ಳಲಾಗದೇ ಖಿನ್ನತೆಗೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಮನಸ್ಸಿನ ಕೊರತೆಯನ್ನು ನಿವಾರಿಸುವಂತಹ ಸ್ವಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.

2. ಸಹಾಯ ಕೇಳಿ

2. ಸಹಾಯ ಕೇಳಿ

ನಮ್ಮ ಜೀವನದಲ್ಲಿ ಎದುರಾಗುವ ಕೆಲವು ಪರಿಸ್ಥಿತಿಯನ್ನು ನಿರ್ವಹಿಸಲು ಇತರರ ಸಹಾಯವನ್ನು ಕೇಳುವುದು ತಪ್ಪಲ್ಲ. ಯಾರಿಗೂ ತಮ್ಮ ಜೀವನದ ಹೊರೆಯನ್ನು ಒಬ್ಬರೇ ಹೊರುವುದು ಅಷ್ಟು ಸುಲಭವಲ್ಲ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಹೋದ್ಯೋಗಿ ಹಾಗೂ ಸ್ನೇಹಿತರ ಸಹಾಯ ಪಡೆಯಿರಿ.

4.ಬ್ರೇಕ್ ನ ಅವಶ್ಯಕತೆ

4.ಬ್ರೇಕ್ ನ ಅವಶ್ಯಕತೆ

ನಿಮ್ಮ ಸ್ಥಳವನ್ನು ಆಗಾಗ ಬದಲಾಯಿಸುವುದರಿಂದ ನೀವು ನಕಾರಾತ್ಮಕ ಚಿಂತನೆಗಳಿಂದ ದೂರವಿರಲು ಸಹಾಯಕವಾಗುತ್ತದೆ. ಆದರೆ ಇದು ಒಂದು ದಿನದ ಪ್ರಯಾಣದಲ್ಲಿ ಆಗುವಂತದ್ದಲ್ಲ. ಆದ್ದರಿಂದ ನೀವು ಯಾವುದೇ ಸಮಯದಲ್ಲಿ ಖಿನ್ನತೆಗೆ ಒಳಗಾಗಿದ್ದರೆ ಕನಿಷ್ಠ ಹದಿನೈದು ದಿನದ ವಿರಾಮವನ್ನು ಪಡೆಯಿರಿ. ಇದರಿಂದ ನಿಮ್ಮಲ್ಲಿ ಒಂದು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಸಹಾಯಕವಾಗುತ್ತದೆ.

6. ತೂಕ ಕಡಿಮೆಗೊಳಿಸಿ

6. ತೂಕ ಕಡಿಮೆಗೊಳಿಸಿ

ಒಂದು ವೇಳೆ ನೀವು ನಿಮ್ಮ ಅತೀ ತೂಕದಿಂದಾಗಿ ಡಿಪ್ರೆಶನ್/ ಖಿನ್ನತೆಗೆ ಒಳಗಾಗಿದ್ದರೆ ತೂಕವನ್ನು ಇಳಿಸುವುದು ನಿಮ್ಮ ಮನಸ್ಸನ್ನು ಸರಿಯಾಗಿಡಲು ಉತ್ತಮ ಮಾರ್ಗ. ವ್ಯಾಯಾಮ, ಸಮತೂಕದ ಮೈಕಟ್ಟು ನೀಡಿ, ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುವುದು ಮಾತ್ರವಲ್ಲದೆ ನಿಮ್ಮಲ್ಲಿ ಧನಾತ್ಮಕವಾದ ಚಿಂತನೆಯನ್ನು ಬೆಳೆಸುತ್ತದೆ.

8. ಬ್ಲಾಗ್ ಮತ್ತು ಜರ್ನಲ್

8. ಬ್ಲಾಗ್ ಮತ್ತು ಜರ್ನಲ್

ಆತ್ಮಾವಲೋಕನವನ್ನು ಮಾಡಲು ದಿನವೂ ಜೀವನದಲ್ಲಿ ನಡೆಯುವ ಘಟನೆಗಳನ್ನು ಬರೆದಿಡುವುದು ಉತ್ತಮವಾದ ಮಾರ್ಗ. ಇದು ನಿಮ್ಮನ್ನು ಖಿನ್ನತೆಯಿಂದ ಹೊರತರುವುದು ಮಾತ್ರವಲ್ಲದೆ ನಿಮ್ಮ ಬಗ್ಗೆ ನಿಮ್ಮಲ್ಲಿಯೇ ಒಳ್ಳೆಯ ಭಾವನೆಗಳನ್ನು ಮೂಡಿಸುವಲ್ಲಿ ನೆರವಾಗುತ್ತದೆ.

9. ನಕಾರಾತ್ಮಕ ಜನರಿಂದ ದೂರವಿರಿ

9. ನಕಾರಾತ್ಮಕ ಜನರಿಂದ ದೂರವಿರಿ

ಯಾರು ಇನ್ನೊಬ್ಬರ ಮನಸ್ಸನ್ನು ಕೆಡಿಸುತ್ತಾರೋ ಅಂತಹವರ ಜೊತೆ ಇರುವುದಕ್ಕೆ ಯಾರೂ ಇಷ್ಟಪಡುವುದಿಲ್ಲ. ಇಂತಹ ವ್ಯಕ್ತಿಗಳಿಂದ ದೂರವಿರುವುದು ಮನಸ್ಸಿನ ಶಾಂತಿಗೆ ಸಹಾಯಕವಾಗುತ್ತದೆ.

12. ಕೆಟ್ಟ ಕಲ್ಪನೆಗಳನ್ನು ಮಾಡಬೇಡಿ

12. ಕೆಟ್ಟ ಕಲ್ಪನೆಗಳನ್ನು ಮಾಡಬೇಡಿ

ಪ್ರತಿ ಸನ್ನಿವೇಶದಲ್ಲಿ ಕೆಟ್ಟ ಕಲ್ಪನೆ ಮಾಡುವುದು ಜೀವನದಲ್ಲಿ ಕೆಟ್ಟ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ನೀವು ಮುಂದೆ ಯಾವುದೇ ಕಾರ್ಯ ನಿರ್ವಹಿಸಲು ನಿಮ್ಮ ಪ್ರಚೋದನೆಯನ್ನು ಕಳೆದುಕೊಳ್ಳಬಹುದು ಮತ್ತು ಸರಳವಾಗಿ ಯಶಸ್ಸಿನ ಸಾಧ್ಯತೆಗಳು ಅಂತ್ಯವಾಗುತ್ತದೆ.

15. ಸಾಕುಪ್ರಾಣಿಗಳನ್ನು ಸಾಕಿ

15. ಸಾಕುಪ್ರಾಣಿಗಳನ್ನು ಸಾಕಿ

ಸಾಕುಪ್ರಾಣಿಗಳು ನಿಮ್ಮನ್ನು ಮತ್ತೆ ಪುನಃ ಉತ್ತಮ ಮೂಡ್ ಗೆ ಹಿಂತಿರುಗಿಸಲು ಸಹಾಯ ಮಾಡುತ್ತವೆ. ಅವುಗಳೊಂದಿಗಿನ ಭಾವನಾತ್ಮಕ ಸಂಬಂಧ ನಿಮ್ಮನ್ನು ಸಮಮನಸ್ಕರನ್ನಾಗಿ ಮಾಡುತ್ತವೆ.

16. ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ನಿರೀಕ್ಷಿಸಬೇಡಿ

16. ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ನಿರೀಕ್ಷಿಸಬೇಡಿ

ಬೇರೆಯವರು ನಮ್ಮ ಜೊತೆ ಇರಬೇಕು ಬಯಸಿ, ಹಾಗೆ ಆಗದೇ ಇದ್ದಾಗ ಖಿನ್ನತೆ/ಒತ್ತಡದ ಮನಸ್ಥಿತಿಗೆ ಒಳಗಾಗುತ್ತೇವೆ. ಆದ್ದರಿಂದ ಇಂತಹ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಬೇರೆಯವರಿಗೆ ಆದ್ಯತೆ ನೀಡುವುದಕ್ಕೆ ಬದಲು ನಿಮ್ಮ ತೃಪ್ತಿಯ ಬಗ್ಗೆ ಗಮನವಹಿಸಿ.

17. ಚೆನ್ನಾಗಿ ನಿದ್ರಿಸಿ

17. ಚೆನ್ನಾಗಿ ನಿದ್ರಿಸಿ

ಖಿನ್ನತೆಯನ್ನು ಹೆಚ್ಚು ತಡೆಗಟ್ಟಲು ವ್ಯಕ್ತಿ ದಿನದಲ್ಲಿ 7 ರಿಂದ 8 ಗಂಟೆ ನಿದ್ದೆ ಮಾಡುವುದು ಒಳಿತು.

18. ಲೈಂಗಿಕತೆಯಿಂದ ದೂರವಿರಬೇಕೆಂದು ತಿಳಿಯಬೇಡಿ

18. ಲೈಂಗಿಕತೆಯಿಂದ ದೂರವಿರಬೇಕೆಂದು ತಿಳಿಯಬೇಡಿ

ಖಿನ್ನತೆಯ ಸಮಯದಲ್ಲಿ ಲೈಂಗಿಕತೆಯ ಬಗ್ಗೆ ಎಚ್ಚರದಿಂದಿರುವುದು ಸುಲಭ. ಆದರೆ ಬಹುತೇಕ ಜನರು ಲೈಂಗಿಕತೆ ಖಿನ್ನತೆಯ ಚಿತ್ತಸ್ಥಿತಿಗಳನ್ನು ಉನ್ನತಿಗೇರಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ಹಾರ್ಮೋನ್ ಒಳಹರಿವು ಖಿನ್ನತೆಯನ್ನು ಸ್ಥಿರಗೊಳಿಸಿ, ಮಾನಸಿಕ ಒತ್ತಡಕ್ಕೆ ಪರಿಹಾರ ಒದಗಿಸುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.

English summary

How to deal with depression | Tips For Health | ಖಿನ್ನತೆಯಿಂದ ಹೊರಬರುವುದು ಹೇಗೆ ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

People generally suffer from depression because they do not understand the events in their lives and tend to push themselves a little too much. Lack of self-awareness with respect to demanding situations can put one in a depressed state of mind.
X
Desktop Bottom Promotion