For Quick Alerts
ALLOW NOTIFICATIONS  
For Daily Alerts

ಕಿತ್ತಳೆಯ ಬಗ್ಗೆ ಕೆಲ ಆಸಕ್ತಿಕರ ಅಂಶಗಳು

|

ಈ ಹೈಬ್ರಿಡ್ ಬೆಳೆ ಬೆಳೆಯುವ ಕಾಲದಲ್ಲಿ ಎಲ್ಲಾ ಬಗೆಯ ಹಣ್ಣುಗಳು ಎಲ್ಲಾ ಕಾಲದಲ್ಲಿ ದೊರೆಯುವುದಾದರೂ ಯಾವತ್ತಿಗೂ ನಾವು ಸೀಸನ್ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಏಕೆಂದರೆ ಸೀಸನ್ ಹಣ್ಣುಗಳಲ್ಲಿ ಆಯಾ ಸೀಸನ್ ಗೆ ನಮ್ಮ ದೇಹವನ್ನು ರಕ್ಷಣೆ ಮಾಡುವ ಸಾಮರ್ಥ್ಯ ಇರುತ್ತದೆ. ಬೇಸಿಗೆಯಲ್ಲಿ ನೋಡಿ, ಮೈಯನ್ನು ತಂಪಾಗಿಸುವ ಹಣ್ಣುಗಳೇ ಹೆಚ್ಚಾಗಿ ದೊರೆಯುತ್ತದೆ. ಇನ್ನು ಚಳಿಗಾಲದಲ್ಲಿ ಸಿಟ್ರಸ್ ಫುಡ್ಸ್ . ಸಿಟ್ರಸ್ ಫುಡ್ಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಚಳಿಯಿಂದ ರಕ್ಷಣೆ ಮಾಡುತ್ತದೆ.

ಈಗ ಕಿತ್ತಳೆ ಮತ್ತು ಸೀಬೆಕಾಯಿ ಹಣ್ಣುಗಳ ಸೀಸನ್. ಇಲ್ಲಿ ನಾವು ಕಿತ್ತಳೆ ಹಣ್ಣಿನ ಗುಣಗಳು ಮತ್ತು ಅವುಗಳ ಬಗ್ಗೆ ಕೆಲ ಆಸಕ್ತಿಕರ ವಿಷಯಗಳನ್ನು ಹೇಳಿದ್ದೇವೆ ನೋಡಿ:

ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ

ಈ ಸಿಟ್ರಸ್ ಹಣ್ಣಿನಲ್ಲಿ ಲೈಮೋನೈಡ್ಸ್ ಅಂಶವಿದೆ, ಇದು ತ್ವಚೆ, ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಹೀಗೆ ನಾನಾ ಬಗೆಯ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಿ ದೇಹವನ್ನು ರಕ್ಷಣೆ ಮಾಡುತ್ತದೆ.

ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು

ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು

ಕಿತ್ತಳೆ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು. ಕಿತ್ತಳೆ ಜ್ಯೂಸ್ ಕುಡಿಯುವುದಾದರೆ ಸ್ವಲ್ಪ ಪ್ರಮಾಣದಲ್ಲಿ ಸಕ್ಕರೆ ಹಾಕಿ ಕುಡಿಯುವುದು ಒಳ್ಳೆಯದು.

 ಕೊಲೆಸ್ಟ್ರಾಲ್ ಬರದಂತೆ ತಡೆಯುತ್ತದೆ

ಕೊಲೆಸ್ಟ್ರಾಲ್ ಬರದಂತೆ ತಡೆಯುತ್ತದೆ

ಇದರಲ್ಲಿ ಸಿಟ್ರಸ್ ಅಂಶ ಹಾಗೂ ನಾರಿನಂಶ ಅಧಿಕವಿರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು

ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು

ನಮ್ಮ ಹೃದಯ ಸರಿಯಾದ ರೀತಿಯಲ್ಲಿ ಮಿಡಿಯಲು ಪೊಟಾಷ್ಯಿಯಂ ಅವಶ್ಯಕ. ಪೊಟಾಷ್ಯಿಯಂ ಕಮ್ಮಿಯಾದರೆ ಹೃದಯದ ಬಡಿತ ಕಡಿಮೆಯಾಗುವುದು. ಕಿತ್ತಳೆಯಲ್ಲಿ ಪೊಟಾಷ್ಯಿಯಂ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ

ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ

ಇದರಲ್ಲಿ ಪಾಲಿಫೀನೈಲ್ ಅಂಶವಿದ್ದು ಸೋಂಕಾಣುಗಳ ವಿರುದ್ಧ ಹೋರಾಡಿ, ಶೀತ, ಕೆಮ್ಮು ಬರದಂತೆ ತಡೆಯುತ್ತದೆ.

ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ

ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ

ಇದರಲ್ಲಿ ಕ್ಯಾರೋನೈಡ್ ಎಂಬ ಅಂಶ ಕೂಡ ಇದೆ. ಇದು ವಿಟಮಿನ್ ಎ ಆಗಿ ಪರಿವರ್ತನೆಗೊಂಡು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

 ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಯಾರಿಗೆ ರಕ್ತದೊತ್ತಡ ಸಮಸ್ಯೆ ಇದೆಯೋ ಅವರು ದಿನಾ ಒಂದು ಕಿತ್ತಳೆ ತಿನ್ನುವುದು ಒಳ್ಳೆಯದು. ಏಕೆಂದರೆ ಇದರಲ್ಲಿರುವ ಫ್ಲೇವೋನಾಯ್ಡ್ ಅಂಶ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ತ್ವಚೆ ಆರೈಕೆ ಮಾಡುತ್ತದೆ

ತ್ವಚೆ ಆರೈಕೆ ಮಾಡುತ್ತದೆ

ಇದು ಫ್ರೀರಾಡಿಕಲ್ ಅನ್ನು ಹೋಗಲಾಡಿಸಿ, ತ್ವಚೆ ಆರೈಕೆಯನ್ನು ಹೆಚ್ಚಿಸುತ್ತದೆ. ಅಕಾಲಿಕ ನೆರಿಗೆ ಬೀಳುವುದನ್ನೂ ತಡೆಯುತ್ತದೆ.

ಕಿತ್ತಳೆ ಬಗ್ಗೆ ಕೆಲ ಆಸಕ್ತಿಕರ ವಿಷಯಗಳು

ಕಿತ್ತಳೆ ಬಗ್ಗೆ ಕೆಲ ಆಸಕ್ತಿಕರ ವಿಷಯಗಳು

* ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಸಿಟ್ರಸ್ ಬೆಳೆಯುವ ಹಣ್ಣೆಂದರೆ ಕಿತ್ತಳೆ

* ಪ್ರಪಂಚದಲ್ಲಿಯೇ ಅಧಿಕ ಕಿತ್ತಳೆ ಬೆಳೆಯುವ ದೇಶ ಬ್ರೆಜಿಲ್.

* ಪ್ರಪಂಚದಲ್ಲಿ ಅತೀ ಹೆಚ್ಚು ಇಷ್ಟು ಪಡುವ 3 ಪ್ಲೇವರ್ ಗಳಲ್ಲಿ ಕಿತ್ತಳೆ ಮೂರನೇ ಸ್ಥಾನದಲ್ಲಿದೆ. ಮೊದಲು ಎರಡು ಸ್ಥಾನಗಳನ್ನು ಚಾಕಲೇಟ್ ಮತ್ತು ವೆನಿಲ್ಲಾ ಪಡೆದುಕೊಂಡಿದೆ.

English summary

Health Benefits of Oranges

Season food always better to health. This is the season of Orange fruits, let's checkout the health benefit of this citrus fruit.
X
Desktop Bottom Promotion