Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಆಸ್ಪಿರಿನ್ ಬಗ್ಗೆ ಈ ಅಂಶಗಳು ತಿಳಿದಿದ್ದರೆ ಒಳ್ಳೆಯದು!
ಸ್ವಲ್ಪ ಮೈಕೈ ನೋವು ಬಂತು ಅಥವಾ ತಲೆ ನೋವು ಕಾಣಿಸಿದರೆ ಸಾಕು ತಕ್ಷಣ ಒಂದು ಆಸ್ಪಿರಿನ್ (Aspirin) ಮಾತ್ರೆ ನುಂಗಿ ಬಿಡುತ್ತೇವೆ. ಆಸ್ಪಿರಿನ್ ನುಂಗಿದ ಸ್ವಲ್ಪ ಕ್ಷಣದಲ್ಲಿಯೇ ನಮ್ಮ ಮೈಕೈ ನೋವು, ತಲೆ ನೋವು ಮಾಯವಾಗಿ ಬಿಡುತ್ತದೆ.
ಈ ಆಸ್ಪಿರಿನ್ ಮಾತ್ರೆಯನ್ನು ಬರೀ ನೋವು ನಿವಾರಕವಾಗಿ ಮಾತ್ರವಲ್ಲ, ಕೆಲವೊಮ್ಮೆ ತುರ್ತು ಚಿಕಿತ್ಸೆಯಲ್ಲೂ ಬಳಸಬಹುದು! ಹೃದಯಾಘಾತವಾದವರಿಗೆ ತುರ್ತು ಚಿಕಿತ್ಸೆ ನೀಡುವಾಗ ಇದನ್ನು ಬಳಸಬಹುದು. ಈ ಮಾತ್ರೆಯಲ್ಲಿ ಆರೋಗ್ಯಕರ ಗುಣವಿದೆ, ಅನಾರೋಗ್ಯಕರ ಗುಣ ಕೂಡ ಇದೆ.
ಆಸ್ಪಿರಿನ್ ಮಾತ್ರೆಯ ಆರೋಗ್ಯಕರ, ಅನಾರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ ಬನ್ನಿ:

ತಲೆನೋವಿಗೆ ತಕ್ಷಣ ಪರಿಹಾರ
ತಲೆನೋವು ಬಂದರೆ ಒಂದು ಆಸ್ಪಿರಿನ್ ಮತ್ರೆಯನ್ನು ನುಂಗಿದರೆ ಸಾಕು. ಈ ಮಾತ್ರೆಯಷ್ಟು ಬೇಗನೆ ಯಾವ ಮಾತ್ರೆಯೂ ತಲೆನೋವನ್ನು ಕಡಿಮೆ ಮಾಡುವುದಿಲ್ಲ.

ಹೃದಯಾಘಾತದ ತುರ್ತು ಚಿಕಿತ್ಸೆಗೆ ಒಳ್ಳೆಯದು
ಹೃದಯಾಘಾತ ಉಂಟಾದ ವ್ಯಕ್ತಿಯ ನಾಲಗೆಯ ಕೆಳಗೆ ತಕ್ಷಣ ಒಂದು ಆಸ್ಪಿರಿನ್ ಮಾತ್ರೆ ಇಟ್ಟರೆ ಸಾಕು. ಇದು ಕರಗಿ ಹೆಪ್ಪು ಗಟ್ಟಿದ ರಕ್ತವನ್ನು ಕರಗಿಸುತ್ತದೆ.

ಜ್ವರ
ಜ್ವರ ಬಂದಾಗ ಸುಸ್ತು, ತಲೆನೋವು, ಮೈಕೈ ನೋವು ಉಂಟಾಗುತ್ತದೆ. ಆಗ ಒಂದು ಆಸ್ಪಿರಿನ್ ಮಾತ್ರೆಯನ್ನು ನುಂಗಿದರೆ ಸಾಕು ಈ ಎಲ್ಲಾ ನೋವುಗಳು ಕಡಿಮೆಯಾಗುವುದು.

ಮೊಡವೆಯನ್ನು ಹೋಗಲಾಡಿಸುತ್ತದೆ
ಆಸ್ಪಿರಿನ್ ಮಾತ್ರೆಯನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿ ಮಾಡಿ ಮೊಡವೆಯ ಮೇಲೆ ಹಚ್ಚಿದರೆ ಮೊಡವೆ ಕಡಿಮೆಯಾಗುವುದು.

ತಲೆ ಹೊಟ್ಟನ್ನು ಹೋಗಲಾಡಿಸುತ್ತದೆ
ಶ್ಯಾಂಪೂ ಜೊತೆ ಆಸ್ಪಿರಿನ್ ಮಾತ್ರೆಯನ್ನು ಮಿಶ್ರ ಮಾಡಿ ತಲೆಗೆ ಹಚ್ಚಿದರೆ ತಲೆಹೊಟ್ಟು ಸಂಪೂರ್ಣವಾಗಿ ಹೋಗುತ್ತದೆ.

ಲಿವರ್ ಹಾನಿಯಾಗದಂತೆ ತಡೆಯುತ್ತದೆ
ಆಸ್ಪಿರಿನ್ ಮಾತ್ರೆ ಲಿವರ್(ಯಕೃತ್ತ್) ಹಾನಿಯಾಗದಂತೆ ತಡೆಯುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ
ಆಸ್ಪಿರಿನ್ ಮಾತ್ರೆಯು ಕ್ಯಾನ್ಸರ್ ಕಣಗಳು ಹೆಚ್ಚಾಗುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

ಅಸ್ತಮಾದವರಿಗೆ ಒಳ್ಳೆಯದಲ್ಲ
ಉಸಿರಾಟದ ತೊಂದರೆ ಇರುವವರಿಗೆ, ಅಸ್ತಮಾ ರೋಗಿಗಳಿಗೆ ಆಸ್ಪಿರಿನ್ ಮಾತ್ರೆ ಒಳ್ಳೆಯದಲ್ಲ . ಆಸ್ಪಿರಿನ್ ಮಾತ್ರೆ ಗಂಟಲಿನಲ್ಲಿ ಸ್ನಾಯುಗಳ-ಹಠಾತ್ ಸೆಳೆತ ಉಂಟು ಮಾಡುತ್ತದೆ. ಈ ರೀತಿಯಾದರೆ ಅಸ್ತಮಾ ರೋಗಿಗಳಿಗೆ ಒಳ್ಳೆಯದಲ್ಲ.

ಅಲರ್ಜಿ ಉಂಟಾಗಬಹುದು
ಕೆಲವರಿಗೆ ಆಸ್ಪಿರಿನ್ ಮಾತ್ರೆ ನುಂಗಿದರೆ ಅಲರ್ಜಿ ಉಂಟಾಗುತ್ತದೆ. ಅಲರ್ಜಿ ಉಂಟಾಗುವುದಾದರೆ ಈ ಮಾತ್ರೆ ನುಂಗಬಾರದು.

ರಕ್ತಸ್ರಾವ
ಪ್ರತಿನಿತ್ಯ ಆಸ್ಪಿರಿನ್ ಮಾತ್ರೆ ತೆಗೆದುಕೊಂಡರೆ, ಈ ಮಾತ್ರೆ ರಕ್ತವನ್ನು ತೆಳುವಾಗಿಸುವುದರಿಂದ ಅತೀ ಹೆಚ್ಚು ರಕ್ತಸ್ರಾವ ಉಂಟಾಗುವುದು. ಗಾಯವಾದರೆ ರಕ್ತ ಬೇಗನೆ ಹೆಪ್ಪುಗಟ್ಟದವರು ಈ ಮಾತ್ರೆಯನ್ನು ತೆಗೆದುಕೊಳ್ಳಬಾರದು.

16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೊಡಬೇಡಿ
ಚಿಕ್ಕ ಮಕ್ಕಳಿಗೆ ಜ್ವರ ಬಂದಾಗ ವೈದ್ಯರ ಸೂಚಿಸಿದ ಔಷಧಿ ಮಾತ್ರ ಕೊಡಿ. ಆಸ್ಪಿರಿನ್ ಮಾತ್ರೆ ಮಕ್ಕಳ ಲಿವರ್ ಹಾಗೂ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.



Click it and Unblock the Notifications
