Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸೈನಸ್ ಗುಣಪಡಿಸುವ ಆಹಾರಗಳಿವು
ಸೈನಸ್ ಸಮಸ್ಯೆ ಕಾಣಿಸಿಕೊಂಡರೆ ವಿಪರೀತ ತಲೆನೋವು ಕಂಡು ಬರುವುದು, ಸೂಕ್ತ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಈ ಸೈನಸ್ ತಲೆನೋವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಕೆಲವೊಂದು ಮನೆ ಮದ್ದುಗಳು ಕೂಡ ಸೈನಸ್ ತಲೆನೋವನ್ನು ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ.
ನೀವು ನೈಸರ್ಗಿಕವಾದ ವಿಧಾನದಿಂದ ಸೈನಸ್ ನಿಂದ ಮುಕ್ತಿಹೊಂದ ಬಯಸುವುದಾದರೆ ಈ ಆಹಾರಗಳು ನಿಮಗೆ ಸಹಾಯ ಮಾಡುವುದು. ಈ ಆಹಾರಗಳಲ್ಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಗುಣವಿರುವುದರಿಂದ ಸೈನಸ್ infection ಅನ್ನು ಕಡಿಮೆ ಮಾಡಿ ತಲೆನೋವನ್ನು ಕಡಿಮೆ ಮಾಡುತ್ತದೆ. ಸೈನಸ್ ದೂರವಿಡುವ ಆ ಆಹಾರಗಳಾವುವು ಎಂದು ನೋಡೋಣವೇ?

ಪೈನಾಪಲ್
ಸೈನಸ್ ತಲೆನೋವನ್ನು ಹೋಗಲಾಡಿಸಲು ಪೈನಾಪಲ್ ತಿನ್ನಿ. ಇದರಲ್ಲಿ bromelain ಎಂಬ ಅಂಶವಿದ್ದು ಸೈನಸ್ ಸಮಸ್ಯೆಯನ್ನು ಕಮ್ಮಿ ಮಾಡುತ್ತದೆ.

ಬೆಳ್ಳುಳ್ಳಿ
ಸೈನಸ್ ಹೋಗಲಾಡಿಸಲು ಪ್ರತಿನಿತ್ಯ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು. ಬೆಳ್ಳುಳ್ಳಿ ಸೈನಸ್ ಇನ್ ಫೆಕ್ಷನ್ ವಿರುದ್ಧ ಹೋರಾಡಿ, ತಲೆ ನೋವನ್ನು ಕಡಿಮೆ ಮಾಡುತ್ತದೆ.

ಆಪಲ್ ಸೈಡರ್ ವಿನೆಗರ್
ಇದರಲ್ಲಿ ಪೊಟಾಷ್ಯಿಯಂ ಇದ್ದು ಇದನ್ನು ಕುಡಿಯುವುದರಿಂದ ಕೂಡ ಸೈನಸ್ ಸಮಸ್ಯೆಯನ್ನು ಗುಣ ಪಡಿಸಬಹುದು. ಒಂದು ಚಮಚ ಆಪಲ್ ಸೈಡರ್ ವಿನೆಗರ್ ಒಂದು ಲೋಟ ನೀರಿನಲ್ಲಿ ಹಾಕಿ ಕುಡಿಯಿರಿ.

ಮೊಸರು
ಮೊಸರು ತಿನ್ನುವುದರಿಂದ ಸೈನಸ್ ಸಮಸ್ಯೆ ಉಲ್ಭಣವಾಗದಂತೆ ನೋಡಿಕೊಳ್ಳಬಹುದು, ಇದು ಅಲರ್ಜಿ ಸಮಸ್ಯೆ ಉಂಟಾಗದಂತೆ ದೇಹವನ್ನು ರಕ್ಷಣೆ ಮಾಡುತ್ತದೆ.

ಚಿಕನ್ ಸೂಪ್
ಚಿಕನ್ ಸೂಪ್ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಸೈನಸ್ ಸಮಸ್ಯೆಯನ್ನು ಕಮ್ಮಿ ಮಾಡುತ್ತದೆ.

ವಿಟಮಿನ್ ಸಿ
ವಿಟಟಿನ್ ಎ ಮತ್ತು ಸಿ ಇರುವ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸಿದರೆ ಸೈನಸ್ ಬರದಂತೆ ತಡೆಯಬಹುದು.

ನೀಲಗಿರಿ ಎಣ್ಣೆ
ಸೈನಸ್ ನಿಂದ ಉಸಿರಾಟದಲ್ಲಿ ತೊಂದರೆ ಉಂಟಾದರೆ ನೀಲಗಿರಿ ಎಣ್ಣೆಯ ವಾಸನೆ ಗ್ರಹಿಸಿ, ಹೀಗೆ ಮಾಡುವುದರಿಂದ ಉಸಿರಾಟ ಸರಾಗವಾಗುವುದು.

ನೀರು
ಸಾಕಷ್ಟು ನೀರು ಕುಡಿಯಿರಿ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಸೈನಸ್ ಸಮಸ್ಯೆ ಹೆಚ್ಚುವುದು, ಆದ್ದರಿಂದ ಅಧಿಕ ನೀರು ಕುಡಿಯುವುದು ಅವಶ್ಯಕ.

ಒಮೆಗಾ 3 ಕೊಬ್ಬಿನಂಶ
ಸೈನಸ್ ಸಮಸ್ಯೆ ಇರುವವರು ಒಮೆಗಾ 3 ಕೊಬ್ಬಿನಂಶವನ್ನು ಆಹಾರಕ್ರಮದಲ್ಲಿ ಸೇರಿಸಿ. ಮೂಲಂಗಿಯನ್ನು ತಿನ್ನಿ,



Click it and Unblock the Notifications
