Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಧುಮೇಹಿಗಳು ಈ ಸಿಹಿ ಹಣ್ಣುಗಳನ್ನು ತಿನ್ನಬಹುದು
ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರಗಳನ್ನು ತಿನ್ನಬೇಕು. ಸಿಹಿ ಅಂತೂ ಮುಟ್ಟಲೇಬಾರದು.
ಹಾಗಂತ ಸಿಹಿ ಹಣ್ಣುಗಳಲ್ಲಿ ಕೆಲವೊಂದು ಹಣ್ಣುಗಳನ್ನು ತಿನ್ನಬಹುದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸುವುದಿಲ್ಲ, ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಈ ಕೆಳಗೆ ಕೆಲವೊಂದು ಹಣ್ಣುಗಳ ಪಟ್ಟಿ ನೀಡಲಾಗಿದೆ. ಈ ಹಣ್ಣುಗಳಲ್ಲಿ ಸಕ್ಕರೆಯಂಶ ಕಡಿಮೆ ಇದ್ದು ಪ್ರೊಟೀನ್, ವಿಟಮಿನ್ಸ್ ಅಧಿಕವಿರುತ್ತದೆ. ಮಧುಮೇಹಿಗಳಿಗೆ ಸಿಹಿ ತಿನ್ನಬೇಕೆಂದು ಅನಿಸಿದಾಗ ಈ ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಎಲ್ಲಿ ಅಪಾಯ ಉಂಟಾಗುತ್ತದೆ ಎಂಬ ಭಯ ಪಡಬೇಕಾದ ಅವಶ್ಯಕತೆ ಕೂಡ ಇಲ್ಲ.

ಪೇರಳೆ (ಪಿಯರ್ಸ್)
ಇದರಲ್ಲಿ ಪೆಕ್ಟಿನ್ ಅಂಶ ಅಧಿಕವಿದ್ದು, ಇದನ್ನು ಮಿತಿಯಲ್ಲಿ ತಿಂದರೆ ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಆಪ್ರಿಕಾಟ್
ತಾಜಾ ಆಪ್ರಿಕಾಟ್ ಗಳನ್ನು ತಿನ್ನುವ ಬದಲು ಒಣ ಆಪ್ರಿಕಾಟ್ ತಿನ್ನುವುದು ಒಳ್ಳೆಯದು. ಇದರಲ್ಲಿ ಪೊಟಾಷ್ಯಿಯಂ ಅಧಿಕವಿದ್ದು ಮಧುಮೇಹಿಗಳ ಆರೋಗ್ಯಕ್ಕೆ ಈ ಪೋಷಕಾಂಶ ಅವಶ್ಯಕ.

ಬೆರ್ರಿ
ಎಲ್ಲಾ ಬಗೆಯ ಬೆರ್ರಿ ಹಣ್ಣುಗಳನ್ನು ತಿನ್ನಬಹುದು. ಈ ಬೆರ್ರಿ ಹಣ್ಣುಗಳು ಮಧುಮೇಹಿಗಳ ದೇಹದಲ್ಲಿರುವ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡುತ್ತದೆ.

ಚೆರ್ರಿ
ತುಂಬಾ ಸಿಹಿ ತಿನ್ನಬೇಕೆಂದು ಅನಿಸಿದಾಗ ಕೃತಕ ಸಿಹಿ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ. ಚೆರ್ರಿ ಹಣ್ಣನ್ನು ಸಿಪ್ಪೆ ಸಹಿತ ತಿನ್ನಿ. ಇದರಲ್ಲಿರುವ ನಾರಿನಂಶ ರಕ್ತದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ.

ದ್ರಾಕ್ಷಿ
ದ್ರಾಕ್ಷಿಯನ್ನು ಮಿತಿಯಲ್ಲಿ ತಿನ್ನಬಹುದು. ಹೆಚ್ಚು ತಿಂದರೆ ಇದರಲ್ಲಿ ಕಾರ್ಬೋಹೈಟ್ರೇಟ್ ಇದ್ದು ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸಬಬಹುದು. ಆದ್ದರಿಂದ ತಿನ್ನಬೇಕೆಂದು ಅನಿಸಿದಾಗ ದಿನದಲ್ಲಿ 3-4 ದ್ರಾಕ್ಷಿ ತಿನ್ನಬಹುದು.

ಪ್ಲಮ್ಸ್
ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹಾಗೂ ಕ್ಯಾಲೋರಿ ಕಡಿಮೆಯಿದ್ದು ನಾರಿನಂಶ ಅಧಿಕವಿರುತ್ತದೆ. ಆದ್ದರಿಂದ ಮಧುಮೇಹಿಗಳಿಗೆ ತಿನ್ನಲು ಸೂಕ್ತವಾದ ಹಣ್ಣು ಇದಾಗಿದೆ.

ಕಿತ್ತಳೆ
ಇದರಲ್ಲಿ ವಿಟಮಿನ್ ಸಿ ಇದ್ದು, ಇದರಲ್ಲಿರುವ ನಾರಿನಂಶ ದೇಹವು ಸಕ್ಕರೆಯಂಶವನ್ನು ಹೀರಿಕೊಳ್ಳುವುದನ್ನು ನಿಧಾನ ಮಾಡುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ.

ಗ್ರೇಪ್ ಫ್ರೂಟ್
ಇದನ್ನು ತಿಂದರೆ ನೈಸರ್ಗಿಕವಾಗಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳಬಹುದು, ಅಲ್ಲದೆ ಇದು ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.

ಬೆಣ್ಣೆ ಹಣ್ಣು
ಈ ಹಣ್ಣಿನಲ್ಲಿ ಪೊಟಾಷ್ಯಿಯಂ ಅಧಿಕವಿದೆ. ಇದನ್ನು ತಿಂದರೆ triglyceride ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಕರ್ಬೂಜದ ಹಣ್ಣು
ಈ ಹಣ್ಣು ಕೂಡ ಸಿಹಿಯಾಗಿದ್ದು, ಮಧುಮೇಹಿಗಳನ್ನು ಈ ಹಣ್ಣನ್ನು ತಿಂದರೆ ಯಾವುದೇ ಅಪಾಯ ಉಂಟಾಗುವುದಿಲ್ಲ. ತುಂಬಾ ಹಣ್ಣಾದ ಕರ್ಬೂಜವನ್ನು ತಿನ್ನದಿರುವುದು ಒಳ್ಳೆಯದು.

ಸೇಬು
ಸೇಬು ತಿಂದರೆ ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳು ಪ್ರತಿದಿನ ಒಂದು ಸೇಬು ತಿನ್ನುವುದು ಒಳ್ಳೆಯದು.



Click it and Unblock the Notifications
