ಚಿಕನ್ ನಿಂದ ಆರೋಗ್ಯಕ್ಕೆ ಒಂದಲ್ಲಾ, ಎರಡಲ್ಲಾ 11 ಲಾಭ!

Posted By:
Subscribe to Boldsky

ಚಿಕನ್ ತಿಂದರೆ ದಪ್ಪಗಾಗುತ್ತೇವೆ ಎಂಬ ಭಯ ಅನೇಕರಲ್ಲಿದೆ. ಚಿಕನ್ ನಲ್ಲಿ ಪ್ರೊಟೀನ್ ಅಧಿಕವಿದ್ದು ಸ್ಕಿನ್ ಲೆಸ್ ಚಿಕನ್ ಅನ್ನು ಬೇಯಿಸಿ ಅಥವಾ ಗ್ರಿಲ್ಡ್ ಮಾಡಿ ತಿಂದರೆ ದೇಹದ ತೂಕ ಹೆಚ್ಚುವುದಿಲ್ಲ, ಆರೋಗ್ಯ ವೃದ್ಧಿಸುತ್ತದೆ.

ಚಿಕನ್ ಅನ್ನು ಫ್ರೈ ಮಾಡಿ ತಿಂದರೆ ಮಾತ್ರ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ. ಶೀತಲೀಕರಣ ಮಾಡಿದ ಚಿಕನ್ ತಿನ್ನ ಬೇಡಿ. ಚಿಕನ್ ಕೊಳ್ಳುವಾಗ ತಾಜಾ ಚಿಕನ್ ಅನ್ನೇ ನೋಡಿ ಕೊಂಡುಕೊಳ್ಳಿ.

ತಾಜಾ ಚಿಕನ್ ತಿಂದರೆ ಈ ಕೆಳಗಿನ ಪ್ರಮುಖ ಆರೋಗ್ಯಕರ ಗುಣಗಳನ್ನು ಪಡಿಯಬಹುದು.

1. ಸ್ನಾಯುಗಳನ್ನು ಬಲಪಡಿಸುತ್ತದೆ

1. ಸ್ನಾಯುಗಳನ್ನು ಬಲಪಡಿಸುತ್ತದೆ

ಬಾಡಿ ಬಿಲ್ಡ್ ಮಾಡಬೇಕೆಂದು ಬಯಸುವವರು ಚಿಕನ್ ಅನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಬೇಕು. ಅದರಲ್ಲೂ ಗ್ರಿಲ್ಡ್ ಅಥವಾ ಬೇಯಿಸಿ ಚಿಕನ್ ತಿನ್ನಿ. ಚಿಕನ್ ನಲ್ಲಿರುವ ಪ್ರೊಟೀನ್ ಸ್ನಾಯುಗಳನ್ನು ಶಕ್ತಿಯುತವಾಗಿಟ್ಟು ಮೈಕೈ ನೋವು ಬರದಂತೆ ತಡೆಯುತ್ತದೆ.

2. ಹಸಿವು ಹೆಚ್ಚಿಸುತ್ತದೆ

2. ಹಸಿವು ಹೆಚ್ಚಿಸುತ್ತದೆ

ಆಗಾಗ ಹಸಿವು ಆಗುವುದು ಮತ್ತು ಹಸಿವು ಆಗದೇ ಇರುವುದು ಇವೆರಡು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಿಕನ್ ತಿಂದರೆ ಜೀರ್ಣಕ್ರಿಯೆಗೆ ಸಹಕಾರಿಯಾಗುವುದು ಹಾಗೂ ಹಸಿವನ್ನು ಹೆಚ್ಚಿಸುತ್ತದೆ.

3. ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

3. ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

ಚಿಕನ್ ನಲ್ಲಿ ಕ್ಯಾಲ್ಸಿಯಂ ಜೊತೆ ರಂಜಕದ ಅಂಶಗಳಿದ್ದು ಮೂಳೆಯನ್ನು ಬಲಪಡಿಸುತ್ತದೆ.

4. ಹೃದಯದ ಸ್ವಾಸ್ಥ್ಯಕ್ಕೆ

4. ಹೃದಯದ ಸ್ವಾಸ್ಥ್ಯಕ್ಕೆ

ಚಿಕನ್ ನಲ್ಲಿ ಕೊಲೆಸ್ಟ್ರಾಲ್ ಇದ್ದರೂ ಇದರಲ್ಲಿ ನಿಯಾಸಿನ್(niacin) ಇರುವುದರಿಂದ ಇದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಗ್ರಿಲ್ಡ್ ಮಾಡಿದ ಚಿಕನ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

 5. ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ

5. ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ

ಇದರಲ್ಲಿ ಖನಿಜಾಂಶಗಳು ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಜ್ವರ ಬಂದಾಗ ಅದರ ಸುಸ್ತನ್ನು ನಿವಾರಿಸಲು ಚಿಕನ್ ಸೂಪ್ ಕುಡಿದರೆ ಸಾಕು ಸ್ವಲ್ಪ ಸಮಯದಲ್ಲೇ ಚೇತರಿಸಿಕೊಳ್ಳುವಿರಿ.

 6. ಮಕ್ಕಳ ಬೆಳವಣಿಗೆಗೆ ಒಳ್ಳೆಯದು

6. ಮಕ್ಕಳ ಬೆಳವಣಿಗೆಗೆ ಒಳ್ಳೆಯದು

ಚಿಕನ್ ನಲ್ಲಿ ಅಮೈನೋ ಆಸಿಡ್ ಅಧಿಕವಿರುವುದರಿಂದ ಮಕ್ಕಳ ಬೆಳವಣಿಗೆಗೆ ಪೂರಕವಾದ ಆಹಾರವಾಗಿದೆ.

7. ಸಂಧಿ ನೋವು ಕಡಿಮೆ ಮಾಡುತ್ತದೆ

7. ಸಂಧಿ ನೋವು ಕಡಿಮೆ ಮಾಡುತ್ತದೆ

ಚಿಕನ್ ನಲ್ಲಿ ಸೆಲೆನಿಯಮ್ (selenium) ಇರುವುದರಿಂದ ಇದು ಸಂಧಿನೋವು ಹೆಚ್ಚಾಗುವುದನ್ನು ತಡೆಯುತ್ತದೆ.

8. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

8. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ತುಂಬಾ ಮಾನಸಿಕ ಒತ್ತಡದಲ್ಲಿ ಇದ್ದಾಗ ಚಿಕನ್ ಅಡುಗೆ ಅಥವಾ ಚಿಕನ್ ಸೂಪ್ ಕುಡಿಯಿರಿ, ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ ಸ್ವಲ್ಪ ನೆಮ್ಮದಿ ದೊರೆತಂತೆ ಅನಿಸುವುದು.

9. ಹೃದಯಾಘಾತ ಬರುವ ಸಾಧ್ಯೆತೆ ಕಡಿಮೆ ಮಾಡುತ್ತದೆ

9. ಹೃದಯಾಘಾತ ಬರುವ ಸಾಧ್ಯೆತೆ ಕಡಿಮೆ ಮಾಡುತ್ತದೆ

ಚಿಕನ್ ನಲ್ಲಿ homocysteine ಇದ್ದು ಹೃದಯಾಘಾತ ಬರದಂತೆ ತಡೆಯುವ ಸಾಮರ್ಥ್ಯ ಹೊಂದಿದೆ.

10. ಮುಟ್ಟಿನ ಸಮಯದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ

10. ಮುಟ್ಟಿನ ಸಮಯದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ

ಮುಟ್ಟಿನ ಸಮಯದಲ್ಲಿ ಆ ನೋವಿನಿಂದಾಗಿ ಹೆಚ್ಚಿನವರಿಗೆ ಮಾನಸಿಕ ಒತ್ತಡ ಉಂಟಾಗುತ್ತದೆ. ಈ ಸಮಯದಲ್ಲಿ ಚಿಕನ್ ತಿಂದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

11. ಸತುವಿನಂಶವಿದೆ

11. ಸತುವಿನಂಶವಿದೆ

ಚಿಕನ್ ನಲ್ಲಿ ಸತುವಿನಂಶವಿರುವುದರಿಂದ ತ್ವಚೆ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹದಲ್ಲಿ ಸತುವಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

English summary

11 Health Benefits Of Eating Chicken | Tips For Health | ಚಿಕನ್ ನಲ್ಲಿರುವ 11 ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Fresh chicken is filled with healthy proteins. To make your life easier, we have listed some of the most vital health benefits of eating chicken. Check it out..
Please Wait while comments are loading...
Subscribe Newsletter