For Quick Alerts
ALLOW NOTIFICATIONS  
For Daily Alerts

ವರ್ಣ ಅಂಧತ್ವ ಬಂದರೆ ಗುಣಪಡಿಸಬಹುದೇ?

|

ಕುರುಡತನ, ದೂರದೃಷ್ಟಿ ದೋಷ, ಸಮೀಪ ದೃಷ್ಟಿ ದೋಷ ಈ ರೀತಿಯ ಕಣ್ಣಿನ ಸಮಸ್ಯೆಗಳ ಜೊತೆಗೆ ಕಂಡು ಬರುವ ಮತ್ತೊಂದು ಕಣ್ಣಿನ ದೋಷವೆಂದರೆ ವರ್ಣ ಅಂಧತ್ವ (ಕಲರ್ ಬ್ಲೈಂಡ್ ). ಈ ರೀತಿಯ ಸಮಸ್ಯೆಯಿಂದ ಬಳಲುವವರಿಗೆ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯವಿರುವುದಿಲ್ಲ. ಈ ಕಾಯಿಲೆ ವಂಶ ಪಾರಂಪರ್ಯವಾಗಿ ಬರುವ ಸಾಧ್ಯತೆ ಇದ್ದು, ಬಂದೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

What Does Nean Of Colour Blind

ನಮ್ಮ ಕಣ್ಣಿನ ರೆಟಿನಾದಲ್ಲಿರುವ ಎರಡು ಕಣಗಳು (rod and cone cells) ಅತೀ ಕಡಿಮೆ ಬೆಳಕಿಗೆ ಮತ್ತು ಸಾಮಾನ್ಯ ಬೆಳಕಿಗೆ ಹೊಂದಿಕೊಂಡು ವಸ್ತುಗಳನ್ನು ಕಾಣಲು ಸಹಕಾರ ಮಾಡುತ್ತದೆ. cone cells ಪ್ರಮುಖ ಬಣ್ಣಗಳಾದ ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಈ cone cells ಏನಾದರೂ ಹಾನಿ ಉಂಟಾದರೆ ಈ ರೀತಿಯ ವರ್ಣ ಅಂಧತ್ವ ಉಂಟಾಗುತ್ತದೆ. ಈ ವರ್ಣ ಅಂಧತ್ವದಲ್ಲಿ ಪ್ರಮುಖವಾಗಿ 3 ರೀತಿಯ ಅಂಧತ್ವ ಉಂಟಾಗುವುದು.

ವರ್ಣ ಅಂಧತ್ವ ಇರುವವರಿಗೆ ಎಲ್ಲರಿಗೂ ಒಂದೇ ರೀತಿಯ ದೃಷ್ಟಿದೋಷ ಇರುವುದಿಲ್ಲ. ಮೂಲ ಬಣ್ಣಗಳಾದ ಕೆಂಪು, ನೀಲಿ ಮತ್ತು ಹಸಿರು ಬಣ್ಣದಲ್ಲಿ ಯಾವುದಾರೂ ಒಂದು ಬಣ್ಣದಲ್ಲಿ ಮಾತ್ರ ವಸ್ತುಗಳು ಕಾಣಿಸುತ್ತವೆ. cone cellsನಲ್ಲಿ ಸ್ವಲ್ಪ ಹಾನಿ ಉಂಟಾದರೆ ಈ ರೀತಿ ಉಂಟಾಗುತ್ತದೆ. ಆದರೆ cone cells ಇರದಿದ್ದರೆ ಮಾತ್ರ ಸಂಪೂರ್ಣ ವರ್ಣ ಅಂಧತ್ವ ಉಂಟಾಗುವುದು. ಈ ರೀತಿ ಸಮಸ್ಯೆ ಹೊಂದಿರುವವರಿಗೆ ಆ ಮೂರು ಪ್ರಮುಖ ಬಣ್ಣಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.

ವರ್ಣ ಅಂಧತ್ವಕ್ಕೆ ಚಿಕಿತ್ಸೆ ಇದೆಯೆ?
ಹೆಚ್ಚಿನವರಿಗೆ ತುಂಬಾ ಕಾಲದವರೆಗೆ ನಮಗೆ ವರ್ಣ ಅಂಧತ್ವ ಸಮಸ್ಯೆ ಇದೆ ಎಂದು ತಿಳಿಯುವುದೇ ಇಲ್ಲ. ಏಕೆಂದರೆ ವಸ್ತುಗಳನ್ನು ನೋಡಿದಾಗ ಅವರ ಕಣ್ಣಿಗೆ ಯಾವ ಬಣ್ಣ ಕಾಣುತ್ತದೆ ಅದೇ ಬಣ್ಣದ ವಸ್ತು ಇರಬಹುದೆಂದು ಭಾವಿಸುತ್ತಾರೆ. ಆದ್ದರಿಂದ ವರ್ಣ ಅಂತ್ವದ ಸಮಸ್ಯೆ ತಕ್ಷಣಕ್ಕೆ ಗಮನಕ್ಕೆ ಬರದೇ ಹೋಗಬಹುದು. ಮಕ್ಕಳಲ್ಲಿ ಈ ಸಮಸ್ಯೆ ಇದೆಯೆ ಎಂದು ತಿಳಿಯಲು Ishihara Color Test ಮಾಡಿ ತಿಳಿದುಕೊಳ್ಳಲಾಗುವುದು.

ಆದರೆ ಈ ರೀತಿಯ ಸಮಸ್ಯೆ ಇದ್ದರೆ ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಈ ಸಮಸ್ಯೆ ಇರುವವರು ಪೈಲೆಟ್, ಎಲೆಕ್ಟ್ರಿಷಿಯನ್ ಹೀಗೆ ಬಣ್ಣಗಳನ್ನು ಗುರುತಿಸಿ ಕೆಲಸ ಮಾಡುವಂತಹ ಉದ್ಯೋಗಗಳನ್ನು ಮಾಡಲು ಸಾಧ್ಯವಿಲ್ಲ, ಏಕೆಂದರೆ ಬಣ್ಣಗಳನ್ನು ಗುರುತಿಸಲು ಸಾಧ್ಯವಾಗದೇ ಹೋಗುವುದರಿಂದ ಅನಾಹುತ ಉಂಟಾಗಬಹುದು. ಉಳಿದಂತೆ ವರ್ಣ ಅಂಧತ್ವ ಇದ್ದರೂ ಕೂಡ ಸಾಮಾನ್ಯವಾದ ಬದುಕನ್ನು ನಡೆಸಬಹುದಾಗಿದೆ.

ಈ ರೀತಿಯ ವರ್ಣ ಅಂಧತ್ವ ವಂಶಪಾರಂಪರ್ಯ ಬರುವ ಕಾಯಿಲೆಯಾಗಿದ್ದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಕಂಡುಬರುತ್ತದೆ.

English summary

What Does Nean Of Colour Blind | Tips For Health | ವರ್ಣ ಅಂಧತ್ವ ಎಂದರೇನು? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Colour blind is a figurative term. The person who has this unfortunate disorder is not actually blind but his or her ability to distinguish between colours is diminished or absent.
Story first published: Monday, June 18, 2012, 10:42 [IST]
X
Desktop Bottom Promotion