For Quick Alerts
ALLOW NOTIFICATIONS  
For Daily Alerts

ಹ್ಯಾಂಗೋವರ್? ಈ ವ್ಯಾಯಾಮ ಮಾಡಿ

|
How To Get Rid From Hangover
ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಎಲ್ಲರಿಗೂ ಗೊತ್ತು. ಆದರೆ ಪಬ್, ಪಾರ್ಟಿ ಅಂತ ಹೋಗದಿರಲು ಕುಡಿಯುವವರಿಗೆ ಸಾಧ್ಯವಾಗುವುದಿಲ್ಲ. ಕುಡಿಯುವುದಿಲ್ಲ ಅಂತ ತೀರ್ಮಾನಿಸಿದರೂ ಕೊನೆಗೆ ಪಾರ್ಟಿಗೆ ಹೋಗಿ ಕುಡಿದು ಬರುತ್ತಾರೆ. ಈ ರೀತಿ ನೂರು ಜನ ಶಪಥ ಮಾಡಿದರೆ ಅದರಲ್ಲಿ 90 ಜನ ಶಪಥ ಮುರಿಯುತ್ತಾರೆ. ನಂತರ ಕುಡಿತದ ಹ್ಯಾಂಗೋವರ್ ನಿಂದ ಹೊರಬರಲಾಗದೆ ಒದ್ದಾಡುತ್ತಾರೆ.

ಕುಡಿದು ಅದರಿಂದ ಮಾರನೇ ದಿನ ಏಳುವಾಗ ತಲೆನೋವು, ವಾಂತಿ ಬಂದಂತಾಗುವುದು, ಸುಸ್ತು, ಆಲಸ್ಯ ಮುಂತಾದ ಲಕ್ಷಣಗಳು ಕಂಡು ಬಂದಾಗ ಇನ್ನು ಮುಂದೆ ಕುಡಿಯಬಾರದು ಎಂದು ಅಂದುಕೊಳ್ಳುವುದಷ್ಟೆ. ಕುಡಿತದಿಂದ ಶರೀರ ಹಾಳಾಗುವುದರ ಜೊತೆಗೆ ಅದರ ಹ್ಯಾಂಗೋವರ್ ನಿಂದ ಮತ್ತಷ್ಟು ಹಿಂಸೆ ಅನುಭವಿಸದಿರಲು ಈ ಕೆಳಗಿನ ವ್ಯಾಯಾಮ ಮಾಡುವುದು ಒಳ್ಳೆಯದು.

ಹ್ಯಾಂಗೋವರ್ ನಿಂದ ಹೊರಬರಲು ವ್ಯಾಯಾಮಗಳು:

ಓಡುವುದು: ಹ್ಯಾಂಗೋವರ್ ನಿಂದ ಬೆಳಗ್ಗೆ ಏಳುವುದೇ ಕಷ್ಟ, ಇನ್ನು ಓಡುವುದು ಎಲ್ಲಿಂದ ? ಹಾಗಂತ ಮಲಗಿದರೆ ಹ್ಯಾಂಗೋವರ್ ನಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎದ್ದು ಓಡಬೇಕು. ಸ್ವಲ್ಪ ಜೋರಾಗಿಯೇ ಓಡಬೇಕು. ಹೀಗೆ ಓಡುವುದರಿಂದ ದೇಹಕ್ಕೆ ಅಧಿಕ ಆಮ್ಲಜನಕ ಪೂರೈಕೆಯಾಗುತ್ತದೆ. ಇದರಿಂದ ಆಲಸ್ಯದಿಂದ ಹೊರಬರಲು ಸಹಾಯವಾಗುವುದು.

ಈಜುವುದು: ಹ್ಯಾಂಗೋವರ್ ನಿಂದ ಹೊರಬರಲು ತಣ್ಣೀರು ಸ್ನಾನ ಸಹಾಯ ಮಾಡುತ್ತದೆ. ಕುಡಿತದಿಂದ ಉಂಟಾದ ಮೈಕೈ ನೋವು ಹೋಗಬೇಕೆಂದರೆ ಈಜುಕೊಳದಲ್ಲಿ ಹೋಗಿ ಜಂಪ್ ಮಾಡಬೇಕು. ಅಲ್ಲದೆ ಏರೋಬಿಕ್ ವ್ಯಾಯಾಮ ಕೂಡ ಒಳ್ಳೆಯದು. ಅಲ್ಲದೆ ಈ ವ್ಯಾಯಾಮ ದೇಹವನ್ನು ಗಟ್ಟಿಮುಟ್ಟಾಗಿ ಇಡಲು ಸಹಾಯ ಮಾಡುತ್ತದೆ.

ಜರ್ಕ್ ಪ್ರೆಸ್ಸೆಸ್ (Jerk presses): ಸಿಕ್ಸ್ ಪ್ಯಾಕ್ ಬೇಕೆಂದು ದಿನಾ ಅಭ್ಯಾಸ ಮಾಡುವವರು ಹ್ಯಾಂಗೋವರ್ ನಿಂದ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸುಮ್ಮನೆ ಕೂರಬಾರದು. ಅದರ ಬದಲು ಡಂಬಲ್ಸ್ ಅನ್ನು ತೆಗೆದುಕೊಂಡು ಕಾಲುಗಳನ್ನು ಅಗಲ ಮಾಡಿ ನಿಲ್ಲಬೇಕು. ನಂತರ ಡಂಬಲ್ಸ್ ಅನ್ನು ಎಡ ಕೈಯಲ್ಲಿ ತೆಗೆದುಕೊಂಡು ಬಗ್ಗಿ ಬಲಗಾಲಿಗೆ ಮುಟ್ಟುವಂತೆ ಹಿಡಿದು 10-15 ಸೆಕೆಂಡ್ ನಿಲ್ಲಬೇಕು. ಇದೇ ರೀತಿ ಬಲ ಕೈಯಲ್ಲಿ ಹಿಡಿದು ಎಡ ಕಾಲನ್ನು ಮುಟ್ಟ ಬೇಕು. ಈ ರೀತಿ 5-6 ಸಲ ಮಾಡಿದರೆ ಹ್ಯಾಂಗೋವರ್ ನಿಂದ ಹೊರಬರಬಹುದು.

ಸೈಕ್ಲಿಂಗ್: ಬೆಳಗ್ಗೆ ಎದ್ದು ಒದು 20 ನಿಮಿಷ ಸೈಕ್ಲಿಂಗ್ ವ್ಯಾಯಾಮ ಮಾಡಿದರೆ ಹ್ಯಾಂಗೋವರ್ ನಿಂದ ಸಂಪೂರ್ಣವಾಗಿ ಹೊರಬರಬಹುದು. ಸೈಕ್ಲಿಂಗ್ ಪ್ರತಿದಿನ ಮಾಡಿದರೆ ಹೃದ್ರೋಗ ಸಮಸ್ಯೆ, ಒಬೆಸಿಟಿ ಮುಂತಾದ ತೊಂದರೆಗಳು ಉಂಟಾಗದಂತೆ ತಡೆಯಬಹುದು.

English summary

How To Get Rid From Hangover | Tips For health | ಹ್ಯಾಂಗೋವರ್ ನಿಂದ ಹೊರಬರುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

This pain of hangover makes you dizzy and uncomfortable for hours. Check out the easy exercises that can help you regain yourself after a late night party of heavy drinking!
Story first published: Saturday, June 23, 2012, 12:22 [IST]
X
Desktop Bottom Promotion