For Quick Alerts
ALLOW NOTIFICATIONS  
For Daily Alerts

ಅಯ್ಯೋ ಸೊಂಟ ನೋವು, ಏನು ಮಾಡೋದು?

|
Hip Sprains
ಹೆಚ್ಚು ಭಾರ ಹೊತ್ತಾಗ ಅಥವಾ ಹೆಚ್ಚು ಬಾಗಿದಾಗ ಕೆಲವೊಮ್ಮೆ ಸೊಂಟ ಉಳುಕಿಬಿಡುತ್ತೆ. ಅಷ್ಟೇ ಅಲ್ಲ, ಹೆಚ್ಚು ಒತ್ತಡ ಹೇರಿದಾಗಲೂ ಸೊಂಟದ ನೋವು ಕಾಣಿಸಿಕೊಳ್ಳುತ್ತೆ. ಈಗೀಗ ಸೊಂಟ ನೋವು ಮಧ್ಯವಯಸ್ಸಿನ ನಂತರ ನಿರಂತರವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿಬಿಟ್ಟಿದೆ.

ಆದರೆ ಈ ಸಮಸ್ಯೆಯನ್ನು ತಕ್ಷಣವೇ ನಿವಾರಿಸಿಕೊಳ್ಳದಿದ್ದರೆ ದಿನೇ ದಿನೇ ಇದರ ಪರಿಣಾಮ ಹೆಚ್ಚಾಗುತ್ತಿರುತ್ತದೆ. ಮಾತ್ರೆ ಹೆಚ್ಚು ಸೇವಿಸಿದರೆ ಅಡ್ಡ ಪರಿಣಾಮ ಹೆಚ್ಚು. ಆದ್ದರಿಂದ ಮನೆಯಲ್ಲೇ ಕೆಲವು ವಿಧಾನವನ್ನು ಅನುಸರಿಸಿದರೆ ಸೊಂಟದ ನೋವನ್ನು ಉಪಶಮನ ಮಾಡಿಕೊಳ್ಳಬಹುದು. ಅದು ಹೇಗೆಂದು ಮುಂದೆ ತಿಳಿದುಕೊಳ್ಳಿ.

ಸೊಂಟದ ನೋವಿಗೆ ಉಪಶಮನ ಹೇಗೆ?

* ನೀಲಗಿರಿ ತೈಲ: ಮೈ-ಕೈ ನೋವಿಗೆ ನೀಲಗಿರಿ ಎಣ್ಣೆ ತುಂಬಾ ಪ್ರಯೋಜನಕಾರಿ. ಸ್ನಾನ ಮಾಡುವಾಗ ನೀರಿಗೆ ಕೆಲವು ಹನಿ ನೀಲಗಿರಿ ತೈಲ ಹಾಕಿ ಸ್ನಾನ ಮಾಡಿದರೆ ನೋವು ಕಡಿಮೆಯಾಗುತ್ತದೆ. ಈ ಎಣ್ಣೆ ದೇಹದಲ್ಲಿ ಉಷ್ಣವನ್ನುಂಟು ಮಾಡಿ ನೋವನ್ನು ಉಪಶಮನ ಮಾಡುತ್ತದೆ. ಇದರಲ್ಲಿ ನೋವು ನಿವಾರಕ ಔಷಧೀಯ ಗುಣವಿದೆ.

* ಉಪ್ಪಿನೊಂದಿಗೆ ಬಿಸಿ ನೀರಿನ ಸ್ನಾನ: ಮೈ ನೋವಿಗೆ ಉಪ್ಪಿನ ಶಾಖವೂ ಉತ್ತಮ ಪರಿಹಾರ. ಬಿಸಿ ನೀರಿನಲ್ಲಿ ಸ್ವಲ್ಪ ಕಲ್ಲುಪ್ಪು ಬೆರೆಸಿ ಸ್ನಾನ ಮಾಡಿದರೆ ನೋವು ಕಡಿಮೆಯಾಗುತ್ತದೆ. ನೋವಿರುವ ಜಾಗಕ್ಕೆ ಹೆಚ್ಚು ನೀರು ಹಾಕಿಕೊಳ್ಳಬೇಕು.

* ಐಸ್ ಬ್ಯಾಗ್: ಐಸ್ ಬ್ಯಾಗ್ ಗಳನ್ನು ನೋವಿರುವ ಜಾಗದಲ್ಲಿ ಉಜ್ಜಿಕೊಂಡರೆ ಮೂಳೆಗಳು ರಿಲ್ಯಾಕ್ಸ್ ಆಗಿ ನೋವನ್ನು ನಿವಾರಣೆ ಮಾಡುತ್ತದೆ.

* ಶುಂಠಿ ಅರಿಶಿಣದ ಪೇಸ್ಟ್: ಅರಿಶಿಣ ಮತ್ತು ಲೋಳೆಸರದೊಂದಿಗೆ ಶುಂಠಿ ಪೇಸ್ಟನ್ನು ಬೆರೆಸಿ ನೋವಿರುವ ಜಾಗದಲ್ಲಿ ಹಚ್ಚಿಕೊಂಡರೆ ಬೇಗನೆ ನೋವು ಕಡಿಮೆಯಾಗುತ್ತದೆ.

* ಬೆಚ್ಚಗಿನ ಎಣ್ಣೆಯ ಮಸಾಜ್: ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು.

English summary

Hip Sprains | Home Remedies for Hip Pain | ಸೊಂಟ ಉಳುಕುವುದು | ಸೊಂಟ ನೋವಿಗೆ ಉಪಶಮನ ಹೇಗೆ

Hip sprains can happen due to hip dislocation, injury in ligaments etc. Hip sprains may be sprain in the thighbone, or femur or in the socket joint. Home remedies are also best for hip sprains as they are natural solutions and are generally applied externally. Intake of pain killers can cause side effects and make you feel weak. Here are some remedies.
Story first published: Tuesday, December 27, 2011, 14:13 [IST]
X
Desktop Bottom Promotion