For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿರುವ ಬೆಸ್ಟ್ ಔಷಧಿ ಯಾವುದು?

|
Herbal Medicines
ಭಾರತದ ಎಲ್ಲಾ ಮಸಾಲೆ ಅಡುಗೆಗಳಲ್ಲಿ ಸಾಮಾನ್ಯವಾಗಿ ಸಾಂಬಾರು ಪದಾರ್ಥ ಮತ್ತು ಕೆಲವು ಗಿಡಮೂಲಿಕೆಯನ್ನು ಬಳಸಲಾಗುತ್ತೆ. ಪ್ರತಿಯೊಂದು ಪದಾರ್ಥವೂ ತನ್ನದೇ ವಿಶೇಷ ಘಮಲು, ರುಚಿ ಹೊಂದಿದೆ.

ಘಮಲು ಮಾತ್ರವಲ್ಲ, ತನ್ನದೇ ಔಷಧೀಯ ಗುಣವನ್ನೂ ಹೊಂದಿರುತ್ತದೆ. ಈ ಮಸಾಲೆ ಪದಾರ್ಥಗಳನ್ನು ಆಯುರ್ವೇದದಲ್ಲೂ ಹೆಚ್ಚು ಖ್ಯಾತಿ ಪಡೆದುಕೊಂಡಿವೆ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಔಷಧೀಯ ವಸ್ತುಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.

1. ಶುಂಠಿ: ಭಾರತೀಯ ಮಸಾಲೆ ಖಾದ್ಯಗಳಲ್ಲಿ ಶುಂಠಿಯಿಲ್ಲದೆ ರುಚಿಯೇ ಇರುವುದಿಲ್ಲ. ರಕ್ತ ಕಟ್ಟುವಿಕೆ ಮತ್ತು ಜ್ವರಕ್ಕೆ ಇದು ಒಳ್ಳೇ ಮದ್ದು. ತಲೆಸುತ್ತು ಮತ್ತು ಭೇದಿಯನ್ನೂ ಶುಂಠಿ ನಿವಾರಿಸುತ್ತದೆ.

2. ಅರಿಶಿಣ: ಕ್ಯಾನ್ಸರ್ ನಿವಾರಕ ಅಂಶ ಅರಿಶಿಣದಲ್ಲಿದೆ. ಅನೇಕ ರೋಗಗಳಿಗೆ ಅರಿಶಿಣ ಮದ್ದು. ಇದು ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುವುದಲ್ಲದೆ ಕ್ರಿಮಿಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಅರಿಶಿಣ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸಲೂ ಸೇವಿಸಬಹುದು. ಕೆಮ್ಮು, ನೆಗಡಿ ಶೀತಕ್ಕೆ ರಾಮಬಾಣ. ರಕ್ತ ನಾಳಗಳಲ್ಲಿ ಸೇರಿಕೊಳ್ಳುವ ಕ್ರಿಮಿಗಳನ್ನು ಅರಿಶಿಣ ಕೊಲ್ಲುವುದರಿಂದ ಹೊಳೆಯುವ ತ್ವಚೆಯನ್ನೂ ಪಡೆಯಬಹುದು.

3. ಮೆಂತ್ಯೆ: ಮೆಂತ್ಯೆ ಕಾಳಿನಲ್ಲಿ ವಿಟಮಿನ್ ಇ ಹೆಚ್ಚಿದೆ. ಕೂದಲಿನ ಬೆಳವಣಿಗೆಗೆ ಮೆಂತ್ಯೆ ತುಂಬಾ ಸಹಕಾರಿ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ಇದನ್ನು ಮಧುಮೇಹಿಗಳು ಸೇವಿಸುತ್ತಾರೆ. ಈ ಮೆಂತ್ಯೆ ಮ್ಯುಕೊಸಲ್ ಫ್ಲುಯಿಡ್ ಉತ್ಪಾದಿಸಿ ವಿಷಕಾರಿ ಮತ್ತು ಅಲರ್ಜಿಯನ್ನು ನಿವಾರಿಸುತ್ತದೆ. ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೂ ಮೆಂತ್ಯೆ ಒಳ್ಳೆಯದು.

4. ಇಂಗು: ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಇಂಗು ಪರಿಣಾಮಕಾರಿ. ಉಸಿರಾಟದ ತೊಂದರೆ, ಅಸ್ತಮಾ ಮತ್ತು ಕೆಮ್ಮಿದ್ದವರಿಗೂ ಇಂಗಿನ ಸೇವನೆ ಇರಬೇಕು. ಇಂಗಿನ ಒಗರು ವಾಸನೆ ಬ್ಯಾಕ್ಟೀರಿಯಾ ಕೊಂದುಹಾಕುತ್ತದೆ.

5. ಜೀರಿಗೆ: ಜೀರಿಗೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆದು, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಯನ್ನು ಹೋಗಿಸುತ್ತದೆ. ಇದರಲ್ಲಿ ಕಬ್ಬಿಣಾಂಶ ಮತ್ತು ಖನಿಕಾಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಪಿತ್ತವನ್ನೂ ನಿವಾರಿಸುತ್ತದೆ.

6. ಲವಂಗ: ಲವಂಗ ಬಾಯಿಯ ಸ್ವಾಸ್ಥ್ಯಕ್ಕೆ ಹೆಚ್ಚು ಉಪಯೋಗ. ಹಲ್ಲು ನೋವಿಗೆ ಮತ್ತು ಸಂಧಿವಾತಕ್ಕೆ ಲವಂಗದ ಎಣ್ಣೆಗಿಂತ ಬೇರೆ ಮದ್ದಿಲ್ಲ.

English summary

Herbs and Spices | Herbal Medicines | ಗಿಡಮೂಲಿಕೆ ಮತ್ತು ಮಸಾಲೆ ಪದಾರ್ಥ | ಮಸಾಲೆ ಪದಾರ್ಥ ಮತ್ತು ಔಷಧ

Indian cuisines use the most number of herbs and spices. Every spice have their own essence, taste, flavour and medicinal values. The medicinal values of herbs and spices are widely used in Ayurvedic medicines. Lets look at some of the herbs and spices and their medicinal values.
Story first published: Friday, December 16, 2011, 20:29 [IST]
X
Desktop Bottom Promotion