For Quick Alerts
ALLOW NOTIFICATIONS  
For Daily Alerts

ನಿದ್ದೆ ಮಾತ್ರೆ ನಿರಂತರ ನುಂಗಿದರೆ ಏನಾಗುತ್ತೆ?

By Super
|
Sleeping Pills Fatal for Health
ನಿದ್ರಾಹೀನತೆಯಿಂದ ಬಳಲುವವರು ನಿದ್ದೆ ಮಾತ್ರೆ ಮೊರೆ ಹೋಗುವುದು ಈಗ ಸಾಮಾನ್ಯವಾಗಿದೆ. ನಿದ್ದೆ ಮಾತ್ರೆ ಸೇವನೆ ಅಭ್ಯಾಸವಾಗಿಯೂ ಅಂಟಿಕೊಳ್ಳುತ್ತೆ. ಆದರೆ ನಿದ್ದೆ ಮಾತ್ರೆಯನ್ನು ನಿರಂತರವಾಗಿ ಸೇವಿಸಿದರೆ ಇನ್ನಿತರರಿಗಿಂತ ಬೇಗ ಸಾಯುವ ಸಾಧ್ಯತೆ ಶೇ 36 ರಷ್ಟು ಹೆಚ್ಚಿರುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ಅಮೆರಿಕದ ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ ಮನುಷ್ಯರಲ್ಲಿ ನಿದ್ದೆಯನ್ನು ನಿಯಂತ್ರಿಸುವ ಕ್ಯಾಲ್ಸಿಯಂ ಕೈನೇಸ್ ಎಂಬ ಮೆದುಳಿನ ಎಂಝೈಮನ್ನು ಪರಿಶೀಲಿಸಿರುವುದಾಗಿ ಸಂಶೋಧಕ ಫಿಯೋನಾ ಮ್ಯಾಕ್ರಿ ತಿಳಿಸಿದ್ದಾರೆ.

ಇಲಿಯ ಮೇಲೆ ನಡೆಸಿದ ಪ್ರಯೋಗದಿಂದ ಈ ಅಂಶ ತಿಳಿದುಬಂದಿದೆ. ಇಲಿಗೆ ನಿದ್ದೆ ಮಾತ್ರೆ ಕೊಟ್ಟಾಗ ಆ ಮಾತ್ರೆ ಮೆದುಳಿನಲ್ಲಿ ಕೈನೇಸ್ ಎಂಝೈಮಿನ ಕಾರ್ಯವನ್ನು ಸ್ಥಗಿತಗೊಳಿಸಿ ಹೆಚ್ಚು ನಿದ್ದೆ ಬರುವಂತೆ ಮಾಡುತ್ತದೆ, ಇದು ನಿರಂತರವಾದರೆ ಸಂಪೂರ್ಣ ನಿದ್ದೆಗೆ ಜಾರಬೇಕಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಕಡಿಮೆ ಮಟ್ಟದಲ್ಲಿ ಈ ಮಾತ್ರೆ ತೆಗೆದುಕೊಂಡರೂ ಕ್ರಮೇಣ ಮೆದುಳಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ. ನಿದ್ರಾಹೀನತೆ ಅನೇಕ ಸಮಸ್ಯೆಗಳಿಗೆ ಆಹ್ವಾನ ನೀಡಬಹುದು. ಆದರೆ ಇದಕ್ಕೆ ಮಾತ್ರೆಗಳ ಮೊರೆಹೋಗುವ ಬದಲು ಯೋಗಾಸನ, ಧ್ಯಾನ, ಒತ್ತಡ ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ಅನುಸರಿಸಿದರೆ ಒಳ್ಳೆಯದು ಎಂದು ಸಂಶೋಧಕರು ತಿಳಿಸಿದ್ದಾರೆ.

ನಿದ್ರಾಹೀನತೆ ತಡೆಯಲು ನುಂಗುವ ಮಾತ್ರೆಗಳು ತಕ್ಷಣದ ಪರಿಹಾರದಂತೆ ಕಂಡರೂ ಅನೇಕ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ. ಇದರ ದೀರ್ಘಕಾಲಿಕ ಬಳಕೆ ಜೀವಕ್ಕೂ ಮಾರಕವಾಗುತ್ತದೆ ಎಂದು ತಿಳಿಸಿದ್ದಾರೆ.

English summary

Sleeping Pills ill Effects | Sleeping Pills Fatal for Health | ನಿದ್ದೆ ಮಾತ್ರೆ ನಿರಂತರ ಸೇವನೆ ಆರೋಗ್ಯಕ್ಕೆ ಮಾರಕ

Those who take sleeping tablets regularly are 36 percent more likely to die at any given time compare to others, a new study.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more