For Quick Alerts
ALLOW NOTIFICATIONS  
For Daily Alerts

ಕಾಫಿಯಿಂದ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಬಹುದು!

|
Coffe can Prevent Womb Cancer
ಮಹಿಳೆಯರೆ, ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯುತ್ತೀರಾ ? ಒಂದು ಕಪ್ ಇಲ್ಲದಿದ್ದರೆ ಎರಡು ಕಪ್ ? ಇನ್ನು ಮೇಲೆ ದಿನಕ್ಕೆ ನಾಲ್ಕು ಕಪ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದೇನಪ್ಪಾ ಯಾವುದಾದರೂ ಕಾಫಿ ಪುಡಿಗೆ ಜಾಹಿರಾತು ಆಗಿರಬಹುದಾ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾದೀತು.

ಏಕೆಂದರೆ ಇದು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದ್ದು ಮಹಿಳೆಯರು ದಿನಕ್ಕೆ 4 ಕಪ್ ಕಾಫಿ ಕುಡಿಯುವುದರಿಂದ ಗರ್ಭ ಕೋಶದ ಕ್ಯಾನ್ಸರ್ ಬರುವುದನ್ನು ತಡೆಯಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಹಾರ್ವರ್ಡ್ ನಲ್ಲಿರು 'ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ 'ನ ಸಂಶೋಧಕರು ಪ್ರತಿ ದಿನ ನಾಲ್ಕು ಕಪ್ ಕಾಫಿ ಕುಡಿಯುವುದರಿಂದ ಗರ್ಭ ಕೋಶದಲ್ಲಿ ಕ್ಯಾನ್ಸರ್ ಕಾಯಿಲೆ ಬರುವುದನ್ನು ತಡೆಯುತ್ತದೆ ಎಂದು ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ಪ್ರತಿ ನಿತ್ಯ ನಾಲ್ಕು ಕಪ್ ಕಾಫಿ ಕುಡಿಯುವ ಅಭ್ಯಾಸವಿರುವ ಮಹಿಳೆಯರನ್ನು , ಕಾಫಿ ಕುಡಿಯದ ಮಹಿಳೆಯರಿಗೆ ಹೋಲಿಸಿದಾಗ ಕಾಫಿ ಕುಡಿಯುವ ಮಹಿಳೆಯರಲ್ಲಿ ಗರ್ಭ ಕೋಶದ ಕ್ಯಾನ್ಸರ್ ಬರುವ ಸಾಧ್ಯತೆ 25% ಕ್ಕಿಂತ ಕಡಿಮೆ ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರತಿ ನಿತ್ಯ ವ್ಯಾಯಾಮ ಮಾಡುವುದು, ದೇಹದ ತೂಕವನ್ನು ಸಮತೋಲನದಲ್ಲಿ ಇಡುವುದು ಅದರ ಜೊತೆ ಕಾಫಿಯನ್ನು ಕುಡಿಯುವ ಅಭ್ಯಾಸ ಇವುಗಳು ಕ್ಯಾನ್ಸರ್ ತಡೆಯುವಲ್ಲಿ ತುಂಬಾ ಪರಿಣಾಮಕಾರಿಯಾಗುವುದು.

ಕಾಫಿಯು ಮಧುಮೇಹದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪತ್ತೆ ಹಚ್ಚಿದ್ದು, ಇದೀಗ ಕಾಫಿ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹ ಪರಿಣಾಮಕಾರಿಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಕಾಫಿಯಲ್ಲಿ antioxidants ಅಂಶ ಇತರ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚಾಗಿದ್ದು, ಇದು ದೇಹದಲ್ಲಿ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಈ ಸಂಶೋಧನೆಯಿಂದ ತಿಳಿದು ಬಂದಿದೆ.

English summary

Coffe can Prevent Womb Cancer | Effect Of coffee On Health | ಕಾಫಿ ಕಡಿಯುವುದರಿಂದ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಬಹುದಾ | ಆರೋಗ್ಯದ ಮೇಲೆ ಕಾಫಿಯ ಪ್ರಭಾವ

If women drinks four cup coffee per day it may prevent womb cancer, a new study was declared. Women who drinks 4 cup coffee per day there is less chance to get womb cancer when compare to the women those who are don,t drink coffee. Take a look.
Story first published: Thursday, November 24, 2011, 12:27 [IST]
X
Desktop Bottom Promotion