For Quick Alerts
ALLOW NOTIFICATIONS  
For Daily Alerts

ಜಾಗ್ರತೆವಹಿಸಿದರೆ ಸ್ತನ ಕ್ಯಾನ್ಸರ್ ತಡೆಯಬಹುದು

|
Breast cancer
ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಬರುವ ಮಾರಾಣಾಂತಿಕ ರೋಗ. ಈ ಮಾರಿಯನ್ನು ತಡೆಯಬೇಕು ಎಂದು ವೈದಕೀಯ ಕ್ಷೇತ್ರಗಳು ಹರಸಾಹಸ ಮಾಡುತ್ತಿವೆ, ಆಲ್ಲದೆ ಅಕ್ಟೋಬರ್ ತಿಂಗಳನ್ನು ಕ್ಸಾನ್ಸರ್ ಬಗ್ಗೆ ಜಾಗೃತಿ ಮಾಸವೆಂದು ಗುರುತಿಸಲಾಗಿದೆ.

ಈ ಕ್ಯಾನ್ಸರ್ ತಡೆಗೆ ಉಪಾಯವನ್ನು ವಯಸ್ಸಿನ ಮಿತಿಯಿಲ್ಲದೆ ಎಲ್ಲಾ ಹೆಣ್ಣು ಮಕ್ಕಳು ತಿಳಿದು ಕೊಳ್ಳ ಬೇಕಾಗಿದೆ. ಅದಕ್ಕಾಗಿ ಮಾಡಬೇಕಾದ ಕಾರ್ಯವೆಂದರೆ:

1. ಆಹಾರ ಕ್ರಮ:
ದಿನನಿತ್ಯದ ಆಹಾರದಲ್ಲಿ ಪ್ರೋಟನ್ ಅಂಶ, ಪೋಷಕಾಂಶಗಳು ಅಧಿಕವಿರುವ ಆಹಾರವನ್ನು ಸೇವಿಸಬೇಕು, ಅಲ್ಲದೆ ಸೋಯಾ, ಹುಚ್ಚೆಳ್ಳು, ಎಳ್ಳು ಸೇವಿಸ ಬೇಕು.
ಸಿಗರೇಟ್, ಮದ್ಯಪಾನಗಳ ಸೇವನೆ ಒಳ್ಳೆಯದಲ್ಲ.

2.ಫಿಟ್ ನೆಸ್ : ಒಬೆಸಿಟಿಯಿಂದ ಕೂಡ ಸ್ತನ ಕ್ಯಾನ್ಸರ್ ಬರಬಹುದು, ಆದ್ದರಿಂದ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಒಳ್ಳೆಯದು, ಇದಕ್ಕಾಗಿ ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸಬೇಕು.

3. ಕೃತಕ ಜೋಡನೆ:
ಸ್ತನವನ್ನು ಕೃತಕವಾಗಿ ಜೋಡಿಸುವುದರಿಂದ ಸಹ ಸ್ತನ ಕ್ಯಾನ್ಸರ್ ಉಂಟಾಗಬಹುದು. ಗರ್ಭ ನಿರೋಧಕ ಮಾತ್ರೆಗಳನ್ನು ಅಧಿಕವಾಗಿ ತೆಗೆದುಕೊಳ್ಳುವುದರಿಂದ ಸಹ ಕ್ಯಾನ್ಸರ್ ಬರಬಹುದು.

4. ಸ್ತನದ ಪರಿಶೀಲನೆ:
ಸ್ತನವನ್ನು ಸ್ವತಃ ಪರಿಶೀಲಿಸುತ್ತಾ ಇರಬೇಕು. ಸ್ತನದಲ್ಲಿ ಯಾವುದಾದರೂ ಬಣ್ಣ ವ್ಯತ್ಯಾಸ, ನೋವು, ಗಂಟು ಕಂಡು ಬಂದರೆ ವೈದ್ಯರನ್ನು ಕಾಣುವುದು ಒಳ್ಳೆಯದು.

English summary

Precaution For Breast Cancer | Tips For Healthy Body For Woman | ಸ್ತನ ಕ್ಯಾನ್ಸರ್ ತಡೆಗೆಟ್ಟುವ ಉಪಾಯ | ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಸಲಹೆಗಳು

The precautions can definitely help in cutting down the chances of developing the irregular division of cells. The change in the living style can make a big difference to health. Take a look.
Story first published: Saturday, October 22, 2011, 16:07 [IST]
X
Desktop Bottom Promotion