For Quick Alerts
ALLOW NOTIFICATIONS  
For Daily Alerts

ಭಯದ ಬಾಳು ಆಗುವುದು ಗೋಳು

|
Phobia
ಭಯ ಎಂಬುದು ಮನುಷ್ಯನಲ್ಲಿರುವ ಸಹಜ ಗುಣ. ಆದರೆ ಕೆಲವರಲ್ಲಿ ಭಯ ಎಂಬುದು ವಿಪರೀತವಾಗಿ ಇಡೀ ಜೀವನವನ್ನೆ ಕಳೆದು ಬಿಡುತ್ತಾರೆ. ಈ ರೀತಿ ಭಯ ಪಡುವುದು ಸಹ ಒಂದು ರೀತಿಯ ಕಾಯಿಲೆಯಾಗಿದೆ.

ಭಯಕ್ಕೆ ಕಾರಣಗಳು :

ಭಯಕ್ಕೆ ನಿಖರವಾದ ಕಾರಣಗಳನ್ನು ಹೇಳಲು ಆಗದಿದ್ದರು ಕೆಲವು ಘಟನೆಗಳಿಂದ , ಅಥವಾ ಕೆಲವು ಕಾರಣಗಳಿಂದ ಈ ರೀತಿಯ ಭಯ ಉಂಟಾಗಿ ಅದು ಮನುಷ್ಯನ ನೆಮ್ಮದಿಯನ್ನೆ ಕೆಡಿಸಿರುತ್ತದೆ. ಸಂಶೋಧನೆಗಳಿಂದ ಭಯಕ್ಕೆ ಈ ಕೆಳಗಿನವುಗಳು ಕಾರಣ ಎಂದು ಊಹಿಸಲಾಗಿದೆ.

ಕುಟುಂಬ: ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಮನೆ ಪ್ರಮುಖ ಪಾತ್ರವಹಿಸುತ್ತದೆ. ಒಂದು ವೇಳೆ ಮನೆಯಲ್ಲಿ ಯಾರಿಗಾದರೂ ಈ ರೀತಿಯ ಭಯದ ಕಾಯಿಲೆ ಇದ್ದರೆ ಅದು ಮಕ್ಕಳಿಗೂ ಕೆಲವೊಮ್ಮೆ ಬರುವುದು.ಉದಾಹರಣೆಗೆ ನಿಮ್ಮ ಮನೆಯವರು ವಿದೇಶಿಯರ ಬಗ್ಗೆ ಸಂಶಯದ ಜೊತೆ ಭಯ ಹೊಂದಿದ್ದರೆ ಮಕ್ಕಳು ಸಹ ಈರೀತಿ ವರ್ತಿಸುತ್ತಾರೆ.

ಸಂಸ್ಕೃತಿ: ಕೆಲವೊಮ್ಮೆ ಕಂದಾಚಾರದ ನಂಬಿಕೆಗಳು, ಆಚಾರ ವಿಚಾರಗಳು ಸಹ ಭಯವನ್ನು ಮನೆ ಮಾಡುವಂತೆ ಮಾಡುವುದು.

ಕಹಿ ಅನುಭವ: ಅಹಿತಕಾರಿ ಘಟನೆಗಳಿಂದ ಮನಸ್ಸಿಗೆ ಘಾಸಿಯಾಗಿದ್ದರೆ ಸಹ ಅದು ಭಯವಾಗಿ ಮನಸ್ಸಿನ ನೆಮ್ಮದಿ ಕೆಡಿಸುತ್ತದೆ. ಜಗಳ, ಕೊಲೆ, ಸಾವು, ಮೊದಲಾದವುಗಳಿಂದ ಸಹ ಈ ರೀತಿಯ ಕಾಯಿಲೆ ಉಂಟಾಗುತ್ತದೆ.

ಮೊದಲ ಭಾರಿಗೆ ವಿಮಾನದಲ್ಲಿ ಹೋಗುವಾಗ ಭಯವಾಗುವುದು ಸಹಜ. ಆದರೆ ಭಯದ ಕಾಯಿಲೆಯ ವ್ಯಕ್ತಿ ವಿಮಾನದಲ್ಲಿ ಬರಲು ಸುತಾರಂ ಒಪ್ಪುವುದಿಲ್ಲ. ಈ ಫೋಬಿಯಾದ ಲಕ್ಷಣಗಳು ಹೀಗಿರುತ್ತವೆ

1. ಉಸಿರಾಟದಲ್ಲಿ ವ್ಯತ್ಯಾಸ ಉಂಟಾಗುತ್ತದೆ.
2. ಬೆವರು
3. ನಡುಕ
4. ತಲೆಸುತ್ತಿ ಬೀಳುವುದು.

ಫೋಬಿಯಾದ ವಿಧಗಳು:

1. ಪ್ರಾಣಿ ಫೋಬಿಯಾ: ಹಾವು, ಬೆಕ್ಕು, ನಾಯಿ, ಜಿರಳೆ ಇತ್ಯಾದಿ.

2. ಮಾನಸಿಕ ಫೋಬಿಯಾ:
ನೆಕ್ರೋಫೋಬಿಯಾ(ಸಾವಿನ ಭಯ)
ಅಗೋರಾ ಫೋಬಿಯಾ ( ನಿರ್ಜನತೆಯ ಭಯ)
ಜೆನೋಫೋಬಿಯಾ ( ಲೈಂಗಿಕ ಭಯ)
ಪೀಡಿಯೋ ಫೋಬಿಯಾ( ಗೊಂಬೆಗಳ ಭಯ)
ಸೋಮ್ನೋಫೋಬಿಯಾ (ನಿದ್ರೆಯ ಭಯ)

3. ವಸ್ತುಗಳ ಪೋಬಿಯ: ಹೈಡ್ರೋಫೋಬಿಯಾ ( ನೀರಿನ ಭಯು)
ಪೋಟೋ ಫೋಬಿಯಾ ( ತೀವ್ರವಾದ ಬೆಳಕಿನ ಭಯ)
ಪೋನೋ ಪೋಬಿಯೋ ( ಶಬ್ದದ ಭಯ).

ಇಂತಹ ಕಾಯಿಲೆಗಳಿಗೆ ಕೌನ್ಸಲಿಂಗ್ ಮಾಡಿಸುವುದರಿಂದ, ಮಾನಸಿಕ ವೈದ್ಯರ ಜೊತೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಬಹುದಾಗಿದೆ.

English summary

Phobias What Why And How? | Types Of Phobia | ಪೋಬಿಯ ಉಂಟಾಗುವುದು ಹೇಗೆ? | ಪೋಬಿಯದ ವಿಧಗಳು

Phobias are all about an extreme and sometimes, irrational fear of something.It is not wrong to classify phobias as a mild type of mental disorder but we have to be careful while doing that. Almost all human being have some phobia or the other.
Story first published: Tuesday, October 4, 2011, 11:27 [IST]
X
Desktop Bottom Promotion