For Quick Alerts
ALLOW NOTIFICATIONS  
For Daily Alerts

ಗೊರಕೆ ಹೊಡೆಯೋದನ್ನ ನಿಲ್ಲಿಸೋದು ಹೇಗೆ?

|
Remedies to Stop Snoring
ನವಿರಾದ ನಿದ್ದೆ ಮೈಗತ್ತಿರುವಾಗ ಪಕ್ಕದಲ್ಲಿದ್ದವರು ಗೊರ್ರನೆ ಗೊರಕೆ ಹೊಡೆದರೆ ಎಂತಹವರಿಗೂ ಕೋಪ ಬರುತ್ತೆ. ಗೊರಕೆ ಹೊಡೆಯುವ ಗಂಡಂದಿರ ಸಹವಾಸ ಬೇಡ ಎನ್ನುವ ಅದೆಷ್ಟೋ ಮಹಿಳೆಯರೂ ಇದ್ದಾರೆ. ಆದ್ದರಿಂದ ಗೊರಕೆಯನ್ನು ಗಂಭೀರ ಸಮಸ್ಯೆ ಎಂದು ಪರಿಗಣಿ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕು.

ಗೊರಕೆ ತಡೆಗೆ ಕೆಲವು ವಿಧಾನಗಳು ಇಲ್ಲಿವೆ.

1. ಮೂಗಿನಲ್ಲಿ ಸರಾಗವಾಗಿ ಉಸಿರಾಟ ಸಾಧ್ಯವಾಗದಿದ್ದರೆ ಗೊರಕೆ ಉಂಟಾಗುತ್ತದೆ. ಆದ್ದರಿಂದ ಮೂಗಿಗೆಂದು ಇರುವ ಪಟ್ಟಿಯನ್ನು ಹಾಕಿಕೊಂಡರೆ ಉಸಿರಾಟ ಸರಾಗವಾಗಿ ಗೊರಕೆ ನಿಲ್ಲುತ್ತದೆ.

2. ಮಲಗುವ ಮುನ್ನ ಹಬೆ (ಸ್ಟೀಮ್ ) ತೆಗೆದುಕೊಂಡರೆ ಉಸಿರಾಟ ಸರಾಗವಾಗಿ ಆರಾಮವಾಗಿ ನಿದ್ದೆ ಮಾಡಬಹುದು.

3. ಮದ್ಯ, ನಿದ್ದೆ ಮಾತ್ರೆ ಇವುಗಳನ್ನು ಮಲಗುವ ಮುನ್ನ ಸೇವಿಸದಿದ್ದರೆ ಗೊರಕೆ ಕ್ರಮೇಣ ಕಡಿಮೆಯಾಗುತ್ತದೆ.

4. ತುಂಬಾ ಗೊರಕೆ ಹೊಡೆಯುತ್ತಿದ್ದರೆ ಅದಕ್ಕೆ ಅತಿಯಾದ ಧೂಮಪಾನವೂ ಕಾರಣವಾಗಿರಬಹುದು. ಇದರಿಂದ ಎದೆ ಉರಿ ಮತ್ತು ಗಂಟಲು ಊತವೂ ಉಂಟಾಗಿ ಉಸಿರಾಟದಲ್ಲಿ ತೊಂದರೆಯಾಗಿ ಗೊರಕೆ ಹೊಡೆಯುವಂತಾಗುತ್ತದೆ. ಆದ್ದರಿಂದ ಧೂಮಪಾನವನ್ನು ತ್ಯಜಿಸುವುದು ಎಲ್ಲ ರೀತಿಯಿಂದಲೂ ಉತ್ತಮ.

5. ಮೂಗಿನಲ್ಲಿ ಕೂದಲು ಅತಿಯಾಗಿದ್ದರೂ ಕೂಡ ಉಸಿರಾಟಕ್ಕೆ ಸಮಸ್ಯೆಯಾಗಿ ಗೊರಕೆ ಮೂಡುತ್ತದೆ. ಆದ್ದರಿಂದ ಮೂಗನ್ನು ಶುದ್ದವಾಗಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯ.

English summary

Snoring Problem | Remedies to Stop Snoring | ಗೊರಕೆ ಸಮಸ್ಯೆ | ಗೊರಕೆ ನಿಲ್ಲಿಸುವ ಸಲಹೆ

Snoring is not an incurable disease or a disorder, it is a natural result of breathing. We have a few snoring remedies that help to get good sound free sleep. Take a look.
Story first published: Monday, October 3, 2011, 14:11 [IST]
X
Desktop Bottom Promotion