For Quick Alerts
ALLOW NOTIFICATIONS  
For Daily Alerts

ದಾಳಿಂಬೆ ಹಲ್ಲಿಗಾಗಿ ಸೋಪ್ ನಿಂದ ಹಲ್ಲುಜ್ಜಿ ನೋಡಿ

|
Tooth soap
ದಿನದಿಂದ ದಿನಕ್ಕೆ ನಿಮ್ಮ ಹಲ್ಲುಗಳ ತೊಂದರೆ ಹೆಚ್ಚಾಗ್ತಿದೆಯಾ? ಹಾಗಿದ್ದರೆ ಇದಕ್ಕೆ ಕಾರಣ ನೀವು ಹಲ್ಲುಜ್ಜುವ ಕ್ರಮವೂ ಅಲ್ಲ, ಬ್ರಶ್ ಕೂಡ ಅಲ್ಲ. ಅದಕ್ಕೆ ಕಾರಣ ಟೂಥ್ ಪೇಸ್ಟ್. ಟೂಥ್ ಪೇಸ್ಟ್ ನಲ್ಲಿನ ಫ್ಲೋರೈಡ್, ಪೆಟ್ರೋಲಿಯಂ, ಸೋಡಿಯಂ ಲಾರಿಲ್ ಸಲ್ಫೇಟ್ ಅಂಶ ಒಸಡನ್ನು ಹಾಳು ಮಾಡುತ್ತೆ. ಆದ್ದರಿಂದ ಹಲ್ಲುಗಳ ರಕ್ಷಣೆಗೆಂದು ಇದೀಗ ಹೊಸ ಟೂಥ್ ಸೋಪ್ ಕಾಲಿಟ್ಟಿದೆ.

ನೈಸರ್ಗಿಕ ತೈಲಗಳಿಂದ ತಯಾರಿಸಲಾಗಿರುವ ಟೂಥ್ ಸೋಪ್ ಗಳಲ್ಲಿ ಯಾವುದೇ ಫ್ಲೋರೈಡ್, ಸಲ್ಫೇಟ್ ಇಲ್ಲ. ಅನೇಕ ಫ್ಲೇವರ್ ಗಳಲ್ಲಿ ಸಿಗುವ ಈ ಟೂಥ್ ಸೋಪ್ ಹೆಚ್ಚು ನೊರೆಯನ್ನೂ ಉಂಟುಮಾಡುವುದಿಲ್ಲ.

ಟೂಥ್ ಸೋಪಿನ ಉಪಯೋಗಗಳು:
1. ಈ ನೈಸರ್ಗಿಕ ಸೋಪ್ ನಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಹೆಚ್ಚು ನೊರೆಯಿಲ್ಲ ಮತ್ತು ಬಳಸಲು ತುಂಬಾ ಸುಲಭ.

2. ಹಲ್ಲುಗಳನ್ನು ಶುದ್ಧಗೊಳಿಸಿ ಒಸಡನ್ನು ಗಟ್ಟಿಗೊಳಿಸುವುದಲ್ಲದೆ ಬಾಯಿಯ ದುರ್ವಾಸನೆಯನ್ನು ತೊಲಗಿಸುತ್ತದೆ.

3. ಬಾಯಿ ಮತ್ತು ಹಲ್ಲುಗಳ ಸಂದಿಗಳಲ್ಲಿ ಅಡಗಿರುವ ಅಂಟು, ಎಣ್ಣೆ ಮತ್ತು ಆಹಾರದ ಚೂರು ಪಾರುಗಳನ್ನು ಸುಲಭವಾಗಿ ಹೋಗಲಾಡಿಸುತ್ತದೆ.

4. ವಕ್ರದಂತ ಚಿಕಿತ್ಸೆ ಅಥವಾ ಕೃತಕ ಹಲ್ಲುಗಳನ್ನು ಹೊಂದಿರುವವರೂ ಉಪಯೋಗಿಸಬಹುದು. ಬೆಲೆಯೂ ಕೈಗೆಟುಕುವಂತದ್ದೆ.

English summary

Tooth soaps | Tooth soap benefits | ಟೂಥ್ ಸೋಪ್ | ಟೂಥ್ ಸೋಪ್ ಉಪಯೋಗ

The toothpaste available in stores contain a chemicals like sodium lauryl sulfate, flouride and petroleum dyes that can damage the gum cells to a bad extent. But there is something called a “Tooth Soap” which is highly advised as it is mild, non toxic and healthy. Take a look to know what are tooth soaps and their benefits.
Story first published: Friday, August 12, 2011, 14:49 [IST]
X
Desktop Bottom Promotion