For Quick Alerts
ALLOW NOTIFICATIONS  
For Daily Alerts

ಅಜೀರ್ಣದಿಂದ ಪಾರಾಗಲು ಮೂರು ಟಿಪ್ಸ್

By * ಪ್ರವೀಣ್ ಚಂದ್ರ
|
Three Tips to beat Indigestion
ಇದು ಎಲ್ಲರಿಗೂ ಅನುಭವವಾಗಿರಬಹುದು. ಊಟ ಮಾಡುತ್ತಿರುವಾಗ ಸಾಕು ಹೊಟ್ಟೆ ತುಂಬಿದೆ ಎನಿಸುವುದು. ಊಟ ಮಾಡಿದ ನಂತರ ಹೊಟ್ಟೆ ಕಲ್ಲಿನಂತೆ ಆಗಿರುವುದು. ಹೊಟ್ಟೆಯ ಒಂದು ಭಾಗದಲ್ಲಿ ಏನೋ ಉರಿಉರಿ. ಮೆಲ್ಲಗೆ ತಟ್ಟಿ ನೋಡಿದರೆ ತಬಲ ಸದ್ದು. ಇದನ್ನೇ ಅಜೀರ್ಣ ಎನ್ನಲಾಗುತ್ತದೆ. ಇದಕ್ಕೆ ಡೈಸ್ಫೇಸಿಯಾ(dyspepsia) ಎಂದು ಕರೆಯುತ್ತಾರೆ. ಈ ತೊಂದರೆ ಯಾರಲ್ಲೂ ಬೇಕಾದರೂ, ಯಾವ ವಯಸ್ಸಿನವರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಕೆಲವರಿಗೆ ಇದು ನಿತ್ಯ ಕಾಡುವ ಸಂಕಟ. ಹೆಚ್ಚಿನವರಿಗೆ ಯಾವಾಗಾದರೊಮ್ಮೆ ಆಗಮಿಸುವ ಅತಿಥಿ.

ಕೆಲವೊಮ್ಮೆ ಅಜೀರ್ಣದಿಂದ ಆರೋಗ್ಯಕ್ಕೆ ಹೆಚ್ಚಿನ ಹಾನಿಯಾಗಬಲ್ಲದು. ಹಾಗಂತ ಅಜೀರ್ಣ ಆರಂಭವಾಗಲು ಇಂಥದ್ದೇ ಎಂದು ಯಾವುದೇ ಕಾರಣವಿಲ್ಲ. ನಾವು ಸೇವಿಸುವ ಕೆಲವೊಂದು ಆಹಾರಗಳು ಕೂಡ ಇದಕ್ಕೆ ಕಾರಣವಾಗಬಲ್ಲದು. ಲಗುಬಗೆಯಿಂದ ಗಬಗಬನೆ ಆಹಾರ ಸೇವಿಸುವ ಕೆಟ್ಟ ಗುಣ ಅಥವಾ ಆಹಾರವನ್ನು ಯಾವುದೋ ಒತ್ತಡದಲ್ಲಿದ್ದುಕೊಂಡು ಸೇವಿಸುವುದು ಕೂಡ ಅಜೀರ್ಣಕ್ಕೆ ಕಾರಣವಾಗುತ್ತದೆ. ಮುಂದಿನ ಬಾರಿ ನೀವು ಆಹಾರ ಸೇವಿಸುವಾಗ ಅಜೀರ್ಣ ಮುಕ್ತವಾಗಲು ನೆರವಾಗುವ ಮೂರು ಸಲಹೆ ಇಲ್ಲಿವೆ.

* ನೀವು ಏನೂ ತಿನ್ನುತ್ತಿದ್ದೀರಿ ಎಂಬುದನ್ನು ಸರಿಯಾಗಿ ಗಮನಿಸಿ. ಟೊಮೆಟೊ ಮತ್ತು ಕೆಲವು ಹಣ್ಣು ಹಂಪಲುಗಳು ಹೆಚ್ಚು ಆಸೀಡ್ ಯುಕ್ತವಾಗಿವೆ. ಇಂತಹ ಆಹಾರಗಳು ಹೊಟ್ಟೆಗೆ ಒಳ್ಳೆಯದಲ್ಲ. ನಿಮಗೆ ಗೊತ್ತೆ? ನಮ್ಮ ಹೊಟ್ಟೆ ತುಂಬಾ ಸೂಕ್ಷ್ಮ. ಇದಕ್ಕಾಗಿ ತುಂಬಾ ಜತನದಿಂದ ಆಹಾರ ಸೇವಿಸಬೇಕಾಗುತ್ತದೆ. ಹೀಗಾಗಿ ಆಸೀಡ್ ಹೆಚ್ಚಿರುವ ಆಹಾರದ ಬಳಕೆಯಲ್ಲಿ ಎಚ್ಚರವಿರಲಿ. ಅತ್ಯಧಿಕ ಕೊಬ್ಬಿನಂಶ ಇರುವ ಮತ್ತು ಖಾರ ಆಹಾರಗಳು ಕೂಡ ಅಜೀರ್ಣ ಉಂಟು ಮಾಡುತ್ತವೆ.

* ನೀವು ಏನು ಕುಡಿಯುತ್ತಿದ್ದೀರಿ ಎಂಬುದನ್ನು ಗಮನಿಸಿ. ಆಲ್ಕೊಹಾಲ್ ಸೇವನೆ ಹೊಟ್ಟೆಗೆ ಒಳ್ಳೆಯದಲ್ಲ. ಮುಂದಿನ ಬಾರಿ ನಿಮ್ಮ ಸ್ನೇಹಿತರೊಂದಿಗೆ ಒಂದು ಪೆಗ್ ಹೆಚ್ಚು ಹಾಕುವಾಗ ಮತ್ತು ಕರಿದ ತಿಂಡಿಗಳನ್ನು ನೆಂಚಿಕೊಂಡು ತಿನ್ನುವಾಗ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು. ಬೆಂಗಳೂರಿನಲ್ಲಿ ಹೆಚ್ಚಿನವರು ಬೆಡ್ ಕಾಫಿಯೊಂದಿಗೆ ಮುಂಜಾನೆಯನ್ನು ಆರಂಭಿಸುತ್ತಾರೆ. ಕಾಫಿಯಂತಹ ಪಾನೀಯಗಳು ಕೂಡ ಆಸೀಡ್ ಕ್ಷಾರಕಗಳನ್ನು ಹೊಂದಿರುವುದರಿಂದ ಇಂಥಹ ಅಭ್ಯಾಸಗಳನ್ನು ಬಿಟ್ಟುಬಿಡುವುದು ಒಳ್ಳೆಯದು. ಕೆಲವೊಂದು ಕಂಪನಿಗಳ ಪಾನೀಯಗಳೂ ಹೊಟ್ಟೆಗೆ ಒಳ್ಳೆಯದಲ್ಲ. ಕೆಲವೊಂದು ಪಾನೀಯಗಳು ಆಸೀಡ್ ಮುಕ್ತವಾಗಿ ಬರುತ್ತವೆ. ಅಂತಹವುಗಳನ್ನು ಸೇವಿಸಲು ಅಡ್ಡಿಯಿಲ್ಲ.

* ನೀವು ಹೇಗೆ ತಿನ್ನುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಹೊಟ್ಟೆಗೆ ಹಿತವಾಗಿರುವ ಆಹಾರಗಳು ಕೂಡ ಸರಿಯಾಗಿ ತಿನ್ನದಿದ್ದರೆ ಅಜೀರ್ಣ ಉಂಟು ಮಾಡುತ್ತವೆ. ಗಬಗಬನೆ ತಿನ್ನುವ ಜಾತಿಗೆ ನೀವು ಸೇರಿದ್ದರೆ ಈಗಲೇ ಅದನ್ನು ನಿಲ್ಲಿಸಿ. ಸಾವಧಾನವಾಗಿ ಆಹಾರ ಸೇವಿಸಿ. ಊಟ ಆದ ಮೇಲೆ ಒಂದು ಲೋಟ ನೀರು ಕುಡಿದರೆ ಒಳ್ಳೆಯದು. ಊಟ ಮಾಡಿದ ತಕ್ಷಣ ನಿದ್ದೆ ಮಾಡುವುದನ್ನು ಅವಾಯ್ಡ್ ಮಾಡಿ. [ಅರೋಗ್ಯ ಸಲಹೆ]

English summary

Indigestion | Health Tips | Eating Habits | ಅಜೀರ್ಣ | ಆರೋಗ್ಯ ಸಲಹೆ | ಆಹಾರ ಸೇವನೆ ಕ್ರಮ |

Everyone has experienced it – a feeling of premature fullness during a meal, an uncomfortable fullness after a meal, or a burning or pain in the upper abdomen. Indigestion, also called dyspepsia, can afflict anyone, no matter their age.
X
Desktop Bottom Promotion