For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19 ಲಸಿಕೆ: 2 ಡೋಸ್‌ಗಳಲ್ಲಿ ಬೇರೆ-ಬೇರೆ ಲಸಿಕೆ ಪಡೆಯಬಹುದೇ?

|

ಭಾರತದಲ್ಲಿ ಈಗ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಎಂಬ ಎರಡು ಬಗೆಯ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಲಸಿಕೆಗಳು ಕೊರೊನಾ ವಿರುದ್ಧ ಹೋರಾಡಿ ನಮ್ಮನ್ನು ರಕ್ಷಿಸಲು ಸಮರ್ಥವಾಗಿದೆ ಎಂಬುವುದನ್ನು ಈಗಾಗಲೇ ಸಂಶೋಧನೆಯಿಂದ ದೃಢಪಟ್ಟಿದೆ.

ಕೊರೊನಾ 2ನೇ ಅಲೆಯಲ್ಲಿ ಸೋಂಕು ತೀವ್ರವಾಗಿ ಹರಡುತ್ತಿರುವಾಗ ಕೊರೊನಾ ಲಸಿಕೆಯ ಬೇಡಿಕೆ ಹೆಚ್ಚಾಗಿದೆ. ಮೊದಲೆಲ್ಲಾ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದರು, ಆದರೆ ಕೊರೊನಾ 2ನೇ ಅಲೆಯಲ್ಲಿ ಕೊರೊನಾ ಲಸಿಕೆ ಪಡೆದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿತ್ತು, ಆದರೆ ಲಸಿಕೆ ಪಡೆದವರು ರೋಗದಿಂದ ಬೇಗನೆ ಗುಣಮುಖರಾಗುತ್ತಿದ್ದಾರೆ, ಇದರಿಂದಾಗಿ ಲಸಿಕೆ ಮೇಲೆ ನಂಬಿಕೆ ಹೆಚ್ಚಾಗಿದೆ.

ಕೊರೊನಾ ಲಸಿಕೆಗಳಲ್ಲಿ ಎರಡಲ್ಲ ಯಾವುದನ್ನು ಬೇಕದರೂ ಪಡೆಯಬಹುದು, ಆದರೆ ಯಾವ ಲಸಿಕೆಯನ್ನು ಮೊದಲ ಡೋಸ್‌ನಲ್ಲಿ ಪಡೆದಿರುತ್ತೀರೋ, ಅದನ್ನೇ ಸೆಕೆಂಡ್‌ ಡೋಸ್‌ನಲ್ಲಿ ಪಡೆಯಬೇಕು. ಮಿಕ್ಸ್ ಮಾಡಬಾರದು, ಒಂದು ವೇಳೆ ಲಸಿಕೆ ಮಿಕ್ಸ್‌ ಆದರೆ ಅಪಯ ಉಂಟಾಗುವುದೇ? ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

ವ್ಯಾಕ್ಸಿನ್ ಮಿಕ್ಸ್‌ ಆದಾಗ

ವ್ಯಾಕ್ಸಿನ್ ಮಿಕ್ಸ್‌ ಆದಾಗ

ಉತ್ತರ ಪ್ರದೇಶದಲ್ಲಿ ಇಂಥ ಘಟನೆ ನಡೆದಿತ್ತು. ಒಂದು ಗುಂಪು ಜನರಿಗೆ ಮೊದಲ ಡೋಸ್‌ ಕೊವಾಕ್ಸಿನ್‌ ನೀಡಲಾಗಿತ್ತು, ಎರಡನೇ ಡೋಸ್‌ ಕೋವಿಶೀಲ್ಡ್‌ ಮಾಡಿ ತಪ್ಪು ಮಾಡಿತ್ತು. ಇದರಿಂದ ಲಸಿಕೆ ಪಡೆದವರು ಆತಂಕಕ್ಕೆ ಒಳಗಾಗಿದ್ದರು. ಆದರೆ ವಿದೇಶದಲ್ಲಿ ಲಸಿಕೆಯನ್ನು ಮಿಕ್ಸ್ ಮಾಡುವ ಬಗ್ಗೆ ಪ್ರಯತ್ನ ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳಿ ಜನರಲ್ಲಿದ್ದ ಭಯ ಹೋಗಲಾಡಿಸಲು ಪ್ರಯತ್ನಿಸಲಾಯಿತು. ವಿದೇಶದಲ್ಲಿ ಎರಡು ಡೋಸ್‌ ಬೇರೆ-ಬೇರೆ ಲಸಿಕೆ ಪಡೆಯುವುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ, ಅದು ಇನ್ನು ಟ್ರಯಲ್ ಹಂತದಲ್ಲಿ ಇರುವುದರಿಂದ ಈಗ ಎರಡು ಡೋಸ್‌ ಬೇರೆ-ಬೇರೆ ಅಂದ್ರೆ ಒಮ್ಮೆ ಕೊವಾಕ್ಸಿನ್ ಪಡೆದು ನಂತರ ಕೋವಿಶೀಲ್ಡ್ ಪಡೆಯಬೇಡಿ.

ಲಸಿಕೆ ಮಿಕ್ಸ್ ಮಾಡಿದರೆ ಅಪಾಯ ಉಂಟಾಗುವುದೇ?

ಲಸಿಕೆ ಮಿಕ್ಸ್ ಮಾಡಿದರೆ ಅಪಾಯ ಉಂಟಾಗುವುದೇ?

ಎರಡು ಡೋಸ್‌ನಲ್ಲಿ ಬೇರೆ-ಬೇರೆ ಲಸಿಕೆ ಪಡೆದರೆ ಅಪಾಯ ಉಂಟಾಗುತ್ತದೆ, ಇಲ್ಲಾ ಅಪಾಯ ಉಂಟಾಗುವುದಿಲ್ಲ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. NEGVAC (National Expert Group on Vaccine Administration for Covid-19) ಮುಖ್ಯಸ್ಥರಾಗಿರುವ ಡಾ. ವಿಕೆ ಪೌಲ್ ' ಎರಡು ಲಸಿಕೆ ಮಿಕ್ಸ್ ಮಾಡಿ ಕೊಡುವುದರಿಂದ ತೊಂದರೇನು ಇಲ್ಲ, ಆದರೆ ಇದರ ಕುರಿತು ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ. ಒಂದು ಬಗೆಯ ಲಸಿಕೆಯನ್ನು ಪಡೆದು ಮತ್ತೊಂದು ಡೋಸ್‌ಗೆ ಬೇರೆ ಬಗೆಯ ಲಸಿಕೆ ಪಡೆದರೂ ಆ್ಯಂಟಿ ಬಾಡೀಸ್ ಹೆಚ್ಚುವುದು' ಎಂದು ಹೇಳಿದ್ದಾರೆ.

ಎರಡು ಲಸಿಕೆ ಮಿಕ್ಸ್ ಮಾಡಿ ಕೊಡಬಹುದೇ ಎಂಬುವುದಕ್ಕೆ ಸಮಯವೇ ಉತ್ತರ ನೀಡುವುದು, ಇದರ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ ಎಂದು ಕೂಡ ಹೇಳಿದ್ದಾರೆ.

ಅಧ್ಯಯನಗಳು ಏನು ಹೇಳಿವೆ?

ಅಧ್ಯಯನಗಳು ಏನು ಹೇಳಿವೆ?

ಎಲ್ಲಾ ದೇಶಗಳಲ್ಲಿ ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ, ಈ ಲಸಿಕೆಗಳನ್ನು ಮಿಶ್ರ ಮಾಡಿ ನೀಡುವುದರಿಂದ ರೋಗ ನಿರೋಧಕ ವ್ಯವಸ್ಥೆಯಲ್ಲಿ ಏನಾದರೂ ವ್ಯತ್ಯಾಸವಾಗುವುದೇ? ಏನಾದರೂ ಅಡ್ಡಪರಿಣಾಮವಿದೆಯೇ ಎಂದು ಸಂಶೋಧನೆ ನಡೆಯುತ್ತಿದೆ.

ಯುಕೆಯಲ್ಲಿ ಆಕ್ಸ್‌ಫರ್ಡ್‌ನ ಅಸ್ಟ್ರಾಜೆನೆಕಾ ಲಸಿಕೆಯನ್ನು ಫೈಜರ್ ಜೊತೆ ಮಿಕ್ಸ್ ಮಾಡಿ ನೀಡಲಾಗಿತ್ತು. ಇದನ್ನು ನೀಡಿದವರಲ್ಲಿ ಚಿಕ್ಕ-ಪುಟ್ಟ ಅಡ್ಡ ಪರಿಣಾಮಗಳು ಕಂಡು ಬಂದರೂ ಅಧಿಕ ಅಡ್ಡ ಪರಿಣಾಮವೇನು ಉಂಟಾಗಿಲ್ಲ.

ಆಕ್ಸ್‌ಫರ್ಡ್ನ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ನೀಡಲಗುತ್ತಿದೆ.

ಯಾವಾದರೂ ದೇಶ ವ್ಯಾಕ್ಸಿನ್ ಮಿಕ್ಸ್ ಮಾಡಿ ನೀಡಲಾರಂಭಿಸಿದೆಯೇ?

ಯಾವಾದರೂ ದೇಶ ವ್ಯಾಕ್ಸಿನ್ ಮಿಕ್ಸ್ ಮಾಡಿ ನೀಡಲಾರಂಭಿಸಿದೆಯೇ?

ಹಲವಾರು ದೇಶಗಳಲ್ಲಿ ಲಸಿಕೆಗಳನ್ನು ಮಿಕ್ಸ್ ಮಾಡಿ ನೀಡುವುದರ ಬಗ್ಗೆ ಚಿಂತನೆ ನಡೆಯುತ್ತಿದೆ. ಫ್ರಾನ್ಸ್ 55 ವರ್ಷ ಒಳಪಟ್ಟವರಿಗೆ ಮೊದಲ ಡೋಸ್‌ ಅಸ್ಟ್ರಾಜೆನೆಕಾ ಲಸಿಕೆ ಪಡೆದವರು ಎರಡನೇ ಡೋಸ್‌ ಆಗಿ mRNA ಲಸಿಕೆ ಅಂದ್ರೆ ಫೈಜರ್ ಅಥವಾ ಅತ್ಯಾಧುನಿಕವಾದ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ. ಯುಕೆ ಒಂದು ವೇಳೆ ಯಾವುದಾದರೂ ಲಸಿಕೆಗೆ ಅಭಾವ ಉಂಟಾದರೆ ಮಾತ್ರ ಈ ರೀತಿ ಮಾಡುವುದಾಗಿ ಹೇಳಿದೆ. ಯುಸ್‌ ಕೆಲವೊಂದು ಪ್ರತ್ಯೇಕ ಕಾರಣಗಳಲ್ಲಿ ಮಾತ್ರ ಮಿಕ್ಸ್ ವ್ಯಾಕ್ಸಿನ್ ನೀಡಲು ಅನುಮತಿ ಸೂಚಿಸಿದೆ. ಭಾರತದಲ್ಲಿ ಟ್ರಯಲ್ ಬಳಿಕವಷ್ಟೇ ಬಳಸಲು ಯೋಚಿಸಲಾಗಿದೆ.

English summary

What Happens If You Mix Covid-19 Vaccines? Explained in Kannada

Should we mix Covishield and Covaxin? What do studies say about mixing Covid-19 vaccines? Know more.
Story first published: Saturday, May 29, 2021, 17:19 [IST]
X
Desktop Bottom Promotion