For Quick Alerts
ALLOW NOTIFICATIONS  
For Daily Alerts

ಕೋವಿಡ್‌ -19: ಕೊರೊನಾವೈರಸ್‌ ವಿರುದ್ಧ ಹೋರಾಡುವ ಪ್ರತಿಕಾಯಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

|

ಕೋವಿಡ್‌ 19 ಸಾಂಕ್ರಾಮಿಕ ರೋಗದ ವಿರುದ್ಧ ಜಗತ್ತು ಹೋರಾಡಲು ಆರಂಭಿಸಿ ಬಹುತೇಕ ವರ್ಷದ ಮೇಲಾಗಿದೆ. ಈ ರೋಗಕ್ಕೆ ಬೇಕಾದ ಅಗತ್ಯ ವ್ಯಾಕ್ಸಿನ್‌, ಔಷಧಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು, ಸಂಶೋಧಕರು ಹಾಗೂ ವೈದ್ಯಕೀಯ ವೃತ್ತಿಪರರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

What are antibodies? How They Help Us Fight Against the COVID-19

ಈ ಭೀಕರ ಕೊರೊನಾ ವೈರಸ್‌ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿ ಸಾಕಷ್ಟು ರೋಗನಿರೋಧಕ ಶಕ್ತಿ ಅಥವಾ ಪ್ರತಿಕಾಯಗಳು ಇರಬೇಕು ಎಂಬುದು ಈವರೆಗೂ ವೈದ್ಯಲೋಕ ನೀಡಿರುವ ಸಲಹೆ. ಲಸಿಕೆ ಪಡೆಯುವುದರಿಂದ ಹಾಗೂ ಸೋಂಕಿತ ವ್ಯಕ್ತಿ ಪ್ರತಿಕಾಯಗಳನ್ನು ಹೆಚ್ಚಿಕೊಳ್ಳುವ ಮೂಲಕ ಸೋಂಕಿನಿಂದ ಮುಕ್ತಿ ಪಡೆಯಬಹುದಾಗಿದೆ.

ಹಾಗಿದ್ದರೆ ಏನಿದು ಪ್ರತಿಕಾಯಗಳು? ಇದು ಹೇಗೆ ನಮ್ಮ ದೇಹದಲ್ಲಿ ಕಾರ್ಯನಿರ್ವಹಿಸುತ್ತದೆ?, ಪ್ರತಿಕಾಯಗಳು ಹೇಗೆ ಕೊರೊನಾ ವೈರಸ್‌ ಅನ್ನು ಕೊಲ್ಲುತ್ತದೆ?, ಈ ಬಗ್ಗೆ ಅಧ್ಯಯನಗಳು ಏನು ಹೇಳುತ್ತದೆ? ಮುಂದೆ ನೋಡೋಣ:

ಪ್ರತಿಕಾಯಗಳು ಯಾವುವು?

ಪ್ರತಿಕಾಯಗಳು ಯಾವುವು?

ದೇಹದಲ್ಲಿ ಪ್ರತಿಕಾಯಗಳ ಕಾರ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕೆಂದರೆ; ಪ್ರತಿಕಾಯಗಳನ್ನು ಸೈನಿಕರು ಎಂದು ಭಾವಿಸಿ. ಸೈನಿಕರು ರಾಷ್ಟ್ರವನ್ನು ರಕ್ಷಿಸುತ್ತಾರೆ ಮತ್ತು ಶತ್ರುಗಳ ವಿರುದ್ಧ ಹೋರಾಡುತ್ತಾರೆ. ಪ್ರತಿಕಾಯಗಳು ಸಹ ಹಾಗೆಯೇ, ನಮ್ಮ ದೇಹವನ್ನು ವೈರಸ್‌, ಬ್ಯಾಕ್ಟೀರಿಯಾ ವಿರುದ್ಧ ರಕ್ಷಿಸುತ್ತವೆ. ಕೊರೊನಾ ವೈರಸ್ ನಮ್ಮ ದೇಹವನ್ನು ಹೊಕ್ಕರೆ ಅದರೆ ವಿರುದ್ಧ ನಮ್ಮನ್ನು ರಕ್ಷಣೆ ಮಾಡಲು ಈ ಪ್ರತಿಕಾಯಗಳು ಹೋರಾಡುತ್ತದೆ.

ಪ್ರತಿಕಾಯಗಳು ಒಂದು ರೀತಿ ಮೆಮೋರಿ ಕೋಶಗಳಂತೆ, ಭವಿಷ್ಯದಲ್ಲಿ ಮನುಷ್ಯ ಮತ್ತೆ ಅದೇ ರೀತಿಯ ವೈರಸ್‌ ಅಪಾಯಕ್ಕೆ ತುತ್ತಾದರೆ ಸುಲಭವಾಗಿ ಅವುಗಳನ್ನು ಪತ್ತೆ ಮಾಡಿ ಅದರ ವಿರುದ್ಧ ಹೋರಾಡುತ್ತದೆ. ಪ್ರತಿಕಾಯಗಳು ಒಂದು ರೀತಿಯ ಪ್ರೋಟಿನ್‌ ಇದ್ದಂತೆ, ಇದು ಸೋಂಕಿಗೆ ಒಳಗಾಗಿ ಗುಣಮುಖರಾದವರಲ್ಲಿ ಹಾಗೂ ವ್ಯಾಕ್ಸಿನ್‌ ಪಡೆದವರಲ್ಲಿನ ರೋಗನಿರೋಧಕ ವ್ಯವಸ್ಥೆಯಿಂದ ಈ ಪ್ರೊಟೀನ್‌ ರಚಿಲ್ಪಟ್ಟಿರುತ್ತದೆ.

ಪ್ರತಿಕಾಯಗಳು

ಪ್ರತಿಕಾಯಗಳು

ಕೊರೊನಾ ವೈರಸ್ ಮತ್ತು ಅದರಿಂದ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡಲು ಪ್ರತಿಕಾಯಗಳು ಸಹಾಯ ಮಾಡುತ್ತದೆ. ಕೋವಿಡ್‌ ವಿರುದ್ಧ ನಮ್ಮ ದೇಹ ಹೋರಾಡಲು, ಸೋಂಕಿನಿಂದ ಗುಣಮುಖರಾಗಲು ಇರುವ ಪ್ರಮುಖ ಅಸ್ತ್ರವೇ ಪ್ರತಿಕಾಯಗಳಾಗಿದೆ. ಈ ಪ್ರತಿಕಾಯಗಳನ್ನು ವೈಜ್ಞಾನಿಕವಾಗಿ ಇಮ್ಯುನೊಗ್ಲಾಬ್ಯುಲಿನ್‌ಗಳು (ಐಜಿಎಂ, ಐಜಿಎ ಮತ್ತು ಐಜಿಜಿ) ಎಂದು ಕರೆಯಲಾಗುತ್ತದೆ.

ಇಮ್ಯುನೊಗ್ಲಾಬ್ಯುಲಿನ್‌ನಿಂದ ಸೋಂಕಿನ ತೀವ್ರತೆ ಪತ್ತೆ

ಇಮ್ಯುನೊಗ್ಲಾಬ್ಯುಲಿನ್‌ನಿಂದ ಸೋಂಕಿನ ತೀವ್ರತೆ ಪತ್ತೆ

ಯಾವುದೇ ರೋಗಲಕ್ಷಣಗಳು ಇಲ್ಲದ ಕೋವಿಡ್‌-19 ರೋಗಿಗಳಲ್ಲಿ ಕಡಿಮೆ ಮಟ್ಟದ ಈಜಿಎಂ ಕಂಡುಬರುತ್ತದೆ, ಆದರೆ ತೀವ್ರವಾದ ರೋಗಲಕ್ಷಣಗಳಿರುವ ಕೋವಿಡ್‌ ರೋಗಿಗಳಲ್ಲಿ ಹೆಚ್ಚಿನ ಮಟ್ಟದ ಐಜಿಎ ಮತ್ತು ಐಜಿಜಿ ಪ್ರತಿಕಾಯಗಳು ಹೆಚ್ಚು ಕಂಡುಬರುತ್ತವೆ.

ಪ್ರತಿಕಾಯ ಪರೀಕ್ಷೆ ಅಥವಾ ಸೆರೋಲಜಿ ಪರೀಕ್ಷೆಯ ಮೂಲಕ ನಮ್ಮ ದೇಹದಲ್ಲಿ ಪ್ರತಿಕಾಯಗಳ ಮಟ್ಟ ಎಷ್ಟಿದೆ ಎಂದು ತಿಳಿಯಲು ತಿಳಿಯಬಹುದಾಗಿದೆ.

ಹಲವು ಅಧ್ಯಯನಗಳ ಪ್ರಕಾರ, ಕನಿಷ್ಠ ಒಂದರಿಂದ ಮೂರುವಾರಗಳಲ್ಲಿ ನಮ್ಮ ದೇಹದಲ್ಲಿ ಪ್ರತಿಕಾಯಗಳು ಅಭಿವೃದ್ಧಿಗೊಳ್ಳಲಿದ್ದು,

ಭವಿಷ್ಯದಲ್ಲಿ ಮನುಷ್ಯ ಮತ್ತೆ ಇದೇ ರೀತಿಯ ಸೋಂಕಿಗೆ ತುತ್ತಾದರೂ ಇದರ ವಿರುದ್ಧ ಹೋರಾಡಲು ಈ ಪ್ರತಿಕಾಯಗಳು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಕೊರೊನಾವೈರಸ್ ವಿರುದ್ಧ ಪ್ರತಿಕಾಯಗಳ ರಕ್ಷೆ- ಅಧ್ಯಯನ ಏನು ಹೇಳುತ್ತದೆ?

ಕೊರೊನಾವೈರಸ್ ವಿರುದ್ಧ ಪ್ರತಿಕಾಯಗಳ ರಕ್ಷೆ- ಅಧ್ಯಯನ ಏನು ಹೇಳುತ್ತದೆ?

ಕೋವಿಡ್‌-19 ನಿಂದ ಚೇತರಿಸಿಕೊಂಡು, ಕೋವಿಡ್‌ ನೆಗೆಟಿವ್‌ ಬಂದವರು ನಂತರ ಕನಿಷ್ಠ ಆರು ತಿಂಗಳವರೆಗೆ ವೈರಸ್‌ನಿಂದ ರಕ್ಷಿಸಲ್ಪಟ್ಟಿರುತ್ತಾರೆ. ವ್ಯಕ್ತಿಯಲ್ಲಿನ ಪ್ರತಿಕಾಯಗಳು ಈ ವೈರಸ್‌ ಅನ್ನು ಸುಲಭವಾಗಿ ಪತ್ತೆ ಮಾಡಿ ಹೋರಾಡುತ್ತದೆ ಎಂಬುದನ್ನು ನ್ಯೂಯಾರ್ಕ್ನ ರಾಕ್ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧನೆಗಳು ತಿಳಿಸಿದೆ.

ಇದೇ ರೀತಿ, ಪ್ರತಿಕಾಯಗಳು ನಮ್ಮ ದೇಹದಲ್ಲಿ ಜೀವಿತಾವಧಿಯವರೆಗೆ ಉಳಿಯುತ್ತವೆ. ಈ ಬಲಶಾಲಿ ಕೋಶಗಳನ್ನು ರೋಗನಿರೋಧಕ ಪ್ರತಿಕ್ರಿಯೆಯ ಭಾಗವಾಗಿ ನಮ್ಮ ದೇಹದಲ್ಲಿ ಉತ್ಪಾದಿಸಲಾಗಿದ್ದು, ಇದು ದೀರ್ಘಕಾಲ ವಾಸಿಸುತ್ತವೆ ಮತ್ತು ನಿರಂತರವಾಗಿ ಪ್ರತಿಕಾಯಗಳನ್ನು ಸೃಷ್ಟಿಸುವುದನ್ನು ಮುಂದುವರಿಸುತ್ತವೆ ಎಂದು ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನ ರೋಗಶಾಸ್ತ್ರ ಮತ್ತು ರೋಗನಿರೋಧಕ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಎಲ್ಲೆಬೆಡಿ ಹೇಳಿದ್ದಾರೆ.

ಕೋವಿಡ್‌-19 ಸೋಂಕು ತಗುಲಿದ ನಂತರ ಪ್ರತಿಕಾಯಗಳು ಶೀಘ್ರವೇ ಕುಸಿಯುತ್ತದೆ ಅಥವಾ ಕಡಿಮೆ ಆಗುತ್ತದೆ. ಆದರೆ ತೀವ್ರವಾದ ಸೋಂಕಿನ ನಂತರ ದೇಹದಲ್ಲಿ ಪ್ರತಿಕಾಯಗಳು ಕುಸಿಯುವುದು ಸಾಮಾನ್ಯವಾಗಿದೆ, ಆದರೆ ಇದು ಎಂದಿಗೂ ಸಂಪೂರ್ಣ ಕಡಿಮೆ (ಶೂನ್ಯ) ಆಗುವುದಿಲ್ಲ.

ಕೋವಿಡ್‌ ಸೋಂಕಿಗೆ ತುತ್ತಾದವರಿಗೆ ಒಂದೇ ಡೋಸ್‌ ಲಸಿಕೆ

ಕೋವಿಡ್‌ ಸೋಂಕಿಗೆ ತುತ್ತಾದವರಿಗೆ ಒಂದೇ ಡೋಸ್‌ ಲಸಿಕೆ

ಕೋವಿಡ್‌-19 ಸೋಂಕಿಗೆ ತುತ್ತಾಗಿ ಗುಣಮುಖರಾದವರು ಒಂದೇ ಡೋಸ್ ಆರ್ಎನ್ಎ ಲಸಿಕೆ ಪಡೆದ ನಂತರ ಅವರ ದೇಹದಲ್ಲಿ ಉತ್ತಮ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದು ಅನೇಕ ಅಧ್ಯಯನಗಳಲ್ಲಿ ತಿಳಿದುಬಂದಿದೆ.

ಕೊವಾಕ್ಸಿನ್‌ಗಿಂತ ಕೋವಿಶೀಲ್ಡ್‌ ಉತ್ತಮ

ಕೊವಾಕ್ಸಿನ್‌ಗಿಂತ ಕೋವಿಶೀಲ್ಡ್‌ ಉತ್ತಮ

ಭಾರತದಲ್ಲಿ, ಈಗಾಗಲೇ ಬಹುತೇಕ ಜನಸಂಖ್ಯೆ ಕೊರೊನಾ ವೈರಸ್ ವಿರುದ್ಧ ಹೋರಾಡುವಂಥ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಯನ್ನು ಪಡೆದಿದ್ದಾರೆ. ಆದರೆ, ಕೋವಿಶೀಲ್ಡ್ ಲಸಿಕೆಯು ಮೊದಲ ಡೋಸ್‌ ನಲ್ಲೇ ದೇಹದಲ್ಲಿ ಉತ್ತಮ ಮಟ್ಟದ ಪ್ರತಿಕಾಯಗಳು ಉತ್ಪತ್ತಿ ಮಾಡುತ್ತಿದ್ದು, ಕೊವಾಕ್ಸಿನ್ ಅಷ್ಟು ಪರಿಣಾಮಕಾರಿಯಾಗಿಲ್ಲ ಇದು ಎರಡನೇ ಡೋಸ್ ನಂತರವೇ ರೋಗನಿರೋಧಕ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ಬಹಿರಂಗಪಡಿಸಿದ್ದಾರೆ.

English summary

What are antibodies? How They Help Us Fight Against the COVID-19

Here we are discussing about Antibodies are crucial in the fight against coronavirus. But what exactly are they and how do they work? all you need to know in kannada. Antibodies are the memory cells that help humans enhance their defences when exposed to the same virus in the future. Read more.
X
Desktop Bottom Promotion