For Quick Alerts
ALLOW NOTIFICATIONS  
For Daily Alerts

ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ

|

ಕಬ್ಬಿಣದಂಶ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ನಮ್ಮ ದೇಹದಲ್ಲಿ ಹೀಮೋಗ್ಲೋಬಿನ್ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಕಬ್ಬಿಣದಂಶ ಪ್ರಮುಖ ಪಾತ್ರವಹಿಸುತ್ತದೆ. ಕಬ್ಬಿಣದಂಶದ ಕೊರತೆ ಉಂಟಾದರೆ ನಿಶ್ಯಕ್ತಿ, ರಕ್ತಹೀನತೆ ಉಂಟಾಗುವುದು.

 iron overload disorders

ರಕ್ತಹೀನತೆ ಕೊರತೆ ಇರುವವರಿಗೆ ಕಬ್ಬಿಣದಂಶದ ಮಾತ್ರೆ (ಐರನ್ ಸಪ್ಲಿಮೆಂಟ್ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ). ಇನ್ನು ಕೆಲವರು ವೈದ್ಯರ ಸಲಹೆ ಇಲ್ಲದೆಯೇ ಕಬ್ಬಿಣದಂಶದ ಮಾತ್ರೆ ಸೇವಿಸುತ್ತಾರೆ. ಕಬ್ಬಿಣದಂಶ ಕಡಿಮೆಯಾದರೆ ಎಷ್ಟು ಅಪಾರಿಕಾರಿಯೋ, ಕಬ್ಬಿಣದಂಶ ಹೆಚ್ಚು ತೆಗೆದುಕೊಂಡರು ಕೂಡ ಅಷ್ಟೇ ಅಪಾಯಕಾರಿ.

ಇನ್ನು ಕೆಲವರಿಗೆ ಯಾವುದೇ ಸಪ್ಲಿಮೆಂಟ್ ತೆಗೆದುಕೊಳ್ಳದಿದ್ದರೂ ಅನುವಂಶೀಯವಾಗಿ , ಕಬ್ಬಿಣದಂಶದ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುವುದು.

ದೇಹದಲ್ಲಿ ಕಬ್ಬಿಣದಂಶ ಉಂಟಾದರೆ ಬರುವ ಕಾಯಿಲೆಗಳು

ದೇಹದಲ್ಲಿ ಕಬ್ಬಿಣದಂಶ ಉಂಟಾದರೆ ಬರುವ ಕಾಯಿಲೆಗಳು

ದೇಹದಲ್ಲಿ ಕಬ್ಬಿಣದಂಶ ಅಧಿಕವಾದರೆ ಹಲವು ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ಇದರಿಂದ ಲಿವರ್‌ಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುವುದು, ಹೃದಯಾಘಾತ, ಹೃದಯಸ್ತಂಭನ ಸಮಸ್ಯೆ ಕಾಡಬಹುದು, ಚಯಾಪಚಯ ಕ್ರಿಯೆಯಲ್ಲಿ ಅಸಮತೋಲನ ಉಂಟಾಗುವುದು. ಮಧುಮೇಹ, ಹೈಪರ್‌ಥೈರಾಯ್ಡ್, ಅಲ್ಜೈಮರ್ಸ್, ಪಾರ್ಕಿನ್‌ಸನ್ಸ್ ಮುಂತಾದ ಗಂಭಿರ ಸಮಸ್ಯೆಗಳು ಉಂಟಾಗುವುದು.

ದೇಹದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಕಂಡು ಬರುವ ಲಕ್ಷಣಗಳು

ದೇಹದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಕಂಡು ಬರುವ ಲಕ್ಷಣಗಳು

* ತೀವ್ರ ತಲೆಸುತ್ತು

* ಕಾಲುಗಳ ಸಂಧುಗಳಲ್ಲಿ ನೋವು

* ಕಿಬ್ಬೊಟ್ಟೆ ನೋವು

* ಲಿವರ್ ಸಮಸ್ಯೆ (ಲಿವರ್‌ ಕ್ಯಾನ್ಸರ್)

*ಮಧುಮೇಹ

*ಅಸ್ವಾಭಾವಿಕ ಹೃದಯ ಬಡಿತ

* ಹೃದಯಾಘಾತ

* ತ್ವಚೆ ಬಣ್ಣದಲ್ಲಿ ವ್ಯತ್ಯಾಸ

* ಅನಿಯಮಿತ ಮುಟ್ಟು

* ಸೆಕ್ಸ್‌ನಲ್ಲಿ ಆಸಕ್ತಿ ಕುಂದುವುದು

* ಲಿವರ್ ಗಾತ್ರ ಹಿಗ್ಗುವುದು

* ಬಂಜೆತನ

* ಖಿನ್ನತೆ

* ಅಪಧಮನಿಯಲ್ಲಿ ತೊಂದರೆ

* ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದು

* ಲಿವರ್‌ನಲ್ಲಿ ಸೋಂಕು

* ಸೆರಮ್ ಐರನ್ ಸಮಸ್ಯೆ

ಚಿಕಿತ್ಸೆ

ಚಿಕಿತ್ಸೆ

ವ್ಯಕ್ತಿಗೆ ರೋಗ ಲಕ್ಷಣಗಳು ಪ್ರಾರಂಭವಾದ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ ಸಹಜ ಜೀವನ ನಡೆಸಬಹುದು. ಅವರು ನಿಯಮಿತ ರಕ್ತಪರೀಕ್ಷೆ ಮಾಡಿಸುತ್ತಿರಬೇಕಾಗುತ್ತದೆ.

ಕಬ್ಬಿಣದಂಶ ಹೆಚ್ಚಾದರೆ ನೀಡುವ ಚಿಕಿತ್ಸೆ

Phlebotomy: ದೇಹದಿಂದ ಕಬ್ಬಿಣದಂಶ ಅಧಿಕವಿರುವ ರಕ್ತವನ್ನು ತೆಗೆಯಲಾಗುವುದು. ರಕ್ತದಲ್ಲಿ ಕಬ್ಬಿಣದಂಶ ಸಹಜ ಸ್ಥಿತಿಗೆ ಮರಳುವವರೆಗೆ ಪ್ರತೀವಾರ ರಕ್ತವನ್ನು ತೆಗೆಯಬೇಕಾಗುತ್ತದೆ. ನಂತರ ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದಗೆಲ್ಲಾ ಈ ಚಿಕಿತ್ಸೆ ತೆಗೆದುಕೊಳ್ಳಬೇಕು.

ಈ ಚಿಕಿತ್ಸೆಯಲ್ಲಿ ಮೊದಲ ಹಂತದ ಚಿಕಿತ್ಸೆ ನಂತರ 3-4 ತಿಂಗಳಿಗೊಮ್ಮೆ ರಕ್ತ ತೆಗೆಯಬೇಕಾಗುತ್ತದೆ.

Chelation

ಈ ಚಿಕಿತ್ಸೆಯಲ್ಲಿ ಮಾತ್ರೆ ಅಥವಾ ಚಿಕಿತ್ಸೆ ಮೂಲಕ ರಕ್ತದಲ್ಲಿ ಹೆಚ್ಚಾದ ಕಬ್ಬಿಣದಂಶ ಹೆಚ್ಚಾಗುವುದು.

ಆಹಾರಕ್ರಮದಲ್ಲಿ ಬದಲಾವಣೆ

ಆಹಾರಕ್ರಮದಲ್ಲಿ ಬದಲಾವಣೆ

* ಐರನ್ ಸಪ್ಲಿಮೆಂಟ್‌ ತೆಗೆಯಬಾರದು

* ವಿಟಮಿನ್ ಸಿ ಇರುವ ಸಪ್ಲಿಮೆಂಟ್ ತೆಗೆದುಕೊಳ್ಳಬಾರದು, ಏಕೆಂದರೆ ವಿಟಮಿನ್ ಸಿ ಕೂಡ ದೇಹ ಕಬ್ಬಿಣದಂಶ ಹೆಚ್ಚು ಹೀರಿಕೊಳ್ಳುವಂತೆ ಮಾಡುತ್ತದೆ.

* ಕಬ್ಬಿಣದಂಶ ಹೆಚ್ಚಿರುವ ಆಹಾರ ಸೇವನೆ ಮಾಡಬಾರದು

* ಮೀನು ಹಾಗೂ ಕಪ್ಪೆಚಿಪ್ಪಿನ ಮಾಂಸ ಸೇವಿಸಬಾರದು

* ಮದ್ಯಪಾನ ಮಾಡಬಾರದು

ಸಲಹೆ: ನಿಮಗೆ ದೇಹದಲ್ಲಿ ಕಬ್ಬಿಣದಂಶ ಹೆಚ್ಚಾದಾಗ ಕಂಡು ಬರುವ ಲಕ್ಷಣಗಳು ಗೋಚರಿಸಿದರೆ ನಿರ್ಲಕ್ಷ್ಯ ಮಾಡಬೇಡಿ, ಕೂಡಲೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

English summary

Iron Overload Disorders: Symptoms, Treatment

What are the symptoms of iron overload disorders, Can It cure, Read This article..
X
Desktop Bottom Promotion