For Quick Alerts
ALLOW NOTIFICATIONS  
For Daily Alerts

ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು

|

ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಖಂಡಿತ ಕೇಳಿರುತ್ತೀರಿ. ಆರೋಗ್ಯ ಚೆನ್ನಾಗಿದ್ದರೆ ಅದುವೇ ದೊಡ್ಡ ಆಸ್ತಿ. ತುಂಬಾ ಆಸ್ತಿ ಇದೆ, ಸಂಪತ್ತು ಇದೆ, ಒಳ್ಳೆಯ ಉದ್ಯೋಗವಿದೆ ಹೀಗೆ ಎಲ್ಲವೂ ಇದ್ದು ದೈಹಿಕ, ಮಾನಸಿಕ ಆರೋಗ್ಯ ಸರಿಯಿಲ್ಲ ಎಂದಾದರೆ ಎಷ್ಟೇ ಏನು ಇದ್ದು ಪ್ರಯೋಜನ ಅಲ್ವಾ? ಆದ್ದರಿಂದ ಆರೋಗ್ಯ ತುಂಬಾನೇ ಮುಖ್ಯ, ಆರೋಗ್ಯವೇ ಭಾಗ್ಯ ಅಂತ ಹೇಳುವುದು ಇದೇ ಕಾರಣಕ್ಕೆ.

Health Tips

ಹಾಗಂತ ಎಲ್ಲಾ ಸಮಯದಲ್ಲಿ ಆರೋಗ್ಯವಂತರಾಗಿರಲು ಸಾಧ್ಯವೇ? ಎಂದು ನೀವು ಕೇಳುವುದಾದರೆ ಖಂಡಿತ ಸಾಧ್ಯವಿದೆ, ಆರೋಗ್ಯ ಎಂಬುವುದು ನಿಮ್ಮ ಆಯ್ಕೆಯಾಗಿದೆ.

ಹೌದು ನೀವು ಬಯಸಬೇಕಷ್ಟೇ, ನೀವು ಆರೋಗ್ಯವಾಗಿರಬೇಕೆಂದು ಬಯಸಿದರೆ ಖಂಡಿತ ಇರಬಹುದು, ಹೇಗೆ? ಅದಕ್ಕಾಗಿ ನೀವು ಏನು ಮಾಡಬೇಕು ಎಂದು ನೋಡೋಣ ಬನ್ನಿ:

 ಆರೋಗ್ಯವಾಗಿರಲು ನೀವು ಮೊದಲು ಮಾಡಬೇಕಾಗಿರುವುದು ಏನು?

ಆರೋಗ್ಯವಾಗಿರಲು ನೀವು ಮೊದಲು ಮಾಡಬೇಕಾಗಿರುವುದು ಏನು?

ನಾವು ನೀವು ಆರೋಗ್ಯವಾಗಿರಲು ಮನಸ್ಸು ಮಾಡಬೇಕು ಎಂದಾಗ 10 ಕಿ ಮೀ ನಡೆಯಲು ಹೇಳುತ್ತೇವೆ, ಒಂದು ಗಂಟೆ ಜಿಮ್‌ ಮಾಡ್ತೀನಿ ಎಂದೆಲ್ಲಾ ಭಾವಿಸಬೇಡಿ, ಆರೋಗ್ಯವಾಗಿರಬೇಕೆಂದರೆ ಮೊದಲು ನೀವು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಹೌದು ನೀವು ಆಯಾ ಕ್ಷೇತ್ರದಲ್ಲಿ ಪರಿಣಿತರಿಂದ ಪಡೆಯುವ ತರಬೇತಿ ಮತ್ತು ಶಿಸ್ತಿನಿಂದ ಮಾಡುವ ಅಭ್ಯಾಸ ಮುಖ್ಯವಾಗಿರುತ್ತೆ. ನೀವು ಜಿಮ್‌ಗೆ ಹೋಗುವುದಾದರೆ ಒಳ್ಳೆಯ ಜಿಮ್‌ ಟ್ರೈನರ್‌ ಬಳಿ ಹೋಗಿ, ಯೋಗ ಅಭ್ಯಾಸ ಮಾಡುವುದಾದರೆ ಒಳ್ಳೆಯ ಯೋಗ ಟ್ರೈನರ್ ಬಳಿ ಹೋಗಿ.

ಯೂಟ್ಯೂಬ್ ನೋಡಿ ಅಭ್ಯಾಸ ಮಾಡಲು ಹೋಗಬೇಡಿ, ಇನ್ನು ಯಾವುದೇ ವ್ಯಾಯಾಮ ಮಾಡುವುದಾದರೆ ಶಿಸ್ತು ತುಂಬಾ ಮುಖ್ಯ. ನೀವು ಒಂದು ದಿನ ವ್ಯಾಯಾಮ ಮಾಡುವುದು, ಮತ್ತೆ ಎರಡು ದಿನ ವ್ಯಾಯಾಮ ಮಾಡದೇ ಇರುವುದು ಈ ರೀತಿ ಮಾಡಿದರೆ ಏನೂ ಪ್ರಯೋಜನ ಸಿಗುವುದಿಲ್ಲ.

ನಿಮ್ಮ ಪ್ರಕಾರ ಆರೋಗ್ಯಕರವಾಗಿರುವುದು ಎಂದರೇನು?

ನಿಮ್ಮ ಪ್ರಕಾರ ಆರೋಗ್ಯಕರವಾಗಿರುವುದು ಎಂದರೇನು?

ಆರೋಗ್ಯವಾಗಿರುವುದು ಎಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಇರುತ್ತದೆ, ಅದರಿಂದ ಹೊರಬರಲು ಪ್ರಯತ್ನಿಸಬೇಕು.

ನೀವು ಆರೋಗ್ಯವಾಗಿರಬೇಕೆಂದರೆ ಏನು ಮಾಡಬೇಕು? ಅಧಿಕವಾಗಿರುವ ಮೈ ಬೊಜ್ಜು ಕರಗಿಸುವುದೇ? ಅಥವಾ ತುಂಬಾ ಸಮಯದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆಯಿಂದ ಹೊರಬರುವುದೇ ಅಥವಾ ನಿಮ್ಮ ಸ್ಟಾಮಿನಾ ಹೆಚ್ಚಿಸುವುದೇ? ಇಲ್ಲಾ ತುಂಬಾ ಸಮಯದಿಂದ ಕಾಡುತ್ತಿರುವ ಬೆನ್ನು ನೋವು ಕಾಲು ನೋವಿನಿಂದ ಮುಕ್ತಿ ಪಡೆಯುವುದಾ? ಹೀಗೆ ನಿಮ್ಮ ಆರೋಗ್ಯಕ್ಕಾಗಿ ನೀವೇನು ಮಾಡಬೇಕು ಅದರತ್ತ ಗಮನ ನೀಡಬೇಕು.

ನಿಮ್ಮ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಔಷಧಿ ತೆಗೆದುಕೊಳ್ಳಬೇಕೆ ಅಥವಾ ಆಹಾರಕ್ರಮದಲ್ಲಿ ಬದಲಾವಣೆ ಮಾಡಬೇಕೆ? ಅದನ್ನು ತಿಳಿದುಕೊಂಡು ನೀವು ಪ್ರಯತ್ನ ಮಾಡಬೇಕು.

ಇನ್ನು ವ್ಯಾಯಾಮ ಮಾಡುವಾಗ ನಮ್ಮ ವಯಸ್ಸಿಗೆ ತಕ್ಕ ರೀತಿಯಲ್ಲಿ ವ್ಯಾಯಾಮ ಮಾಡಬೇಕು, ವ್ಯಾಯಾಮದ ಹೆಸರಿನಲ್ಲಿ ದೇಹವನ್ನು ದಂಡಿಸಲು ಹೋಗಬೇಡಿ.

ಆರೋಗ್ಯವಾಗಿರಲು ಬರೀ ಫಿಟ್ನೆಸ್‌ ಟ್ರೈನರ್ ಸಾಕಾಗಲ್ಲ

ಆರೋಗ್ಯವಾಗಿರಲು ಬರೀ ಫಿಟ್ನೆಸ್‌ ಟ್ರೈನರ್ ಸಾಕಾಗಲ್ಲ

ಬರೀ ಫಿಟ್ನೆಸ್‌ ಟ್ರೈನರ್‌ ಅಷ್ಟೇ ಸಾಕಾ? ಫಿಟ್ನೆಸ್ಅವರ ಜೊತೆಗೆ ನಿಮಗೆ ವೈದ್ಯರ ಸಲಹೆ ಕೂಡ ಬೇಕು, ನಿಮ್ಮ ಸುಗರ್, ಬಿಪಿ, ಎಲ್ಲಾ ಕಂಟ್ರೋಲ್‌ನಲ್ಲಿದೆಯೇ? ಒಂದು ವೇಳೆ ಹೆಚ್ಚು-ಕಡಿಮೆಯಾದರೆ ಏನು ಮಾಡಬೇಕು ಎಂಬುವುದನ್ನು ಅವರು ತಿಳಿಸುತ್ತಾರೆ. ಒಬ್ಬ ಫ್ಯಾಮಿಲಿ ಡಾಕ್ಟರ್ ಅಂತ ಇದ್ದರೆ ಒಳ್ಳೆಯದು.

ಅಲ್ಲದೆ ನೀವು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು, ವೈದ್ಯರು ನೀಡಿರುವ ಸಲಹೆ ಸೂಚನೆ ಪಾಲಿಸಿ.

ಗುರುವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಿ

ಗುರುವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಿ

ನಿಮ್ಮ ಗುರು ಅಥವಾ ಎಕ್ಸ್‌ಪರ್ಟ್‌ ಏನು ಹೇಳುತ್ತಾರೆ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಿ, ಅವರು ಹೇಳಿದಷ್ಟೂ ಮಾಡಿ... ಅವರು ನೀಡಿರುವ ಸಲಹೆಯಲ್ಲಿ ಕೆಲವೊಂದನ್ನು ಪಾಲಿಸುವುದು, ಕೆಲವೊಂದನ್ನು ಬಿಡುವುದು ಮಾಡಿದರೆ ನೀವು ಬಯಸಿದ ರಿಸಲ್ಟ್ ಖಂಡಿತ ಸಾಧ್ಯವಿಲ್ಲ. ಯಾವುದೇ ಸಂಶಯವಿಲ್ಲದೆ ಸಂಪೂರ್ಣವಾಗಿ ಅವರನ್ನು ನಂಬಿ. ಇತರರ ಜೊತೆ ಹೋಲಿಕೆ ಮಾಡಲು ಹೋಗಬೇಡಿ. ಆದರೆ ಸೆಕೆಂಡ್‌ ಒಪಿನಿಯನ್ ತೆಗೆದುಕೊಳ್ಳುವುದು ಒಳ್ಳೆಯದು

ವೈದ್ಯರೇ ಆಗಲಿ, ಎಕ್ಸ್‌ಪರ್ಟ್‌ ಆಗಲಿ ಅವರು ಏನು ಹೇಳುತ್ತಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಗೂಗಲ್‌ನಲ್ಲಿ ದೊರೆಯುತ್ತದೆ, ಹಾಗಂತ ಗೂಗಲ್‌ ಸೋರ್ಸ್‌ ನಂಬುವುದಕ್ಕಿಂತ ಪರಿಣಿತರಿಂದ ಸಲಹೆ ಸೂಚನೆಗಳನ್ನು ಪಡೆಯಿರಿ.

English summary

If You Want To Leave Healthy Must believe In These 3 Things

Health Tips: If you want to Leave healthy must believe in these things read on...
X
Desktop Bottom Promotion