For Quick Alerts
ALLOW NOTIFICATIONS  
For Daily Alerts

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ 2020: ವ್ಯಕ್ತಿ ಆತ್ಮಹತ್ಯೆ ಮಾಡಬಹುದು ಎಂದು ಸೂಚಿಸುವ ಲಕ್ಷಣಗಳೇನು?

|

ಪ್ರತೀ ವರ್ಷ ಸೆಪ್ಟೆಂಬರ್ 10ನ್ನು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುವುದು. ಇದನ್ನು 2003ರಿಂದ ಆಚರಿಸುತ್ತಾ ಬರುತ್ತಿದ. ವಿಶ್ವದಲ್ಲಿ ಪ್ರತಿ 40 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅದರಲ್ಲೂ 19-29 ವರ್ಷದೊಳಗಿನವರ ಮರಣದ ಎರಡನೇ ಪ್ರಮುಖ ಕಾರಣ ಆತ್ಮಹತ್ಯೆಯಾಗಿದೆ. ಮಕ್ಕಳು ಕೂಡ ಆತ್ಮಹತ್ಯೆ ಬಗ್ಗೆ ಚಿಂತಿಸುವುದುಂಟು.

ಆತ್ಮಹತ್ಯೆ ಪ್ರಕರಣಗಳಲ್ಲಿ ಪುರುಷರ ಪ್ರಮಾಣ ಮಹಿಳೆಯರಿಗಿತ ಅಧಿಕವಿದೆ. ಮಹಿಳೆಯರಲ್ಲಿ ಆತ್ಮಹತ್ಯೆಗೆ ಪ್ರಮುಖ ಕಾರಣವೆಂದರೆ ವಿವಾಹ ಸಂಬಂಧಿತ ಸಮಸ್ಯೆಗಳು, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಇತ್ಯಾದಿ.. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಕೃಷಿ ವಲಯಲ್ಲಿ ಇರುವವರು ಅಧಿಕ. ಬೆಳೆನಷ್ಟ, ಆರ್ಥಿಕ ಸಂಕಷ್ಟ ಈ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ನಮ್ಮ ಆತ್ಮೀಯರನ್ನು ಆತ್ಮಹತ್ಯೆಯ ಆಲೋಚನೆಯಿಂದ ಪಾರು ಮಾಡುವುದು ಹೇಗೆ?

ನಮ್ಮ ಆತ್ಮೀಯರನ್ನು ಆತ್ಮಹತ್ಯೆಯ ಆಲೋಚನೆಯಿಂದ ಪಾರು ಮಾಡುವುದು ಹೇಗೆ?

ವ್ಯಕ್ತಿಯಲ್ಲಿ ಆತ್ಮಹತ್ಯೆಯ ಲಕ್ಷಣಗಳನ್ನು ಗುರುತಿಸಿ, ಆತ್ಮಹತ್ಯೆಯನ್ನು ತಡೆಗಟ್ಟುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ನಾವೆಲ್ಲರೂ ಒಟ್ಟಾಗಿ ಆತ್ಮಹತ್ಯೆ ತಡೆಗಟ್ಟಲು ಶ್ರಮಿಸೋಣ ಎಂಬುವುದು ಈ ವರ್ಷದ ಥೀಮ್ ಆಗಿದೆ. ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಾಗ ಆತನ ಕುಟುಂಬ ತುಂಬಾ ಮಾನಸಿಕ ನೋವು ಅನುಭವಿಸುವಂತಾಗುವುದು.

ನಮ್ಮ ಆತ್ಮೀಯ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗ ಛೇ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಅವರ ಸಾವನ್ನು ತಡೆಯಬಹುದಿತ್ತು ಎಂದು ಅನಿಸದೆ ಇರಲ್ಲ. ಏಕೆಂದರೆ ಅವರು ಆತ್ಮಹತ್ಯೆಯ ಮುನ್ನ ಕೆಲವೊಂದು ಬದಲಾವಣೆಗಳು ಅವರಲ್ಲಿ ಕಂಡು ಬಂದಿರುತ್ತದೆ. ಅದನ್ನು ತಕ್ಕ ಸಮಯದಲ್ಲಿ ಗುರುತಿಸಿದರೆ ಅವರಲ್ಲಿದ್ದ ಅಂಥ ಆಲೋಚನೆಯನ್ನು ತೆಗೆದು ಹಾಕಬಹುದು.

ಇಲ್ಲಿ ನಾವು ಯಾರಲ್ಲಿ ಆತ್ಮಹತ್ಯೆ ಆಲೋಚನೆ ಹೆಚ್ಚಾಗಿ ಮೂಡುತ್ತದೆ, ಆತ್ಮಹತ್ಯೆಯ ಲಕ್ಷಣಗಳೇನು? ಇದನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಯಾರಲ್ಲಿ ಆತ್ಮಹತ್ಯೆ ಆಲೋಚನೆ ಹೆಚ್ಚಾಗಿ ಬರುತ್ತದೆ?

ಯಾರಲ್ಲಿ ಆತ್ಮಹತ್ಯೆ ಆಲೋಚನೆ ಹೆಚ್ಚಾಗಿ ಬರುತ್ತದೆ?

ಆತ್ಮಹತ್ಯೆಗೆ ಹಲವಾರು ಕಾರಣಗಳಿರಬಹುದು ಕೆಲವರು ಪ್ರೀತಿ ವಿಷಯಕ್ಕೆ, ಇನ್ನು ಕೆಲವರು ಆರ್ಥಿಕ ಸಂಕಟ, ಕೌಟಂಬಿಕ ಸಮಸ್ಯೆ, ಉದ್ಯಮದಲ್ಲಿ ನಷ್ಟ, ಮಾನಸಿಕ ಒತ್ತಡ, ಮಾದಕ ವಸ್ತುಗಳ ಚಟ, ಅನಾರೋಗ್ಯದ ಸಮಸ್ಯೆ ಹೀಗೆ ಯಾವುದೋ ಒಂದು ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಸಂಶೋಧನೆಗ: ಪ್ರಕಾರ ಇವರಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗಿ ಕಂಡು ಬರುವುದು

  • ಈ ಹಿಂದೆ ಆತ್ಮಹತ್ಯೆ ಮಾಡಲು ಯತ್ನಿಸಿದವರು
  • ಕುಟುಂಬದಲ್ಲಿ ಆತ್ಮಹತ್ಯೆಯ ಇತಿಹಾಸವಿದ್ದರೆ
  • ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ
  • ಮಾದಕ ದ್ರವ್ಯಗಳ ಚಟ ಇರುವವರು
  • ತೀವ್ರ ಅನಾರೋಗ್ಯದ ಸಮಸ್ಯೆ
  • ಅತಿಯಾದ ಒತ್ತಡದ ಕೆಲಸದಲ್ಲಿ ಇರುವವರು
  • ತುಂಬಾ ಹತ್ತಿರದ ವ್ಯಕ್ತಿಯನ್ನು ಕಳೆದುಕೊಂಡವರು
  • ಬದುಕಿನಲ್ಲಿ ದುರಂತ ಸಂಭವಿಸಿದವರು
  • ಪ್ರೇಮ ವೈಫಲ್ಯ ಉಂಟಾದವರು
  • ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಸೂಚಿಸುವ ಲಕ್ಷಣಗಳು

    ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಸೂಚಿಸುವ ಲಕ್ಷಣಗಳು

    • ಸಾವಿನ ಕುರಿತು ಮಾತನಾಡುವುದು
    • ಭರವಸೆಯೇ ಕಳೆದುಕೊಂಡಂತೆ ಮಾತನಾಡುವುದು
    • ನಾನು ನಿಮಗೆಲ್ಲಾ ಭಾರ, ನಿಷ್ಪ್ರಯೋಜಕ ಎಂದೆಲ್ಲಾ ಹೇಳುವುದು
    • ಯಾರ ಜೊತೆ ಬೆರೆಯದೆ ಒಂಟಿಯಾಗಿ, ಮೌನಿಯಾಗಿ ಇರುವುದು
    • ನೆಗೆಟಿವ್(ಋಣಾತ್ಮಕ) ಮಾತುಗಳನ್ನೇ ಆಡುವುದು
    • ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ವಿದಾಯ ಹೇಳುವುದು
    • ಆತ್ಮಹತ್ಯೆಯನ್ನು ನಾವು ಹೇಗೆ ತಡೆಗಟ್ಟಬಹುದು?

      ಆತ್ಮಹತ್ಯೆಯನ್ನು ನಾವು ಹೇಗೆ ತಡೆಗಟ್ಟಬಹುದು?

      • ನಿರ್ಲಕ್ಷ್ಯ ಮಾಡಬೇಡಿ: ಯಾರಾದರೂ ಆತ್ಮಹತ್ಯೆ ಕುರಿತು ಹೇಳುವಾಗ ಅವರ ಮಾತುಗಳನ್ನು ನಿರ್ಲಕ್ಷ್ಯ ಮಾಡಬಾರದು. ಅವರ ಭಾವನೆಗಳನ್ನು ನೋಯಿಸಬೇಡಿ. ಅವರು ಏಕೆ ಆ ಮಾತುಗಳನ್ನಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಿ.
      • ಅವರಿಗೆ ಭರವಸೆಯ ಮಾತುಗಳನ್ನು ಆಡಿ: ಸಾಮಾನ್ಯವಾಗಿ ಆತ್ಮಹತ್ಯೆಯ ಬಗ್ಗೆ ಮಾತನಾಡುವ ವ್ಯಕ್ತಿ ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡಿರುತ್ತಾನೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸಮಧಾನ ಹೇಳಿ ಭರವಸೆ ನೀಡ, ಆ ಆಲೋಚನೆಯಿಂದ ಹೊರಬರುವಂತೆ ಮಾಡಬೇಕು.
      • ತಾಳ್ಮೆಯಿಂದ ಅವರ ಮಾತುಗಳನ್ನು ಆಲಿಸಿ: ನಿಮ್ಮ ಸ್ನೇಹಿತರು ಅಥವಾ ಮನೆಯವರು ಏನಾದರೂ ಹೇಳಲು ಬಂದಾಗ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿ. ಆಗ ಅವರಿಗೆ ನನ್ನ ಮಾತುಗಳಿಗೆ ಸ್ಪಂದಿಸುವ ವ್ಯಕ್ತಿ ಸಿಕ್ಕಿರುವುದಕ್ಕೆ ಸಮಧಾನ ಆಗುತ್ತದೆ, ನಂತರ ಅವರ ಮಾತುಗಳನ್ನು ಕೇಳಿ, ಆಗ ಅವರು ಏಕೆ ಆತ್ಮಹತ್ಯೆಯ ಕುರಿತು ಮಾತನಾಡುತ್ತಿದ್ದಾರೆ ಎಂಬುವುದಕ್ಕೆ ಕಾರಣ ತಿಳಿಯುತ್ತದೆ. ಆಗ ನೀವು ಸಲಹೆಯನ್ನು ನೀಡಿ, ಸರಿ ಹೋಗುವರು.
      • ಒಂಟಿಯಾಗಿ, ಮೌನಿಯಾಗಿದ್ದರೆ ಅವರನ್ನು ಗಮನಿಸಿ: ಇದ್ದಕ್ಕಿದ್ದ ಹಾಗೆ ವ್ಯಕ್ತಿ ಮೌನಿಯಾಗಿ ಒಂಟಿಯಾಗಿ ಇರಲು ಬಯಸಿದರೆ ಅವರನ್ನು ಹಾಗೇ ಬಿಡಬೇಡಿ. ಮಾತಾಡಿ, ಅವರು ಸ್ಪಂದಿಸದೇ ಇದ್ದರೆ ಅವರನ್ನು ಹೇಗಾದರೂ ಮಾಡಿ ಮನವೊಲಿಸಿ ಮನೋರೋಗತಜ್ಞರ ಬಳಿ ಕರೆದುಕೊಂಡು ಹೋಗಿ, ಅವರು ಸರಿಹೋಗುತ್ತಾರೆ.
      • ನಿಮಾನ್ಸ್ ಸಹಾಯವಾಣಿ ನಂಬರ್

        Toll-free number: 080 - 4611 0007

English summary

World Suicide Prevention Day 2020 : How to Recognize Symptoms of Suicidal Behavior in Kannada

Every Year World Suicide Prevention Day is observed on September 10. This day aims to increase awareness about suicide prevention globally.
X
Desktop Bottom Promotion