For Quick Alerts
ALLOW NOTIFICATIONS  
For Daily Alerts

ಕೊರೊನಾ ತಡೆಗಟ್ಟುವ ಜಲನೇತಿ ಯೋಗ, ಮಾಡುವುದು ಹೇಗೆ?

|

ಇತ್ತೀಚೆಗೆ ಕೋವಿಡ್ 19 ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಅದರಲ್ಲೂ ಆರೋಗ್ಯ ಕಾರ್ಯಕರ್ತರು ಕೋವಿಡ್ 19 ರೋಗಿಗಳ ಶುಶ್ರೂಷೆ ಜೊತೆಗೆ ತಮಗೆ ಸೋಂಕು ಹರಡದಂತೆ ತುಂಬಾ ಎಚ್ಚರವಹಿಸಬೇಕಾಗಿದೆ.

How To Do Jalneti To Avoid Covid 19

ಸದಾ ಪಿಪಿಇ ಕಿಟ್‌ಗಳನ್ನು ಧರಿಸಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಇದರ ಜೊತೆಗೆ ಯೋಗ ಕ್ರಿಯೆಯಾದ ಜಲನೇತಿ ಅಭ್ಯಾಸ ಮಾಡಿದರೆ ಕೊರೊನಾವೈರಸ್ ಸೋಂಕು ತಗುಲುವುದನ್ನು ತಡೆಗಟ್ಟಬಹುದು ಎಂಬುವುದನ್ನು ಸ್ವತಃ ವೈದ್ಯರೇ ಹೇಳುತ್ತಿದ್ದಾರೆ.

ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಹರಿದಾಡುತ್ತಿರುವುದು ನೀವು ಗಮನಿಸಿರಬಹುದು. ದೀನಾಂತ್ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಕೋವಿಡ್‌ 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸುಮಾರು 600 ವೈದ್ಯರು ಪ್ರತಿದಿನ ಎರಡು ಹೊತ್ತು ಜಲನೇತಿ ಅಭ್ಯಾಸ ಮಾಡುತ್ತಿದ್ದಾರೆ, ಇದರಿಂದಾಗಿ ಅವರಿಗೆ ಕೋವಿಡ್ 19 ಬಾಧಿಸಿಲ್ಲ. ಇದನ್ನು ಅಲ್ಲಿಯ ವೈದ್ಯರು ಸ್ವತಃ ವೀಡಿಯೋ ಮಾಡಿ ತಿಳಿಸಿದ್ದಾರೆ.

ಜಲನೇತಿ ಎನ್ನುವುದು ಯೋಗಾದ ಒಂದು ಪವರ್‌ಫುಲ್ ಆದ ಕ್ರಿಯೆ ಆಗಿದ್ದು, ಇದನ್ನು ಅಭ್ಯಾಸ ಮಾಡುವುದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಸೈನಸೈಟಿಸ್ ಸಮಸ್ಯೆ ಇರುವವರು ಇದನ್ನು ಅಭ್ಯಾಸ ಮಾಡಿ ಉತ್ತಮ ಪ್ರಯೋಜನ ಕಂಡು ಕೊಂಡಿದ್ದಾರೆ. ಇದೀಗ ಕೋವಿಡ್‌ 19 ತಡೆಗಟ್ಟುವಲ್ಲಿಯೂ ಪರಿಣಾಮಕಾರಿ ಎಂಬುವುದು ತಿಳಿದು ಬಂದಿದೆ.

ಇಲ್ಲಿ ನಾವು ಜಲನೇತಿ ಎಂದರೇನು? ಇದನ್ನು ಮಾಡುವುದು ಹೇಗೆ? ಯಾವ ಹೊತ್ತಿನಲ್ಲಿ ಮಾಡಬೇಕು? ಇದರಿಂದ ದೊರೆಯುವ ಪ್ರಯೋನಗಳೇನು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ.

ಜಲನೇತಿ

ಜಲನೇತಿ

ಜಲನೇತಿ ಎನ್ನುವುದು ಒಂದು ಯೋಗ ಕ್ರಿಯೆವಾಗಿದ್ದು ಮೂಹಿನ ಹೊಳ್ಳೆಯ ಮೂಲಕ ನೀರನ್ನು ಹಾಕಿ ಮತ್ತೊಂದು ಮೂಗಿನ ಮೂಲಕ ಬಿಡುವ ವಿಧಾನವಾಗಿದೆ. ಇದನ್ನು ಮಾಡುವಾಗ ಸರಿಯಾದ ರೀತಿಯಲ್ಲಿ ಮಾಡಬೇಕು.

ಜಲನೇತಿ ಕ್ರಿಯಾ ಮಾಡುವುದಕ್ಕೆ ಮೊದಲು ನೀವೊಂದು ಜಲನೇತಿ ಚೊಂಬು ತೆಗೆದುಕೊಳ್ಳಬೇಕು, ಇದು ತಾಮ್ರದ್ದು ಆಗಿರಬಹುದು, ಪ್ಲಾಸ್ಟಿಕ್‌ನದ್ದು ಆಗಿರಬಹುದು. ಇದರಲ್ಲಿ ನೀವು ಶುದ್ಧವಾದ ಒಂದು ಲೋಟ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ ಮಿಶ್ರ ಮಾಡಿ ಜಲನೇತಿ ಚೊಂಬುಗೆ ಹಾಕಬೇಕು. ನೀರು ಉಗುರು ಬೆಚ್ಚಗೆ ಇರಲಿ.

ಮಾಡುವುದು ಹೇಗೆ?

ಮಾಡುವುದು ಹೇಗೆ?

ಈಗ ಕಾಲುಗಳನ್ನು ಸ್ವಲ್ಪ ಅಗಲ ಮಾಡಿ ನಿಂತುಕೊಳ್ಳಿ, ಒಂದು ಕೈಯಿಂದ ಒಂದು ಮೂಗನ್ನು ಮುಚ್ಚಿ 5 ಬಾರಿ ಉಸಿರನ್ನು ಜೋರಾಗಿ ಹೊರಗೆ ಬಿಡಿ. ಈ ರೀತಿ ಎರಡೂ ಮೂಗನ್ನು ಮಾಡಿದ ಬಳಿಕ, ಸ್ವಲ್ಪ ಮುಂದೆಕ್ಕೆ ಬಾಗಿ ನಿಂತುಕೊಳ್ಳಿ. ಈ ಪ್ರಕ್ರಿಯೆಯಲ್ಲಿ ಬಾಯಿ ಮೂಲಕ ಉಸಿರಾಡಬೇಕು. ಮೂಗಿನ ಮೂಲಕ ಉಸಿರಾಡಿದರೆ ನೀರು ನೆತ್ತಿಗೆ ಹತ್ತುತ್ತದೆ, ಆದ್ದರಿಂದ ತುಂಬಾ ಎಚ್ಚರಿಕೆವಹಿಸಬೇಕು.

ಈಗ ಕುತ್ತಗೆಯನ್ನು ಒಂದು ಬದಿಗೆ ಸ್ವಲ್ಪ ಓರೆ ಮಾಡಿ ಮೂಗಿನ ಒಂದು ಹೊಳ್ಳೆಗೆ ನೀರು ಹಾಕಿ, ಅದು ಮತ್ತೊಂದು ಹೊಳ್ಳೆಯ ಮುಖಾಂತರ ಹೊರಬರುತ್ತದೆ, ನಂತರ ಸ್ವಲ್ಪ ಮುಂದೆ ಬಾಗಿ ಕಪಾಲ ಬಾತಿ ಮಾಡುವಾಗ ಮಾಡುವ ರೀತಿಯಲ್ಲಿ ಕಿವಿಗಳನ್ನು ಮುಚ್ಚಿ ಬಾಯಿಯ ಮೂಳಕ ಉಸಿರು ತೆಗೆದುಕೊಂಡು ಮೂಗಿನ ಮೂಲಕ ಜೋರಾಗಿ ಹೊರಕ್ಕೆ ತಳ್ಳಿ, ಈ ರೀತಿ 5 ಬಾರಿ ಮಾಡಿ. ನಂತರ ಒಂದು ಮೂಗನ್ನು ಮುಚ್ಚಿ ಮತ್ತೊಂದು ಮೂಗಿನ ಮೂಲಕ ಜೋರಾಗಿ ಉಸಿರು ಬಿಡಿ, ಹೀಗೆ ಮತ್ತೊಂದು ಮೂಗಿನಲ್ಲಿಯೂ ಮಾಡಿ. ಇಷ್ಟು ಮಾಡಿದರೆ ಮೂಗಿನಲ್ಲಿರುವ ನೀರು ಹೊರಕ್ಕೆ ಬರುತ್ತದೆ.

ಈ ರೀತಿ ಪ್ರತಿದಿನ ಅಭ್ಯಾಸ ಮಾಡಬೇಕು.

 3. ಯಾವಾಗ ಜಲನೇತಿ ಮಾಡಬೇಕು?

3. ಯಾವಾಗ ಜಲನೇತಿ ಮಾಡಬೇಕು?

ಇದನ್ನು ಬೆಳಗ್ಗೆ ಅಥವಾ ಸಂಜೆ ಮಾಡಬೇಕು. ಎರಡು ಹೊತ್ತು ಮಾಡಿದರೆ ತುಂಬಾ ಒಳ್ಳೆಯದು, ಯಾವುದೇ ಸೋಂಕಾಣುಗಳು ಮೂಗಿನ ಮೂಲಕ ಒಳ ಹೋಗುವುದನ್ನು ತಡೆಗಟ್ಟುತ್ತದೆ. ಇಲ್ಲದಿದ್ದರೆ ಬೆಳಗ್ಗೆ ಯೋಗಾಸನ ಮಾಡಿದ ಬಳಿಕ ಮಾಡಬಹುದು.

ಮುಟ್ಟಿನ ಸಮಯದಲ್ಲಿ ಜಲನೇತಿ ಮಾಡಬಹುದೇ?

ಮುಟ್ಟಿನ ಸಮಯದಲ್ಲಿ ಜಲನೇತಿ ಮಾಡಬಹುದು, ಆದರೆ ಈ ಸಮಯದಲ್ಲಿ ಕಪಾಲಬಾತಿ ಮಾಡಬೇಡಿ.

ಆಹಾರದ ಬಳಿಕ ಮಾಡಬಹುದೇ?

ಜಲನೇತಿ ಕ್ರಿಯಾ ಮಾಡುವಾಗ ಹೊಟ್ಟೆ ಖಾಲಿ ಇರಬೇಕು. ಯಾವುದೇ ಯೋಗಾ ಕ್ರಿಯೆಗಳು, ಆಸನಗಳು ಮಾಡುವಾಗಲೂ ಹೊಟ್ಟೆ ಖಾಲಿ ಇರಬೇಕು.

4. ಜಲನೇತಿ ಪ್ರಯೋಜನಗಳು:

4. ಜಲನೇತಿ ಪ್ರಯೋಜನಗಳು:

  • ಕೋವಿಡ್ 19 ತಡೆಗಟ್ಟುತ್ತದೆ: ಕೊರೊನಾವೈರಸ್‌ ಮೂಗಿನ, ಬಾಯಿಯ ಮುಖಾಂತರ ನಮ್ಮ ದೇಹವನ್ನು ಸೇರುತ್ತದೆ ಎಂಬುವುದು ನಮಗೆಲ್ಲಾ ಗೊತ್ತು, ಅದನ್ನು ತಡೆಗಟ್ಟುವಲ್ಲಿ ಜಲನೇತಿ ಪರಿಣಾಮಕಾರಿಯಾಗಿದೆ ಎಂದು ಇದನ್ನು ಅಭ್ಯಾಸ ಮಾಡಿರುವ ವೈದ್ಯರುಗಳೇ ಹೇಳುತ್ತಿದ್ದಾರೆ.
  • ಇದು ಸೈನಸ್ ಸಮಸ್ಯೆ ಹೋಗಲಾಡಿಸುತ್ತದೆ: ಯಾರಿಗೆ ಸೈನಸ್ ಸಮಸ್ಯೆ ಇದೆಯೋ ಅವರು ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಸೈನಸ್‌ನಿಂದ ಮುಕ್ತಿ ಹೊಂದಬಹುದು.
  • ಅಸ್ತಮಾ ಮತ್ತು ಬ್ರೋಂಚೈಟಿಸ್ ನಿಯಂತ್ರಿಸುತ್ತದೆ: ಅಸ್ತಮಾ ಸಮಸ್ಯೆ ಇರುವವರು ಜಲನೇತಿ ಮಾಡುವುದರಿಂದ ಉತ್ತಮ ಪ್ರಯೋಜನ ಕಂಡುಕೊಳ್ಳಬಹುದು.
  • ವಾಸನೆ ಗ್ರಹಿಕೆಗೆ ಸಹಕಾರಿ: ನಿಮ್ಮಲ್ಲಿ ವಾಸನೆ ಗ್ರಹಿಕೆಯ ಸಾಮಾರ್ಥ್ಯ ಕಡಿಮೆಯಾಗಿದ್ದರೆ ಅದನ್ನು ಮರಳಿ ಪಡೆಯುವಲ್ಲಿ ಇದು ಸಹಕಾರಿ.
  • ಕಿವಿ ಸೋಂಕು ತಡೆಗಟ್ಟುತ್ತದೆ: ಇದನ್ನು ಅಭ್ಯಾಸ ಮಾಡುವುದರಿಂದ ಕಿವಿಗೆ ಸೋಂಕು ಉಂಟಾಗುವುದನ್ನೂ ತಡೆಗಟ್ಟಬಹುದು
  • ಮನಸ್ಸು ಶಾಂತವಾಗಿರುತ್ತದೆ: ಇದನ್ನು ಅಭ್ಯಾಸ ಮಾಡುವುದರಿಂದ ಮತ್ತೊಂದು ಪ್ರಯೋಜನವೆಂದರೆ ಮನಸ್ಸಿನಲ್ಲಿ ಗೊಂದಲಗಳು ಇರುವುದಿಲ್ಲ, ತುಂಬಾ ಶಾಂತವಾಗಿರುತ್ತದೆ.
  • ಧೂಮಪಾನ ಬಿಡಬೇಕೆನ್ನುವವರಿಗೆ ಸಹಕಾರಿ: ಧೂಮಪಾನ ಚಟ ಬಿಡಬೇಕೆಂದರೆ ಇದನ್ನು ಅಭ್ಯಾಸ ಮಾಡಿದರೆ ಅದರ ಸೆಳೆತ ಕಡಿಮೆಯಾಗುವುದು.
  • ಏಕಾಗ್ರತೆ ಹೆಚ್ಚುವುದು: ಜಲನೇತಿ ಅಭ್ಯಾಸ ಮಾಡುವುದರಿಂದ ಗೊಂದಲ ಕಡಿಮೆಯಾಗುವುದು, ಏಕಾಗ್ರತೆ ಹೆಚ್ಚುವುದು.
English summary

How To Do Yoga's Jal neti To Avoid Covid 19

Jelneti is one of the yoga kriya, Regular practice can help keep your nasal passage clean making your respiratory system strong.
X
Desktop Bottom Promotion